ಅಳ್ತೇಕರ್, ಎ ಎಸ್

ಅಳ್ತೇಕರ್ ಎ ಎಸ್ (1898-1960) ಡಾಕ್ಟರ್ ಅನಂತ ಸದಾಶಿವ ಅಳ್ತೇಕರ್ ಕೊಲ್ಹಾಪುರ ಜಿಲ್ಲೆಗೆ ಸೇರಿದ ಕಾಗಲದವರು. ಸಂಸ್ಕøತ ಮತ್ತು ಭಾರತೀಯ ತತ್ತ್ವಶಾಸ್ತ್ರಗಳಲ್ಲಿ ಪಂಡಿತರು. ಮುಂಬಯಿ ವಿಶ್ವವಿದ್ಯಾಲಯದ ಎಂ.ಎ, ಎಲ್.ಎಲ್.ಬಿ, ಪರೀಕ್ಷೆಗಳಲ್ಲಿ ಉತ್ತಮ ತರಗತಿಯಲ್ಲಿ ತೇರ್ಗಡೆ ಹೊಂದಿ ಕಾಶಿಯ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಸುಮಾರು 25 ವರ್ಷಗಳವರೆಗೆ ಭಾರತದ ಪ್ರಾಚೀನ ಇತಿಹಾಸ ಮತ್ತು ಸಂಸ್ಕøತಿಯ ಆಚಾರ್ಯರಾಗಿ ಕೆಲಸ ಮಾಡಿದರು. ಮುಂದೆ ಪಟ್ನ ವಿಶ್ವವಿದ್ಯಾನಿಲಯದಲ್ಲೂ ಕೆಲಕಾಲ ಇದ್ದರು. ರಾಷ್ಟ್ರಕೂಟರು ಮತ್ತು ಅವರ ಕಾಲವನ್ನು ಕುರಿತು ಅವರು ಬರೆದ ಗ್ರಂಥಕ್ಕೆ ಕಾಶಿಯ ವಿಶ್ವವಿದ್ಯಾನಿಲಯ ಡಿ. ಲಿಟ್ ಪದವಿ ನೀಡಿತು. [][](1928)

ಪುರಾತತ್ತ್ವ ಶಾಸ್ತ್ರ

[ಬದಲಾಯಿಸಿ]

ಡಾ. ಅಳ್ತೇಕರರು, 20 ಗ್ರಂಥಗಳನ್ನೂ 50ಕ್ಕೂ ಮೇಲ್ಪಟ್ಟು ಸಂಶೋಧನಾತ್ಮಕ ಲೇಖನಗಳನ್ನೂ ಬರೆದದ್ದಲ್ಲದೆ 15 ಶಾಸನಗಳನ್ನೂ ಸಂಪಾದಿಸಿದ್ದಾರೆ. ಇವುಗಳಲ್ಲಿ ಪ್ರಸಿದ್ಧವಾದ ಬಯಾನಾದ ಗುಪ್ತರ ನಾಣ್ಯಗಳನ್ನು ಕುರಿತ ಗ್ರಂಥವೂ ಒಂದು. ಅವರು ವೈಶಾಲಿ ಮತ್ತು ತುಮ್ರಹಾರಗಳಲ್ಲಿ ಉತ್ಖನನಗಳನ್ನು ನಡೆಸಿ ಮಹತ್ವದ ಶೋಧನೆಗಳನ್ನು ಮಾಡಿದ್ದಾರೆ.

ಉಲ್ಲೇಖಗಳು

[ಬದಲಾಯಿಸಿ]
  1. https://archive.org/details/educationinancie032398mbp
  2. "ಆರ್ಕೈವ್ ನಕಲು". Archived from the original on 2016-02-18. Retrieved 2017-02-19.