ಅಫಜಲಪುರ ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆಯ ಪಟ್ಟಣ ಪಂಚಾಯತಿ ಮತ್ತು ತಾಲೂಕು ಕೇಂದ್ರ.
ಅಕ್ಷಾಂಶ / ರೇಖಾಂಶ : ೧೭.೨ ಡಿಗ್ರಿ ಉತ್ತರ ಮತ್ತು ೭೬.೩೫ ಡಿಗ್ರಿ ಉತ್ತರ.
ಸಮುದ್ರಮಟ್ಟದಿಂದ ಸರಾಸರಿ ಎತ್ತರ : ೪೦೮ ಮೀಟರುಗಳು.
ಕ್ಷೇತ್ರಫಲ : ೩ ಚದರ ಕಿ.ಮೀ
ಅಕ್ಕಪಕ್ಕದ ತಾಲೂಕುಗಳು : ಆಳಂದ್ ಉತ್ತರಕ್ಕೆ, ಗುಲ್ಬರ್ಗ ಪೂರ್ವಕ್ಕೆ, ಜೇವರ್ಗಿ ಮತ್ತು ಸಿಂದಗಿ (ಬಿಜಾಪುರ ಜಿಲ್ಲೆ) ದಕ್ಷಿಣಕ್ಕೆ, ಇಂಡಿ (ಬಿಜಾಪುರ ಜಿಲ್ಲೆ) ಪಶ್ಷಿಮಕ್ಕೆ, ಮತ್ತು ಮಹಾರಾಷ್ಟ್ರ ದ ಅಕ್ಕಲಕೋಟೆ ಉತ್ತರ-ಪಶ್ಷಿಮಕ್ಕೆ
ಭೀಮಾ ಮತ್ತು ಅಮರ್ಜಾ ನದಿಗಳು ಈ ತಾಲೂಕಿನಲ್ಲಿ ಹರಿಯುತ್ತವೆ.
ಪ್ರಮುಖ ಬೆಳೆಗಳು: ಕಬ್ಬು, ತೊಗರಿ, ಜೋಳ, ಸೂರ್ಯಕಾಂತಿ, ಕುಸುಬೆ, ಕಡಲೆ, ಶೇಂಗಾ, ಹೆಸರು.
ಶ್ರೀ ರೇಣುಕಾ ಶುಗರ್ಸ್, ಹಾವಳಗಾ. ಅಫಜಲಪುರ.
೨೦೦೧ರ ಜನಗಣತಿ ಯ ಪ್ರಕಾರ ಅಫಜಲ್ಪುರದ ಜನಸಂಖ್ಯೆ ೧೯,೧೧೪. ಇದರಲ್ಲಿ ೫೨% ಶೇಕಡಾ ಪುರುಷರು ಮತ್ತು ಬಾಕಿ ೪೮% ಸ್ತ್ರೀಯರು.
ಇಲ್ಲಿಯ ೫೪% ಸರಾಸರಿ ಸಾಕ್ಷರತೆ ಭಾರತ ದ ಸಾಕ್ಷರತಾ ಪ್ರಮಾಣಕ್ಕಿಂತ (೫೯.೫%) ಕಡಿಮೆಯಿದೆ. ೬೦% ಪುರುಷರು ಮತ್ತು ೪೦% ಸ್ತ್ರೀಯರು ಅದರಲ್ಲಿದ್ದಾರೆ.
ಒಟ್ಟು ಜನಸಂಖ್ಯೆಯಲ್ಲಿ ೬ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ೧೫%ರಷ್ಟಿದ್ದಾರೆ.
ಘತ್ತರ್ಗಾ- ಶ್ರೀ ಭಾಗ್ಯವ೦ತಿ,ದೇವಾಲಯ
ರೇವೂರ..ಶ್ರೀಬಮ್ಮಲಿಂಗೇಶ್ವರ - ಶ್ರೀರೇವಣಸಿದ್ದೇಶ್ವರ ದೇವಾಲಯ,
ಚಿನ್ನಮಳ್ಳಿಯ -ಶ್ರೀ ಮಲ್ಲಿಕಾರ್ಜುನ,ದೇವಾಲಯ,
ಅಫಜಲಪುರ: ಶ್ರೀ ಸಿದ್ಫರಾಮೇಶ್ವರ ಜಾತ್ರೆ ,ಶ್ರೀ ಸೋಂದೇಸಾಹೇಬ್ ದರ್ಗಾ, ಶ್ರೀ ಕಾಳಿಕಾದೇವಿ ಜಾತ್ರೆ, ಶ್ರೀ ಅಂಬಾಭವಾನಿ ಜಾತ್ರೆ, ಶ್ರೀ ಲಕ್ಷ್ಮಿದೇವಾಲಯ,
ಸಂಗಾಪುರದ: ಶ್ರೀ ಸಂಗಮೇಶ್ವರ ದೇವಾಲಯ,
ಮಣ್ಣೂರದ-ಶ್ರೀ ಯಲ್ಲಮ್ಮಾದೇವಾಲಯ,
ಅತನೂರ,ಗೂಬುರ,ಇಲ್ಲಿ ಪ್ರಾಚೀನ ಗೂಡೇಗಳಿವೆ ಅವಶೇಷಗಳಿವೆ.
ಮರ್ಜಿ ಪೀರ್ ದರ್ಗಾ (ಭೀಮಾ ಮತ್ತು ಅಮರ್ಜಾ ನದಿಗಳ ಸಂಗಮದಲ್ಲಿದೆ
ಉಡಚಣ, ಗೌರ(ಬಿ), ಅಳ್ಳಗಿ (ಬಿ),ಗಳ ಪವಾಡ ಪುರುಷ :ಶ್ರೀ ಹುಚ್ಚಲಿಂಗೇಶ್ವರರ ಜಾತ್ರೆ.
ಮಲ್ಲಾಬಾದ: ಶ್ರೀ ಲಕ್ಷ್ಮಿ ದೇವಾಲಯ,
ಬಳೂರ್ಗಿ: ಶ್ರೀ ಬಸವೇಶ್ವರ ದೇವಾಲಯ,
ಬಡದಾಳ:ಚನ್ನಮಲ್ಲೇಶ್ವರ ಮಠ
ಬಂದರವಾಡ: ಶ್ರೀ ಲಲಿತಾದೇವಿ ದೇವಾಲಯ
ದೇವಲ ಗಾಣಗಾಪೂರ: ತ್ರಿಮೂರ್ತಿ ಶ್ರೀ ದತ್ತಾತ್ರೇಯ
ಗುಡ್ಡೆವಾಡಿ:- ಭೀಮಾ ತೀರದ ಉದ್ಭವಲಿಂಗ ಶ್ರೀ ಬ್ರಹ್ಮಲಿಂಗಶ್ವರ ದೇವಾಲಯ ತಾಲ್ಲೂಕಿನ ಹೆಮ್ಮೆಯ ಅತ್ಯಂತ ಪವಿತ್ರವಾದ ಸ್ಥಳವಾಗಿದೆ ಈ ಸ್ಥಳವು ಗಾಣಗಾಪುರ & ಘತ್ತರಗಿ ಹಾದು ಹೋಗುವ ರಸ್ತೆಯಲ್ಲಿ ಬರುತ್ತದೆ
ಹೈದ್ರಾ: ಶ್ರೀ ಖಾಜಾ ಬಂದೇನವಾಜ ದರ್ಗಾ
ನಂದರ್ಗಾ: ಶ್ರೀ ರೇವಣಸಿದ್ದೇಶ್ವರ.
ಗೌಡಗಾಂವ:ಶ್ರೀ ಮಲ್ಲಿಕಾರ್ಜುನ ದೇವಸ್ಥಾನ
ಹೊಸೂರು: ಅಂಭಾಭವಾನಿ ದೇವಿ, ಭೀರಲಿಂಗೇಶ್ವರ ದೇವಸ್ಥಾನ
ಅಂಕಲಗಾ: ಮಲ್ಲಿಕಾರ್ಜುನ ದೇವಸ್ಥಾನ, ಭಾಗ್ಯವಂತಿ ದೇವಸ್ಥಾನ, ಹಜರತ್ ಜಿಂದಾಶಾ ಮಾದರಸಾಹೇಬ ದರ್ಗಾ
ಕಲಬುರಗಿ ವಿಷಯಗಳು
ಧಾರ್ಮಿಕ ತಾಲ್ಲೂಕುಗಳು ಸ್ಥಳಗಳು ಸಾರಿಗೆ
ಕಲಬುರಗಿ ಜಿಲ್ಲೆಯ ತಾಲ್ಲೂಕುಗಳು
ಕಲಬುರಗಿ ಜಿಲ್ಲೆಯ ತಾಲ್ಲೂಕುಗಳು
ಅಫಜಲ ಖಾನ ಎನ್ನುವವರು ಔರಂಗಜೇಬನನ್ನು ಕೊಂದನು.ಇದರ ಸವಿ ನೆನಪಿಗಾಗಿ ಅಫಜಲಪುರ ಎಂದು ನಾಮಕರಣ ಮಾಡಲಾಗಿದೆ. ಅಫಜಲ ಖಾನ ಒಬ್ಬ ವೀರ.