ಉಪೇಂದ್ರ | |
---|---|
ಜನನ | ೧೯೬೮-೦೯-೧೮ |
ಇತರೆ ಹೆಸರು | ಸೂಪರ್ ಸ್ಟಾರ್, ರಿಯಲ್ ಸ್ಟಾರ್, ಬುದ್ದಿವಂತ, ಅಭಿಮಾನಿಗಳ ಚಕ್ರವರ್ತಿ, ದೇವರು, ಬಾಕ್ಸಾಫಿಸ್ ಬ್ರಹ್ಮ, ಸ್ಯಾಂಡಲ್ ವುಡ್ ಮಾಸ್ಟರ್ ಮೈಂಡ್, ದಿ ಐಲ್ ಸ್ಟಾರ್ |
ವೃತ್ತಿ(ಗಳು) | ನಿರ್ದೇಶಕ, ನಟ, ಗಾಯಕ, ಲೇಖಕ, ಪ್ರಜಾಕೀಯನ್ |
ಸಕ್ರಿಯ ವರ್ಷಗಳು | ೧೯೮೯-ಪ್ರಸಕ್ತ |
ಸಂಗಾತಿ | ಪ್ರಿಯಾಂಕ ಉಪೇಂದ್ರ |
ಮಕ್ಕಳು | ಆಯುಷ್ ಉಪೇಂದ್ರ, ಐಶ್ವರ್ಯಾ ಉಪೇಂದ್ರ |
ಪೋಷಕ(ರು) | ಮಂಜುನಾಥ್ ರಾವ್, ಅನಸೂಯಾ |
ಉಪೇಂದ್ರ (ಸೂಪರ್ ಸ್ಟಾರ್, ರಿಯಲ್ ಸ್ಟಾರ್, ಬುದ್ದಿವಂತ, ಅಭಿಮಾನಿಗಳ ಚಕ್ರವರ್ತಿ, ದೇವರು) ನಿರ್ದೇಶಕ ಹಾಗೂ ನಟ. ಇವರು ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಕುಂದಾಪುರದ ಸಮೀಪದಲ್ಲಿರುವ ಕೋಟೇಶ್ವರದಲ್ಲಿ ಜನಿಸಿದರು. ಇವರು ತಮ್ಮ ಮತ್ತು ಇತರರ ಚಿತ್ರಗಳಿಗೆ ಹಾಡುಗಳನ್ನು ರಚಿಸಿದ್ದಾರೆ. ೧೯೯೨ರಲ್ಲಿ ಬಿಡುಗಡೆಯಾದ ತರ್ಲೆ ನನ್ಮಗ ಚಿತ್ರದ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ. ಇದಕ್ಕೂ ಮು೦ಚೆ ಕಾಶೀನಾಥ್ ಜತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ನಾಯಕನಟರಾಗಿ ಇವರ ಮೊದಲ ಚಿತ್ರ ೧೯೯೮ರಲ್ಲಿ ಬಿಡುಗಡೆಯಾದ ಏ. ಇವರ ಬಾಳಸಂಗಾತಿ ಪ್ರಿಯಾಂಕ ಉಪೇಂದ್ರ. ಇವರಿಗೆ ಇಬ್ಬರು ಮಕ್ಕಳಿದ್ದಾರೆ.ಬಸವನಗುಡಿಯ ಎ.ಪಿ.ಎಸ್ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವಾಗ ನಿರ್ದೇಶನದ ಗೀಳನ್ನು ಅಂಟಿಸಿಕೊಂಡ ಉಪ್ಪಿ ಕನ್ನಡದ ಹೆಸರಾಂತ ನಿರ್ದೇಶಕ 'ಕಾಶಿನಾಥ' ಅವರ ಬಳಿ ಸಹಾಯ ನಿರ್ದೇಶಕರಾಗಿ ಕೆಲಸ ಮಾಡಿದರು.
1992ರಲ್ಲಿ ತೆರೆಗೆ ಬಂದ 'ತರ್ಲೆನನ್ಮಗ' ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದ ಉಪೇಂದ್ರ ಮುಂದೆ 1993ರಲ್ಲಿ 'ಶ್' ಎಂಬ ಹಾರರ್ ಚಿತ್ರ ನಿರ್ದೇಶಿಸಿದರು. 1995ರಲ್ಲಿ ಬಿಡುಗಡೆಯಾದ ಶಿವರಾಜಕುಮಾರ್ ಅಭಿನಯದ 'ಓಂ' ಚಿತ್ರ ಇಡೀ ಭಾರತ ಚಿತ್ರರಂಗದಲ್ಲಿಯೇ ಹೊಸ ಸಂಚಲನ ಸೃಷ್ಟಿಸಿತು. ಈ ಚಿತ್ರದಲ್ಲಿ ನಿಜವಾದ ರೌಡಿಗಳು ತಮ್ಮ ಪಾತ್ರಗಳಲ್ಲಿ ಸ್ವತಃ ತಾವೇ ಅಭಿನಯಿಸಿರುವುದು ವಿಶೇಷ. ನಂತರ 'ಆಪರೇಷನ್ ಅಂತ', 'ಸ್ವಸ್ತಿಕ್' ಚಿತ್ರಗಳನ್ನು ನಿರ್ದೇಶಿಸಿದರು.
1998ರಲ್ಲಿ ತೆರೆಗೆ ಬಂದ 'ಎ' ಚಿತ್ರವನ್ನು ನಿರ್ದೇಶಿಸಿ ಸ್ವತಃ ತಾವೇ ನಟಿಸಿ, ನಾಯಕನಾಗಿಯೂ ಕನ್ನಡ ಚಿತ್ರರಂಗದಲ್ಲಿ ಪರಿಚಿತರಾದರು. ಮುಂದೆ ತೆರೆಗೆ ಬಂದ 'ಉಪೇಂದ್ರ' ಚಿತ್ರವು ಹಲವಾರು ದಾಖಲೆಗಳನ್ನು ಬರೆಯಿತು. ಇವೆರಡು ಚಿತ್ರಗಳು ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗು ಚಿತ್ರರಂಗದಲ್ಲಿಯೂ ಶತದಿನ ಪೂರೈಸಿದವು.
ಇಲ್ಲಿಂದ ಮುಂದೆ 10 ವರ್ಷಗಳ ಕಾಲ ನಿರ್ದೇಶನವನ್ನು ಬದಿಗಿಟ್ಟ ಉಪ್ಪಿ, ಹಲವಾರು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದರು. ಮುಂದೆ ಇವರು 2010ರಲ್ಲಿ ನಿರ್ದೇಶಿಸಿದ 'ಸೂಪರ್' ಮತ್ತು 2015ರಲ್ಲಿ ನಿರ್ದೇಶಿಸಿದ 'ಉಪ್ಪಿ 2' ಚಿತ್ರಗಳು ಶತದಿನ ಪೂರೈಸಿದವು.
2003ರಲ್ಲಿ ಉಪೇಂದ್ರ ಖ್ಯಾತ ನಟಿ ಪ್ರಿಯಾಂಕ ಅವರನ್ನು ಕೈಹಿಡಿದರು. 2018 ಮಾರ್ಚ್ ನಲ್ಲಿ ಪ್ರಜಾಕೀಯ ಪಕ್ಷ ಸ್ಥಾಪಿಸಿ ರಾಜಕೀಯವಾಗಿಯೂ ಸಕ್ರಿಯವಾಗಿದ್ದಾರೆ.
ತಮ್ಮ ವಿಶಿಷ್ಟ ಆಲೋಚನಾ ಲಹರಿಗಳು, ವಿಭಿನ್ನ ನಟನಾ ಶೈಲಿಗಳಿಂದ ಭಿನ್ನವಾಗಿ ನಿಲ್ಲುವ ಇವರು ಕನ್ನಡ ಚಿತ್ರರಂಗ ಕಂಡ ಅದ್ಭುತ ಪ್ರತಿಭೆ. ಇವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ಕೂಡ ಆಗಿದ್ದಾರೆ.
ವರ್ಷ | ಚಿತ್ರ |
---|---|
೧೯೯೨ | ತರ್ಲೆನನ್ಮಗ |
೧೯೯೩ | ಶ್! |
೧೯೯೫ | ॐ (ಓಂ) |
೧೯೯೫ | ಆಪರೇಷನ್ ಅಂತ |
೧೯೯೮ | ಏ |
೧೯೯೮ | ಸ್ವಸ್ತಿಕ್ |
೧೯೯೯ | ಉಪೇಂದ್ರ |
೨೦೧೦ | ಸೂಪರ್ |
೨೦೧೫ | ಉಪ್ಪಿ ೨ |
ವರ್ಷ | ಚಿತ್ರ |
---|---|
೧೯೮೯ | ಅನಂತನ ಅವಾಂತರ |
೧೯೯೧ | ಅಜಗಜಾಂತರ |
೧೯೯೩ | ಶ್! |
೧೯೯೫ | ಆಪರೇಷನ್ ಅಂತ |
೧೯೯೮ | ಏ |
೧೯೯೯ | ಉಪೇಂದ್ರ |
೨೦೦೦ | ಪ್ರೀತ್ಸೆ |
೨೦೦೨ | ಹೆಚ್ ೨ ಓ, ನಾಗರಹಾವು , ಸೂಪರ್ ಸ್ಟಾರ್ , ನಾನು ನಾನೇ , ಹಾಲೀವುಡ್ |
೨೦೦೩ | ಕುಟುಂಬ ,ರಕ್ತ ಕಣ್ಣೀರು ,ಗೋಕರ್ಣ |
೨೦೦೪ | ಓಂಕಾರ |
೨೦೦೫ | ಗೌರಮ್ಮ , ಆಟೋ ಶಂಕರ , ನ್ಯೂಸ್ |
೨೦೦೬ | ಉಪ್ಪಿ ದಾದಾ ಎಂ ಬಿ ಬಿ ಎಸ್ , ತಂದೆಗೆ ತಕ್ಕ ಮಗ, ಐಶ್ವರ್ಯ |
೨೦೦೭ | ಮಸ್ತಿ , ಅನಾಥರು , ಲವ ಖುಶಾ |
೨೦೦೮ | ಬುದ್ಧಿವಂತ, ಮಸ್ತ್ ಮಜಾ ಮಾಡಿ |
೨೦೦೯ | ದುಬೈ ಬಾಬು , ರಜನಿ |
೨೦೧೦ | ಸೂಪರ್ |
೨೦೧೧ | ಶ್ರೀಮತಿ |
೨೦೧೨ | ಆರಕ್ಷಕ , ಕಠಾರಿ ವೀರ ಸುರಸುಂದರಾಂಗಿ, ಗಾಡ್ ಫಾಧರ್ , ಕಲ್ಪನ |
೨೦೧೩ | ಟೋಪಿವಾಲ |
೨೦೧೪ | ಬ್ರಹ್ಮ, ಸೂಪರ್ ರಂಗ |
೨೦೧೫ | s/o ಸತ್ಯಮೂರ್ತಿ, ಉಪ್ಪಿ-೨ |
೨೦೧೬ | ಕಲ್ಪನ-೨,ಮುಕುಂದ ಮುರಾರಿ |
೨೦೧೭ | ಉಪೇಂದ್ರ ಮತ್ತೆ ಬಾ |