ಆರ್.ನಾಗೇಂದ್ರರಾವ್

ಆರ್.ನಾಗೇಂದ್ರ ರಾವ್
ಜನನ
ರಟ್ಟೀಹಳ್ಳಿ ನಾಗೇಂದ್ರ ರಾವ್

(೧೮೯೬-೦೬-೨೩)೨೩ ಜೂನ್ ೧೮೯೬
ಹೊಳಲ್‌ಕೆರೆ, ಮೈಸೂರು ಸಾಮ್ರಾಜ್ಯ, ಬ್ರಿಟಿಷ್ ಇಂಡಿಯಾ
ಮರಣ೯ ಫೆಬ್ರವರಿ ೧೯೭೭ (ವಯಸ್ಸು ೮೦)
ವೃತ್ತಿ(ಗಳು)ನಟ, ಚಲನಚಿತ್ರ ನಿರ್ದೇಶಕ, ನಿರ್ಮಾಪಕ, ಚಿತ್ರಕಥೆಗಾರ, ಸಂಯೋಜಕ
ಸಂಗಾತಿs
  • ರತ್ನಾ ಬಾಯಿ
  • ಕಮಲಾ ಬಾಯಿ
ಮಕ್ಕಳು೪, ಸೇರಿದಂತೆ

ಆರ್ ಎನ್ ಕೆ ಪ್ರಸಾದ್ ಆರ್.ಎನ್.ಜಯಗೋಪಾಲ್

ಆರ್.ಎನ್.ಸುದರ್ಶನ್
ಪ್ರಶಸ್ತಿಗಳುಪದ್ಮಶ್ರೀ (೧೯೭೬)

ರಟ್ಟಿಹಳ್ಳಿ ನಾಗೇಂದ್ರ ರಾವ್ (೨೩ ಜೂನ್ ೧೮೯೬ – ೯ ಫೆಬ್ರವರಿ ೧೯೭೭) ದಕ್ಷಿಣ ಭಾರತೀಯ ಚಿತ್ರರಂಗದ ಭಾರತೀಯ ರಂಗಭೂಮಿ ನಟ, ಚಲನಚಿತ್ರ ನಟ ಮತ್ತು ನಿರ್ದೇಶಕನಾಗಿದ್ದರು. ರಂಗಭೂಮಿಯಲ್ಲಿ ತಮ್ಮ ವೃತ್ತಿಜೀವನದ ನಂತರ, ರಾವ್ ಚಲನಚಿತ್ರ ಕ್ಷೇತ್ರಕ್ಕೆ ತಿರುಗಿ, ಅಲ್ಲಿ ಅವರು ನಟ, ನಿರ್ದೇಶಕ, ನಿರ್ಮಾಪಕ, ಕತೆಗಾರ ಮತ್ತು ಅವಶ್ಯಕತೆ ಇರುವಾಗ ಸಂಗೀತ ಸಂಯೋಜಕರಾಗಿದ್ದರು.[]

ಹನ್ನೇಳೆ ಚಿಗುರಿದಾಗ (೧೯೬೮) ಚಿತ್ರದ ಅವರ ಅಭಿನಯಕ್ಕಾಗಿ, ರಾವ್ ಅವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಶ್ರೇಷ್ಠ ನಟರಾಗಿ ಲಭಿಸಿತು. ಚಿತ್ರರಂಗದಲ್ಲಿ ಅವರ ಕೊಡುಗೆಗಾಗಿ ಭಾರತ ಸರ್ಕಾರವು ೧೯೭೬ ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿತ್ತು. ರಾವ್ ಅವರಿಗೆ ನಾಲ್ಕು ಮಕ್ಕಳಿದ್ದರು, ಅವರಲ್ಲಿ ಮೂವರು ಚಲನಚಿತ್ರದಲ್ಲಿ ತೊಡಗಿಸಿಕೊಂಡಿದ್ದರು. ಅವರ ಎರಡನೆಯ ಮಗ, ಆರ್. ಎನ್. ಕೆ. ಪ್ರಸಾದ್, ಸಿನಿಮಾಟೋಗ್ರಾಫರ್, ಅವರ ಮೂರನೇ ಮಗ, ಆರ್. ಎನ್. ಜಯಗೋಪಾಲ್, ಚಿತ್ರಕಥೆಗಾರ ಮತ್ತು ಗೀತರಚನೆಕಾರ ಮತ್ತು ಅವರ ಕಿರಿಯ, ಆರ್. ಎನ್. ಸುದರ್ಶನ್, ನಟ.[]

ಆರಂಭಿಕ ಜೀವನ

[ಬದಲಾಯಿಸಿ]

ನಾಗೇಂದ್ರ ರಾವ್ ಅವರು ೧೮೯೬ ರ ಜೂನ್ ೨೩ ರಂದು ಬ್ರಿಟಿಷ್ ಭಾರತದ ಮೈಸೂರು ಸಾಮ್ರಾಜ್ಯದ ಹೊಳಲ್‌ಕೆರೆಯಲ್ಲಿ ಜನಿಸಿದರು.[]

ವೃತ್ತಿ

[ಬದಲಾಯಿಸಿ]

ರಾವ್ ತನ್ನ ವೃತ್ತಿಜೀವನವನ್ನು ಕಿರುನಟನಾಗಿ ಆರಂಭಿಸಿದರು, ಎಂಟು ವರ್ಷ ವಯಸ್ಸಿನಲ್ಲಿ ಕನ್ನಡ ಭಾಷೆಯಲ್ಲಿ ಬರೆದ ನಾಟಕಗಳಲ್ಲಿ ನಟಿಸಿದರು. ಬಾಲನಟನಾಗಿದ್ದಾಗ, ಅವರು ಸೀತೆ ಹಾಗು ಚಂದ್ರಮತಿ, ಡೆಸ್ಡೆಮೋನಾ ಎಂಬಂತಹ ಐತಿಹಾಸಿಕ ಮತ್ತು ಪೌರಾಣಿಕ ಮಹಿಳಾ ಪಾತ್ರಗಳನ್ನು ನಿರ್ವಹಿಸಿದರು. ನಂತರ ಅವರು ಪುರುಷ ಪಾತ್ರಗಳಿಗೆ ಬದಲಾಗಿದರು, ಮತ್ತು ಅವರ ಅಭಿನಯವು ಆಗಿನ ಮೈಸೂರು ಸಾಮ್ರಾಜ್ಯ ಮತ್ತು ಕನ್ನಡೇತರ ಮದ್ರಾಸ್ ಪ್ರೆಸಿಡೆನ್ಸಿಯಲ್ಲೂ ಜನಪ್ರಿಯವಾಯಿತು. ರಂಗಭೂಮಿಯಲ್ಲಿ ಅವರು ಎ. ವಿ. ವರದಾಚಾರ್ಯರ ರತ್ನಾವಳಿ ನಾಟಕ ಕಂಪನಿಯ ಮತ್ತು ಮೈಸೂರಿನ ಚಾಮುಂಡೇಶ್ವರಿ ಕಂಪನಿಯೊಂದಿಗೆ ಕೆಲಸ ಮಾಡಿದರು[]

೧೯೩೧ ರಲ್ಲಿ ಭಾರತದಲ್ಲಿ ಮಾತನಾಡುವ ಚಲನಚಿತ್ರಗಳ ಯುಗ ಪ್ರಾರಂಭವಾದಾಗ, ರಾವ್ ಬಾಂಬೆಗೆ (ಈಗ ಮುಂಬೈ) ತೆರಳಿದರು. ಅಲ್ಲಿ, ಅವರು ತಮಿಳು ಭಾಷೆಯ ಪಾರಿಜಾತ ಪುಷ್ಪಹರಣಂ (೧೯೩೨), ನಾರದ (೧೯೩೨), ಕೋವಲನ್ (೧೯೩೩) ಮತ್ತು ತೆಲುಗು ಭಾಷೆಯ ಚಲನಚಿತ್ರ ರಾಮದಾಸು (೧೯೩೩) ನಲ್ಲಿ ನಟ ಮತ್ತು ನಿರ್ದೇಶಕ ಪಿ.ಕೆ. ರಾಜಾ ಸ್ಯಾಂಡೋ ಅವರಿಂದ ನಟಿಸಿದರು. ರಾವ್ ಕೊನೆಯ ಎರಡೂ ಚಿತ್ರಗಳಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರು. ಚಿತ್ರರಂಗದಲ್ಲಿ ಕೆಲವು ಕಾಲ ಕೆಲಸ ಮಾಡಿದ ನಂತರ, ರಾವ್ ಬೆಂಗಳೂರುಗೆ ಮರಳಿ, ನಟ ಮತ್ತು ನಿರ್ದೇಶಕ ಸಬ್ಬಯ್ಯ ನಾಯ್ಡು ಅವರೊಂದಿಗೆ, ಕನ್ನಡ ಚಿತ್ರರಂಗವನ್ನು ಹೆಚ್ಚು ಪ್ರಭಾವಿತಗೊಳಿಸಿದ ಶ್ರೀ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿಯನ್ನು (ಶ್ರೀ ಸಾಹಿತ್ಯ ಸಾಮ್ರಾಜ್ಯ ನಾಟಕ ಕಂಪನಿ) ಸ್ಥಾಪಿಸಿದರು.[]

ಕನ್ನಡದಲ್ಲಿ ಚಿತ್ರ ನಿರ್ಮಿಸುವ ಕನಸನ್ನು ನನಸಾಗಿಸಲು ಅವರು ಬೆಂಗಳೂರಿನ ಉದ್ಯಮಿ ಶಾ ಚಮನ್‌ಲಾಲ್ ದೂಂಗಾಜಿ ಅವರನ್ನು ಸಂಪರ್ಕಿಸಿದರು. ದೂಂಗಾಜಿ ಚಿತ್ರವನ್ನು ನಿರ್ದೇಶಿಸಲು ಯರಗುಡಿಪತಿ ವರದ ರಾವ್ ಅವರನ್ನು ಆಯ್ಕೆ ಮಾಡುವುದರೊಂದಿಗೆ, ಕನ್ನಡದಲ್ಲಿ ಮೊದಲ ಮಾತನಾಡುವ ಚಿತ್ರವಾದ ಸತಿ ಸುಲೋಚನವನ್ನು ನಿರ್ಮಿಸಲಾಯಿತು ಮತ್ತು ಅಂತಿಮವಾಗಿ ೩ ಮಾರ್ಚ್ ೧೯೩೪ ರಂದು ಬಿಡುಗಡೆಯಾಯಿತು.ಈ ಚಿತ್ರದಲ್ಲಿ ರಾವ್ ರಾವಣನ ಪಾತ್ರದಲ್ಲಿ ನಟಿಸಿ, ಸಂಗೀತವನ್ನೂ ನೀಡಿದ್ದಾರೆ. ನಿರ್ದೇಶಕರಾಗಿ ಅವರ ಮೊದಲ ಚಿತ್ರ ೧೯೪೩ರಲ್ಲಿ ಬಿಡುಗಡೆಗೊಂಡ 'ಸತ್ಯ ಹರಿಶ್ಚಂದ್ರ' ಯಾಗಿದ್ದು, ಅದನ್ನು ಅವರು ನಿರ್ಮಿಸಿ, ಅದರಲ್ಲಿ ನಟಿಸಿದ್ದಾರೆ.[]

ರಾವ್ ಅವರ ಭೂಕೈಲಾಸ ನಾಟಕವನ್ನು ಮೂರು ಬಾರಿ ಚಲನಚಿತ್ರಗಳಾಗಿ ಮಾಡಲಾಯಿತು; ೧೯೩೮ ಮತ್ತು ೧೯೪೦ ರಲ್ಲಿ ಸುಂದರ್ ರಾವ್ ನಾಡಕರ್ಣಿ, ಮತ್ತು ೧೯೫೮ ರಲ್ಲಿ ಕೆ. ಶಂಕರ್. ಈ ನಾಟಕದಲ್ಲಿಯೇ ಕನ್ನಡ ಚಿತ್ರರಂಗದ ಅತ್ಯುತ್ತಮ ನಟರಲ್ಲಿ ಒಬ್ಬರಾಗಲಿರುವ ರಾಜಕುಮಾರ್ ಅವರು ನಾರದನ ಪಾತ್ರವನ್ನು ನಿರ್ವಹಿಸುವ ಮೂಲಕ ರಂಗಭೂಮಿಯ ನಟರಾಗಿ ತಮ್ಮ ಪ್ರಗತಿಯನ್ನು ಸಾಧಿಸಿದರು.[] ೧೯೫೧ ರಲ್ಲಿ, ರಾವ್ ಅವರು ತಮ್ಮದೇ ಆದ ಚಲನಚಿತ್ರ ನಿರ್ಮಾಣ ಕಂಪನಿಯಾದ ಆರ್‌ಎನ್‌ಆರ್‌ ಪಿಕ್ಚರ್ಸ್ ಅನ್ನು ಸ್ಥಾಪಿಸಿದರು. ೧೯೫೭ ರ ಚಲನಚಿತ್ರ ಪ್ರೇಮದ ಪುತ್ರಿಯನ್ನು ಈ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಯಿತು ಮತ್ತು ರಾವ್ ಇದನ್ನು ನಿರ್ದೇಶಿಸಿದರು, ಚಿತ್ರದಲ್ಲಿ ಪೋಷಕ ಪಾತ್ರವನ್ನು ಸಹ ನಿರ್ವಹಿಸಿದರು. ೫ ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ, ಈ ಚಿತ್ರವು ಕನ್ನಡದ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಪಡೆಯಿತು.[] ನಿರ್ಮಾಣ ಸಂಸ್ಥೆಯು ೧೯೬೪ ರವರೆಗೆ ಅಸ್ತಿತ್ವದಲ್ಲಿತ್ತು. ಇದರ ನಂತರ, ಅವರು ಶ್ರೀ ಕನ್ನಿಕಾ ಪರಮೇಶ್ವರಿ ಕಥೆ (೧೯೬೬) ಮತ್ತು ಕರುಲಿನ ಕರೆ (೧೯೭೦) ನಂತಹ ಚಲನಚಿತ್ರಗಳಲ್ಲಿ ತಂದೆಯ ಪಾತ್ರಗಳಲ್ಲಿ ಕಾಣಿಸಿಕೊಂಡರು. ೧೯೬೮ ರ ಚಲನಚಿತ್ರ ಹನ್ನೆಲೆ ಚಿಗುರಿದಾಗ, ರಾಜ್‌ಕುಮಾರ್ ಸಹ-ನಟನಾಗಿ ಅವರ ಪಾತ್ರಕ್ಕಾಗಿ, ಅವರು ಅತ್ಯುತ್ತಮ ನಟನಿಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದರು. ೧೯೭೪ ರ ಪ್ರೊಫೆಸರ್ ಹುಚ್ಚುರಾಯ ಚಲನಚಿತ್ರದಲ್ಲಿ ಅವರ ಕೊನೆಯ ಪ್ರದರ್ಶನವಾಯಿತು.[]

ಚಿತ್ರಕಥೆ

[ಬದಲಾಯಿಸಿ]
ವರ್ಷ ಚಲನಚಿತ್ರ ಬಾಷೆ ಕಾರ್ಯನಿರ್ವಹಿಸಿದೆ ಟಿಪ್ಪಣಿಗಳು
ನಿರ್ದೇಶಕ ನಿರ್ಮಾಪಕ ಚಿತ್ರಕಥೆಗಾರ ನಟ ಪಾತ್ರ
೧೯೩೨ ರಾಮದಾಸು ತೆಲುಗು Yes ಪ್ರಮುಖ ಪಾತ್ರ
೧೯೩೩ ಪಾರಿಜಾತ ಪುಷ್ಪಹರುಣಂ ತಮಿಳ್ Yes ನಾರದ
೧೯೩೩ ಕೋವಲನ್ ತಮಿಳ್ Yes ಪ್ರಮುಖ ಪಾತ್ರ
೧೯೩೪ ಸತಿ ಸುಲೋಚನಾ ಕನ್ನಡ Yes Yes ರಾವಣ ಕನ್ನಡದ ಮೊದಲ ಧ್ವನಿ ಚಿತ್ರ
೧೯೩೫ ನವೀನ ಸದಾರಮೆ ತಮಿಳ್ Yes
೧೯೪೦ ಭೂಕೈಲಾಸ ತೆಲುಗು Yes ನಾರದ
೧೯೪೧ ವಸಂತಸೇನ ಕನ್ನಡ Yes Yes Yes ಸಕಾರ ಪೋಷಕ ಪಾತ್ರ
೧೯೪೩ ಸತ್ಯ ಹರಿಶ್ಚಂದ್ರ ಕನ್ನಡ Yes Yes Yes Yes ವಿಶ್ವಮಿತ್ರ ಪೋಷಕ ಪಾತ್ರ
೧೯೪೭ ಮಹಾತ್ಮ ಕಬೀರ ಕನ್ನಡ Yes Yes
೧೯೪೯ ಅಪೂರ್ವ ಸಾಗೋಧರರ್ಗಲ್ ತಮಿಳ್ Yes ಮಾರ್ತಾಂಡನ್ ಪೋಷಕ ಪಾತ್ರ
೧೯೫೦ ಅಪೂರ್ವ ಸಹೋದರರು ತೆಲುಗು Yes
೧೯೫೨ ಮೂಂಡ್ರು ಪಿಳ್ಳೈಗಲ್
ಮುಗ್ಗೂರು ಕೊಡುಕುಲು
ತಮಿಳ್ ತೆಲುಗು Yes Yes
೧೯೫೩ ಚಂದಿರಾಣಿ ತೆಲುಗು
ತಮಿಳ್
ಹಿಂದಿ
Yes
೧೯೫೩ ಜಾತಕ ಫಲ
ಜಾತಕಫಲಮ್
ಜಾತಕಮ್
ಕನ್ನಡ ತೆಲುಗು ತಮಿಳ್ Yes Yes
೧೯೫೫ ಸಂತೋಷಮ್
ನಯಾ ಆದ್ಮಿ
ತೆಲುಗು
ಹಿಂದಿ
Yes ದಯಾನಿಧಿ ಪೋಷಕ ಪಾತ್ರ
೧೯೫೬ ನಾಗುಲ ಚವಿತಿ
ಆದರ್ಶಸತಿ
ತೆಲುಗು ಕನ್ನಡ Yes
೧೯೫೬ ರೇಣುಕಾ ಮಹಾತ್ಮೆ ಕನ್ನಡ Yes
೧೯೫೬ ಭಕ್ತ ಮಾರ್ಕಂಡೇಯ ಕನ್ನಡ ತೆಲುಗು Yes ಪೋಷಕ ಪಾತ್ರ
೧೯೫೭ ಬೆಟ್ಟದ ಕಳ್ಳ ಕನ್ನಡ Yes
೧೯೫೭ ಮಹಿರಾವಣ ಕನ್ನಡ Yes
೧೯೫೭ ಪ್ರೇಮದ ಪುತ್ರಿ
ಅಂಬೆ ದೈವಂ
ಕನ್ನಡ

ತಮಿಳ್

Yes Yes Yes ಕನ್ನಡದ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
೧೯೫೯ ಅಮುಧವಲ್ಲಿ ತಮಿಳ್ Yes
೧೯೬೦ ರಣಧೀರ ಕಂಠೀರವ ಕನ್ನಡ Yes ವಿಕ್ರಮ ರಾಯ ಪೋಷಕ ಪಾತ್ರ
೧೯೬೧ ವಿಜಯನಗರದ ವೀರಪುತ್ರ ಕನ್ನಡ Yes Yes Yes
೧೯೬೨ ಗಾಳಿ ಗೋಪುರ ಕನ್ನಡ Yes ಗೋವಿಂದಯ್ಯ
೧೯೬೩ ವೀರ ಕೇಸರಿ ಕನ್ನಡ Yes ಧರ್ಮ ನಾಯಕ
೧೯೬೩ ಆನಂದ ಬಾಷ್ಪ ಕನ್ನಡ Yes Yes Yes
೧೯೬೪ ಪಥಿಯೇ ದೈವ ಕನ್ನಡ Yes Yes
೧೯೬೪ ನವಜೀವನ ಕನ್ನಡ Yes ಸಣ್ಣ ಪಾತ್ರ
೧೯೬೫ ನನ್ನ ಕರ್ತವ್ಯ ಕನ್ನಡ Yes
೧೯೬೫ ಬಾಲರಾಜನ ಕಥೆ ಕನ್ನಡ Yes
೧೯೬೫ ಮದುವೆ ಮಾಡಿ ನೋಡು ಕನ್ನಡ Yes
೧೯೬೫ ಚಂದ್ರಹಾಸ ಕನ್ನಡ Yes ಚಕ್ರೇಶ್ವರ ಸಣ್ಣ ಪಾತ್ರ
೧೯೬೬ ತೂಗುದೀಪ ಕನ್ನಡ Yes
೧೯೬೭ ಶ್ರೀ ಕನ್ಯಕಾ ಪರಮೇಶ್ವರಿ ಕಥೆ ಕನ್ನಡ Yes ಪೋಷಕ ಪಾತ್ರ
೧೯೬೭ ಪ್ರೇಮಕ್ಕೂ ಪರ್ಮಿಟ್ಟೆ ಕನ್ನಡ Yes Yes
೧೯೬೭ ನಕ್ಕರೆ ಅದೇ ಸ್ವರ್ಗ ಕನ್ನಡ Yes
೧೯೬೭ ಶ್ರೀ ಪುರಂದರದಾಸರು ಕನ್ನಡ Yes ಕೃಷ್ಣ
೧೯೬೭ ಜನರಾ ಜನ ಕನ್ನಡ Yes
೧೯೬೮ ಹನ್ನೆಲೆ ಚಿಗುರಿದಾಗ ಕನ್ನಡ Yes ಅನಂತ ಅತ್ಯುತ್ತಮ ನಟನೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ
೧೯೬೮ ಅತ್ತೆಗೊಂದುಕಾಲ ಸೊಸೆಗೊಂದುಕಾಲ ಕನ್ನಡ Yes ಪೋಷಕ ಪಾತ್ರ
೧೯೬೯ ಕಣ್ಣು ಮುಚ್ಚಾಲೆ ಕನ್ನಡ Yes
೧೯೬೯ ಗೃಹಲಕ್ಷ್ಮಿ ಕನ್ನಡ Yes
೧೯೬೯ ನಮ್ಮ ಮಕ್ಕಳು ಕನ್ನಡ Yes Yes
೧೯೬೯ ಮಕ್ಕಳೇ ಮನೆಗೆ ಮಾಣಿಕ್ಯ ಕನ್ನಡ Yes
೧೯೭೦ ನಾಡಿನ ಭಾಗ್ಯ ಕನ್ನಡ Yes Yes ಧರ್ಮಯ್ಯ
೧೯೭೦ ಶ್ರೀ ಕೃಷ್ಣದೇವರಾಯ ಕನ್ನಡ Yes
೧೯೭೦ ಲಕ್ಷ್ಮೀ ಸರಸ್ವತಿ ಕನ್ನಡ Yes
೧೯೭೦ ಕರುಲಿನಾ ಕರೆ ಕನ್ನಡ Yes ಸುಬ್ಬಣ್ಣ
೧೯೭೧ ಅಳಿಯ ಗೆಳೆಯಾ ಕನ್ನಡ Yes ರಾವ್ ಬಹದ್ದೂರ್ ರಂಗ ರಾವ್
೧೯೭೧ ಸಾಕ್ಷಾತ್ಕಾರ ಕನ್ನಡ Yes ಅಜ್ಜಯ್ಯ
೧೯೭೧ ಕುಲ ಗೌರವ ಕನ್ನಡ Yes ಕಲಾ ಅವರ ಅಜ್ಜ ಸಣ್ಣ ಪಾತ್ರ
೧೯೭೧ ನಗುವ ಹೂವು ಕನ್ನಡ Yes
೧೯೭೨ ಕಲವಾರಿ ಕುಟುಂಬ ತೆಲುಗು Yes
೧೯೭೨ ನಾ ಮೆಚ್ಚಿದ ಹುಡುಗ ಕನ್ನಡ Yes ಎನ್‌.ಜಿ. ರಾವ್‌
೧೯೭೩ ಮಣ್ಣಿನ ಮಗಳು ಕನ್ನಡ Yes
೧೯೭೩ ಪ್ರೇಮಾ ಪಾಷಾ ಕನ್ನಡ Yes
೧೯೭೪ ಫ್ರೋಫ಼ೆಸರ್‌ ಹುಚ್ಚುರಾಯ ಕನ್ನಡ Yes ಶಾಮ ಶಾಸ್ತ್ರಿ

ಉಲ್ಲೇಖಗಳು

[ಬದಲಾಯಿಸಿ]
  1. "Anbey Deivam 1957". The Hindu. 2 September 2012. Retrieved 7 October 2014.
  2. "R.N. Jayagopal passes away". The Hindu. 20 May 2008. Retrieved 7 October 2014.
  3. ೩.೦ ೩.೧ ೩.೨ ೩.೩ Ashish Rajadhyaksha; Paul Willemen (10 July 2014). Encyclopedia of Indian Cinema. Taylor & Francis. ISBN 978-1-135-94325-7.
  4. ೪.೦ ೪.೧ "First film to talk in Kannada". The Hindu. 31 December 2004. Archived from the original on 7 October 2014. Retrieved 7 October 2014.
  5. "18th National Film Awards" (PDF). Directorate of Film Festival. Archived from the original (PDF) on 15 ಜುಲೈ 2014. Retrieved 7 October 2014.

ಬಾಹ್ಯ ಕೊಂಡಿಗಳು

[ಬದಲಾಯಿಸಿ]