ಉಂಚಳ್ಳಿ ಜಲಪಾತ

ಉಂಚಳ್ಳಿ ಜಲಪಾತ
ಸ್ಥಳಸಿರ್ಸಿ
ಒಟ್ಟು ಉದ್ದ116 metres (381 ft)
ಸೇರುವ ನದಿಅಘನಾಶಿನಿ ನದಿ

ಉಂಚಳ್ಳಿ ಜಲಪಾತ ಅಥವಾ ಲುಷಿಂಗ್ಟನ್ ಜಲಪಾತ ಅಘನನಾಶಿನಿ ನದಿಯಿಂದ ಸೃಷ್ಟಿಯಾಗುವ ಜಲಪಾತ. ಇದರ ಎತ್ತರ ಸುಮಾರು ೧೧೬ ಮೀಟರ್. ಈ ಜಲಪಾತವು ಕರ್ನಾಟಕಉತ್ತರ ಕನ್ನಡ ಜಿಲ್ಲೆಯ ಸಿರ್ಸಿಯಿಂದ ೩೦ ಕಿಮಿ ದೂರದಲ್ಲಿದೆ. ೧೮೪೫ರಲ್ಲಿ ಈ ಜಲಪಾತವನ್ನು ಪತ್ತೆಹಚ್ಚಿದ ಬ್ರಿಟಿಷ್ ಅಧಿಕಾರಿ ಜೆ.ಡಿ. ಲುಷಿಂಗ್ಟನ್ ಅವರ ಹೆಸರನ್ನು ಇದಕ್ಕೆ ಇಡಲಾಗಿದೆ. ಈ ಜಲಪಾತವು ನೀರು ಬೀಳುವಾಗ ಮಾಡುವ ಶಬ್ದದಿಂದ, ಸ್ಥಳೀಯರು ಇದನ್ನು ಕೆಪ್ಪ ಜೋಗ ಎಂದೂ ಕೂಡ ಕರೆಯುತ್ತಾರೆ.

ಉಂಚಳ್ಳಿ ಜಲಪಾತ- ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದ ವಾಯವ್ಯಕ್ಕೆ ಸು.19ಕಿಮೀ ದೂರದಲ್ಲಿ ಉಂಚಳ್ಳಿ ಗ್ರಾಮದ ಬಳಿ ಇರುವ ಒಂದು ಸುಂದರ ಜಲಪಾತ. ಅಘನಾಶಿನಿ ನದಿ ಇಲ್ಲಿ ಅಡಿ ಕೆಳಗೆ ದುಮುಕುತ್ತದೆ. ಕರಿಬಂಡೆಗಳ ಮೇಲೆ ಹಾಲುನೊರೆ ಯಂತೆ ಇಳಿದು ಬರುವ ನೀರಿನ ಧಾರೆಯ ಸೊಬಗು ಚೇತೋಹಾರಿಯಾದುದು. ಜಲಪಾತದ ಸುತ್ತಲಿನ ಕಂದರ, ಅಡಕೆ ತೋಟಗಳು, ಸಮೃದ್ಧ ಅಡವಿಗಳು, ಇಕ್ಕೆಲಗಳಲ್ಲಿಯೂ ಎದ್ದಿರುವ ಕರಿಕಲ್ಲಿನ ಅಖಂಡ ಗೋಡೆಗಳು, ಈ ಜಲಪಾತಕ್ಕೆ ವಿಶೇಷ ಶೋಭೆಯನ್ನು ಕೊಟ್ಟಿವೆ. ಧೈರ್ಯಶಾಲಿಗಳು ಮಾತ್ರ ಜಲಪಾತದ ಕೆಳಗೆ ಇಳಿಯಬಹುದು. ಜಲಪಾತದ ಶಬ್ದ ಸು.13ಕಿಮೀ ದೂರದಲ್ಲಿರುವ ಬಿಳಗಿಯವರೆಗೂ ಕೇಳುವುದಂತೆ. ಕಿವಿಗಡಚಿಕ್ಕುವ ಅಗಾಧ ಶಬ್ದದಿಂದಾಗಿ ಇದಕ್ಕೆ ಕೆಪ್ಪಜೋಗ ಎಂಬ ಹೆಸರೂ ಸ್ಥಳೀಯರಲ್ಲಿ ಪ್ರಚಲಿತವಾಗಿದೆ. ಈ ಜಿಲ್ಲೆಯ ಕಲೆಕ್ಟರ್ ಆಗಿದ್ದ ಟಿ.ಡಿ. ಲುಸಿಂಗ್ಟನ್ ಅವರು 1843ರಲ್ಲಿ ಈ ಜಲಪಾತವನ್ನು ಕಂಡು ಹೊರ ಜಗತ್ತಿಗೆ ಪರಿಚಯ ಮಾಡಿಕೊಟ್ಟಿದ್ದರಿಂದ ಇದಕ್ಕೆ ಲುಸಿಂಗ್ಟನ್ ಫಾಲ್ಸ್‌ ಎಂದೂ ಹೆಸರು ಬಂದಿದೆ. ಈ ಜಲಪಾತದಿಂದ ಸುಮಾರು ಒಂದು ಕಿಮೀ ಮುಂದೆ ಬುರುಡೆಜೋಗ ಇದೆ. ಅಲ್ಲಿ ಇದೇ ನದಿ ಸುಮಾರು 300 ಅಡಿ ಕೆಳಗುರುಳಿ ಅನಂತರ ಎರಡು ಟಿಸಿಲುಗಳಾಗಿ 150 ಅಡಿ ಹಾರಿ ಸ್ವಲ್ಪ ದೂರ ಹರಿದು ಇನ್ನೊಂದು ಜಲಪಾತವನ್ನುಂಟು ಮಾಡಿದೆ. ಉಂಚಳ್ಳಿ ಜಲಪಾತಕ್ಕೆ ಸಿದ್ಧಾಪುರದಿಂದ ರಸ್ತೆ ಇದೆ. ಬಸ್ ಸೌಕರ್ಯವೂ ಉಂಟು.

ಇದನ್ನೂ ನೋಡಿ

[ಬದಲಾಯಿಸಿ]