Alu Kurumba | ||
---|---|---|
ಬಳಕೆಯಲ್ಲಿರುವ ಪ್ರದೇಶಗಳು: |
India | |
ಪ್ರದೇಶ: | Tamil Nadu | |
ಒಟ್ಟು ಮಾತನಾಡುವವರು: |
2,400 | |
ಭಾಷಾ ಕುಟುಂಬ: | Dravidian Southern Tamil–Kannada Badaga-Kannada Kannadoid Alu Kurumba | |
ಭಾಷೆಯ ಸಂಕೇತಗಳು | ||
ISO 639-1: | ಯಾವುದೂ ಇಲ್ಲ | |
ISO 639-2: | ಸೇರಿಸಬೇಕು
| |
ISO/FDIS 639-3: | xua
| |
ಟಿಪ್ಪಣಿ: ಈ ಪುಟದಲ್ಲಿ IPA ಧ್ವನಿ ಸಂಕೇತಗಳು ಯುನಿಕೋಡ್ನಲ್ಲಿ ಇರಬಹುದು. |
ಆಲು ಕುರುಂಬಾ, ಹಾಲ್ ಕುರುಂಬಾ ಅಥವಾ ಪರ್ಯಾಯವಾಗಿ ಪಾಲ್ ಕುರುಂಬಾ ಎಂದೂ ಕರೆಯುತ್ತಾರೆ, ಇದು ಆಲು ಕುರುಂಬ ಬುಡಕಟ್ಟು ಜನರು ಮಾತನಾಡುವ ತಮಿಳು-ಕನ್ನಡ ಉಪಗುಂಪಿನ ದಕ್ಷಿಣ ದ್ರಾವಿಡ ಭಾಷೆಯಾಗಿದೆ . ಇದನ್ನು ಸಾಮಾನ್ಯವಾಗಿ ಕನ್ನಡದ ಉಪಭಾಷೆ ಎಂದು ಪರಿಗಣಿಸಲಾಗುತ್ತದೆ; ಆದಾಗ್ಯೂ, ಎಥ್ನೋಲಾಗ್ ಇದನ್ನು ಪ್ರತ್ಯೇಕ ಭಾಷೆಯಾಗಿ ವರ್ಗೀಕರಿಸುತ್ತದೆ. ಆಲು ಕುರುಂಬ ಭಾಷಿಕರು ತಮಿಳುನಾಡು ಮತ್ತು ಕರ್ನಾಟಕದ ನಡುವಿನ ನೀಲಗಿರಿ ಬೆಟ್ಟದ ಗಡಿ ಪ್ರದೇಶದಲ್ಲಿ ನೆಲೆಸಿದ್ದಾರೆ.
ಆಲು ಕುಂಬರೆರು ಮೂಲತಃ ಕೃಷಿಕರು, ತಿನಿಸುಗಳನ್ನು ಸಂಗ್ರಹಿಸಿಕೊಂಡು ಮತ್ತು ಕೆಲವು ಹೊತ್ತಿಗೆ ಬೇಟೆ ಮಾಡಿಕೊಂಡು ಬದುಕುವ ಬುಡಕಟ್ಟು ಸಮುದಾಯದವರು. ಭಾರತದ ದಕ್ಷಿಣ ಭಾಗದ ನೀಲಗಿರಿ ಬೆಟ್ಟಗಳು, ದಕ್ಷಿಣ-ಪಶ್ಚಿಮ, ದಕ್ಷಿಣ, ಆಗ್ನೇಯ ಮತ್ತು ಪೂರ್ವ ಬೆಟ್ಟಗಳ ಕಣಿವೆಯ ಇಳಿಜಾರು ಹಾಗು ಕಣಿವೆಗಳ ಇಕ್ಕಟ್ಟು ಪ್ರದೇಶಗಳಲ್ಲಿ ಸಾವಿರಾರಕ್ಕಿಂತ ಹೆಚ್ಚು ಜನರು ವಾಸ ಮಾಡಿಕೊಂಡಿದ್ದರು.[೧][೨]