ಅಲಿವರ್ದಿಖಾನ್ | |
---|---|
Nawab Nazim of Bengal, Bihar and Orissa (Nawab of Bengal) Shuja ul-Mulk (Hero of the country) Hashim ud-Daula (Sword of the state) Mahabat Jang (Horror in War) | |
ರಾಜ್ಯಭಾರ | 1740–1756 |
ಪಟ್ಟಾಭಿಷೇಕ | April 29, 1740 |
ಪೂರ್ಣ ಹೆಸರು | Mirza Muhammad Ali (Alivardi Khan / Alahvirdi Khan) |
ಜನನ | Before | ೧೦ ಮೇ ೧೬೭೧
ಜನ್ಮ ಸ್ಥಳ | ದಖ್ಖಣ |
ಮರಣ | April 10, 1756 | (aged 84)
ಮರಣ ಸ್ಥಳ | ಮುರ್ಶಿದಾಬಾದ್ |
ಸಮಾಧಿ ಸ್ಥಳ | ಖುಶ್ಬಾಗ್, ಮುರ್ಶಿದಾಬಾದ್ |
ಪೂರ್ವಾಧಿಕಾರಿ | Sarfaraz Khan |
ಉತ್ತರಾಧಿಕಾರಿ | Siraj ud-Daulah |
Consort to | Sharf-un-Nisa (sister of Sayyid Ahmed Najafi and daughter of Sayyid Hussain Najafi) |
ಮಕ್ಕಳು | Mehar un-nisa Begum (Ghaseti Begum) (d. June 1760) Munira Begum Amina Begum |
ವಂಶ | Afshar |
ತಂದೆ | Shah Quli Khan (Mirza Muhammad Madani) |
ತಾಯಿ | A daughter of Nawab Aqil Khan Afshar (Mir Muhammad Askari) |
ಧಾರ್ಮಿಕ ನಂಬಿಕೆಗಳು | ಷಿಯಾ ಮುಸ್ಲಿಂ |
ಅಲಿವರ್ದಿಖಾನ್(೧೬೭೧-೧೭೫೬)ಬಂಗಾಳದ ನವಾಬ. ಉದ್ಯಮಶೀಲತೆ ಮತ್ತು ಪರಾಕ್ರಮದಿಂದ ಬಂಗಾಲದ ಆಡಳಿತವನ್ನು ಪಡೆದು 1740-1756ರವರೆಗೆ ಸ್ವತಂತ್ರವಾಗಿ ಆಳಿದವ. ಹಿಂದಿನ ಹೆಸರು ಮಿರ್ಜಾ ಮಹಮದ್ ಅಲಿ. ತಂದೆಯ ಕಡೆಯಿಂದ ಅರಬ್ಬೀಯರ, ತಾಯಿಯ ಕಡೆಯಿಂದ ತುರ್ಕೀಯರ ಸಂಬಂಧ ಉಳ್ಳವ. ಬಿಹಾರ್ ಪ್ರಾಂತ್ಯಾಧಿಕಾರಿ ಷೂಜಾ ಉದ್ದೀನನ ಕೈಕೆಳಗೆ ಕೆಲಸಮಾಡಿ ದಕ್ಷ ಆಡಳಿತಗಾರನೆಂದು ಹೆಸರು ಪಡೆದಿದ್ದ. ಅಧಿಕಾರಕ್ಕೆ ಬಂದುದು ಕ್ರೌರ್ಯದಿಂದ. ಹದಿನಾರು ವರ್ಷಗಳ ಕಾಲ ರಾಜ್ಯವಾಳಿದ. ಆ ಕಾಲದಲ್ಲಿ ಬಂಗಾಲ ಅನೇಕ ಉತ್ಕಟ ಸಮಸ್ಯೆಗಳನ್ನೆದುರಿಸಬೇಕಾಗಿತ್ತು. ಜಮೀನ್ದಾರರೂ ವ್ಯಾಪಾರಿಗಳೂ ಮತ್ತು ಮಿಲಿಟರಿ ಸರದಾರರೂ ಬಂಗಾಲದಲ್ಲಿ ಅಶಾಂತಿಯನ್ನು ಉಂಟುಮಾಡಿದ್ದರು. ಜೊತೆಗೆ ಪರಕೀಯರ ವ್ಯಾಪಾರ ಸಂಸ್ಥೆಗಳನ್ನು ಹತೋಟಿಗೊಳಪಡಿಸಬೇಕಾಗಿತ್ತು. ಮರಾಠರ ದಾಳಿಗಳು ಮತ್ತು ಪಠಾಣರ ದಂಗೆಗಳು ಸಂದಿಗ್ಧ ಪರಿಸ್ಥಿತಿಯನ್ನುಂಟುಮಾಡಿದ್ದುವು. ಬಂಗಾಲದ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸಲು, ಖಾನ್ ಸಮರ್ಥವಾಗಿ ಹೋರಾಡಿದ. ಹಿಂದೂ ಮತ್ತು ಮಹಮದೀಯ ಅಧಿಕಾರಿಗಳ ಸಹಾಯದಿಂದ ಸುಭದ್ರವಾದ ಆಡಳಿತವನ್ನು ನೀಡಲು ಸತತವಾಗಿ ಪ್ರಯತ್ನಪಟ್ಟ.