ಇಂಗಳ | |
---|---|
Scientific classification | |
ಸಾಮ್ರಾಜ್ಯ: | Plantae
|
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | Eudicots
|
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | B. roxburghii
|
Binomial name | |
Balanites roxburghii |
ಇದು ಒಂದು ಜಾತಿಯಮರ. ಇದು ಸೈಮಾರುಬೇಸಿ ಕುಟುಂಬಕ್ಕೆ ಸೇರಿದೆ.ಇದು ಸುಮಾರು ಹತ್ತು ಮೀ.ನಷ್ಟು ಎತ್ತರ ಬೆಳೆಯಬಲ್ಲದು.[೧] ಈ ಮರವು ಶುಷ್ಕ ಅರಣ್ಯಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇದರ ಕಾಂಡವು ಬೂದು ಬಣ್ಣವನ್ನು ಹೊಂದಿದೆ. ಇದು ಹಸ್ತರೂಪಿ ಸಂಯುಕ್ತ ಎಲೆಗಳನ್ನು ಹೊಂದಿದೆ. ಕಿರು ಎಲೆಗಳು ವಿಲೋಮಾಂಡ ಆಕಾರದಲ್ಲಿದೆ. ಎಲೆಯ ಕಂಕುಳದಲ್ಲಿ ಪ್ಯಾನಿಕಲ್ ಇದೆ. ಇದರ ಹೂವು ಸುವಾಸನೆಯುಕ್ತವಾಗಿದೆ ಹಾಗೂ ಹಳದಿ ಮಿಶ್ರಿತ ಬಿಳಿ ಬಣ್ಣದಿಂದ ಮಾಡಲ್ಪಟ್ಟಿದೆ.ಇದರ ಬೀಜವು ಗಟ್ಟಿಯಾದ ಮೊಟ್ಟೆಯಾಕಾರದ ರೂಪದಲ್ಲಿದೆ. ಇದರ ಬೀಜವು ೨.೫-೬ಸೆ.ಮೀ.ಉದ್ದವಿದೆ. ಇದು ಬೇರಿನ ತುಂಡುಗಳಿಂದ ತನ್ನ ವಂಶವನ್ನು ವೃದ್ದಿಸಿಕೊಳ್ಳುತ್ತದೆ.
ಇಂಗ್ಲೀಷ್‍ನಲ್ಲಿ ಇಂಗಳ ಮರಕ್ಕೆ ಡೆಸರ್ಟ್ ಡೇಟ್[೨], ಕನ್ನಡದಲ್ಲಿ ಇಂಗಳೀಕ ಮೀನುಮರ, ತಾಪಸರು, ಇಂಗುಡಿ, ಇಂಗುಳುಕ್ಕೆ, ಗಾರೆಗಿಡ, ಇಂಗ್ಲೋರ್ ಎಂದು ಕರೆಯುತ್ತಾರೆ. ಹಿಂದಿಯಲ್ಲಿ ಹಿಂಗನ್, ತಮಿಳಿನಲ್ಲಿ ನಂಜುಂಡನ್, ಮರಾಠಿಯಲ್ಲಿ ಹಿಂಗನ್, ಮಲಯಾಳಂನಲ್ಲಿ ನಂಜುಂಟಾ, ಸಂಸ್ಕ್ರತದಲ್ಲಿ ಅಂಗವೃಕ್ಷ, ಕಂಟಕ, ತನುಪತ್ರ ಎಂದು ಕರೆಯುತ್ತಾರೆ.
ಇದರ ಎಣ್ಣೆಯಲ್ಲಿ ಬ್ಯಾಕ್ಟೀರಿಯಾ ಹಾಗೂ ಶಿಲೀಂಧ್ರವನ್ನು ನಾಶಮಾಡುವ ಗುಣವಿದೆ. ಇದರ ಎಣ್ಣೆಯನ್ನು ತ್ವಚೆ ರೋಗ, ಸುಟ್ಟಗಾಯಕ್ಕೆ ಬಳಸುತ್ತಾರೆ. ಸಾಬೂನು ತಯಾರಿಸಲು ಎಣ್ಣೆಯನ್ನು ಬಳಸುತ್ತಾರೆ. ಬೀಜದಿಂದ ತಯಾರಿಸಿದ ಪುಡಿಯನ್ನು ದನಕರುಗಳಿಗೆ ಆಹಾರವಾಗಿ ಹಾಗೂಮೀನು ವಿಷದಂತೆಯೂ ಬಳಸುತ್ತಾರೆ. ಹಣ್ಣನ್ನು ನಾಯಿಕೆಮ್ಮು ಹಾಗೂ ತ್ವಚೆ ರೋಗಗಳಿಗೆ ಬಳಸುತ್ತಾರೆ. ಹಣ್ಣಿನ ತಿರುಳನ್ನು ಮೇಕೆಯ ಹಾಲಿನೊಂದಿಗೆ ಸೇರಿಸಿ ನ್ಯುಮೋನಿಯ ರೋಗಕ್ಕೆ ಔಷಧವಾಗಿ ಬಳಸುತ್ತಾರೆ. ಬೀಜದ ಪುಡಿಯನ್ನು ಮಗುವಿನ ಜನನವಾಗುವಾಗ ಸುಲಭವಾಗಲೆಂದು ಗರ್ಭಿಣಿಯವರಿಗೆ ಕೊಡುತ್ತಾರೆ. ಇದನ್ನು ಆರ್ಥಿಕಕ್ಕೆ ಉಪಯೋಗಿಸುತ್ತಾರೆ. ಕಾಯಿಯ ಹೊರಗವಚದಲ್ಲಿ ಮದ್ದಿನ ಪುಡಿಯನ್ನು ತುಂಬಿ ಪಟಾಕಿ ತಯಾರಿಸುತ್ತಾರೆ. ಬಟ್ಟೆಯ ಮೇಲೆ ಬಿದ್ದ ಕಲೆಯನ್ನು ತೆಗೆಯಲು ಹಣ್ಣಿನರಸ ಬಳಸುತ್ತಾರೆ. ಮರದಿಂದ ಆಡ್ಡಾಡುವ ಕೋಲು, ಹಿಡಿಕೆ ತಯರಿಸುತ್ತಾರೆ. ಇದೊಂದು ಉತ್ತಮ ಉರುವಲು.ಇದರ ಹಣ್ಣುಗಳನ್ಜು ಉಪ್ಲಿನ ಡಬ್ಬದಲ್ಲಿ ಹಾಕಿಡುತ್ತಾರೆ,ಅದರಿಂದ ಪಿತ್ತ ಪ್ರಕೋಪ ಕಡಿಮೆಯಾಗುವುದು..