Aruna Budda Reddy | |
---|---|
— ಜಿಮ್ನಾಸ್ಟ್ ♀ — | |
ಪ್ರತಿನಿಧಿಸುವ ದೇಶ | ![]() |
ಜನ್ಮ ದಿನಾಂಕ | ಹೈದ್ರಾಬಾದ್, ಭಾರತ | ೨೫ ಡಿಸೆಂಬರ್ ೧೯೯೫
Residence | ಹೈದ್ರಾಬಾದ್, ಭಾರತ |
Discipline | ಮಹಿಳಾ ಕಲಾತ್ಮಕ ಜಿಮ್ನಾಸ್ಟಿಕ್ಸ್ |
ಮಟ್ಟ | ಹಿರಿಯ ಅಂತರರಾಷ್ಟ್ರೀಯ ಎಲೈಟ್ ಭಾರತ ರಾಷ್ಟ್ರೀಯ ತಂಡ |
Years on national team | 2013 |
ಅರುಣಾ ಬುದ್ದಾ ರೆಡ್ಡಿ ಸಾಮಾನ್ಯವಾಗಿ ಅರುಣಾ ರೆಡ್ಡಿ (ಜನನ ಡಿಸೆಂಬರ್ 25, 1995) ಇವರು ಭಾರತೀಯ ಮಹಿಳಾ ಕಲಾತ್ಮಕ ಜಿಮ್ನಾಸ್ಟ್ ಆಗಿದ್ದು, ಭಾರತವನ್ನು ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪ್ರತಿನಿಧಿಸುತ್ತಾರೆ. ಬೆಲ್ಜಿಯಂನ ಆಯ್0ಂಟ್ವೆರ್ಪ್ನಲ್ಲಿ ನಡೆದ 2013 ರ ವಿಶ್ವ ಕಲಾತ್ಮಕ ಜಿಮ್ನಾಸ್ಟಿಕ್ಸ್ ಚಾಂಪಿಯನ್ಷಿಪ್ಗಳನ್ನು ಒಳಗೊಂಡಂತೆ ಅವರು ವಿಶ್ವ ಚಾಂಪಿಯನ್ಷಿಪ್ಗಳಲ್ಲಿ ಸ್ಪರ್ಧಿಸಿದ್ದಾರೆ.[೧]
ಆಸ್ಟ್ರೇಲಿಯಾದ ಎರಡನೇ ಅತ್ಯಂತ ಜನಪ್ರಿಯ ನಗರ ವಿಕ್ಟೋರಿಯಾ ರಾಜ್ಯದ ರಾಜಧಾನಿ ಮೆಲ್ಬರ್ನ್ನಲ್ಲಿ ಫೆಬ್ರವರಿ 24, 2018ರಂದು ಜಿಮ್ನಾಸ್ಟಿಕ್ಸ್ ವಿಶ್ವ ಕಪ್ನಲ್ಲಿ ಅರುಣಾ ರೆಡ್ಡಿ ಭಾಗವಹಿಸಿದ್ದರು ಮತ್ತು ಮಹಿಳಾ ವೈಯಕ್ತಿಕ ವಾಲ್ಟ್ ಪಂದ್ಯಾವಳಿಯಲ್ಲಿ ಕಂಚಿನ ಪದಕವನ್ನು ಗಳಿಸಿ ಜಿಮ್ನಾಸ್ಟಿಕ್ಸ್ ವಿಶ್ವಕಪ್ನಲ್ಲಿ ವೈಯಕ್ತಿಕ ಸ್ಪರ್ಧೆಯಲ್ಲಿ ಪದಕ ಗೆದ್ದ ಮೊದಲ ಭಾರತೀಯರಾಗಿ ಇತಿಹಾಸವನ್ನು ರಚಿಸಿದರು.[೨]
2018 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ಅವರು ನಿರ್ಧರಿಸಿದ್ದಾರೆ.