ಉಡುಪಿ ಖಾದ್ಯಶೈಲಿ

ಉಡುಪಿ ಶೈಲಿಯ ಊಟ

ಉಡುಪಿ ಖಾದ್ಯಶೈಲಿಯು ದಕ್ಷಿಣ ಭಾರತದ ಒಂದು ವಿಶ್ವವಿಖ್ಯಾತವಾಗಿರುವ ಪಾಕವಿಧಾನ. ಇದು ಕರ್ನಾಟಕದ ಖಾದ್ಯಶೈಲಿಯ ಒಂದು ಪ್ರಮುಖ ಭಾಗವಾಗಿದೆ ಮತ್ತು ತನ್ನ ಹೆಸರನ್ನು ಭಾರತಕರ್ನಾಟಕ ರಾಜ್ಯದ ಕರಾವಳಿ ತೀರದ ನಗರವಾದ ಉಡುಪಿಯಿಂದ ಪಡೆದಿದೆ. ಉಡುಪಿ ಖಾದ್ಯಶೈಲಿಯ ಉಗಮ ಮಧ್ವಾಚಾರ್ಯರಿಂದ ಸ್ಥಾಪಿತವಾದ ಉಡುಪಿಯ ಅಷ್ಟಮಠದಲ್ಲಿ ಆಗಿದೆ.

ಉಡುಪಿ ಖಾದ್ಯಗಳ ಸ್ಥೂಲ ಪಟ್ಟಿ

[ಬದಲಾಯಿಸಿ]
ಹೆಸರು ಸಸ್ಯಾಹಾರಿ ಯಾ ಮಾಂಸಾಹಾರಿ ಘಟಕಗಳು/ಮಿಶ್ರಣಗಳು ತಯಾರಿಕೆ ವಿಧಾನ ಚಿತ್ರ ಷರಾ
ಮಸಾಲೆ ದೋಸೆ ಸಸ್ಯಾಹಾರಿ. ಅಕ್ಕಿ,,ಉದ್ದು, ಅಲೂಗಡ್ಡೆ ಮತ್ತು ನೀರುಳ್ಳಿ ದೋಸೆಯನ್ನು ತುಪ್ಪದಲ್ಲಿ ಕೆಂಪಗೆ ಬೇಯಿಸಿ ಮಸಾಲೆ ಬೆರೆಸಿ ಬೇಯಿಸಿದ ಅಲೂಗಡ್ಡೆ ಮತ್ತು ನೀರುಳ್ಳಿಯನ್ನು ಮದ್ಯದಲ್ಲಿಟ್ಟು ಸುರುಳಿಸುತ್ತುವುದು ಉಡುಪಿ ಹೋಟೆಲ್ ಗಳ ಉತ್ಪಾದನೆ
ಪತ್ರೊಡೆ ಸಸ್ಯಾಹಾರಿ ಕೆಸುವಿನ ಎಲೆ.ಅಕ್ಕಿ ಕೆಸುವಿನ ಎಲೆಯನ್ನು ಹಚ್ಚಿ,ಅಕ್ಕಿ ಹಿಟ್ಟಿ,ಮಸಾಲೆಯೊಂದಿಗೆ ಬೇಯಿಸುವುದು ಮಳೆಗಾಲದ ಜನಪ್ರಿಯ ತಿನಿಸು
ಕೊಟ್ಟೆ ಕಡುಬು ಸಸ್ಯಾಹಾರಿ ಅಕ್ಕಿ,ಉದ್ದು ಅಕ್ಕಿ ಮತ್ತು ಉದ್ದಿನ ಹಿಟ್ಟನ್ನು ಹಲಸಿನ ಎಲೆಯಲ್ಲಿಟ್ಟು ಬೇಯಿಸುವುದು
ನೀರು ದೋಸೆ ಸಸ್ಯಾಹಾರಿ ಅಕ್ಕಿ ಅಕ್ಕಿ ಹಿಟ್ಟನ್ನು ತೆಳುವಾಗಿ ಕಾವಲಿಗೆ ಹೊಯ್ದು ತಯಾರಿಸುವುದು, ಸುಲಭ ದೋಸೆಯ ಅಂಚು ರುಚಿಕರ
ಉಂಡ್ಲಕ ಸಸ್ಯಾಹಾರಿ ಅಕ್ಕಿ, ಹಲಸಿನ ಸೊಳೆ ಹಲಸಿನ ಸೊಳೆಯನ್ನು ಅಕ್ಕಿಯೊಂದಿಗೆ ರುಬ್ಬಿ ಎಣ್ಣೆಯಲ್ಲಿ ಕರೆಯುವುದು ಮಳೆಗಾಲದ ತಿನಿಸು
ಶ್ಯಾವಿಗೆ ಅಥವಾ ಒತ್ತು ಶ್ಯಾವಿಗೆ ಸಸ್ಯಾಹಾರಿ ಅಕ್ಕಿ ಅಕ್ಕಿ ಹಿಟ್ಟನ್ನು ಹಬೆಯಲ್ಲಿ ಬೇಯಿಸಿ ಉಂಡೆ ಕಟ್ಟಿ ಶ್ಯಾವಿಗೆ ಮಣೆಯಲ್ಲಿ ಒತ್ತುವುದು
ಗೋಳಿ ಬಜೆ ಸಸ್ಯಾಹಾರಿ ಮೈದಾ,ಮೊಸರು ಮೈದಾವನ್ನು ಮೊಸರಿನಲ್ಲಿ ಕಲೆಸಿ ಎಣ್ಣೆಯಲ್ಲಿ ಕರಿದ ತಿನಿಸು ಇದನ್ನು ಮಂಗಳೂರು ಬಜೆ ಎಂದೂ ಕರೆಯುತ್ತಾರೆ
ಹಲಸಿನ ಕಡುಬು ಸಸ್ಯಾಹಾರಿ ಅಕ್ಕಿ,ಹಲಸಿನ ಹಣ್ಣು ಅಕ್ಕಿ ಮತ್ತು ಹಲಸಿನ ಹಣ್ಣಿನ ಸೊಳೆಯನ್ನು ಕಡೆದು ಬಾಳೆ ಎಲೆ ಅಥವಾ ಸಾಗುವಾನಿ ಮರದ ಎಲೆಯಲ್ಲಿ ಕಟ್ಟಿ ಹಬೆಯಲ್ಲಿ ಬೇಯಿಸುವುದು
ತಂಬುಳಿ ಸಸ್ಯಾಹಾರಿ ತೆಂಗಿನಕಾಯಿ,ಮಜ್ಜಿಗೆ,ಬ್ರಾಹ್ಮೀ ಎಲೆ
ಕೆಸುವಿನ ಎಲೆ ಚಟ್ನಿ ಸಸ್ಯಾಹಾರಿ ಕೆಸುವಿನ ಎಲೆ,ತೆಂಗಿನ ಕಾಯಿ