ಅಲೆಕ್ಸಾಂಡರ್ ಸರ್ ವಿಲಿಯಂ

(1567-1640).ಇವರ ತಂದೆ ಮೆಂಸ್ಟಿ ಮತ್ತು ತಾಯಿ ಮೇರಿಯನ್. ಇವರು ೧೭ ನೇ ಶತಮಾನದ ಕವಿ. ಇವರು ಇಂಗ್ಲೆಂಡ್‌ನ ರಾಜಕಾರಣಿ. ಕವಿ. ಕ್ಲಾಕ್‌ಮನ್‌ಷೈರ್‌ ಅಲ್ಪ ಎಂಬಲ್ಲಿ ಜನಿಸಿದ. ಗ್ಲ್ಯಾಸ್ಗೊ ಮತ್ತು ಲೀಡನ್‌ಗಳಲ್ಲಿ ಶಿಕ್ಷಣ ಪಡೆದು ಇಂಗ್ಲೆಂಡಿನ ಪ್ರಭು 6ನೆಯ ಜೇಮ್ಸ್‌ನೊಡನೆ ಇಂಗ್ಲೆಂಡಿಗೆ ಹೋಗಿ ಅಲ್ಲಿ ಆಸ್ಥಾನಾಧಿಕಾರಿಯಾದ. 1626ರಲ್ಲಿ ಸ್ಕಾಟ್‌ಲೆಂಡ್‌ನ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕಗೊಂಡು 1633ರಲ್ಲಿ ಅರ್ಲ್ ಗೌರವವನ್ನು ಪಡೆದ. ಇವನ ಕೃತಿಗಳಲ್ಲಿ ಅರೋರಾ (1604) ಮತ್ತು ರಿಕ್ರಿಯೇಷನ್ಸ್ ವಿತ್ ದಿ ಮ್ಯೂಸಸ್ (1937) ಪ್ರಸಿದ್ಧಿ ಪಡೆದಿವೆ. ಈತ ಡೇರಿಯಸ್ (1603), ಕ್ರೋಸಸ್ (1904), ದಿ ಮಾನಾರ್ಕೀಕ್ ಟ್ರಾಜಿಡೀಸ್ (1605) ಮತ್ತು ಜೂಲಿಯಸ್ ಸೀಸರ್ (1907) ಎಂಬ ನಾಲ್ಕು ರುದ್ರನಾಟಕಗಳನ್ನೂ ಡೂಮ್ಸ್‌ಡೇ ಎಂಬ ಮಹಾಕಾವ್ಯವನ್ನು ಬರೆದಿದ್ದಾನೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: