ಚಿತ್ರ:Aditya Birla Group logo.png | |
ಸಂಸ್ಥೆಯ ಪ್ರಕಾರ | ಸಾರ್ವಜನಿಕ |
---|---|
ಸಂಸ್ಥಾಪಕ(ರು) | ಘನಶ್ಯಾಮ ದಾಸ್ ಬಿರ್ಲಾ |
ಮುಖ್ಯ ಕಾರ್ಯಾಲಯ | ಮುಂಬೈ, ಭಾರತ |
ವ್ಯಾಪ್ತಿ ಪ್ರದೇಶ | ವಿಶ್ವಾದ್ಯಂತ |
ಪ್ರಮುಖ ವ್ಯಕ್ತಿ(ಗಳು) | ಕುಮಾರ್ ಮಂಗಳಂ ಬಿರ್ಲಾ (ಅಧ್ಯಕ್ಷ) |
ಉದ್ಯಮ | ಸಂಘಟಿತ ವ್ಯಾಪಾರಿ ಸಂಸ್ಥೆ (ಕಂಪನಿ) |
ಉತ್ಪನ್ನ | ಅಲ್ಯೂಮಿನಿಯಂ, ತಾಮ್ರ, ಸಿಮೆಂಟ್, ಗೊಬ್ಬರ, ಜವಳಿ, ಫೈಬರ್, ಇತ್ಯಾದಿ. |
ಆದಾಯ | ![]() |
ಉದ್ಯೋಗಿಗಳು | ೧೩೦,೦೦೦ (೨೦೦೯)[೨] |
ಉಪಸಂಸ್ಥೆಗಳು | ಹಲವಾರು. |
ಜಾಲತಾಣ | Adityabirla.com |
ಆದಿತ್ಯ ಬಿರ್ಲಾ ಗ್ರೂಪ್ ಎಂಬುದು ಬಹುರಾಷ್ಟ್ರೀಯ ಸಂಘಟಿತ ವ್ಯಾಪಾರ ಸಂಸ್ಥೆಯಾಗಿದೆ. ಇದರ ಪ್ರಧಾನ ಕಾರ್ಯಾಲಯ ಭಾರತ ದೇಶದಲ್ಲಿರುವ ಮುಂಬಯಿ ನಗರದಲ್ಲಿದೆ,[೩]. ಇದು ಥೈಲೆಂಡ್, ದುಬೈ, ಸಿಂಗಾಪೂರ್, ಮಯನ್ಮಾರ್, ಲಾವೋಸ್, ಇಂಡೋನೇಷಿಯ, ಫಿಲಿಪ್ಪಿನ್ಸ್, ಈಜಿಪ್ಟ್, ಕೆನಡಾ, ಆಸ್ಟ್ರೇಲಿಯ, ಚೀನಾ, ಯುಎಸ್ಎ, ಯುಕೆ, ಜರ್ಮನಿ, ಹಂಗೇರಿ, ಬ್ರೆಜಿಲ್, ಇಟಲಿ, ಫ್ರಾನ್ಸ್, ಲಕ್ಸಂಬರ್ಗ್, ಸ್ವಿಜರ್ಲೆಂಡ್, ಬಾಂಗ್ಲಾದೇಶ್, ಮಲೇಶಿಯ, ವಿಯೆಟ್ನಾಂ ಮತ್ತು ಕೊರಿಯಾವನ್ನು ಒಳಗೊಂಡಂತೆ ೨೫ ರಾಷ್ಟ್ರಗಳಲ್ಲಿ ವ್ಯವಹಾರಗಳನ್ನು ಹೊಂದಿದೆ.[೪] ಆದಿತ್ಯ ಬಿರ್ಲಾ ಗ್ರೂಪ್ ಯುಎಸ್ $ ೩೦ ಶತಕೋಟಿ ವಾಣಿಜ್ಯಕೂಟವಾಗಿದ್ದು ಶೇಕಡ ೬೦% ರಷ್ಟು ಆದಾಯವನ್ನು ಭಾರತದ ಹೊರಗಿನಿಂದಲೇ ಪಡೆಯುತ್ತದೆ.[೧] ಉದ್ಯಮಸಮೂಹವು ನಿರ್ವಹಿಸುವ ಎಲ್ಲಾ ಉದ್ಯಮ ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹೆವಿಟ್ ಎಕನಾಮಿಕ್ಸ್ ಟೈಮ್ಸ್ ಮತ್ತು ೨೦೦೭ ರ ವಾಲ್ ಸ್ಟ್ರೀಟ್ ಜರ್ನಲ್ ಸ್ಟಡಿ ಆದಿತ್ಯ ಬಿರ್ಲಾ ಗ್ರೂಪ್ ಭಾರತದಲ್ಲಿ ಅತ್ಯುತ್ತಮ ಸಂಸ್ಥೆ ಮತ್ತು ಏಷ್ಯಾದ ೨೦ ಅಗ್ರ ಸಂಸ್ಥೆಗಳ ಪೈಕಿ ಒಂದೆಂದು ತೀರ್ಮಾನಿಸಿದೆ.[೫]
ಈ ಉದ್ಯಮಸಮೂಹದ ಮೂಲಗಳು ಭಾರತದ ಅಗ್ರಗಣ್ಯ ಕೈಗಾರಿಕೋದ್ಯಮಿ ಘನಶ್ಯಾಂ ದಾಸ್ ಬಿರ್ಲಾ ಒಂದೊಮ್ಮೆ ಹೊಂದಿದ್ದ ಸಂಘಟಿತ ವ್ಯಾಪಾರ ಸಂಸ್ಥೆಯಲ್ಲಿದೆ.
ಆದಿತ್ಯ ಬಿರ್ಲಾ ವಿಭಿನ್ನ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ವಿವಿಧ ಅಂಗಸಂಸ್ಥೆಗಳಾಗಿ ಸಂಘಟಿತವಾಗಿದೆ. ಇವುಗಳಲ್ಲಿ ವಿಸ್ಕೋಸ್ ನಾರಿನ ಎಳೆ, ಕಬ್ಬಿಣಾಂಶರಹಿತ ಲೋಹಗಳು, ಸಿಮೆಂಟ್, ವಿಸ್ಕೋಸ್ ಫಿಲಮೆಂಟ್ ನೂಲುಹುರಿ, ಬ್ರಾಂಡೆಡ್ ಉಡುಪು, ಕಾರ್ಬನ್ ಮಸಿ, ರಾಸಾಯನಿಕಗಳು, ಚಿಲ್ಲರೆವ್ಯಾಪಾರ (ಸೂಪರ್ ಮಾರ್ಕೆಟ್ ನ 'ಮೋರ್' ಬ್ರಾಂಡ್ ನಡಿಯಲ್ಲಿ), ರಸಗೊಬ್ಬರಗಳು, ರಾಸಾಯನಿಕಗಳು, ನಿರೋಧಕಗಳು, ಹಣಕಾಸಿನ ಸೇವೆಗಳು, ದೂರಸಂಪರ್ಕ, ಬಿಪಿಒ ಮತ್ತು ಮಾಹಿತಿ ತಂತ್ರಜ್ಞಾನ ಸೇವೆಗಳು ಒಳಗೊಂಡಿವೆ. ಉದ್ಯಮಸಮೂಹವು ಒಟ್ಟು ನಾಲ್ಕು ಪ್ರಮುಖ ಕಂಪನಿಗಳನ್ನು ಒಳಗೊಂಡಿದೆ. ಇದು ಅವುಗಳ ಅಂಗಸಂಸ್ಥೆಗಳು ಮತ್ತು ಜಂಟಿ ಸಹಯೋಗಗಳು, ಇತ್ಯಾದಿಗಳ ಮೂಲಕ ಅನೇಕ ಕೈಗಾರಿಕಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿವೆ. ಅವುಗಳೆಂದರೆ ಹಿಂಡ್ಯಾಲ್ಕೊ, ಗ್ರಾಸಿಮ್, ಆದಿತ್ಯ ಬಿರ್ಲಾ ನ್ಯೂವೊ, ಮತ್ತು ಅಲ್ಟ್ರಾ ಟೆಕ್ ಸಿಮೆಂಟ್.
ಸಮೂಹದ ಕಬ್ಬಿಣಾಂಶರಹಿತ ಲೋಹಗಳು ಹಿಂಡ್ಯಾಲ್ಕೊ ಕಂಪನಿಯ ಉಸ್ತುವಾರಿಯಲ್ಲಿ ಬರುತ್ತವೆ.[೬] ಇದು ಅಲ್ಯೂಮಿನಿಯಂ ಮತ್ತು ತಾಮ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಇದರ ಉತ್ಪಾದನಾ ಸ್ಥಳಗಳು ಪ್ರಧಾನವಾಗಿ ಭಾರತದಲ್ಲಿದ್ದು ಆಸ್ಟ್ರೇಲಿಯದಲ್ಲಿ ಇದು ಗಣಿಗಳ ಮಾಲೀಕತ್ವ ಹೊಂದಿದೆ. ಕಂಪನಿಯು ಯುಎಸ್ $ ೬ ಬಿಲಿಯನ್ ಡಾಲರ್‌ಗೆ ನಾವೆಲಿಸ್ ಎಂಬ ಕೆನಡಾದ ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳಲು ೨೦೦೭ ರ ಫೆಬ್ರವರಿ ೧೧ ರಂದು ಒಪ್ಪಂದವನ್ನು ಮಾಡಿಕೊಂಡಿತು[೭] ಇದರಿಂದ ಸಂಯೋಜಿತ ಸಂಸ್ಥೆಯು ವಿಶ್ವದ ಅತಿದೊಡ್ಡ ರಾಲ್ಡ್ (ಸುತ್ತಿದ) ಅಲ್ಯೂಮಿನಿಯಂ ಉತ್ಪಾದಕವಾಯಿತು. ೨೦೦೭ ರ ಮೇ ೧೫ ರಂದು ಸಾಮಾನ್ಯ ಸ್ಟಾಕಿನ ಉಳಿದಿರುವ ಪ್ರತಿ ಷೇರಿಗೆ ನಾವೆಲಿಸ್ ಶೇರುದಾರರು $ ೪೪.೯೩ ಸ್ವೀಕರಿಸುವ ಮೂಲಕ ಸ್ವಾಧೀನವು ಪೂರ್ಣಗೊಂಡಿತು.[೮] ಹಿಂಡ್ಯಾಲ್ಕೊ ಅಲ್ಯೂಮಿನಾ ರಾಸಾಯನಿಕಗಳು, ಪ್ರಾಥಮಿಕ ಲ್ಯೂಮಿನಿಯಂ, ಸುರುಳಿ ಸುತ್ತಿದ ಉತ್ಪನ್ನಗಳು, ಮಿಶ್ರಲೋಹದ ಚಕ್ರಗಳು, ಚಾವಣಿಯ ಶೀಟ್‌ಗಳು (ತಗಡುಗಳು), ತಂತಿ ಲೋಹದ ಸರಳುಗಳು, ಎರಕಹೊಯ್ದ ತಾಮ್ರದ ಸರಳುಗಳು, ತಾಮ್ರದ ಕ್ಯಾಥೋಡ್‌ಗಳು ಮತ್ತು ಅನೇಕ ಇತರ ಉತ್ಪನ್ನಗಳನ್ನು ತಯಾರಿಸುತ್ತದೆ.[೯]
ಗ್ರೂಪ್‍ನ ಸಿಮೆಂಟ್ ವ್ಯಾಪಾರವು ಗ್ರಾಸಿಮ್ ಮತ್ತು ಅಲ್ಟ್ರಾಟೆಕ್ ಎಂಬ ಎರಡು ಸಿಮೆಂಟ್ ಕಂಪನಿಗಳ ಉಸ್ತುವಾರಿಯಲ್ಲಿ ಬರುತ್ತದೆ. ಈ ಎರಡು ಸಂಸ್ಥೆಗಳು ಈಗ ಅಲ್ಟ್ರಾಟೆಕ್ ಸಿಮೆಂಟ್ ಎಂಬ ಹೆಸರಿನಲ್ಲಿ ವಿಲೀನವಾಗಿ, ಭಾರತದ ಅತ್ಯಂತ ದೊಡ್ಡ ಸಿಮೆಂಟ್ ಉತ್ಪಾದಕ ಕಂಪೆನಿಯಾಗಿ ರಚನೆಯಾಗಿದೆ. ಅಲ್ಟ್ರಾಟೆಕ್ ಸಿಮೆಂಟ್ ಮೂಲತಃ ಉದ್ಯಮಸಮೂಹ ಸ್ವಾಧೀನಪಡಿಸಿಕೊಂಡ L&T ಕಂಪನಿಯ ಸಿಮೆಂಟ್ ವ್ಯವಹಾರವಾಗಿದೆ.
ಉದ್ಯಮಸಮೂಹವು ಕಾರ್ಬನ್ ಮಸಿಯನ್ನು ವಿಶ್ವವ್ಯಾಪಿ ಉತ್ಪಾದಿಸುವ ನಾಲ್ಕನೇ ದೊಡ್ಡ ಉತ್ಪಾದಕವಾಗಿದೆ.[೧೦] ಇದು ಈಜಿಪ್ಟ್, ಥೈಲೆಂಡ್, ಭಾರತ ಮತ್ತು ಚೀನಾ ದೇಶಗಳಲ್ಲಿ ಸೌಲಭ್ಯಗಳಿಂದಾಚೆ ಉತ್ಪಾದಿಸುತ್ತಿದೆ. ವಿಶ್ವವ್ಯಾಪಿ ಅನೇಕ ಪ್ರಮುಖ ಮೋಟಾರು ವಾಹನಗಳ ಟೈರ್ ತಯಾರಕರಿಗೆ ಇದು ಪ್ರಧಾನ ಸರಬರಾಜುದಾರನಾಗಿದೆ.
ವಿಸ್ಕೋಸ್ ಸ್ಟೇಪಲ್ ಫೈಬರ್ ಕೈಗಾರಿಕೆಯಲ್ಲಿ ಆದಿತ್ಯ ಬಿರ್ಲಾ ಗ್ರೂಪ್ ಪ್ರಪಂಚದಲ್ಲೇ ಅತ್ಯಂತ ದೊಡ್ಡ ವಹಿವಾಟನ್ನು ಹೊಂದಿದೆ.[೧೧] ಇದು ಭಾರತ,ಲಾವೋಸ್, ಥೈಲ್ಯಾಂಡ್, ಮಲೇಶಿಯ ಮತ್ತು ಚೀನಾ ದೇಶಗಳ ಹೊರಗೆ ವಹಿವಾಟುಗಳನ್ನು ನಡೆಸುತ್ತದೆ. ಇದು ಬಿರ್ಲಾ ಸೆಲ್ಯುಲೋಸ್ ಬ್ರಾಂಡ್ ಅನ್ನು ಹೊಂದಿದೆ. ವಿಸ್ಕೋಸ್ ಸ್ಟೇಪಲ್ ಫೈಬರ್ ಅಲ್ಲದೇ ಉದ್ಯಮಸಮೂಹವು ಈಜಿಪ್ಟ್ ಮತ್ತು ಥೈಲ್ಯಾಂಡ್ ನಲ್ಲಿ ಅಕ್ರಿಲಿಕ್ ಫೈಬರ್ (ಅಕ್ರಿಲಿಕ್ ನೂಲು) ವ್ಯವಹಾರಗಳನ್ನು ಹಾಗು ಭಾರತದಾದ್ಯಂತ ಮತ್ತು ದಕ್ಷಿಣ ಏಷ್ಯಾದ ಅನೇಕ ಸ್ಥಳಗಳಲ್ಲಿ ವಿಸ್ಕೋಸ್ ಫಿಲ್ಮೆಂಟ್ ಯಾರ್ನ್ ವ್ಯವಹಾರಗಳನ್ನು ಹಾಗು ನೂಲುತೆಗೆಯುವ ಕಾರ್ಖಾನೆಗಳನ್ನೂ ಕೂಡ ಹೊಂದಿದೆ. ಗ್ರೂಪ್ ಕೆನಡಾದಲ್ಲಿ ಹಣ್ಣಿನ ತಿರುಳು ಮತ್ತು ತೋಟಗಾರಿಕೆ (ಪ್ಲಾಂಟೇಶನ್) ಆಸಕ್ತಿಯನ್ನು ಹೊಂದಿದೆ. ಅಲ್ಲದೇ ಇತ್ತೀಚೆಗೆ ಲಾವೋಸ್‍ನಲ್ಲಿ ತೋಟಗಾರಿಕೆ ಮೇಲೆ ಬಂಡವಾಳಹೂಡಿದೆ. ಆದಿತ್ಯ ಬಿರ್ಲಾ ಗ್ರೂಪ್ ಭಾರತದ ಬ್ರಾಂಡೆಡ್ ಜವಳಿ ಮಾರುಕಟ್ಟೆಯಲ್ಲೂ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ.
ಐಡಿಯ ಸೆಲ್ಯುಲರ್ ಕಂಪನಿಯನ್ನು ಈಗ ಆದಿತ್ಯ ಬಿರ್ಲಾ ಗ್ರೂಪ್ ನಡೆಸುತ್ತಿದೆ.[೧೨] ಐಡಿಯ ಸೆಲ್ಯುಲರ್ ಕಂಪನಿಯನ್ನು ಉದ್ಯಮಸಮೂಹ, AT&T ಮತ್ತು ಟಾಟಾ ಗ್ರೂಪ್ನೊಡನೆ ಜಂಟಿ ಸಹಯೋಗದಂತೆ ಪ್ರಾರಂಭಿಸಲಾಯಿತು. ಆದಾಗ್ಯೂ, ಉಳಿದ ಪಾಲುದಾರರ ಷೇರುಗಳನ್ನು ತರುವಾಯ ಉದ್ಯಮಸಮೂಹವು ಸ್ವಾಧೀನಕ್ಕೆ ತೆಗೆದುಕೊಂಡಿತು. ಭಾರತದ ಷೇರು ಮಾರುಕಟ್ಟೆಯಲ್ಲಿ ಆರಂಭಿಕ ಸಾರ್ವಜನಿಕ ಷೇರು ಬಿಡುಗಡೆ ಯ ನಂತರ, ಐಡಿಯ ಸೆಲ್ಯುಲರ್, ಸಮೂಹದ ಮಾರುಕಟ್ಟೆಯ ಬಂಡವಾಳೀಕರಣದಲ್ಲಿ ಮೂರನೇ ಸ್ಥಾನವನ್ನು ಗಳಿಸಿತು. ಕಂಪನಿಯ ಪ್ರಧಾನ ಕಾರ್ಯಾಲಯ ಮುಂಬಯಿನಲ್ಲಿದೆ ಹಾಗು ಭಾರತದ ಎಲ್ಲಾ ೨೨ ಟೆಲಿಕಾಮ್ ವಲಯಗಳಲ್ಲೂ ವ್ಯವಹಾರಗಳನ್ನು ಹೊಂದಿದೆ.
ಮೇಲೆ ತಿಳಿಸಲಾದ ಉದ್ಯಮಗಳನ್ನು ಹೊರತುಪಡಿಸಿ ಗ್ರೂಪ್ ನಿರೋಧಕಗಳು, ರಸಗೊಬ್ಬರಗಳು, BPO (ಆದಿತ್ಯ ಬಿರ್ಲಾ ಮಿನ್ಯಾಕ್ಸ್ Archived 2017-02-22 ವೇಬ್ಯಾಕ್ ಮೆಷಿನ್ ನಲ್ಲಿ.), ವಿಮಾಯೋಜನೆ (ಬಿರ್ಲಾ ಸನ್ ಲೈಫ್ Archived 2017-10-28 ವೇಬ್ಯಾಕ್ ಮೆಷಿನ್ ನಲ್ಲಿ. ವಿಮಾಯೋಜನೆ), ಐಟಿ, ರಾಸಾಯನಿಕಗಳು, ಗಣಿಗಾರಿಕೆ, ಸ್ಪಾಂಜ್ ಐರನ್, ಹಣಕಾಸಿನ ಸೇವೆಗಳು (ಸನ್ ಲೈಫ್ ನ ಜೊತೆಗೂಡಿ) ಹಾಗು ಇತ್ತೀಚೆಗೆ ಚಿಲ್ಲರೆ ವ್ಯಾಪಾರಗಳಂತಹ ಕೈಗಾರಿಕ ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದೆ. ಆದಿತ್ಯ ಬಿರ್ಲಾ ೨೦೦೭ ರಲ್ಲಿ ಬಿಸಿನೆಸ್ ಪ್ರೋಸಸಿಂಗ್ ಔಟ್ ಸೋರ್ಸ್ ಮಿನ್ಯಾಕ್ಸ್ ಅನ್ನು ಸ್ವಾಧೀನಕ್ಕೆ ತೆಗೆದುಕೊಂಡಿತು.
ಅನೇಕ ಸಮುದಾಯ ಅಭಿವೃದ್ಧಿ ಉಪಕ್ರಮಗಳಲ್ಲಿ ವಿಶೇಷವಾಗಿ ಅದರ ಉತ್ಪಾದನೆ ಸ್ಥಳದ ಸುತ್ತಮುತ್ತ ಸಮೂಹ ಸ್ವತಃ ಸಕ್ರಿಯವಾಗಿ ಒಳಗೊಂಡಿದೆ. ಗ್ರೂಪ್ ಆರೋಗ್ಯರಕ್ಷಣೆ, ಶಿಕ್ಷಣ, ಸಮರ್ಥನಿಯ ಜೀವನೋಪಾಯ, ಸಮಾಜದ ಮೂಲಭೂತ ವ್ಯವಸ್ಥೆಗಳು ಮತ್ತು ಸಾಮಾಜಿಕ ಗುರಿಗಳಂಥ ಕ್ಷೇತ್ರಗಳಲ್ಲಿ ಮಾಡಬೇಕಾದ ಅಭಿವೃದ್ಧಿಯ ಚಟುವಟಿಕೆಗಳಿಗೆ ಕೂಡ ಬೆಂಬಲಿಸುತ್ತದೆ. ಗ್ರೂಪ್ ನ ಲೋಕೋಪಕಾರ ಚಟುವಟಿಕೆಗಳಿಗೆ ಶ್ರೀಮತಿರಾಜ ಶ್ರೀ ಬಿರ್ಲಾರವರು ಮಾರ್ಗದರ್ಶನ ಮಾಡುತ್ತಾರೆ.[೧೩] ಸಮುದಾಯದ ಉಪಕ್ರಮಗಳು ಮತ್ತು ಗ್ರಾಮೀಣ ಅಭಿವೃದ್ಧಿ ಸಲುವಾಗಿ ಆದಿತ್ಯ ಬಿರ್ಲಾ ಕೇಂದ್ರವು ವರ್ಷಕ್ಕೆ ೭ ದಶಲಕ್ಷ ಜನರನ್ನು ತಲುಪುವ ಮೂಲಕ ೩,೭೦೦ ಹಳ್ಳಿಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ೪೫ ಶಾಲೆಗಳನ್ನು ಮತ್ತು ೧೮ ಆಸ್ಪತ್ರೆಗಳನ್ನು ನಡೆಸುತ್ತಿದೆ.