ಆಶಾ ನೇಗೀ | |
---|---|
Born | |
Nationality | ಭಾರತೀಯ |
Occupation(s) | ನಟಿ, ನಿರೂಪಕಿ, ನರ್ತಕಿ |
Years active | ೨೦೦೯– ಪ್ರಸ್ತುತ |
Partner | ರಿತ್ವಿಕ್ ಧನ್ಜನಿ (೨೦೧೩-ಪ್ರಸ್ತುತ) |
ಆಶಾ ನೇಗೀ ಯವರು ಭಾರತೀಯ ದೂರದರ್ಶನ ನಟಿ[೧]. ಅವರು 'ಪವಿತ್ರ ರಿಷ್ತಾ' ಧಾರವಾಹಿಯಲ್ಲಿ ಪೂರ್ವಿ[೨], 'ಏಕ್ ಮುಟ್ಟಿ ಆಸ್ಮಾನ್' ನಲ್ಲಿ ಕಲ್ಪನಾ, 'ಕುಚ್ ತೊ ಹೇ ತೇರೆ ಮೇರೆ ದರ್ಮಿಯಾ' ನಲ್ಲಿ ಕೋಯಲ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಆಶಾರವರು ೨೦೧೪ ರಲ್ಲಿ ತನ್ನ ಸಂಗಾತಿಯಾದ ರಿತ್ವಿಕ್ ಧನ್ಜನಿಯೊಂದಿಗೆ ಭಾರತೀಯ ನೃತ್ಯ ರಿಯಾಲಿಟಿ ಶೋ 'ನಚ್ ಬಲಿಯೇ-೬' ರನ್ನು ಗೆದ್ದಿದ್ದಾರೆ.
ಆಶಾ ನೇಗೀ ಯವರು ಆಗಸ್ಟ್ ೨೩, ೧೯೮೯ ರಲ್ಲಿ ಉತ್ತರಾಖಂಡದ ಡೆಹ್ರಾಡೂನ್ ನಲ್ಲಿ ಜನಿಸಿದರು. ೨೦೦೯ ರಲ್ಲಿ ಅವರು ಮಿಸ್ ಉತ್ತರಾಖಂಡ್ ಕಿರೀಟವನ್ನು ಮುಡಿಗೇರಿಸಿಕೊಂಡರು[೩].
೨೦೦೯ ರಲ್ಲಿ ತಮ್ಮ ಕಾಲೇಜು ದಿನಗಳಲ್ಲಿ ಮಿಸ್ ಉತ್ತರಾಖಂಡ್ ಬಿರುದನ್ನು ಪಡೆದ ನಂತರ ನೇಗೀಯವರು ತಮ್ಮ ವೃತ್ತಿ ಜೀವನವನ್ನು ರೂಪದರ್ಶಿಯಾಗಿ ಆರಂಭಿಸಿದರು. ಅವರು ವಿವಿಧ ಜಾಹೀರಾತುಗಳಲ್ಲಿ ಕಾಣಿಸಿಕೊಂಡರು ಮತ್ತು ಅನೇಕ ಫೋಟೋ ಶೂಟ್ಗಳನ್ನು ಮಾಡಿದರು. ನಂತರ ಅವರು ೨೦೧೦ ರಲ್ಲಿ ಸ್ಟಾರ್ ಪ್ಲಸ್ ನ ಜನಪ್ರಿಯ ಶೋ 'ಸಪ್ನೋನ್ ಸೆ ಬರೇ ನೈನಾ' ದಲ್ಲಿ ಮಧುರಾ ಎಂಬ ಪಾತ್ರದಲ್ಲಿ ಅಭಿನಯಿಸಿದರು[೪]. ೨೦೧೧ ರಲ್ಲಿ ಆಶಾರವರು ಏಕ್ತಾ ಕಪೂರ್ ರವರ ಜನಪ್ರಿಯ ಮೆಗಾ ಶೋ 'ಬಡೇ ಅಚ್ಛೆ ಲಗ್ತೇ ಹೇಂ' ನಲ್ಲಿ ಪ್ರಮುಖ ಪಾತ್ರಧಾರರಾದ ರಾಮ್ ಕಪೂರ್ ರವರ ಸಹೋದರಿ ಯಾಗಿ ಅಭಿನಯಿಸಿದರು. ಈ ಶೋ ಅವರಿಗೆ ಒಂದು ಉತ್ತಮವಾದ ಅನುಭವವನ್ನು ತಂದುಕೊಟ್ಟಿದೆ ಮತ್ತು ಅದರಲ್ಲಿ ಪ್ರಮುಖ ಪಾತ್ರಧಾರಿಯಾದ ಸಾಕ್ಷಿ ತನ್ವರ್ ರವರನ್ನು ತಮ್ಮ ಸ್ಪೂರ್ತಿಯನ್ನಾಗಿ ಪರಿಗಣಿಸಿದ್ದಾರೆ. ೨೦೧೧ ರಲ್ಲಿ ಝೀ ಟಿವಿಯ ಪವಿತ್ರ ರಿಷ್ತಾ ದಲ್ಲಿ ಬುದ್ಧಿವಂತಿಕೆಯ, ಸುಂದರವಾದ ಮತ್ತು ನಿರ್ಣಾಯಕ ಹುಡುಗಿಯಾಗಿ, ಅರ್ಚನಾ ದೇಶ್ಮುಖ್ ಮಗಳಾದ ಪೂರ್ವಿ ದೇಶ್ಮುಖ್ ಎಂಬ ಪಾತ್ರವನ್ನು ವಹಿಸಿಕೊಂಡರು[೫]. ತೆರೆಯಲ್ಲಿ ಅವರ ಮತ್ತು ರಿತ್ವಿಕ್ ಧನ್ಜನಿಯವರ ಜೋಡಿಯನ್ನು ಅನೇಕ ಅಭಿಮಾನಿಗಳು ಇಷ್ಟಪಟ್ಟಿದ್ದಾರೆ[೬]. ರಿತ್ವಿಕ್ ಜೊತೆಯಲ್ಲಿ ಝೀ ರಿಷ್ತೇ ಅವಾರ್ಡ್ಸ್ ನಲ್ಲಿ ಜನಪ್ರಿಯ ನೆಚ್ಚಿನ ಜೋಡಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಅದಲ್ಲದೇ ಆಶಾರವರು ಫ್ರೆಶ್ ಫೇಸ್ ಫೀಮೇಲ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. ನವೆಂಬರ್ ೨೦೧೩ ರಲ್ಲಿ, ಆಶಾ ನೇಗಿಯವರು ಜನಪ್ರಿಯ ಡಾನ್ಸ್ ರಿಯಾಲಿಟಿ ಶೋ ನಚ್ ಬಲಿಯೇ-೬ ರಲ್ಲಿ ತಮ್ಮ ಸಂಗಾತಿಯಾದ ರಿತ್ವಿಕ್ ಧನ್ಜನಿಯೊಂದಿಗೆ ಭಾಗವಹಿಸಿದರು. ಇಬ್ಬರೂ ಮನರಂಜನೆಯ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಫೆಬ್ರವರಿ ೨೦೧೪ ರಲ್ಲಿ, ಇಬ್ಬರೂ ನಚ್ ಬಲಿಯೇ-೬ ರ ವಿಜೇತರಾದರು[೭].೨೦೧೫ ರಲ್ಲಿ ಆಶಾರವರು 'ಖತ್ರೋನ್ ಕೇ ಕಿಲಾಡಿ' ಶೋ ನಲ್ಲಿ ಭಾಗವಹಿಸಿ ಅಂತಿಮ ಸ್ಪರ್ಧಿಗಳಲ್ಲಿ ಒಬ್ಬರಾದರು[೮]. ಅವರು ಬಾಕ್ಸ್ ಕ್ರಿಕೆಟ್ ಲೀಗ್ ಸೀಸನ್ ೧ ರ ತಂಡದ ಸದಸ್ಯೆಯಾಗಿದ್ದರು.
ವರ್ಷ | ಹೆಸರು | ಪಾತ್ರ | ಚಾನೆಲ್ |
---|---|---|---|
೨೦೧೦ | ಸಪ್ನೋನ್ ಸೆ ಬರೇ ನೈನಾ | ಮಧುರಾ | ಸ್ಟಾರ್ ಪ್ಲಸ್ |
೨೦೧೧ | ಬಡೇ ಅಚ್ಛೆ ಲಗ್ತೇ ಹೇಂ | ಅಪೇಕ್ಷಾ ಮಲ್ಹೋತ್ರಾ/ಅಪೇಕ್ಷಾ ಅಮರ್ನಾಥ್ ಕಪೂರ್ | ಸೋನಿ ಟಿವಿ |
೨೦೧೧-೧೪ | ಪವಿತ್ರ ರಿಷ್ತಾ[೯] | ಪೂರ್ವಿ ಮಾನವ್ ದೇಶ್ಮುಖ್/ಪೂರ್ವಿ ಅರ್ಜುನ್ ಕಿರ್ಲೋಸ್ಕರ್/ಪೂರ್ವಿ ಓನಿರ್ ದತ್ತ್ | ಝೀ ಟಿವಿ |
೨೦೧೨ | ಶುಭ್ ವಿವಾಹ್ | ಸೀತಾಲಕ್ಷ್ಮಿ ಬಾಯಿ | ಸೋನಿ ಟಿವಿ |
ಪುನರ್ ವಿವಾಹ್ | ಪೂರ್ವಿ/ಸ್ವತಃ | ಝೀ ಟಿವಿ | |
ಹಿಟ್ಲರ್ ದೀದೀ | |||
ಸಪ್ನೇ ಸುಹಾನೇ ಲಡಕ್ಪನ್ ಕೇ | |||
ಬಿಗ್ ಬಾಸ್ ೬ | ಅತಿಥಿ | ಕಲರ್ಸ್ ಟಿವಿ | |
೨೦೧೩ | ಖುಬೂಲ್ ಹೇ | ಪೂರ್ವಿ/ಸ್ವತಃ | ಝೀ ಟಿವಿ |
ಇಂಡಿಯಾಸ್ ಬೆಸ್ಟ್ ಡ್ರಾಮೇಬಾಝ್ | |||
ಡಾನ್ಸ್ ಇಂಡಿಯಾ ಡಾನ್ಸ್ ಸೂಪರ್ ಮೋಮ್ಸ್ | |||
೨೦೧೩-೧೪ | ನಚ್ ಬಲಿಯೇ-೬[೧೦] | ರಿತ್ವಿಕ್ ಧನ್ಜನಿಯೊಂದಿಗೆ ಸ್ಪರ್ಧಿಯಾಗಿ | ಸ್ಟಾರ್ ಪ್ಲಸ್ |
೨೦೧೪ | ಏಕ್ ಮುಟ್ಟಿ ಆಸ್ಮಾನ್ | ಸುಹಾನಾ ದೀವಾನ್/ಕಲ್ಪನಾ 'ಕಲ್ಪಿ' ಯಾದವ್ | ಝೀ ಟಿವಿ |
ಜಮಾಯ್ ರಾಜಾ | ಅತಿಥಿ | ||
೨೦೧೪-೧೫ | ಬಾಕ್ಸ್ ಕ್ರಿಕೆಟ್ ಲೀಗ್ ಸೀಸನ್ ೧ | ಸ್ಪರ್ಧಿ | ಸೋನಿ ಟಿವಿ |
೨೦೧೫ | ಕುಮ್ಕುಮ್ ಭಾಗ್ಯ | ಪೂರ್ವಿ | ಝೀ ಟಿವಿ |
ನಚ್ ಬಲಿಯೇ-೭ | ಸ್ವತಃ | ಸ್ಟಾರ್ ಪ್ಲಸ್ | |
ಯೆ ಹೇ ಆಶಿಕಿ | ಸ್ವತಃ[೧೧] | ಬಿಂದಾಸ್ | |
ನಾದಾನಿಯಾನ್ | ಸ್ವತಃ | ಬಿಗ್ ಮ್ಯಾಜಿಕ್ | |
ಇಂಡಿಯನ್ ಐಡಲ್ ಜ್ಯೂನಿಯರ್ | ಸಹ ನಿರೂಪಕಿ | ಸೋನಿ ಟಿವಿ | |
ಕೋಡ್ ರೆಡ್ | ಸರಸ್ವತಿ | ಕಲರ್ಸ್ ಟಿವಿ | |
ಕಿಲ್ಲರ್ರ್ ಕರಾಒಕೆ ಅಟ್ಕಾ ತೋ ಲಟ್ಕಾ | ಸ್ವತಃ | ಆಂಡ್ ಟಿವಿ | |
ಫಿಯರ್ ಫ್ಯಾಕ್ಟರ್: ಕತ್ರೋನ್ ಕೆ ಕಿಲಾಡಿ ೬[೧೨] | ಸ್ಪರ್ಧಿ | ಕಲರ್ಸ್ ಟಿವಿ | |
ಆಜ್ ಕೀ ರಾತ್ ಹೇ ಜಿಂದಗೀ | ಅತಿಥಿ | ಸ್ಟಾರ್ ಪ್ಲಸ್ | |
೨೦೧೫-೧೬ | ಕುಚ್ ತೋ ಹೇ ತೇರೆ ಮೇರೆ ದರ್ಮಿಯಾ | ಕೋಯಲ್ ಮಾಧವನ್ ವೆಂಕಟ್ | ಸ್ಟಾರ್ ಪ್ಲಸ್ |
೨೦೧೬ | ಬಾಕ್ಸ್ ಕ್ರಿಕೆಟ್ ಲೀಗ್ ಸೀಸನ್ ೨ | ಸ್ಪರ್ಧಿ | ಸ್ಟಾರ್ ಪ್ಲಸ್ |
೨೦೧೭ | ಬಿಗ್ ಬಾಸ್ ೧೧ | ಅತಿಥಿ | ಕಲರ್ಸ್ ಟಿವಿ |
ಲಿಪ್ ಸಿಂಗ್ ಬ್ಯಾಟಲ್[೧೩] | ಸ್ಪರ್ಧಿ | ಸ್ಟಾರ್ ಪ್ಲಸ್ | |
ಎಂಟರ್ಟೈನ್ಮೆಂಟ್ ಕೀ ರಾತ್ | ಸ್ವತಃ | ಕಲರ್ಸ್ ಟಿವಿ | |
೨೦೧೮ | ಕಲೀರೇಂ | ಸ್ವತಃ | ಝೀ ಟಿವಿ |
೨೦೧೯ | ಬಾರಿಶ್ (ವೆಬ್ ಸರಣಿ) | ಗೌರವಿ ಕರ್ಮಾಕರ್ | ಎಎಲ್ಟಿಬಾಲಾಜಿ |
{{cite web}}
: Italic or bold markup not allowed in: |publisher=
(help)
{{cite web}}
: CS1 maint: extra punctuation (link)
{{cite web}}
: CS1 maint: extra punctuation (link)
{{cite web}}
: Italic or bold markup not allowed in: |publisher=
(help)