ಅಶ್ವಿನಿ ಚಿದಾನಂದ ಶೆಟ್ಟಿ ಅಕ್ಕುಂಜಿ (ಜನನ: ೭ ಅಕ್ಟೋಬರ್ ೧೯೮೭) ಒಬ್ಬರು ಉಡುಪಿ ಸಿದ್ದಪುರದ ಭಾರತೀಯ ವೇಗದ ಓಟಗಾರ್ತಿ ಕ್ರೀಡಾಪಟು, ಇವರು ೪೦೦ ಮೀಟರ್ ಓಟದಲ್ಲಿ ಪರಿಣಿತರು[೧]. ಅಶ್ವಿನಿ ಅವರು ೨೦೧೦ ಏಷ್ಯನ್ ಗೇಮ್ಸ್ ನಲ್ಲಿ ಮತ್ತು ೨೦೧೦ ಕಾಮನ್ವೆಲ್ತ್ ಗೇಮ್ಸ್ ನ ೪ x ೪೦೦ ಮೀ ರಿಲೇ ತಂಡದ ಸ್ಪರ್ಧೆಯಲ್ಲಿ, ಮಂಜಿತ್ ಕೌರ್, ಮನ್‍ದೀಪ್ ಕೌರ್ ಮತ್ತು ಸಿನಿ ಜೋಸ್ ಜೊತೆ ಚಿನ್ನದ ಪದಕ ಗೆದ್ದರು. [೨] ಚೀನಾದ ಗುವಾಂಗ್ಝೌನಲ್ಲಿ ನೆಡೆದ ೨೦೧೦ ಏಷ್ಯನ್ ಕ್ರೀಡಾಕೂಟದಲ್ಲಿ ೪೦೦ ಮೀಟರ್ ಹರ್ಡಲ್ಸ್ ವಿಭಾಗದಲ್ಲಿ ವೈಯಕ್ತಿಕ ಚಿನ್ನದ ಪದಕ ಪಡೆದರು.[೩]. ಕರ್ನಾಟಕದ ಸರ್ಕಾರ ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿಯನ್ನು ೨೦೧೦ರಲ್ಲಿ ಪಡೆದರು.[೪]
ಇವರು ಹುಟ್ಟಿದು ಕರ್ನಾಟಕದ ಉಡುಪಿ ಜಿಲ್ಲೆಯ, ಕುಂದಾಪುರ ತಾಲ್ಲೂಕಿನ ಸಿದ್ದಪುರದಲ್ಲಿ,ಇವರ ತಾಯಿ ಯಶೋದ ಶೆಟ್ಟಿ ಅಕ್ಕುಂಜಿ ಮತ್ತು ತಂದೆ ಬಿ.ಚಿಂದನಂದದಾನಂದ ಶೆಟ್ಟಿ[೫][೬]. ಅಶ್ವಿನಿ ಅವರು ಕ್ರೀಡಾ ಪರಂಪರೆ ಇರುವ, ಕನ್ನಡ ಮಾತನಾಡುವ ಒಂದು ಕೃಷಿಕ ಕುಟುಂಬದಿಂದ ಬಂದವರು.[೭] [೮]. ಅವರು ತನ್ನ ಕುಟುಂಬದ ೫ ಎಕರೆ ಕೃಷಿಭೂಮಿ ಮತ್ತು ತೆಂಗು,ಅಡಿಕೆ ತೋಟಗಳಲ್ಲಿ ತನ್ನ ಅಕ್ಕ ದೀಪ್ತಿ ಮತ್ತು ತಮ್ಮ ಅಮಿತ್ ಜೊತೆ ಬೆಳೆದವರು[೯]. ಮೊದಲು ಅಶ್ವಿನಿ ಅವರು ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡುತ್ತಿದರು,[೧೦] ಪ್ರಸ್ತುತವಾಗಿ ಅವರು ಪಟಿಯಾಲ, ಪಂಜಾಬ್ ನ ಕಾರ್ಪೋರೇಷನ್ ಬ್ಯಾಂಕ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ.[೧೧]
ಜುಲೈ ೨೦೧೧ ಕೋಬ್ (ಜಪಾನ್)ನಲ್ಲಿ ನೆಡೆದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್‌ಕ್ಕಿಂತ ಮೊದಲು ಪರೀಕ್ಷೆಯಲ್ಲಿ ಸಂವರ್ಧನ ಸ್ಟೀರಾಯ್ಡ್ಗಳು ಇರುವುದಾಗಿ ಬಂತು[೧೨]. ಇವರನ್ನು ಸ್ಪರ್ಧೆಯಿಂದ ಕೈಬಿಡಲಾಯಿತು ನಂತದದಲ್ಲಿ ಅಥ್ಲೆಟಿಕ್ಸ್ ತಂಡದಿಂದ ರದ್ದುಗೊಳಿಸಲಾಯಿತು, ಅವರು ಆರೋಪಗಳನ್ನುನಿರಾಕರಿಸಿದರ ಆದರೆ ೨೩ ಡಿಸೆಂಬರ್ ೨೦೧೧ರಂದು ನಾಡ ಅವರ ಮೇಲೆ ಒಂದು ವರುಷದ ನಿಷೇಧ ಹೇರಿತು[೧೩]. ಆರ್ಬಿಟ್ರೇಷನ್ ಫಾರ್ ಸ್ಪೋರ್ಟ್ (ಸಿಎಎಸ್) ಇಂಟರ್ನ್ಯಾಷನಲ್ ಅಸೋಸಿಯೇಶನ್ ಆಫ್ ಅಥ್ಲೆಟಿಕ್ಸ್ ಒಕ್ಕೂಟಗಳು ಇವರಿಗೆ ಹಗುರವಾದ ಶಿಕ್ಷೆ ಕೊಡಲಾಗಿದೆ ಎಂಬ ಮನವಿಯನ್ನು ಎತ್ತಿಹಿಡಿಯಿತು ಮತ್ತು ಅಶ್ವಿನಿ ಸೇರಿ ೬ ಕ್ರೀಡಾಪಟುಗಳಿಗೆ (ಮನ್ದೀಪ್ ಕೌರ್, ಸಿನಿ ಜೋಸ್, ಜೌನ ಮರ್ಮು, ಟಿಯಾನಾ ಮೇರಿ ಮತ್ತು ಪ್ರಿಯಾಂಕಾ ಪವಾರ್) ಎರಡು ವರ್ಷದ ನಿಷೇಧ ಹೇರಿತು.[೧೪]
ಇಅವರಿಗೆ ೨೦೧೦ರಲ್ಲಿ ಕರ್ನಾಟಕ ನೀಡಿದ ರಾಜ್ಯೋತ್ಸವ ಪ್ರಶಸ್ತಿ, ಒಂದು ನೂರು ಸಾವಿರ ರೂಪಾಯಿ ನಗದು ಬಹುಮಾನ, ಒಂದು ೨೦ಗ್ರಾಮ್ ಚಿನ್ನದ ಪದಕ ಮತ್ತು ಒಂದು ಅನುದಾನ ಆದ್ಯತೆ ಹಂಚಿಕೆ ಅಡಿಯಲ್ಲಿ ಮೂಲಕ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿ.ಡಿ.ಏ)ಯಿಂದ ಮನೆ ನಿವೇಶನವನ್ನು ಒಳಗೊಂಡಿದೆ.[೧೫] ಇವರಿಗೆ ಆರ್ಥಿಕವಾಗಿ ರಾಷ್ಟ್ರೀಯ ಮತ್ತು ರಾಜ್ಯ ಸರ್ಕಾರಗಳು ಬಹುಮಾನ ನೀಡಿವೆ ಹಾಗೂ ೨೦೧೦ರಲ್ಲಿ ಚಿನ್ನದ ಪದಕ ಗೆದ್ದಿದಕ್ಕೆ ಭಾರತೀಯ ರೈಲ್ವೆ ಸಹ ಬಹುಮಾನವನ್ನು ಕೊಟ್ಟಿದೆ.[೧೬][೧೭][೧೮][೧೯]
{{cite web}}
: Unknown parameter |deadurl=
ignored (help)
{{cite news}}
: Unknown parameter |deadurl=
ignored (help)
{{cite web}}
: Unknown parameter |deadurl=
ignored (help)
{{cite news}}
: |last=
has generic name (help)
{{cite news}}
: Unknown parameter |deadurl=
ignored (help)
{{cite news}}
: Unknown parameter |deadurl=
ignored (help)