ಅನೂಪ್ ಶ್ರೀಧರ್

ಅನೂಪ್ ಶ್ರೀಧರ್
— ಬ್ಯಾಡ್ಮಿಂಟನ್‌ ಆಟಗಾರ —
The President, Pratibha Devisingh Patil presenting the “Arjuna” Award – 2007, to Anup Sridhar (right), in New Delhi on August 29, 2008.
ವೈಯುಕ್ತಿಕ ಮಾಹಿತಿ
ಹುಟ್ಟು (1983-04-11) ೧೧ ಏಪ್ರಿಲ್ ೧೯೮೩ (ವಯಸ್ಸು ೪೧)
ಬೆಂಗಳೂರು, ಕರ್ನಾಟಕ, India
ದೇಶ ಭಾರತ
ಆಡುವ ಕೈRight
Men's singles
ಅತಿಹೆಚ್ಚಿನ ಸ್ಥಾನ37 (14 January 2010)
ಸದ್ಯದ ಸ್ಥಾನ291 (3 March 2016)
BWF profile

ಅನೂಪ್ ಶ್ರೀಧರ್ ಭಾರತದ ಬ್ಯಾಡ್ಮಿಂಟನ್ ಆಟಗಾರ.

ಬಾಲ್ಯ ಮತ್ತು ವಿದ್ಯಾಭ್ಯಾಸ

[ಬದಲಾಯಿಸಿ]

ಅನೂಪ್ ಅವರು ಎಪ್ರಿಲ್ ೧೧,೧೯೮೩ರಲ್ಲಿ ಕರ್ನಾಟಕದ ಬೆಂಗಳೂರಿನಲ್ಲಿ ಜನಿಸಿದರು. ಅವರು ತಮ್ಮ ಶಿಕ್ಷಣವನ್ನು ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದಲ್ಲಿ ಪೂರ್ಣಗೊಳಿಸಿದರು.

ವೃತ್ತಿ ಜೀವನ

[ಬದಲಾಯಿಸಿ]

ಅನೂಪ್ ಶ್ರೀಧರ್ ಅವರು ಭಾರತದ ಥಾಮಸ್ ಕಪ್ಪಿನ ನಾಯಕರಾಗಿದ್ದರು. ೨೦೦೭ರಲ್ಲಿ ಅನೂಪ್ ಅವರು ೨೫ನೇ ಶ್ರೇಯಾಂಕವನ್ನು ಕೊನೆಗೊಳಿಸಿದರು. ಜರ್ಮನ್ ಓಪನ್ ಮತ್ತು ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಸೆಮಿಫೈನಲ್ ಹಾಗೂ ಥೈಲ್ಯಾಂಡ್ ಓಪನ್ ಪಂದ್ಯಾವಳಿಯಲ್ಲಿ ಕ್ವಾರ್ಟರ್ಫೈನಲ್ಸ್ ತಲುಪಿದರು. ೨೦೦೪ರ ಅಥೆನ್ಸ್ ಒಲಿಂಪಿಕ್ಸ್ನಲ್ಲಿ ಹಾಗೂ ೨೦೦೫ರ ವರ್ಲ್ಡ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕವನ್ನು ಪಡೆದರು. ೨೦೦೭ರಲ್ಲಿ ವಿಶ್ವ ಚಾಂಪಿಯನ್ಶಿಪ್ನಲ್ಲಿ ಅನೂಪ್ ಅವರು ಮಾಡಿದ ಸಾಧನೆ ಭಾರತೀಯ ಕ್ರೀಡಾ ಪ್ರದರ್ಶನಗಳಲ್ಲಿ ಅಗ್ರಸ್ಥಾನವನ್ನು ಪಡೆಯಿತು. ಹೊಸದಿಲ್ಲಿಯ ಪ್ರತಿಷ್ಠಿತ ಪ್ರಮೋದ್ ಮಹಾಜನ್ ಆಲ್-ಇಂಡಿಯಾ ಶ್ರೇಯಾಂಕಿತ ಪಂದ್ಯಾವಳಿಯನ್ನು ಅನೂಪ್ ಅವರು ೨೦೦೮ರಲ್ಲಿ ಗೆದ್ದರು. ಪ್ರೋಟಾನ್ ಮಲೆಷ್ಯಾ ಸೂಪರ್ ಸೀರೀಸ್ನ ಕೊನೆಯ ಸುತ್ತಿನ ಒಂದು ಸುತ್ತಿನ ಪಂದ್ಯದಲ್ಲಿ,ಪ್ರಿ-ಕ್ವಾರ್ಟರ್ ಫೈನಲ್ಸ್ ತಲುಪಿದ ನಂತರ ಹ್ಯುನ್ ಇಲ್ ಲೀಯವರೊಂದಿಗೆ ಅಂತಿಮವಾಗಿ ಸೋತು ರನ್ನರ್-ಅಪ್ ಆದರು. ಅನೂಪ್ ಅವರು ೨೦೦೮ರಲ್ಲಿ ಬೀಜಿಂಗ್ನಲ್ಲಿ ನಡೆದ ಬೇಸಿಗೆ ಒಲಿಂಪಿಕ್ಸ್ನಲ್ಲಿ ಪುರುಷರ ಸಿಂಗಲ್ಸ್ ಸ್ಪರ್ಧೆಯಲ್ಲಿ ಸ್ಪರ್ಧಿಸಿದರು. ಅವರು ಪೋರ್ಚುಗಲ್ನ ಮಾರ್ಕೊ ವಾಸ್ಕೊನ್ ಸೆಲೊಸ್ ಅವರನ್ನು ೨೧-೧೬, ೨೧-೧೪ರಿಂದ ೬೪ರ ಸುತ್ತಿನಲ್ಲಿ ಸೋಲಿಸಿದರು. ಆದರೆ ಜಪಾನಿನ ಶೋಜಿ ಸಾಟೋ ಅವರೊಂದಿಗೆ ೧೩-೨೧, ೧೭-೨೧ ಅಂಕದಿಂದ ೧೬ನೇ ಸುತ್ತಿನಲ್ಲಿ ಸೋತರು. ಅವರು ೨೦೧೩ರ ಯೋನೆಕ್ಸ್ ಝೆಕ್ ಅಂತರರಾಷ್ಟ್ರೀಯ ಪಂದ್ಯಾವಳಿಯಲ್ಲಿ ತಮ್ಮ ೪ನೇ ಪ್ರಶಸ್ತಿಯನ್ನು ಇಂದ್ರ ಬಾಗುಸ್ ಆದಿ ಚಂದ್ರ ಅವರನ್ನು ೨೧-೧೧, ೨೧-೧೬ ಅಂಕಗಳಿಂದ ಸೋಲಿಸಿ ಪಡೆದರು.[]

ವೊಡಾಫೋನ್ ಇಂಡಿಯನ್ ಬ್ಯಾಡ್ಮಿಂಟನ್ ಲೀಗ್

[ಬದಲಾಯಿಸಿ]

ಅನೂಪ್ ಶ್ರೀಧರ್ ಅವರು ೨೦೧೩ರಲ್ಲಿ ವೊಡಾಫೋನ್ ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ನಲ್ಲಿ ಪುಣೆ ಪಿಸ್ಟನ್ಸ್ ತಂಡವನ್ನು ಪ್ರತಿನಿಧಿಸಿ,೬೦೦೦ ಡಾಲರ್ ವೇತನವನ್ನು ಪಡೆದಿದ್ದಾರೆ. ಅನೂಪ್ ಅವರು,ವಿಶ್ವದಲ್ಲಿ ೮ನೇ ಶ್ರೇಯಾಂಕವನ್ನು ಪಡೆದ ಹಾಗೂ ಬಂಗಾ ಬೀಟ್ಸ್ ಅವರನ್ನು ಪ್ರತಿನಿಧಿಸಿದ ಹೂ ಯುನ್ ಅವರ ವಿರುದ್ಧ ಆಡಿ ಪಂದ್ಯವನ್ನು ಗೆದ್ದರು.[]

ಸಾಧನೆಗಳು

[ಬದಲಾಯಿಸಿ]
ಕ್ರ.ಸಂ ವರ್ಷ ಟೂರ್ನಮೆಂಟ್
೨೦೦೫ ಹಂಗೇರಿಯನ್ ಇಂಟರ್ನಾಷನಲ್
೨೦೧೩ ಝೆಕ್ ಇಂಟರ್ನಾಷನಲ್

[]

ಉಲ್ಲೇಖಗಳು

[ಬದಲಾಯಿಸಿ]