ಅಲೆಕ್ಸಾಂಡ್ರೆಸ್ಕೂ ಗ್ರಿಗರಿ(1810-1885). ರೊಮೇನಿಯದ ಕವಿ. ರೊಮೇನಿಯದ ಜನಾಂಗ ಮತ್ತು ಭಾಷೆಗಳಿಗೆ ಪ್ರಾಚೀನ ರೋಮನ್ ಜನಾಂಗ ಮತ್ತು ಭಾಷೆಗಳೇ ಮೂಲ ಎಂಬ ಅರಿವಿನ ಹೊಸ ದೃಷ್ಟಿಕೋನದಿಂದ ಬರೆದ ಸಾಹಿತಿಗಳ ಪಂಥಕ್ಕೆ ಸೇರಿದವ. ರಾಜಕೀಯವನ್ನು ಪ್ರವೇಶಿಸಿ ವಿದ್ಯಾಮಂತ್ರಿಯಾದ. ನಾಡಿನ ಗತವೈಭವ, ಪ್ರಾಚೀನ ಸ್ಮಾರಕಗಳ ಮಹತ್ತ್ವ-ಇವು ಇವನ ಕವನಗಳ ವಸ್ತುಗಳು. ನೀತಿಕಥೆಗಳಲ್ಲಿ ಸಮಕಾಲೀನ ಸಮಾಜದ ದೋಷಗಳ ವಿಡಂಬನೆಯನ್ನು ಕಾಣಬಹುದು.