ಅನುಪಮಾ ಗೋಖಲೆ (ಜನನ ಅನುಪಮಾ ಅಭ್ಯಂಕರ್; [೧] ೧೭ ಮೇ ೧೯೬೯) ಒಬ್ಬ ಭಾರತೀಯ ಚದುರಂಗ ಆಟಗಾರ್ತಿ. ಅವರು ಭಾರತೀಯ ಮಹಿಳಾ ಚಾಂಪಿಯನ್‌ಶಿಪ್ ಅನ್ನು ಐದು ಬಾರಿ (೧೯೮೯, ೧೯೯೦, ೧೯೯೧, ೧೯೯೩, ಮತ್ತು ೧೯೯೭) ಮತ್ತು ಏಷ್ಯನ್ ಮಹಿಳಾ ಚಾಂಪಿಯನ್‌ಶಿಪ್ ಅನ್ನು ಎರಡು ಬಾರಿ (೧೯೮೫ ಮತ್ತು ೧೯೮೭) ಗೆದ್ದರು. ೧೯೮೫ ರಲ್ಲಿ ಅವರು ಅಡಿಲೇಡ್‌ನಲ್ಲಿ ನಡೆದ ಏಷ್ಯನ್ ಜೂನಿಯರ್ ಬಾಲಕಿಯರ ಚಾಂಪಿಯನ್‌ಶಿಪ್‌ನ ಮಲೇಷಿಯಾದ ಆಟಗಾರ ಆಡ್ರೆ ವಾಂಗ್ ಅವರೊಂದಿಗೆ ಜಂಟಿ ವಿಜೇತರಾಗಿದ್ದರು. ಈ ಸಾಧನೆಯು ಸ್ವಯಂಚಾಲಿತವಾಗಿ ಇಬ್ಬರೂ ಆಟಗಾರರಿಗೆ ವುಮನ್ ಇಂಟರ್ನ್ಯಾಷನಲ್ ಮಾಸ್ಟರ್ (ಡಬ್ಲ್ಯೂಐಎಮ್) ಪ್ರಶಸ್ತಿಯನ್ನು ಗಳಿಸಿತು. [೨]
ಅವರು ಮೂರು ಮಹಿಳಾ ಚೆಸ್ ಒಲಂಪಿಯಾಡ್‌ಗಳಲ್ಲಿ (೧೯೮೮, ೧೯೯೦[೩] [೪] ೧೯೯೨) ಮತ್ತು ಎರಡು ಮಹಿಳಾ ಏಷ್ಯನ್ ಟೀಮ್ ಚೆಸ್ ಚಾಂಪಿಯನ್‌ಶಿಪ್‌ಗಳಲ್ಲಿ (೨೦೦೩ ಮತ್ತು೨೦೦೫) ಭಾರತೀಯ ರಾಷ್ಟ್ರೀಯ ತಂಡಕ್ಕಾಗಿ ಆಡಿದರು. ೨೦೦೫ ರಲ್ಲಿ ನಂತರದ ಸ್ಪರ್ಧೆಯಲ್ಲಿ ತಂಡದ ಬೆಳ್ಳಿ ಪದಕವನ್ನು ಗೆದ್ದರು.
ಗೋಖಲೆಯವರು ೧೯೮೬ ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು [೫] ಮತ್ತು ೧೯೯೦ ರಲ್ಲಿ ಅರ್ಜುನ ಪ್ರಶಸ್ತಿಯನ್ನು ಪಡೆದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಅತ್ಯಂತ ಕಿರಿಯವಳು, ಆಕೆ ಅದನ್ನು ಸ್ವೀಕರಿಸಿದಾಗ ಕೇವಲ ೧೬ ವರ್ಷ ವಯಸ್ಸಾಗಿತ್ತು.
ಅವರು ಸ್ವತಃ ಚದುರಂಗ ಆಟಗಾರರಾದ ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ರಘುನಂದನ್ ಗೋಖಲೆ ಅವರನ್ನು ವಿವಾಹವಾಗಿದ್ದಾರೆ. ಅವರು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ ಕೆಲಸ ಮಾಡುತ್ತಾರೆ.