ಅಲಿಂಗ್ ಹ್ಯಾಂ ವಿಲಿಯಂ

ವಿಲಿಯಂ ಅಲಿಂಗ್‍ಹ್ಯಾಮ್
ಜನನ(೧೮೨೪-೦೩-೧೯)೧೯ ಮಾರ್ಚ್ ೧೮೨೪
ಸಾವು18 November 1889(1889-11-18) (aged 65)
Hampstead, London
ರಾಷ್ಟ್ರೀಯತೆIrish
ಶಿಕ್ಷಣ(s)poet, scholar
SpouseHelen Paterson Allingham (1874–1889)

ಅಲಿಂಗ್ ಹ್ಯಾಂ ವಿಲಿಯಂ(1824-89). ಐರ್ಲೆಂಡಿನ ಕವಿ. 1846-1870ರವರೆಗೆ ಸುಂಕದ ಇಲಾಖೆಯಲ್ಲಿ ಕೆಲಸಮಾಡಿ 1874ರಲ್ಲಿ ಫ್ರೇಸರ್ಸ್ ಮ್ಯಾಗಜಿನ್‌ ಎಂಬ ಪ್ರಸಿದ್ಧ ನಿಯತಕಾಲಿಕ ಪತ್ರಿಕೆಯ ಸಂಪಾದಕನಾದ. ಅದೇ ವರ್ಷ ಪತ್ರಿಕೆಗಳಿಗೆ ಆಲಂಕಾರಿಕ ಚಿತ್ರಗಳನ್ನು ಬರೆಯುತ್ತಿದ್ದ ಹೆಲೆನ್ ಪ್ಯಾಟರ್ಸನ್ ಎಂಬುವಳನ್ನು ಮದುವೆಯಾದ. 1890ರಲ್ಲಿ ಇವನ ಬರೆಹಗಳು ಆರು ಸಂಪುಟಗಳಲ್ಲಿ ಪ್ರಕಾಶಗೊಂಡವು. ಇವುಗಳಲ್ಲಿ ಡೇ ಅಂಡ್ ನೈಟ್ ಸಾಂಗ್ಸ್, ಲಾರೆನ್ಸ್ ಬ್ಲೂಂ ಫೀಲ್ಡ್ ಇನ್ ಐರ್ಲೆಂಡ್, ಐರಿಷ್ ಸಾಂಗ್ಸ್ ಅಂಡ್ ಪೊಯಂಸ್ ಎಂಬುವು ಹೆಸರು ಗಳಿಸಿವೆ. ಇವನ ದಿನಚರಿಯನ್ನು ಇವನ ಪತ್ನಿಯೇ ಸಂಪಾದಿಸಿದ್ದಾಳೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: