ಇಬ್ರಾಹಿಂ ಸುತಾರ್ | |
---|---|
ಜನನ | ಮಹಾಲಿಂಗಪುರ[೧] | ೧೦ ಮೇ ೧೯೪೦
ಮರಣ | 5 February 2022 | (aged 81)
ನಾಗರಿಕತೆ | ಭಾರತೀಯ |
ವಿದ್ಯಾಭ್ಯಾಸ | ತರಗತಿ 3[೧] |
ವೃತ್ತಿ | ನೇಕಾರ[೧] |
ಗಮನಾರ್ಹ ಕೆಲಸಗಳು | ಕರ್ನಾಟಕ ಮತ್ತು ನೆರೆಯ ರಾಜ್ಯಗಳಲ್ಲಿ ಕಳೆದ 40 ವರ್ಷಗಳಿಂದ ತಮ್ಮ ಹಾಡುಗಳು ಮತ್ತು ಭಜನೆಗಳ ಮೂಲಕ ಸಾಮಾಜಿಕ ಮತ್ತು ಕೋಮು ಸೌಹಾರ್ದತೆಯನ್ನು ಹರಡಲು ಹೆಸರುವಾಸಿಯಾಗಿದ್ದಾರೆ[೧] |
ಸಂಗಾತಿ | ಮಾರೆಂಬಿ[೧] |
ಮಕ್ಕಳು | ಹುಮಾಯೂನ್ ಸುತಾರ್ ಮತ್ತು ಇತರ ಇಬ್ಬರು ಮಕ್ಕಳು[೧][೨] |
ಜಾಲತಾಣ | www |
ಇಬ್ರಾಹಿಂ ಎನ್. ಸುತಾರ್ (ಇಬ್ರಾಹಿಂ ನಬೀ ಸಾಹೇಬ್ ಸುತಾರ್) (೧೦ ಮೇ ೧೯೪೦ - ೦೫ ಫೆಬ್ರವರಿ ೨೦೨೨[೩]) ವೈದಿಕ, ವಚನ ಮತ್ತು ಸೂಫಿ ಪರಂಪರೆಗಳ ಕುರಿತು ಭಜನೆ, ಪ್ರವಚನ, ಸಂವಾದಗಳ ಮೂಲಕ ಜನರಲ್ಲಿ ಭಾವೈಕ್ಯತೆ ಉಂಟು ಮಾಡಿದ ತತ್ವಪದಕಾರ ಮತ್ತು ಪ್ರವಚನಕಾರಾಗಿದ್ದರು. ಇವರಿಗೆ ೨೦೧೮ರ ಪದ್ಮಶ್ರೀ ಪ್ರಶಸ್ತಿಯನ್ನು ಕೊಡಲಾಗಿದೆ.[೪]
ಇವರ ತಂದೆ ಮಹಾಲಿಂಗಪುರದ ನಬಿಸಾಹೆಬ್ , ತಾಯಿ ಅಮೀನಾಬಿ. ಬಡತನದಿಂದಾಗಿ ಶಿಕ್ಷಣ ಮೂರನೇ ತರಗತಿಯವರೆಗೆ ಮಾತ್ರ ಕಲಿತರು. ನಂತರ ನೇಕಾರಿಕೆ ಕಲಿತು ಬದುಕು ಸಾಗಿಸತೊಡಗಿದರು.
ಬಾಲ್ಯದಲ್ಲಿ ಮಸೀದಿಯಲ್ಲಿ ನಮಾಜು , ಕಲಿತು ಕುರಾನ್ ಅಧ್ಯಯನ ಮಾಡಿದರು. ಬೇರೆ ಧರ್ಮಗಳನ್ನು ತಿಳಿಯಬಯಸಿದರು. ಊರಿನ ಭಜನಾಸಂಘದಲ್ಲಿ ಪಾಲುಗೊಳ್ಳುವ ಮೂಲಕ ತತ್ವಪದ , ವಚನಗಳನ್ನು ಕಲಿತರು. ಪ್ರವಚನಗಳನ್ನು ಕೇಳಿದರು. ನಿಜಗುಣಯೋಗಿಗಳ ಶಾಸ್ತ್ರ , ಭಗವದ್ಗೀತೆಗಳ ಅಧ್ಯಯನ ಮಾಡಿದರು.
ದೇವರು , ಧರ್ಮ ಬೇರೆ ಆದರೂ ಸತ್ಯ ಒಂದೇ ಎಂದು ಅರಿತರು. ೧೯೮೦ರಲ್ಲಿ ಪ್ರವಚನಗಳನ್ನು ಕೊಡಲು ಆರಂಬಿಸಿದರು
ಮಹಾತ್ಮ ಕಬೀರರಂತೆ ಇವರು ಜನರಲ್ಲಿ ಭಾವೈಕ್ಯತೆಯನ್ನು ಉಂಟು ಮಾಡುತ್ತಿದ್ದಾರೆ.
ಇವರ ಭಜನೆ ತತ್ವಪದಗಳ ಸುರುಳಿಗಳು ಬಿಡುಗಡೆ ಆಗಿವೆ. 'ನಾವೆಲ್ಲಾ ಭಾರತೀಯರು' ಎಂಬುದು ಅವರ ಕವನ ಸಂಕಲನ.