ಇಂದ್ರಾಣಿ ರೆಹಮಾನ್ | |
---|---|
ಜನನ | ಇಂದ್ರಾಣಿ ಬಾಜಪೈ ೧೯ ಸೆಪ್ಟೆಂಬರ್ ೧೯೩೦[೧] ಮದ್ರಾಸ್, ಮದ್ರಾಸ್ ಪ್ರೆಸಿಡೆನ್ಸಿ, ಬ್ರಿಟಿಷ್ ಭಾರತ |
ಮರಣ | 5 February 1999 ನ್ಯೂಯಾರ್ಕ್, ಯುಎಸ್ | (aged 68)
ವೃತ್ತಿ(ಗಳು) | ಭಾರತೀಯ ಶಾಸ್ತ್ರೀಯ ನೃತ್ಯ ಕಲಾವಿದೆ, ನೃತ್ಯ ಸಂಯೋಜಕಿ, |
ಸಂಗಾತಿ | ಹಬೀಬ್ ರೆಹಮಾನ್ (ವಾಸ್ತುಶಿಲ್ಪಿ) ಭಾರತ ಸರ್ಕಾರದ ಮುಖ್ಯ ವಾಸ್ತುಶಿಲ್ಪಿ |
ಮಕ್ಕಳು | ರಾಮ್ ರೆಹಮಾನ್ ಸುಕನ್ಯಾ ರೆಹಮಾನ್ |
ಪೋಷಕ |
|
ಪ್ರಶಸ್ತಿಗಳು | ೧೯೬೯: ಪದ್ಮಶ್ರೀ ೧೯೮೧:ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ |
ಇಂದ್ರಾಣಿ ರೆಹಮಾನ್ (೧೯ ಸೆಪ್ಟೆಂಬರ್ ೧೯೩೦, ಚೆನ್ನೈ - ೫ ಫೆಬ್ರವರಿ ೧೯೯೯, ನ್ಯೂಯಾರ್ಕ್) ಭರತ ನಾಟ್ಯಂ, ಕೂಚಿಪುಡಿ, ಕಥಕ್ಕಳಿ ಮತ್ತು ಒಡಿಸ್ಸಿಯ ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿ. ಅವರು ಪಶ್ಚಿಮದಲ್ಲಿ ಅದನ್ನು ಜನಪ್ರಿಯಗೊಳಿಸಿದರು. ನಂತರ ೧೯೭೬ ರಲ್ಲಿ ನ್ಯೂಯಾರ್ಕ್‌ನಲ್ಲಿ ನೆಲೆಸಿದರು.
೧೯೫೨ ರಲ್ಲಿ, ಅವರು ಮಿಸ್ ಇಂಡಿಯಾ ಸ್ಪರ್ಧೆಯನ್ನು ಗೆದ್ದರು. ನಂತರ ತಾಯಿ ರಾಗಿಣಿ ದೇವಿಯ ಕಂಪನಿಗೆ ಸೇರಿಕೊಂಡರು. ಅವರು ತಮ್ಮ ಅಂತರಾಷ್ಟ್ರೀಯ ಪ್ರವಾಸಗಳಲ್ಲಿ ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರವಾದ ಒಡಿಸ್ಸಿಯನ್ನು ಜನಪ್ರಿಯಗೊಳಿಸಿದರು. ಇಂದ್ರಾಣಿ ಅವರು ೧೯೬೯ ರಲ್ಲಿ ಪದ್ಮಶ್ರೀ ಮತ್ತು ಪ್ರದರ್ಶನ ಕಲೆಯಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ತಾರಕನಾಥ್ ದಾಸ್ ಪ್ರಶಸ್ತಿಯನ್ನು ಪಡೆದರು.
ಇಂದ್ರಾಣಿ ರೆಹಮಾನ್ ಚೆನ್ನೈನಲ್ಲಿ (ಆಗ ಮದ್ರಾಸ್), ಇಂಡೋ-ಅಮೆರಿಕನ್ ಲೀಗ್‌ನ ಕೆಲ ಕಾಲದ ಅಧ್ಯಕ್ಷರಾಗಿದ್ದ (೧೮೮೦ - ೧೯೬೨) ರಾಮಲಾಲ್ ಬಲರಾಮ್ ಬಾಜ್‌ಪೇಯ್ ಹಾಗೂ ಅವರ ಪತ್ನಿ ರಾಗಿಣಿ ದೇವಿ ಅವರ ಮಗಳಾಗಿ ಜನಿಸಿದರು. ಆಕೆಯ ತಂದೆ ರಾಮಲಾಲ್ ಬಾಜಪೇಯ್ ಅವರು ಉತ್ತರ ಭಾರತದ ಹಿನ್ನೆಲೆಯವರಾಗಿದ್ದರು. ಅವರು ಉನ್ನತ ಶಿಕ್ಷಣಕ್ಕಾಗಿ ಯುಎಸ್ ಗೆ ಹೋದ ರಸಾಯನಶಾಸ್ತ್ರಜ್ಞರಾಗಿದ್ದರು. ಇಲ್ಲಿ ಅವರು ಹುಟ್ಟಿನಿಂದಲೇ ಅಮೇರಿಕನ್ ಎಸ್ತರ್ ಲುಯೆಲ್ಲಾ ಶೆರ್ಮನ್ ಅವರನ್ನು ಭೇಟಿಯಾದರು ಮತ್ತು ವಿವಾಹವಾದರು.[೨] [೩] ಎಸ್ತರ್ ತನ್ನ ಮದುವೆಯ ನಂತರ ಹಿಂದೂ ಧರ್ಮವನ್ನು ಸ್ವೀಕರಿಸಿದರು ಮತ್ತು 'ರಾಗಿಣಿ ದೇವಿ' ಎಂಬ ಹೆಸರನ್ನು ಪಡೆದರು. [೪]
ದಂಪತಿಗಳು ೧೯೨೦ ರ ದಶಕದಲ್ಲಿ ಭಾರತಕ್ಕೆ ಹಿಂತಿರುಗಿದರು. ರಾಮಲಾಲ್ ನಂತರ ಲಾಲಾ ಲಜಪತ್ ರಾಯ್ ಅವರು ಸ್ಥಾಪಿಸಿದ ಯಂಗ್ ಇಂಡಿಯಾ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕೆಲಸ ಮಾಡಿದರು. ಸ್ವಾತಂತ್ರ್ಯದ ನಂತರ, ಅವರು ನ್ಯೂಯಾರ್ಕ್‌ನಲ್ಲಿ ಭಾರತದ ಕಾನ್ಸುಲ್ ಜನರಲ್ ಆದರು, [೫] ಮತ್ತು ಇಂಡೋ-ಅಮೆರಿಕನ್ ಲೀಗ್‌ನ ಅಧ್ಯಕ್ಷರಾದರು. ಈ ಮಧ್ಯೆ, ರಾಗಿಣಿ ಭಾರತೀಯ ಶಾಸ್ತ್ರೀಯ ನೃತ್ಯದ ಭಾವೋದ್ರಿಕ್ತ ಪ್ರತಿಪಾದಕರಾದರು ಮತ್ತು ಅದರ ಪುನರುಜ್ಜೀವನ ಮತ್ತು ಪೋಷಣೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಭರತ ನಾಟ್ಯವನ್ನು ಕಲಿಯಲು ಪ್ರಾರಂಭಿಸಿದ ಮೈಸೂರಿನ ಜೆಟ್ಟಿ ತಾಯಮ್ಮ ಎಂಬ ಮಹಾನ್ ರಾಜದಾಸಿ (ರಾಜನ ವೇಶ್ಯೆ) ಅವರನ್ನು ಭೇಟಿಯಾದ ನಂತರ ಇದು ಸಂಭವಿಸಿತು. ನಂತರ ಅವರು ಚೆನ್ನೈನ ವೇಶ್ಯೆಯರಾದ ಗೌರಿ ಅಮ್ಮನ ಮಾರ್ಗದರ್ಶನದಲ್ಲಿ ತಮ್ಮ ನೃತ್ಯ ಪ್ರತಿಭೆಯನ್ನು ಮೆರೆದರು. [೬][೭] [೮] ರಾಗಿಣಿ ನಂತರ ಸ್ವತಃ ಪ್ರಸಿದ್ಧ ನರ್ತಕಿಯಾದರು ಮತ್ತು ೧೯೩೦ ರ ದಶಕದಲ್ಲಿ ಅತ್ಯಂತ ಗೌರವಾನ್ವಿತ ಪ್ರದರ್ಶಕರಲ್ಲಿ ಒಬ್ಬರಾದರು. [೯] ಅದೇ ಅವಧಿಯಲ್ಲಿ ರಾಗಿಣಿ ಕಥಕ್ಕಳಿಯ ಪುನರುಜ್ಜೀವನವನ್ನು ಸಹ ಸಮರ್ಥಿಸಿಕೊಂಡರು.
ದಂಪತಿಗಳಿಗೆ ಚೆನ್ನೈನಲ್ಲಿ ಜನಿಸಿದ ಇಂದ್ರಾಣಿ ಅವರು ಮಿಶ್ರ ಜನಾಂಗದ ಕುಟುಂಬದಲ್ಲಿ ಬೆಳೆದರು. ಅವರ ಅಮೇರಿಕನ್ ತಾಯಿಯಿಂದ ಅವರು ಅನಿರ್ಬಂಧಿತ ಮತ್ತು ಸ್ವತಂತ್ರವಾಗಿ ಬೆಳೆದರು. ಅವರು ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿದರು. ಸ್ಪರ್ಧೆಯಲ್ಲಿ ಸ್ಪರ್ಧಿಸಲು ಮನವೊಲಿಸಬಹುದಾದ ದೇಶಾದ್ಯಂತದ ಕೆಲವೇ ಕೆಲವು ಸ್ಪರ್ಧಾಳುಗಳಲ್ಲಿ ಇವರು ಒಬ್ಬರಾಗಿದ್ದರು. ಇಂದ್ರಾಣಿ ೧೯೫೨ ರಲ್ಲಿ 'ಮಿಸ್ ಇಂಡಿಯಾ' ಕಿರೀಟವನ್ನು ಪಡೆದರು.
ಇಂದ್ರಾಣಿ ತಮ್ಮ ಒಂಬತ್ತನೇ ವಯಸ್ಸಿನಲ್ಲಿ ತಮ್ಮ ತಾಯಿಯ ಕಂಪನಿಯಲ್ಲಿ ನೃತ್ಯವನ್ನು ಕಲಿಯಲು ಪ್ರಾರಂಭಿಸಿದರು ಮತ್ತು ತಮ್ಮ ತಾಯಿ ಅಮೇರಿಕಾ ಮತ್ತು ಯುರೋಪಿನಲ್ಲಿ ಪ್ರಯಾಣಿಸುವಾಗ ಅವರೊಂದಿಗೆ ಹೋದರು. ೧೯೪೦ ರ ದಶಕದಲ್ಲಿ ಗುರು ಚೊಕ್ಕಲಿಂಗಂ ಪಿಳ್ಳೈ (೧೮೯೩-೧೯೬೮) ಅವರಿಂದ ಭರತ ನಾಟ್ಯಂನ ಪಂಡನಲ್ಲೂರ್ ಶೈಲಿಯನ್ನು ಕಲಿತ ನಂತರ ಅವರು ಭರತ ನಾಟ್ಯದಲ್ಲೇ ತಮ್ಮ ಮೊದಲ ಕಲಾ ಪ್ರದರ್ಶನ ಪ್ರಾರಂಭಿಸಿದರು. ಶೀಘ್ರದಲ್ಲೇ ಅವರು ವಿಜಯವಾಡದಲ್ಲಿದ್ದ, ಕೊರಡ ನರಸಿಂಹ ರಾವ್ ಅವರಿಂದ ಕೂಚಿಪುಡಿ ಕಲಿತರು, ನಂತರ ಅವರು ಪ್ರಪಂಚದ ಅನೇಕ ಭಾಗಗಳನ್ನು ಸುತ್ತಿದರು. [೧೦]
೧೯೪೭ ರಲ್ಲಿ, ಇಂದ್ರಾಣಿ ಭಾರತದ ಪ್ರಮುಖ ನೃತ್ಯ ಮತ್ತು ಕಲಾ ವಿಮರ್ಶಕ ಡಾ. ಚಾರ್ಲ್ಸ್ ಫ್ಯಾಬ್ರಿ ಅವರ ಗಮನವನ್ನು ಸೆಳೆದರು. ಅವರು ನಂತರ ಒರಿಸ್ಸಾಗೆ ಹೋಗಿ ಒಡಿಸ್ಸಿಯ ಕಡಿಮೆ-ಪ್ರಸಿದ್ಧ ಶಾಸ್ತ್ರೀಯ ನೃತ್ಯ ಪ್ರಕಾರವನ್ನು ಕಲಿಯಲು ಪ್ರೋತ್ಸಾಹಿಸಿದರು, ಒಡಿಸ್ಸಿ ಕಲಿತ ಮೊದಲ ವೃತ್ತಿಪರ ನೃತ್ಯಗಾರ್ತಿಯಾದರು. ಗುರು ಶ್ರೀ ದೇಬಾ ಪ್ರಸಾದ್ ದಾಸ್ ಅವರಿಂದ ಮೂರು ವರ್ಷಗಳ ಕಾಲ ಒಡಿಸ್ಸಿ ಕಲಿತ ನಂತರ, ಅವರು ಭಾರತ ಮತ್ತು ಪ್ರಪಂಚದ ವಿವಿಧ ಭಾಗಗಳಲ್ಲಿ ಪ್ರದರ್ಶನ ನೀಡುವ ಮೂಲಕ ಅದನ್ನು ಜನಪ್ರಿಯಗೊಳಿಸಿದರು. [೧೧] [೧೨]
೧೯೫೨ ರಲ್ಲಿ, ವಿವಾಹವಾದರು ಮತ್ತು ಒಂದು ಮಗುವಿನ ತಾಯಿಯೂ ಆದರು. ಇದೇ ಸಮಯದಲ್ಲಿ ಅವರು ಮೊದಲ ಮಿಸ್ ಇಂಡಿಯಾ ಆದರು, [೧೩] [೧೪] ಮತ್ತು ಕ್ಯಾಲಿಫೋರ್ನಿಯಾದ ಲಾಂಗ್ ಬೀಚ್‌ನಲ್ಲಿ ನಡೆದ ಮಿಸ್ ಯೂನಿವರ್ಸ್ ೧೯೫೨ ಸ್ಪರ್ಧೆಯಲ್ಲಿ ಸ್ಪರ್ಧಿಸಲು ಹೋದರು. [೧೫] ಇವರು ತಮ್ಮ ತಾಯಿಯೊಂದಿಗೆ ಪ್ರಯಾಣಿಸುತ್ತಿದ್ದರು ಮತ್ತು ಪ್ರಪಂಚದಾದ್ಯಂತ ಪ್ರದರ್ಶನ ನೀಡುತ್ತಿದ್ದರು. [೧೬] ೧೯೬೧ ರಲ್ಲಿ, ಅವರು ಏಷ್ಯಾ ಸೊಸೈಟಿಯಿಂದ ರಾಷ್ಟ್ರೀಯ ಪ್ರವಾಸದಲ್ಲಿ ನೃತ್ಯ ಪ್ರಸ್ತುತ ಪಡಿಸಿದ ಮೊದಲ ನರ್ತಕಿಯಾಗಿದ್ದರು ಮತ್ತು ವಾಷಿಂಗ್ಟನ್, ಡಿಸಿ ಗೆ ನೆಹರು ಅವರ ಅಧಿಕೃತ ಭೇಟಿಯ ಸಂದರ್ಭದಲ್ಲಿ ಯುಎಸ್ ಅಧ್ಯಕ್ಷ ಜಾನ್ ಎಫ್. ಕೆನಡಿ ಮತ್ತು ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರಿಗಾಗಿ ಪ್ರದರ್ಶನ ನೀಡಿದರು. [೯] ನಂತರ ಅವರು ಚಕ್ರವರ್ತಿ ಹೈಲೆ ಸೆಲಾಸಿ, ರಾಣಿ ಎಲಿಜಬೆತ್ II, ಮಾವೋ ಝೆಡಾಂಗ್, ನಿಕಿತಾ ಕ್ರುಶ್ಚೇವ್ ಮತ್ತು ಫಿಡೆಲ್ ಕ್ಯಾಸ್ಟ್ರೋ ಅವರಿಗಾಗಿ ವರ್ಷಗಳ ಕಾಲ ಪ್ರದರ್ಶನ ನೀಡಿದರು. [೪] [೧೭] ೧೯೭೬ ರಲ್ಲಿ ಅವರು ನ್ಯೂಯಾರ್ಕ್‌ನ ಲಿಂಕನ್ ಸೆಂಟರ್ ಫಾರ್ ದಿ ಪರ್ಫಾರ್ಮಿಂಗ್ ಆರ್ಟ್ಸ್‌ನಲ್ಲಿರುವ ಜೂಲಿಯಾರ್ಡ್ ಸ್ಕೂಲ್‌ನಲ್ಲಿ ನೃತ್ಯ ವಿಭಾಗದ ಅಧ್ಯಾಪಕರಾದರು, ಹಾರ್ವರ್ಡ್ ಸೇರಿದಂತೆ ವಿವಿಧ ಅಮೇರಿಕನ್ ವಿಶ್ವವಿದ್ಯಾಲಯಗಳಲ್ಲಿ ಕಲಿಸಿದರು ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ತಮ ಉಳಿದ ಎರಡು ದಶಕಗಳನ್ನು ವ್ಯಾಪಕವಾಗಿ ಪ್ರವಾಸ ಮಾಡುತ್ತಾ ಕಳೆದರು.
೧೯೪೫ ರಲ್ಲಿ, ತಮ್ಮ ೧೫ ನೇ ವಯಸ್ಸಿನಲ್ಲಿ ಅವರು ಪ್ರಸಿದ್ಧ ವಾಸ್ತುಶಿಲ್ಪಿ ಹಬೀಬ್ ರೆಹಮಾನ್ (೧೯೧೫-೧೯೯೫) ಅವರೊಂದಿಗೆ ಓಡಿಹೋಗಿ ವಿವಾಹವಾದರು. ದಂಪತಿಗೆ ಕಲಾವಿದನಾದ ರಾಮ್ ರೆಹಮಾನ್ ಎಂಬ ಒಬ್ಬ ಮಗ ಮತ್ತು ಸುಕನ್ಯಾ ರೆಹಮಾನ್ ಎಂಬ ಒಬ್ಬ ಮಗಳಿದ್ದಾಳೆ. ಸುಕನ್ಯಾ [೧೮] ತನ್ನ ತಾಯಿ ಮತ್ತು ಅಜ್ಜಿಯೊಂದಿಗೆ ನೃತ್ಯ ಮಾಡಿದ್ದಳು. ಇಂದ್ರಾಣಿ ಅವರ ಮೊಮ್ಮಕ್ಕಳು ವಾರ್ಡ್ರೀತ್ ವಿಕ್ಸ್ ಮತ್ತು ಹಬೀಬ್ ವಿಕ್ಸ್.
ಇಂದ್ರಾಣಿ ರೆಹಮಾನ್ ೫ ಫೆಬ್ರವರಿ ೧೯೯೯ ರಂದು ನ್ಯೂಯಾರ್ಕ್‌ನ ಮ್ಯಾನ್ಹ್ಯಾಟನ್‌ನಲ್ಲಿ ನಿಧನರಾದರು.
{{cite web}}
: CS1 maint: bot: original URL status unknown (link)