Ornate narrow-mouthed frog | |
---|---|
Conservation status | |
Scientific classification | |
ಸಾಮ್ರಾಜ್ಯ: | |
ವಿಭಾಗ: | |
ಉಪವಿಭಾಗ: | |
ವರ್ಗ: | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | M. ornata
|
Binomial name | |
Microhyla ornata |
ಅಲಂಕೃತ ಕಿರಿಮೂತಿ ಕಪ್ಪೆಯು ದಕ್ಷಿಣ ಏಷ್ಯಾದ ಹಲವಾರು ದೇಶಗಳಲ್ಲಿ ವ್ಯಾಪಕವಾಗಿ ಕಂಡು ಬರುವಂತಹ ಮೈಕ್ರೋಹೈಲಿಡೆ ಕುಟುಂಬದ ಒಂದು ಪ್ರಭೇಧ.
ಇದರ ಸಾಮಾನ್ಯ ಆಂಗ್ಲ ನಾಮ “Ornate Narrow Mouthed Frog”. ಕನ್ನಡದಲ್ಲಿ, “ಅಲಂಕೃತ ಕಿರಿಮೂತಿಗಪ್ಪೆ” ಎಂದು ಕರೆಯಲಾಗುತ್ತದೆ. ಇದರ ವೈಜ್ಞಾನಿಕ ನಾಮ “Microhyla ornata”. ಇದಕ್ಕೆ ಆಂಗ್ಲದಲ್ಲಿ “Ornate pigmy frog” ಎನ್ನುವ ಸಮಾನ ನಾಮವೂ ಇದೆ. ಇವು “Amphibia” ಶ್ರೇಣಿಯ ಹಾಗೂ “Microhylidae” ಕುಟುಂಬದ ಸದಸ್ಯರು. ಇವು ಸಾಮಾನ್ಯ ರಾತ್ರಿಗಪ್ಪೆಗಳು. ಅಂದರೆ, ಇದರ ಚಟುವಟಿಕೆ ಇರುಳಲ್ಲಿ ಮಾತ್ರ. ಸಂಜೆಯಾಗುತ್ತಿದಂತೆಯೇ, ಇವು ಕೂಗಕ್ಕೆ ಶುರುಮಾಡುತ್ತವೆ, ಹಾಗೂ ಬೆಳಗಿನ ಹೊತ್ತು ಕಂಡರೂ ಸಹ, ಇವು ಬೆಳಗಿನ ಹೊತ್ತು ಕೂಗುವುದು ಅಪರೂಪ.ಆದರೆ, ಮಳೆಗಾಲದಲ್ಲಿ, ಇದರ ಚಟುವಟಿಕೆಗಳು ಹಗಲು ಹೊತ್ತು ಸಹ ಇರುತ್ತವೆ. ಇದರ ಗಮನಾರ್ಹ ವೈಶಿಷ್ಟ್ಯವೆಂದರೆ, ಇದರ ಬೆನ್ನ ಮೇಲೆ ಒಂದು ತರಹ ಅಲಂಕೃತ ಮಾದರಿ ಇರುತ್ತದೆ, ಹಾಗೂ ಕಿರಿದಾದ ಮೂತಿ ಇರುತ್ತದೆ. ಆದ್ದರಿಂದಲೇ ಇದಕ್ಕೆ ಈ ಹೆಸರು ಬಂದಿದೆ. ಇದನ್ನು ಮೊದಲ ಬಾರಿಗೆ ಡುಮೆರಿಲ್ ಮತ್ತು ಬಿಬ್ರಾನ್ 1841ರಲ್ಲಿ ವರ್ಣಿಸಿದರು. ಇದು ದಕ್ಷಿಣ ಏಷ್ಯಾದ ದೇಶಗಳಾದ ಭಾರತ ಹಾಗೂ ಅಂಡಮಾನ್ & ನಿಕೋಬಾರ ದ್ವೀಪಗಳ ಸಮೂಹ, ಬಾಂಗ್ಲಾದೇಶ, ನೇಪಾಳ. ಶ್ರೀ ಲಂಕಾ ದೇಶಗಳಲ್ಲಿ ಕಂಡುಬರುತ್ತದೆ. ಭಾರತದ ಕಾಶ್ಮೀರದಲ್ಲಿ ಕೆಲ ದಾಖಲೆಗಳು ಇದ್ದರೂ, ದಕ್ಷಿಣ ಭಾರತದಲ್ಲಿ ವ್ಯಾಪಕವಾಗಿ ಕಂಡುಬರುತ್ತವೆ. ಸಮುದ್ರ ಮಟ್ಟದಿಂದ ಸುಮಾರು 2000 ಮೀ. ಎತ್ತರದ ವರೆಗೆ ದಟ್ಟ ಕಾಡುಗಳಲ್ಲಿ, ಗದ್ದೆ ಬೈಲುಗಳಲ್ಲಿ, ತೋಟಗಳಲ್ಲಿ ಹಾಗೂ ನಗರಗಳಲ್ಲಿನ ಉದ್ಯಾನವನಗಳಲ್ಲಿ ನೋಡಬಹುದು. ಗಂಡು ಕಪ್ಪೆಗಳು ಮಾತ್ರ ಕೂಗುತ್ತವೆ ಹಾಗೂ ಇದರ ಸಂತಾನೋತ್ಪತ್ತಿಯನ್ನು ಚಿಕ್ಕ ಚಿಕ್ಕ ರಾಡಿನೀರಿನ ಹೊಂಡಗಳ ಹತ್ತಿರ ನೋಡಬಹುದು. ಗಂಡು ಕಪ್ಪೆಗಳು 24ಮಿ.ಮೀ ಹಾಗೂ ಹೆಣ್ಣುಗಪ್ಪೆಗಳು ಸುಮಾರು 28ಮಿ.ಮೀ ಯಷ್ಟು ಇರುತ್ತವೆ. ಇದರ ಕೂಗು "ಟ ್...” ಎಂಬ ಸದ್ದಿನಿಂದ ಗುರುತಿಸಬಹುದಾಗಿದೆ.