ಅರುಣಾಚಲ ಪ್ರದೇಶ ಭಾರತದ ಈಶಾನ್ಯದಲ್ಲಿರುವ ರಾಜ್ಯ. ಅರುಣಾಚಲ ಪ್ರದೇಶ ವಿಧಾನಸಭೆಯು ಏಕಸಭೆಯ ಶಾಸನಸಭೆಯ ವ್ಯವಸ್ಥೆಯನ್ನು ಹೊಂದಿದೆ’. ರಾಜ್ಯದ ರಾಜಧಾನಿ ಇಟಾನಗರ.. ಈ ವಿಧಾನಸಭೆಯು ನೇರವಾಗಿ ಏಕ ಸದಸ್ಯ ಕ್ಷೇತ್ರಗಳಿಂದ ಚುನಾಯಿತರಾದ 60 ಸದಸ್ಯರನ್ನು ಒಳಗೊಂಡಿರುವ ಶಾಸನ ಸಭೆಯಾಗಿದೆ.
ಈಶಾನ್ಯ ಫ್ರಾಂಟಿಯರ್ ಏಜೆನ್ಸಿ’(ಇಂದಿನ ಅರುಣಾಚಲ ಪ್ರದೇಶ) ಯ ಆಡಳಿತವನ್ನು ಡಿಸೆಂಬರ್ 29, 1969 ರಂದು ಏಜೆನ್ಸಿ ಕೌನ್ಸಿಲ್, ಎಂಬ ಉನ್ನತ ಸಮಿತಿಯು ಈ ಪ್ರದೇಶ ಆಡಳಿತ ನಡೆಸುವ ವ್ಯವಸ್ಥೆ ಬಂದಿತು. ಅಸ್ಸಾಂನ ರಾಜ್ಯಪಾಲರು ಅದರ ಅಧ್ಯಕ್ಷರಾಗಿದ್ದರು. ಅದರ ಸ್ಥಾನದಲ್ಲಿ ಅಕ್ಟೋಬರ್ 2, 1972 ರಿಂದ ಏಜೆನ್ಸಿ ಕೌನ್ಸಿಲ್ ಬದಲಿಗೆ ಪ್ರದೇಶ ಕೌನ್ಸಿಲ್ ನೇಮಿಸಲಾಯಿತು. 15 ಆಗಸ್ಟ್ 1975 ಪ್ರದೇಶ ಕೌನ್ಸಿಲ್ ನ್ನು ಹಂಗಾಮಿ ವಿಧಾನಸಭೆಯಾಗಿ ಪರಿವರ್ತಿಸಲಾಯಿತು. ಆರಂಭದಲ್ಲಿ, ವಿಧಾನಸಭೆಯು 33 ಸದಸ್ಯರನ್ನು ಹೊಂದಿತ್ತು., ಇದರಲ್ಲಿ, 30 ಸದಸ್ಯರು ನೇರವಾಗಿ ಏಕ ಸ್ಥಾನ ಕ್ಷೇತ್ರಗಳಿಂದ ಆಯ್ಕೆಯಾಗಿದ್ದರು ಮತ್ತು 3 ಸದಸ್ಯರು, ಕೇಂದ್ರ ಸರ್ಕಾರದಿಂದ ನೇಮಕಗೊಳ್ಳುತ್ತಿದ್ದರು.. 20 ಫೆಬ್ರವರಿ 1987 ರಂದು ಅರುಣಾಚಲ ಪ್ರದೇಶ ರಾಜ್ಯಸ್ಥಾನಮಾನ ಗಳಿಸಿದಾಗ ಸದಸ್ಯರ ಸಂಖ್ಯೆ 60 ಕ್ಕೆ ಏರಿತು [2]
೨೦೦೯ ರಲ್ಲಿ ನೆಡೆದ ಲೋಕ ಸಭೆ ಮತ್ತು ವಿಧಾನ ಸಭೆ ಚುನಾವಣೆ ಫಲಿತಾಂಶ
ದಿ.ಜನವರಿ 27, 2016 ರಂದು ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದೆ ರಾಜ್ಯಪಾಲ ಜ್ಯೋತಿ ಪ್ರಸಾದ್ ರಾಜ್‌ಖೋವಾ ಅವರು ಆಡಳಿತದ ನಿಯಂತ್ರಣವನ್ನು ತಮ್ಮ ಕೈಗೆ ತೆಗೆದುಕೊಂಡಿದ್ದಾರೆ. ಹಿರಿಯ ಅಧಿಕಾರಿಗಳ ಸಭೆ ಕರೆದ ರಾಜ್ಯಪಾಲರು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ರಾಷ್ಟ್ರಪತಿ ಆಳ್ವಿಕೆಗೆ ಕಾರಣ :
2015 ಡಿಸೆಂಬರ್ 16, ರಂದು ನಿಜವಾದ ಬಿಕ್ಕಟ್ಟು ಆರಂಭವಾಯಿತು. 21 ವಿಧಾನಸಭಾ, ಬಂಡಾಯ ಕಾಂಗ್ರೆಸ್ ಶಾಸಕರು 11 ಬಿಜೆಪಿ ಸದಸ್ಯರ ಮತ್ತು ಇಬ್ಬರು ಪಕ್ಷೇತರರ ಜೊತೆ ಸೇರಿ, ಅಧಿಕೃತವಲ್ಲದ ತಾತ್ಕಾಲಿಕ ಪ್ರತ್ಯೇಕ ಸ್ಥಳದಲ್ಲಿ ಸಭೆ ಸೇರಿ ಸ್ಪೀಕರ್ ನಬಮ್ ರುಬಿಯಾ ಅವರನ್ನು "ಅಪರಾಧಿಯೆಂದು ವಜಾಮಾಡಲು",ನಿರ್ಣಯ ಮಾಡಿದರು.ಕಾರಣ ಅವರು ವಿಧಾನಸಬೆಯ ಕಟ್ಟಡ/ ಸಭಾಂಗಣಕ್ಕೆ ಬೀಗ ಹಾಕಿಸಿದ್ದರು.ರಾಜ್ಯಪಾಲರು ಮಂತ್ರಿಮಂಡಳದ ಶಿಪಾರಸು ಇಲ್ಲದೆ ನಿಗದಿಗಿಂತ ಮೊದಲೇ ವಿಧಾನಸಭೆ ಸೇರಲು ಕೆರೆದಿದ್ದರು.
ಕಾಂಗ್ರೆಸ್ ಸುಪ್ರೀಮ್ ಕೋರ್ಟಿಗೆ ರಾಜ್ಯಪಾಲರ ಆಡಳಿತ ಪ್ರಶ್ನಿಸಿ ಅಪೀಲು ಹಾಕಿದೆ. ರಾಷ್ಟ್ರಪತಿ ಆಳ್ವಿಕೆ ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಎಸ್. ಖೇಹರ್ ನೇತೃತ್ವದ ಐವರು ಸದಸ್ಯರ ಪೀಠ, ಅರುಣಾಚಲ ಪ್ರದೇಶ ರಾಜಕೀಯ ಬಿಕ್ಕಟ್ಟು ‘ಗಂಭೀರ ವಿಷಯ’ ಎಂದು ಹೇಳಿದೆ[೫].
ಮಾಜಿ ಮುಖ್ಯಮಂತ್ರಿ ನಬಂ ಟುಕಿ ಅವರಿಗೆ ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡುವುದಕ್ಕೆ (ಕಾಂಗ್ರೆಸ್‌ಗೆ) ಸುಪ್ರೀಂ ಕೋರ್ಟ್ ಅವಕಾಶ ನಿರಾಕರಿಸಿತು. ಕೂಡಲೆ ಕೇಂದ್ರ ಸರ್ಕಾರ ಅರುಣಾಚಲ ಪ್ರದೇಶದ ರಾಷ್ಟ್ರಪತಿ ಆಳ್ವಿಕೆಯನ್ನು ಶುಕ್ರವಾರ ಸಂಜೆ 19-2-2016 ರಂದು ವಾಪಸ್ ಪಡೆಯಿತು.
ಪುಲ್ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ನ 21(20?21-1) ಬಂಡಾಯ ಶಾಸಕರೂ ಸೇರಿ 31 ಶಾಸಕರು(ಸದಸ್ಯ ಬಲ 60) 16-2-2016 ಮಂಗಳವಾರ ರಾಜ್ಯಪಾಲ ಜೆ.ಪಿ. ರಾಜ್‌ಖೋವಾ ಅವರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು.
ಕಾಂಗ್ರೆಸ್‌ನ ಭಿನ್ನಮತೀಯ ಮುಖಂಡ ‘ಕಲಿಖೊ ಪುಲ್’ ಅವರು ಅರುಣಾಚಲ ಪ್ರದೇಶದ 9 ನೇ (ಹೊಸ) ಮುಖ್ಯಮಂತ್ರಿಯಾಗಿ ಶುಕ್ರವಾರ 19-2-2016 ರಾತ್ರಿ ಪ್ರಮಾಣ ವಚನ ಸ್ವೀಕರಿಸಿದರು.
ಹಾಲಿ ಮುಖ್ಯಮಂತ್ರಿ ಕಲಿಖೊ ಪುಲ್ ಅವರು, 13,82,611 ಜನಸಂಖ್ಯೆ ಇರುವ ರಾಜ್ಯದಲ್ಲಿ ಕೇವಲ 3 ಸಾವಿರ ಜನಸಂಖ್ಯೆ ಇರುವ ಕಮನ್ ಮಿಶ್ಮಿ ಬುಡಕಟ್ಟು ಸಮುದಾಯಕ್ಕೆ ಸೇರಿದವರು.ಅವರು ಇನ್ನೂ ಕಾಂಗ್ರೆಸ್`ನಲ್ಲಿಯೇಇರುವುದಾಗಿ ಹೇಳುತ್ತಾರೆ. ಇವರು ಬಿಜೆಪಿ ಬೆಂಬಲದಿಂದ ಸರ್ಕಾರ ರಚಿಸಿದ ಮೊದಲ ಮುಖ್ಯ ಮಂತ್ರಿ.[[೬]][೨]
13 Jul 2016:ರಾಜ್ಯಪಾಲ ಜ್ಯೋತಿ ಪ್ರಸಾದ್ ರಾಜಕೋವಾ ಅವರ ನಿರ್ಣಯವನ್ನು (ರಾಷ್ಟ್ರಪತಿ ಆಳ್ವಿಕೆ) ರದ್ದುಗೊಳಿಸಿ ಅರುಣಾಚಲ ಪ್ರದೇಶ ಮುಖ್ಯಮಂತ್ರಿ ನಬಾಮ್ ತೂಕಿ ಹಿಂದಿರುಗಲು ಅವಕಾಶ ನೀಡುವಂತೆ ಪರಮೋಚ್ಛ ನ್ಯಾಯಾಲಯ ಆದೇಶಿಸಿದೆ.
ನ್ಯಾಯಾಧೀಶ ಜೆ.ಎಸ್.ಖೇಕರ್ ಮುಂದಾಳತ್ವದ ವಿಭಾಗೀಯ ಪೀಠ ಕೈಗೊಂಡ ಒಮ್ಮತದ ನಿರ್ಣಯದಲ್ಲಿ ಡಿಸೆಂಬರ್ 15, 2015 ಕ್ಕೆ ಮುಂಚಿತವಾಗಿ ಇದ್ದ ಸ್ಥಿತಿಯನ್ನು ಮರುಸ್ಥಾಪಿಸುವಂತೆ ಆದೇಶಿಸಿದೆ. ಖೇಕರ್ ಆದೇಶವನ್ನು ಒಪ್ಪಿ ನ್ಯಾಯಾಧೀಶರಾದ ದೀಪಕ್ ಮಿಶ್ರಾ ಮತ್ತು ಮದನ್ ಬಿ ಲೋಕುರ್ ಹೆಚ್ಚುವರಿ ಕಾರಣಗಳನ್ನು ನೀಡಿ ಮುಖ್ಯಮಂತ್ರಿ ಹಿಂದಿರುಗಲು ಹಾದಿ ಸುಗಮಗೊಳಿಸಿದ್ದಾರೆ.ಸುಪ್ರೀಂ ಕೋರ್ಟ್ ತೀರ್ಪಿಗೆ ಹರ್ಷ ವ್ಯಕ್ತಪಡಿಸಿರುವ ಅರುಣಾಚಲ ಪ್ರದೇಶ ಮುಖ್ಯಮಂತ್ರಿಯಾಗಿ ಹಿಂದಿರುಗಲಿರುವ ನಬಾಮ್ ತೂಕಿ ಇದು ಐತಿಹಾಸಿಕ ತೀರ್ಪು ಎಂದಿದ್ದಾರೆ.[೪]
ಅರುಣಾಚಲ ಪ್ರದೇಶದ ವಿಧಾನಸಭೆ ಅಧಿವೇಶನವನ್ನು ಹಿಂದಕ್ಕೆ ಹಾಕಿರುವ ರಾಜ್ಯಪಾಲರ ಕ್ರಮವು ಸಂವಿಧಾನದ 163ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಜಸ್ಟಿಸ್ ಜೆ ಎಸ್ ಖೇಹರ್ ನೇತೃತ್ವದ ಐವರು ನ್ಯಾಯಾಧೀಶರ ಪೀಠವು ಹೇಳಿದೆ. ಡಿಸೆಂಬರ್ 9ರ ಬಳಿಕ ರಾಜ್ಯಪಾಲರು ತೆಗೆದುಕೊಂಡಿರುವ ಎಲ್ಲ ನಿರ್ಧಾರಗಳು ಸಂವಿಧಾನ ಬಾಹಿರವಾಗಿದೆ ಎಂದಿರುವ ಸುಪ್ರೀಂ ಕೋರ್ಟ್ ನ್ಯಾಯ ಪೀಠ, ರಾಜ್ಯಪಾಲರು ವಿಧಾನಸಭಾ ಅಧಿವೇಶನವನ್ನು ಹಿಂದಕ್ಕೆ ನಿಗದಿಸಿ ಆದೇಶಿಸಿರುವ 2015ರ ಡಿಸೆಂಬರ್ 15ರ ಯಥಾಸ್ಥಿತಿಯನ್ನು ಕಾಪಿಡುವಂತೆ ಆದೇಶಿಸಿದೆ.
ಕಳೆದ ವರ್ಷ ಡಿಸೆಂಬರ್ 16ರಂದು,ಹಿಂದಿನ ದಿನ ಅನರ್ಹರಾಗಿದ್ದ 14 ಕಾಂಗ್ರೆಸ್ ಶಾಸಕರ ಸಹಿತವಾದ 21 ಬಂಡುಕೋರ ಕಾಂಗ್ರೆಸ್ ಶಾಸಕರು 11 ಬಿಜೆಪಿ ಶಾಸಕರು ಮತ್ತು ಇಬ್ಬರು ಪಕ್ಷೇತರ ಶಾಸಕರ ಜೊತೆಗೆ ಕೈಜೋಡಿಸಿ ತಾತ್ಕಾಲಿಕ ತಾಣವೊಂದರಲ್ಲಿ ಕಲಾಪ ನಡೆಸಿ ಅಸೆಂಬ್ಲಿ ಸ್ಪೀಕರ್ ನಬಮ್ ರೆಬಿಯಾ ವಿರುದ್ದ ದೋಷಾರೋಪ ಹೊರಿಸಿದ್ದರು. ಆದರೆ ಅವರ ಈ ಕ್ರಮವು ಕಾನೂನುಬಾಹಿರ ಮತ್ತು ಅಸಾಂವಿಧಾನಿಕ ಎಂದು ಸ್ಪೀಕರ್ ಪರಿಗಣಿಸಿದ್ದರು. ಬಂಡುಕೋರರ ಈ ತಥಾಕಥಿತ ಅಧಿವೇಶನದ ಅಧ್ಯಕ್ಷತೆಯನ್ನು ಉಪ ಸ್ಪೀಕರ್ ಟಿ ನೋಬು ತೋಂಗ್‌ಡೋಕ್ ವಹಿಸಿದ್ದರು.
ಮುಖ್ಯಮಂತ್ರಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಸೇರಿದಂತೆ 60 ಸದಸ್ಯ ಬಲದ ಸದನದಲ್ಲಿನ 27 ಶಾಸಕರು, ಈ ಅನಧಿಕೃತ ಕಲಾಪವನ್ನು ಬಹಿಷ್ಕರಿಸಿದ್ದರು. ಒಂದು ದಿನದ ತರವಾಯ ವಿರೋಧ ಪಕ್ಷದ ಬಿಜೆಪಿ ಹಾಗೂ ಬಂಡುಕೋರ ಕಾಂಗ್ರೆಸ್ ಶಾಸಕರು ಮುಖ್ಯಮಂತ್ರಿ ನಬಮ್ ತುಕಿ ಅವರನ್ನು ಪದಚ್ಯುತಗೊಳಿಸಿ ಅವರ ಸ್ಥಾನಕ್ಕೆ ಬಂಡುಕೋರ ಕಾಂಗ್ರೆಸ್ ಶಾಸಕರೊಬ್ಬರನ್ನು ಆಯ್ಕೆ ಮಾಡಲು ಸ್ಥಳೀಯ ಹೊಟೇಲ್ ಒಂದರಲ್ಲಿ ಸೇರಿದ್ದರು. ಆದರೆ ಆ ಮಧ್ಯೆ ಗುವಾಹಟಿ ಹೈಕೋರ್ಟ್ ಮಧ್ಯ ಪ್ರವೇಶಿಸಿ ಬಂಡುಕೋರರ ಅಧಿವೇಶನದ ನಿರ್ಧಾರಕ್ಕೆ ತಡೆ ನೀಡಿತ್ತು.
ಈ ಬಿಕ್ಕಟ್ಟನ್ನು ಅನುಸರಿಸಿ ಕೇಂದ್ರ ಗೃಹ ಸಚಿವಾಲಯದ ಸಲಹೆಯ ಪ್ರಕಾರ ರಾಷ್ಟ್ರಪತಿಗಳು 2016ರ ಜನವರಿ 26ರಂದು ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೊಳಿಸಿದ್ದರು. ಆ ಬಳಿಕ ಫೆಬ್ರವರಿಯಲ್ಲಿ, ಬಂಡುಕೋರ ಕಾಂಗ್ರೆಸ್ ನಾಯಕ ಕಾಲಿಖೋ ಪುಲ್ ಅವರ ನೇತೃತ್ವದ ಹೊಸ ಸರಕಾರಕ್ಕೆ ಅವಕಾಶ ಮಾಡಿಕೊಡುವ ಸಲುವಾಗಿ ರಾಷ್ಟ್ರಪತಿ ಆಡಳಿತೆಯನ್ನು ತೆರವುಗೊಳಿಸಲಾಗಿತ್ತು.
ಇದೀಗ ಸುಪ್ರೀಂ ಕೋರ್ಟ್ ತೀರ್ಪಿನ ಫಲವಾಗಿ ನಬಂ ತುಕಿ ಅವರು ಇದೀಗ ಮತ್ತೆ ಮುಖ್ಯಮಂತ್ರಿ ಪದಕ್ಕೆ ಮರಳಲಿದ್ದು "ಸರ್ವೋಚ್ಚ ನ್ಯಾಯಾಲಯವು ರಾಜ್ಯದಲ್ಲಿ ಕಾನೂನಿನ ಆಡಳಿತೆಯನ್ನು ಪುನರ್‌ಸ್ಥಾಪಿಸಿದೆ' ಎಂದು ಪ್ರತಿಕ್ರಿಯಿಸಿದ್ದಾರೆ.[೫]
ಅರುಣಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರಕಾರ ಆಡಳಿತ ಮುಂದುವರಿಸಲಿದೆ. ಅರುಣಾಚಲ ಪ್ರದೇಶ ವಿಧಾನಸಭೆಯಲ್ಲಿ ಕಾಂಗ್ರೆಸ್ ಸರ್ಕಾರ ಬಹುಮತ ಸಾಬೀತುಪಡಿಸಬೇಕಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕತ್ವ ಬದಲಾವಣೆ ಮಾಡಿದ್ದು, ಪೆಮಾ ಖಂಡು ಅವರನ್ನು ನೂತನ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿಲಾಗಿದೆ.
ಅರುಣಾಚಲಪ್ರದೇಶದ ಪದಚ್ಯುತ ಮುಖ್ಯಮಂತ್ರಿ ನಬಾಮ್ ತುಕಿ ಅವರ ಮನವಿಯಂತೆ ಕಾಲಾವಕಾಶ ನೀಡಲು ರಾಜ್ಯಪಾಲ ತಥಾಗತ ರಾಯ್ ತಿರಸ್ಕರಿಸಿರುವ ಕಾರಣ ತುಕಿ ಅವರು ಅನಿವಾರ್ಯವಾಗಿ ಶನಿವಾರವೇ ಬಹುಮತ ಸಾಬೀತು ಮಾಡಬೇಕಾದ ಪರಿಸ್ಥಿತಿ ಬಂದೊಂದಗಿತ್ತು. ಆದರೆ ಭಿನ್ನಮತ ಭುಗಿಲೇಳುವ ಮುನ್ನವೇ ಎಚ್ಚೆತ್ತ ಕಾಂಗ್ರೆಸ್ ನಬಾಮ್ ತುಕಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಪೆಮಾ ಖಂಡು ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದೆ.
ನಬಾಮ್ ತುಕಿ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯುವಂತೆ ಸುಪ್ರೀಂ ಕೋರ್ಟ್ ೧೩-೭-೨೦೧೬ ಬುಧವಾರ ಸೂಚಿಸಿತ್ತು. ಇದರ ಬೆನ್ನಲ್ಲೇ ರಾಜ್ಯಪಾಲರು, ವಿಧಾನ ಸಭೆಯಲ್ಲಿ ಶನಿವಾರ ಬಹುಮತ ಸಾಬೀತುಪಡಿಸುವಂತೆ ತುಕಿ ಅವರಿಗೆ ನಿರ್ದೇಶನ ನೀಡಿದ್ದರು. ಆದರೆ ಕಾನೂನು ತಜ್ಞರ ಸಲಹೆ ಮೇರೆಗೆ ತುಕಿ ಅವರು ಗೃಹ ಸಚಿವ ತಂಗಾ ಬ್ಯಾಲಿಂಗ್ ಅವರೊಂದಿಗೆ ಶುಕ್ರವಾರ ರಾಜ್ಯಪಾಲರನ್ನು ಭೇಟಿಯಾಗಿ ಬಹುಮತ ಸಾಬೀತಿಗೆ ಕನಿಷ್ಠ 10 ದಿನಗಳ ಕಾಲಾವಕಾಶ ನೀಡುವಂತೆ ಕೋರಿದ್ದರು. ಆದರೆ ಈ ಮನವಿಯನ್ನು ರಾಜ್ಯಪಾಲರು ತಿರಸ್ಕರಿಸಿದ್ದರು. ಇದು ಕಾಂಗ್ರೆಸ್‍ನ್ನು ಸಂಕಷ್ಟಕ್ಕೀಡು ಮಾಡಿತ್ತು.
ಬಹುಮತ ಸಾಬೀತುಪಡಿಸಬೇಕಾದ ಅನಿವಾರ್ಯತೆ ಇರುವುದರಿಂದ ಅತಿ ಹೆಚ್ಚು ಶಾಸಕರ ಬೆಂಬಲ ಹೊಂದಿರುವ ಖಂಡು ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಬಹುಮತ ಸಾಬೀತುಪಡಿಸಿದರೆ, ಪೆಮಾ ಖಂಡು ಅರುಣಾಚಲದ ನೂತನ ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಕಮೆಂಗ್ ಡೋಲೋ ಹೇಳಿದ್ದಾರೆ.[೬]
ಅರುಣಾಚಲ ಪ್ರದೇಶದಲ್ಲಿ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಮುಖ್ಯಮಂತ್ರಿ ನಬಾಮ್ ತುಕಿ ಅವರ ಬದಲಾಗಿ ಪೆಮಾ ಖಂಡು ಅವರನ್ನು ಆಯ್ಕೆ ಮಾಡಲಾಗಿದೆ. ಇಬ್ಬರು ಪಕ್ಷೇತರರೂ ಸೇರಿ 47 ಶಾಸಕರ ಬೆಂಬಲದೊಂದಿಗೆ ಖಂಡು ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಪಕ್ಷದಿಂದ ಬಂಡಾಯವೆದ್ದು ಮುಖ್ಯಮಂತ್ರಿಯಾಗಿದ್ದ ಕಲಿಖೋ ಪುಲ್ ಅವರು 30 ಬಂಡಾಯ ಶಾಸಕರೊಂದಿಗೆ ಶಾಸಕಾಂಗ ಸಭೆಗೆ ಹಾಜರಾಗಿದ್ದರು.
ಬಹುಮತ ಸಾಬೀತಿಗೆ ಮುನ್ನ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯು 37 ವರ್ಷದ ಪೆಮಾ ಖಂಡು ಅವರನ್ನು ನೂತನ ನಾಯಕನ್ನಾಗಿ ಆಯ್ಕೆ ಮಾಡಿತು. ಇವರು ಮಾಜಿ ಮುಖ್ಯಮಂತ್ರಿ ದೋರ್ಜಿ ಖಂಡು ಅವರ ಪುತ್ರ. ನಬಾಮ್ ತುಕಿ ಅವರು ಪೆಮಾ ಖಂಡು ಅವರ ಹೆಸರನ್ನು ಪ್ರಸ್ತಾಪಿಸಿದಾಗ ಸಭೆಯಲ್ಲಿ ಹಾಜರಿದ್ದ 44 ಶಾಸಕರು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದರು. ಪದಚ್ಯುತ ಮುಖ್ಯಮಂತ್ರಿ ಕಲಿಖೋ ಪುಲ್ ಹಾಗೂ ಬಂಡಾಯ ಶಾಸಕರು ಬೆಂಬಲ ಸೂಚಿಸಿದರು.ಪ್ರಮಾಣ ವಚನ ಭಾನುವಾರ.[೭]
ಆಗಸ್ಟ್ 9, 2016:ಅರುಣಾಚಲಪ್ರದೇಶದ ಮಾಜಿ ಮುಖ್ಯಮಂತ್ರಿ ಕಲಿಖೋ ಪೌಲ್ (47) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳವಾರ ಬೆಳಗ್ಗೆ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಖಿನ್ನತೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.[[೭]]
ಇಟಾ ನಗರದಲ್ಲಿ ಭಾನುವಾರ 17/07/2016 - 17:೦೦ ಗಂಟೆಗೆ ಅರುಣಾಚಲ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಪೆಮಾ ಖಂಡು ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು. ಉಪ ಮುಖ್ಯಮಂತ್ರಿಯಾಗಿ ಚೌನಾ ಮೇನ್ ಅವರು ಪ್ರಮಾಣ ವಚನ ಸ್ವೀಕರಿಸಿದರು. ಇಬ್ಬರಿಗೂ ರಾಜ್ಯಪಾಲ ತಥಾಗತ ರಾಯ್ ಅವರು ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಮಾಜಿ ಮುಖ್ಯಮಂತ್ರಿ ದೋರ್‌ಜೀ ಖಂಡು ಅವರ ಪುತ್ರ ಪೆಮಾ ಖಂಡು (37), ಎರಡನೇ ಅತ್ಯಂತ ಕಿರಿಯ ಮುಖ್ಯಮಂತ್ರಿ ಎನಿಸಿದ್ದಾರೆ.[೮]
ಅರುಣಾಚಲ ಪ್ರದೇಶದಲ್ಲಿ ಮತ್ತೆ ಸರ್ಕಾರ ಕಳೆದುಕೊಂಡ ಕಾಂಗ್ರೆಸ್
ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು ಅವರ ನೇತೃತ್ವದಲ್ಲಿ ಕಾಂಗ್ರೆಸ್‌ನ 40ಕ್ಕೂ ಹೆಚ್ಚು ಶಾಸಕರು ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ (ಪಿಪಿಎ) ಸೇರಿದ್ದಾರೆ. ಇದರೊಂದಿಗೆ ಎರಡು ತಿಂಗಳ ಹಿಂದೆ ಸುಪ್ರೀಂ ಕೋರ್ಟ್ ಆದೇಶದ ಮೂಲಕ ಮರಳಿ ಅಧಿಕಾರ ಪಡೆದಿದ್ದ ಕಾಂಗ್ರೆಸ್ ಈ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿದೆ.
ಖಂಡು ಅವರು 40ಕ್ಕೂ ಹೆಚ್ಚು ಶಾಸಕರ ಜತೆ ವಿಧಾನಸಭೆ ಸ್ಪೀಕರ್ ತೆನ್‌ಸಿಂಗ್ ನೊರ್ಬು ಥಾಂಗ್ಡಕ್ ಅವರನ್ನು ಭೇಟಿಯಾಗಿ ಪಕ್ಷಾಂತರದ ವಿಚಾರ ತಿಳಿಸಿದರು. ಈ ಶಾಸಕರು ಪಿಪಿಎ ಸೇರುವ ನಿರ್ಧಾರಕ್ಕೆ ಸ್ಪೀಕರ್ ಒಪ್ಪಿಗೆ ನೀಡಿದ್ದಾರೆ.
ಒಬ್ಬರನ್ನು ಹೊರತುಪಡಿಸಿ ಕಾಂಗ್ರೆಸ್‌ನ ಎಲ್ಲ ಶಾಸಕರೂ ಪಿಪಿಎ ಸೇರುವುದರೊಂದಿಗೆ ಆಡಳಿತ ಪಕ್ಷವೇ ಪಿಪಿಎ ಜತೆ ವಿಲೀನವಾದಂತಾಗಿದೆ. ಈ ರಾಜಕೀಯ ಬೆಳವಣಿಗೆಯಿಂದಾಗಿ ಈಶಾನ್ಯದಲ್ಲಿ ಮಣಿಪುರ, ಮೇಘಾಲಯ ಮತ್ತು ಮಿಜೊರಾಂನಲ್ಲಿ ಮಾತ್ರ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಉಳಿದಿದೆ.[೯]
ಅರುಣಾಚಲ ಪ್ರದೇಶ ಪೀಪಲ್ಸ್ ಪಾರ್ಟಿ(ಪಿಪಿಎ)ಯ 33 ಶಾಸಕರು ಬಿಜೆಪಿ ಸೇರ್ಪಡೆಯಾಗಿದ್ದು, ಪಿಪಿಎಯಲ್ಲಿ ಕೇವಲ 10 ಶಾಸಕರು ಉಳಿದಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದಲ್ಲಿ ಅರುಣಾಚಲ ಪ್ರದೇಶ ಪೀಪಲ್ಸ್ ಪಾರ್ಟಿಯು (ಪಿಪಿಎ) ಮುಖ್ಯಮಂತ್ರಿ ಪೆಮಾ ಖಂಡು ಹಾಗೂ ಇತರ ಆರು ಶಾಸಕರನ್ನು ಗುರುವಾರ ರಾತ್ರಿ ಪಕ್ಷದಿಂದ ಅಮಾನತು ಮಾಡಲಾಗಿತ್ತು. ಪಕ್ಷದ ತೀರ್ಮಾನದ ವಿರುದ್ಧ ಪೆಮಾ ಖಂಡು ಆಕ್ರೋಶ ವ್ಯಕ್ತಪಡಿಸಿದ್ದರು. ಈ ನಡುವೆ ರಾಜ್ಯ ಬಿಜೆಪಿ ಖಂಡು ಅವರಿಗೆ ಬೆಂಬಲ ಸೂಚಿಸಿತ್ತು.
ಶನಿವಾರ ನಡೆದಿರುವ ಬೆಳವಣಿಗೆಯಲ್ಲಿ ಪಿಪಿಎ 33 ಶಾಸಕರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಒಟ್ಟು 60 ಸದಸ್ಯರನ್ನು ಹೊಂದಿರುವ ಅರುಣಾಚಲ ಪ್ರದೇಶದ ವಿಧಾನ ಸಭೆಯಲ್ಲಿ ಪಿಪಿಎ 10 ಶಾಸಕರನ್ನು ಮಾತ್ರ ಉಳಿಸಿಕೊಂಡಂತಾಗಿದೆ.
ಈ ಮೂಲಕ ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ. ಸೆಪ್ಟೆಂಬರ್‌ನಲ್ಲಿ ಕಾಂಗ್ರೆಸ್‌ನಿಂದ ಪೆಮಾ ಖಂಡು ನೇತೃತ್ವದಲ್ಲಿ 40ಕ್ಕೂ ಹೆಚ್ಚು ಶಾಸಕರು ಪಕ್ಷಾಂತರಗೊಂಡು ಪಿಪಿಎ ಸೇರಿದ್ದರು.[೧೦]
↑Statistical Report on General Election, 2014 : To the Legislative Assembly of Arunachal Pradesh" (PDF). Election Commission of India. Retrieved July 11, 2015.