ಆಲಿವ್ ಕಸ್ಟನ್ಸ್ | |
---|---|
ಜನನ | ಆಲಿವ್ ಎಲೀನರ್ ಕಸ್ಟನ್ಸ್ ೭ ಫೆಬ್ರವರಿ ೧೮೭೪ ಲಂಡನ್, ಇಂಗ್ಲೆಂಡ್ |
ಮರಣ | 12 February 1944 | (aged 70)
ಪ್ರಕಾರ/ಶೈಲಿ | ಕಾವ್ಯ |
ಸಾಹಿತ್ಯ ಚಳುವಳಿ | ಸೌಂದರ್ಯಶಾಸ್ತ್ರ |
ಬಾಳ ಸಂಗಾತಿ |
ಲಾರ್ಡ್ ಆಲ್ಫ್ರೆಡ್ ಡೌಗ್ಲಾಸ್ (ವಿವಾಹ:1902) |
ಆಲಿವ್ ಎಲೀನರ್ ಕಸ್ಟನ್ಸ್ ಇವರನ್ನು ಲೇಡಿ ಆಲ್ಫ್ರೆಡ್ ಡೌಗ್ಲಾಸ್ ಎಂದೂ ಕರೆಯುತ್ತಾರೆ (೭ ಫೆಬ್ರವರಿ ೧೮೭೪ - ೧೨ ಫೆಬ್ರವರಿ ೧೯೪೪).[೧] ಇವರು ಇಂಗ್ಲಿಷ್ ಕವಯಿತ್ರಿ ಮತ್ತು ಲಾರ್ಡ್ ಆಲ್ಫ್ರೆಡ್ ಡೌಗ್ಲಾಸ್ ಅವರ ಪತ್ನಿ. ಇವರು ೧೮೯೦ ರ ದಶಕದ ಸೌಂದರ್ಯ ಚಳವಳಿಯಲ್ಲಿ ಭಾಗಿಯಾಗಿದ್ದು, ದಿ ಯೆಲ್ಲೋ ಬುಕ್‌ಗೆ ಕೊಡುಗೆ ನೀಡಿದ್ದಾರೆ.
ಅವರು ಲಂಡನ್‌ನ ಬರ್ಕ್ಲಿ ಸ್ಕ್ವಾರ್ ಮೇಫೇರ್‌ನ ೧೨ ಜಾನ್ ಸ್ಟ್ರೀಟ್‌ನಲ್ಲಿ ಜನಿಸಿದರು. ಹಿರಿಯ ಮಗಳು ಮತ್ತು ಕರ್ನಲ್ ಫ್ರೆಡೆರಿಕ್ ಹ್ಯಾಂಬಲ್ಟನ್ ಕಸ್ಟನ್ಸ್‌ರವರ ಉತ್ತರಾಧಿಕಾರಿಯಾಗಿದ್ದು, ಶ್ರೀಮಂತ ಮತ್ತು ಬ್ರಿಟಿಷ್ ಸೈನ್ಯದಲ್ಲಿ ವಿಶೇಷ ಸೈನಿಕರಾಗಿದ್ದರು.[೨] ಕಸ್ಟನ್ಸ್‌ರವರು ತಮ್ಮ ಬಾಲ್ಯದ ಬಹುಭಾಗವನ್ನು ನಾರ್ಫೋಕ್‌ನ ವೆಸ್ಟನ್ ಲಾಂಗ್ವಿಲ್ಲೆಯಲ್ಲಿರುವ ವೆಸ್ಟನ್ ಓಲ್ಡ್ ಹಾಲ್‌ನಲ್ಲಿ ಕಳೆದರು.
ಕಸ್ಟನ್ಸ್‌ರವರು ಸುಮಾರು ೧೮೯೦ ರಲ್ಲಿ, ಕೇವಲ ೧೬ ವರ್ಷದವಳಿದ್ದಾಗ ಆಸ್ಕರ್ ವೈಲ್ಡ್, ಆಬ್ರೆ ಬಿಯರ್ಡ್ಸ್ಲೆ, ಅರ್ನೆಸ್ಟ್ ಡೌಸನ್ ಮತ್ತು ಜಾನ್ ಗ್ರೇ ಅವರಂತಹ ವ್ಯಕ್ತಿಗಳ ಜೊತೆಗೆ ಲಂಡನ್ ಸಾಹಿತ್ಯ ವಲಯಕ್ಕೆ ಸೇರಿದರು. ಈ ಸಮಯದಲ್ಲಿ ಅವರು ಕವಿ ಜಾನ್ ಗ್ರೇ ಬಗ್ಗೆ ಮೋಹಗೊಂಡು, ಅವರ ಬಗ್ಗೆ ತಮ್ಮ ಮೊದಲ ಕವಿತೆಗಳನ್ನು ಬರೆದರು. ಫ್ರೆಂಚ್ ಕವಿಗಳಾದ ವರ್ಲೈನ್ ಮತ್ತು ರಿಂಬೌಡ್ ಅವರಿಂದ ಮತ್ತು ಆ ಅವಧಿಯ ಅವನತಿಯ ಮನಸ್ಥಿತಿಯಿಂದ ಹೆಚ್ಚು ಪ್ರಭಾವಿತರಾದ ಕಸ್ಟನ್ಸ್‌ರವರು ಶೀಘ್ರದಲ್ಲೇ ಕವಯಿತ್ರಿಯಾಗಿ ಪ್ರಾಮುಖ್ಯತೆ ಪಡೆದರು.[೩] ೧೯೦೧ ರಲ್ಲಿ, ಅವರು ಪ್ಯಾರಿಸ್‌ನಲ್ಲಿ ಬಹಿರಂಗವಾಗಿ ಸಲಿಂಗಕಾಮಿ ಬರಹಗಾರ ನಟಾಲಿ ಕ್ಲಿಫರ್ಡ್ ಬಾರ್ನೆ ಅವರೊಂದಿಗೆ ಸಂಬಂಧದಲ್ಲಿ ತೊಡಗಿಸಿಕೊಂಡರು. ಇದನ್ನು ಬಾರ್ನೆಯವರು ನಂತರದ ತಮ್ಮ ನೆನಪುಗಳಲ್ಲಿ ವಿವರಿಸಿದ್ದಾರೆ. ಬಾರ್ನೆಯವರು ಮತ್ತು ಆ ಸಮಯದಲ್ಲಿ ಅವರ ಪ್ರೇಮಿ ರೆನೀ ವಿವಿಯೆನ್, ಕಸ್ಟನ್ಸ್‌ರವರನ್ನು ಪಾಲುದಾರರಾಗಿ ಗೆಲ್ಲಲು ಉತ್ಸುಕರಾಗಿದ್ದರು ಮತ್ತು ವಾಸ್ತವವಾಗಿ ಕಸ್ಟನ್ಸ್‌ರವರು ಬಾರ್ನೆಯವರೊಂದಿಗೆ ವರ್ಷಗಳ ಕಾಲ ನಿಕಟ ಸಂಬಂಧವನ್ನು ಹೊಂದಿದ್ದರು. ಕಸ್ಟನ್ಸ್‌ರವರು ಮತ್ತು ಬಾರ್ನೆಯವರು ಪ್ರೇಮ ಕವಿತೆಗಳನ್ನು ವಿನಿಮಯ ಮಾಡಿಕೊಂಡರು.[೪] ಇದರಲ್ಲಿ, ಕಸ್ಟನ್ಸ್ ಅವರ ಕವಿತೆಗಳಾದ 'ದಿ ವೈಟ್ ವಿಚ್' ಸೇರಿದೆ. ವಿವಿಯನ್ ಅವರ ರೋಮನ್ ಎ ಕ್ಲೆಫ್ ಎ ವುಮನ್ ಆಸ್ಪೋಸ್ ಟು ಮಿ (೧೯೦೪) ಕೂಡ ಕಸ್ಟನ್ಸ್‌ರವರೊಂದಿಗಿನ ಅವರ ಸಂಕ್ಷಿಪ್ತ ಸಂಬಂಧವನ್ನು ವಿವರಿಸುತ್ತದೆ.
ಬಾರ್ನೆಯವರೊಂದಿಗಿನ ತಮ್ಮ ಸಂಕ್ಷಿಪ್ತ ಸಂಬಂಧದ ಸಮಯದಲ್ಲಿ, ಆಸ್ಕರ್ ವೈಲ್ಡ್‌ನ ಮರಣದ ಆರು ತಿಂಗಳ ನಂತರ, ಜೂನ್ ೧೯೦೧ ರಲ್ಲಿ ಲಾರ್ಡ್ ಆಲ್ಫ್ರೆಡ್ ಡೌಗ್ಲಾಸ್‌ಗೆ ಮೆಚ್ಚುಗೆಯಿಂದ ಪತ್ರ ಬರೆಯುವ ಮೂಲಕ ಕಸ್ಟನ್ಸ್‌ರವರೊಂದಿಗೆ ಪ್ರಣಯವನ್ನು ಪ್ರಚೋದಿಸಿದರು.[೫] ಇವೆರಡೂ 'ಪ್ರಿನ್ಸ್' (ಡೌಗ್ಲಾಸ್‌ಗೆ) ಮತ್ತು 'ಪ್ರಿನ್ಸೆಸ್' ಅಥವಾ 'ಪೇಜ್' ಎಂಬ ಅಡ್ಡಹೆಸರುಗಳಿಂದ ಪತ್ರವ್ಯವಹಾರ ನಡೆಸುತ್ತಿದ್ದವು.[೬]
ಆದಾಗ್ಯೂ, ೧೯೦೧ ರ ಕೊನೆಯ ಘಟನೆಗಳ ಬೆಸ ತಿರುವಿನಲ್ಲಿ, ಡೌಗ್ಲಾಸ್ ಅವರೊಂದಿಗೆ ಶಾಲೆಯಲ್ಲಿದ್ದ ಜಾರ್ಜ್ ಮೊಂಟಾಗು ಅವರೊಂದಿಗೆ ಕಸ್ಟನ್ಸ್‌ರವರು ನಿಶ್ಚಿತಾರ್ಥ ಮಾಡಿಕೊಂಡರು. ಇದು ಅಲ್ಪಾವಧಿಯ ನಿಶ್ಚಿತಾರ್ಥವಾಗಿತ್ತು. ಏಕೆಂದರೆ, ಡೌಗ್ಲಾಸ್‌ರವರು ಯುಎಸ್ಎ ಪ್ರವಾಸದಿಂದ ಹಿಂದಿರುಗಿದಾಗ (ಅಲ್ಲಿ, ಅವರು ಮದುವೆಯಾಗಲು ಶ್ರೀಮಂತ ಉತ್ತರಾಧಿಕಾರಿಯನ್ನು ಹುಡುಕುತ್ತಿದ್ದರು) ಇಬ್ಬರೂ ಓಡಿಹೋಗಿ ೪ ಮಾರ್ಚ್ ೧೯೦೨ ರಂದು ಪರಸ್ಪರ ವಿವಾಹವಾದರು. ಕಸ್ಟನ್ಸ್‌ರವರ ತಂದೆ ಡೌಗ್ಲಾಸ್‌ರವರನ್ನು ಒಪ್ಪಲಿಲ್ಲ. ಅವರಿಗೆ ರೇಮಂಡ್ ವಿಲ್ಫ್ರೆಡ್ ಶೋಲ್ಟೊ ಡೌಗ್ಲಾಸ್ ಎಂಬ ಮಗು ೧೭ ನವೆಂಬರ್ ೧೯೦೨ ರಂದು ಜನಿಸಿತು. ೧೯೧೧ ರಲ್ಲಿ, ಡೌಗ್ಲಾಸ್‌ರವರು ರೋಮನ್ ಕ್ಯಾಥೊಲಿಕ್ ಆದ ನಂತರ, ಈ ವಿವಾಹವು ಬಿರುಗಾಳಿಯಿಂದ ಕೂಡಿತ್ತು. ದಂಪತಿಗಳು ತಮ್ಮ ಏಕೈಕ ಮಗುವಿಗಾಗಿ ಕಸ್ಟಡಿ ಯುದ್ಧದಲ್ಲಿ ಕಸ್ಟನ್ಸ್‌ರವರ ತಂದೆ ಸೋತ ನಂತರ ಅವರು ೧೯೧೩ ರಲ್ಲಿ, ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದರು.
೧೯೧೩ ರಲ್ಲಿ, ಡೌಗ್ಲಾಸ್‌ರವರು ತಮ್ಮ ಮಾವನನ್ನು ದೂಷಿಸಿದ ಆರೋಪವನ್ನು ಹೊರಿಸಲಾಯಿತು. ಅವರು ಯಾವಾಗಲೂ ಅವರನ್ನು ಒಪ್ಪುತ್ತಿರಲಿಲ್ಲ ಮತ್ತು ಅವರ ವೈವಾಹಿಕ ಜೀವನದ ಮೇಲೆ ಒತ್ತಡ ಹೇರಲು ಪ್ರಮುಖ ಕಾರಣವೆಂದು ತೋರುತ್ತದೆ. ೧೯೧೭ ರಲ್ಲಿ, ಆಲಿವ್ ಅವರು ಕೂಡ ಕ್ಯಾಥೊಲಿಕ್ ಧರ್ಮಕ್ಕೆ ಮತಾಂತರಗೊಂಡ ನಂತರ ೧೯೨೦ ರ, ದಶಕದಲ್ಲಿ ದಂಪತಿಗಳು ಮತ್ತೆ ಸ್ವಲ್ಪ ಸಮಯದವರೆಗೆ ಒಟ್ಟಿಗೆ ವಾಸಿಸುತ್ತಿದ್ದರು.[೭]
ಅವರ ಏಕೈಕ ಮಗ ರೇಮಂಡ್ ತನ್ನ ಯೌವನದಲ್ಲಿ ಅಸ್ಥಿರತೆಯ ಚಿಹ್ನೆಗಳನ್ನು ತೋರಿಸಿದನು. ಸ್ವಲ್ಪ ಸಮಯದವರೆಗೆ ಅವರು ಸೈನ್ಯದಲ್ಲಿ ಸೇವೆ ಸಲ್ಲಿಸಿದರು. ಆದರೆ, ದೀರ್ಘಕಾಲದವರೆಗೆ ಮಾನಸಿಕ ಸಂಸ್ಥೆಗಳಿಗೆ ಸೀಮಿತವಾಗಿದ್ದರು. ಇದು ಮದುವೆಯ ಮೇಲೆ ಮತ್ತಷ್ಟು ಒತ್ತಡವನ್ನುಂಟುಮಾಡಿತು. ಇದರಿಂದಾಗಿ, ೧೯೨೦ ರ ದಶಕದ ಅಂತ್ಯದ ವೇಳೆಗೆ ಅವರು ಮತ್ತೆ ಬೇರ್ಪಟ್ಟರು ಮತ್ತು ಕಸ್ಟನ್ಸ್‌ರವರು ತಮ್ಮ ಕ್ಯಾಥೊಲಿಕ್ ಧರ್ಮವನ್ನು ತ್ಯಜಿಸಿದರು. ಆದಾಗ್ಯೂ, ಅವರು ವಿಚ್ಛೇದನ ಪಡೆಯಲಿಲ್ಲ ಮತ್ತು ೧೯೩೨ ರಲ್ಲಿ, ಅವರು ಡೌಗ್ಲಾಸ್‌ರವರನ್ನು ಹೋವ್‌ಗೆ ಹಿಂಬಾಲಿಸಿ, ಅವರ ಹತ್ತಿರದ ಮನೆಯನ್ನು ತೆಗೆದುಕೊಂಡರು.[೮] ಅವರ ಜೀವನದ ಕೊನೆಯ ೧೨ ವರ್ಷಗಳಲ್ಲಿ, ಅವರು ಪ್ರತಿದಿನ ಪರಸ್ಪರ ನೋಡಿದರು. ೧೯೩೧ ರಲ್ಲಿ, ಡೌಗ್ಲಾಸ್‌ರವರು ತಮ್ಮ ಶತ್ರುಗಳು ಅದರ ಮೇಲೆ ಎಸೆದ "ಮಣ್ಣು ಮತ್ತು ಕಲ್ಲುಗಳ" ಹೊರತಾಗಿಯೂ ತಮ್ಮ ವಿವಾಹವು ದೃಢವಾಗಿತ್ತು ಎಂದು ಬರೆದಿದ್ದರು.[೯]
ಕಸ್ಟನ್ಸ್‌ರವರು ಇಪ್ಪತ್ತನೇ ಶತಮಾನದಲ್ಲಿ ಕವಿತೆಗಳನ್ನು ಬರೆಯುವುದನ್ನು ಮತ್ತು ಪ್ರಕಟಿಸುವುದನ್ನು ಮುಂದುವರೆಸಿದರು. ಇವುಗಳಲ್ಲಿ ಅನೇಕವು ದಿ ಅಕಾಡೆಮಿ ಮತ್ತು ಬಲಪಂಥೀಯ, ಯಹೂದಿ-ವಿರೋಧಿ ನಿಯತಕಾಲಿಕ ಪ್ಲೈನ್ ಇಂಗ್ಲಿಷ್ ಸೇರಿದಂತೆ ಡೌಗ್ಲಾಸ್‌ರವರು ಸಂಪಾದಿಸಿದ ನಿಯತಕಾಲಿಕಗಳಲ್ಲಿ ಪ್ರಕಟವಾದವು.[೧೦] ಅವರು ವಿಲಿಯಂ ಸೋರ್ಲಿ ಬ್ರೌನ್ ಅವರ ಪತ್ರಿಕೆ ದಿ ಬಾರ್ಡರ್ ಸ್ಟ್ಯಾಂಡರ್ಡ್‌ಗೆ ಕವಿತೆಗಳನ್ನು ಕೊಡುಗೆಯಾಗಿ ನೀಡಿದರು. ಎರಡನೇ ಮಹಾಯುದ್ಧದ ಸಮಯದಲ್ಲಿ ಕಸ್ಟನ್ಸ್‌ರವರು ಹಲವಾರು ದೇಶಭಕ್ತಿ ಕವಿತೆಗಳನ್ನು ಬರೆದರು. ಆದರೆ, ಇವುಗಳನ್ನು ಸಂಗ್ರಹಿಸಲಾಗಿಲ್ಲ. ಅವರು ಫೆಬ್ರವರಿ ೧೨, ೧೯೪೪ ರಂದು ಲಾರ್ಡ್ ಆಲ್ಫ್ರೆಡ್ ಡೌಗ್ಲಾಸ್ ಅವರ ಕೈಯನ್ನು ಹಿಡಿದುಕೊಂಡು ನಿಧನರಾದರು. ಮುಂದಿನ ವರ್ಷ, ಮಾರ್ಚ್ ೨೦, ೧೯೪೫ ರಂದು ಡೌಗ್ಲಾಸ್‌ರವರು ಸ್ವತಃ ನಿಧನರಾದರು. ಅವರ ಮಗ ರೇಮಂಡ್ ೬೧ ವರ್ಷದವರೆಗೆ ಬದುಕುಳಿದನು. ಅವರ ಜೀವಿತಾವಧಿಯಲ್ಲಿ ಮಾನಸಿಕ ಅಸ್ಥಿರತೆಯ ಹಲವಾರು ಸುದೀರ್ಘ ಪ್ರಸಂಗಗಳ ನಂತರ, ಅವರು ೧೦ ಅಕ್ಟೋಬರ್ ೧೯೬೪ ರಂದು ಅವಿವಾಹಿತರಾಗಿ ನಿಧನರಾದರು.
{{cite book}}
: CS1 maint: others (link)