Ashwathi Pillai | |||||||||||||||
---|---|---|---|---|---|---|---|---|---|---|---|---|---|---|---|
— ಬ್ಯಾಡ್ಮಿಂಟನ್ ಆಟಗಾರ — | |||||||||||||||
![]() | |||||||||||||||
ವೈಯುಕ್ತಿಕ ಮಾಹಿತಿ | |||||||||||||||
ಹುಟ್ಟು ಹೆಸರು | Ashwathi Vinodh Pillai | ||||||||||||||
ಹುಟ್ಟು | [೧] village near Thuckalay, Kanyakumari, ತಮಿಳುನಾಡು, India[೨] | 14 July 2000||||||||||||||
ವಾಸಸ್ಥಾನ | Stockholm, Sweden[೨] | ||||||||||||||
ಎತ್ತರ | 172 cm | ||||||||||||||
ತೂಕ | 63 kg | ||||||||||||||
ದೇಶ | ![]() | ||||||||||||||
ಆಡುವ ಕೈ | Right | ||||||||||||||
Women's singles & doubles | |||||||||||||||
ಅತಿಹೆಚ್ಚಿನ ಸ್ಥಾನ | 215 (WS 10 May 2018) 400 (WD 5 July 2018) | ||||||||||||||
Medal record
| |||||||||||||||
BWF profile |
ಅಶ್ವತಿ ವಿನೋದ್ ಪಿಳ್ಳೈ (ಜನನ ೧೪ ಜುಲೈ ೨೦೦೦) ಸ್ವೀಡನ್ ದೇಶದ ವೃತ್ತಿಪರ ಬ್ಯಾಡ್ಮಿಂಟನ್ ಆಟಗಾರ್ತಿ. ಇವರು ಮೂಲತಃ ಭಾರತದ ಕನ್ಯಾಕುಮಾರಿಯವರು ನಂತರ ತನ್ನ ಕುಟುಂಬದೊಂದಿಗೆ ಸ್ವೀಡನ್ ಗೆ ತೆರಳಿದರು.[೩]
ಅಶ್ವತಿ ಪಿಳ್ಳೈ ಅವರ ತಾಯಿ ಗಾಯತ್ರಿ ಮತ್ತು ತಂದೆ ವಿನೋದ್ ಪಿಳ್ಳೈ. ಅವರು ತಮಿಳುನಾಡಿನ ಥಕ್ಲೆ ಸಮೀಪದ ಹಳ್ಳಿಯಿಂದ ಬಂದವರು.[೪] ಅಶ್ವತಿಯವರು ಬೆಂಗಳೂರಿನ ನ್ಯಾಷನಲ್ ಪಬ್ಲಿಕ್ ಸ್ಕೂಲ್ನಲ್ಲಿ ೪ನೇ ತರಗತಿಯವರೆಗೆ ಅಧ್ಯಯನ ಮಾಡಿದ್ದಾರೆ.[೫] ಅಶ್ವತಿಯವರಿಗೆ ಬಾಲ್ಯದಿಂದಲೇ ಬ್ಯಾಡ್ಮಿಂಟನ್ನಲ್ಲಿ ಆಸಕ್ತಿ ಇತ್ತು. ೨೦೦೯ರಲ್ಲಿ ರಲ್ಲಿ ಪಿಳ್ಳೈ ಕುಟುಂಬವು ತನ್ನ ತಂದೆಯ ವೃತ್ತಿಪರ ಅಗತ್ಯತೆಗಳಿಂದಾಗಿ ಸ್ವೀಡನ್ಗೆ ತೆರಳಿದರು. ಸ್ವೀಡನ್ನಲ್ಲಿರುವಾಗ ಅವರು ಇಂಟರ್ನ್ಯಾಶೆಲ್ಲಾ ಏಂಗೆಲ್ಸ್ಕಾ ಸ್ಕೋಲನ್ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮುಂದುವರೆಸಿದರು. ಅವಳು ಕೆರೊಲಿನಾ ಮರಿನ್ನಿಂದ ಸ್ಫೂರ್ತಿಯನ್ನು ಪಡೆದಿದ್ದಾರೆ.[೬]
ಪಿಳ್ಳೈ ಅವರು ಏಳು ವರ್ಷ ವಯಸ್ಸಿನಲ್ಲೇ ಬ್ಯಾಡ್ಮಿಂಟನ್ ಆಡಲು ಪ್ರಾರಂಭಿಸಿದರು. ಸ್ವೀಡನ್ಗೆ ತೆರಳಿದ ನಂತರ ತರಬೇತಿಯನ್ನು ನಿಲ್ಲಿಸಲು ಅವರಿಗೆ ಇಷ್ಟವಿರಲಿಲ್ಲ. ತರಬೇತುದಾರ ಆಂಡರ್ಸ್ ಕ್ರಿಸ್ಟಿಯಾನ್ಸೆನ್ರ ಮಾರ್ಗದರ್ಶನದಲ್ಲಿ ಉಪ್ಸಲಾದಲ್ಲಿ ರಾಷ್ಟ್ರೀಯ ತರಬೇತಿ ಕೇಂದ್ರವನ್ನು ಸೇರಿಕೊಂಡರು. ಸ್ವೀಡಿಶ್ ನ್ಯಾಶನಲ್ ಸ್ಪೋರ್ಟ್ಸ್ ಫೆಡರೇಶನ್ನ ದೈಹಿಕ ತರಬೇತುದಾರರ ತರಬೇತಿ ಸೇರಿದಂತೆ ಅವರು ದಿನಕ್ಕೆ ಕನಿಷ್ಠ ಮೂರುವರೆ ಗಂಟೆಗಳವರೆಗೆ ತರಬೇತಿ ಪಡೆಯುತ್ತಾರೆ.
ಅಶ್ವತಿಯವರು ಸ್ಟಾಕ್ಹೋಮ್ನಲ್ಲಿ ಬಹುಮಾನದ ಹಣದೊಂದಿಗೆ ೨೦೧೨-೧೩ರ ಪ್ರತಿಷ್ಠಿತ ಆಟಗಾರ ಪ್ರಶಸ್ತಿಯನ್ನು (ಗರ್ಲ್ಸ್ ಜೂನಿಯರ್) ಪಡೆದರು.