ಉರ್ಜಿತ್ ಪಟೇಲ್ | |
---|---|
![]() | |
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ ಅಂಡ್ ಪಾಲಿಸಿಯ ಅಧ್ಯಕ್ಷರು
| |
ಹಾಲಿ | |
ಅಧಿಕಾರ ಸ್ವೀಕಾರ ೧೯ ಜೂನ್ ೨೦೨೦ | |
೨೪ನೇ ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್
| |
ಅಧಿಕಾರ ಅವಧಿ ೪ ಸೆಪ್ಟೆಂಬರ್ ೨೦೧೬ – ೧೦ ಡಿಸೆಂಬರ್೨೦೧೮ | |
ಪೂರ್ವಾಧಿಕಾರಿ | ರಘುರಾಮ್ ರಾಜನ್ |
ಉತ್ತರಾಧಿಕಾರಿ | ಶಕ್ತಿಕಾಂತ ದಾಸ್ |
ಭಾರತೀಯ ರಿಸರ್ವ್ ಬ್ಯಾಂಕ್‍ನ ಉಪ ಗವರ್ನರ್
| |
ಅಧಿಕಾರ ಅವಧಿ ೧೦ ಜನವರಿ ೨೦೧೩ - ೪ ಸೆಪ್ಟೆಂಬರ್ ೨೦೧೬ | |
ರಾಜ್ಯಪಾಲ | ದುವ್ವೂರಿ ಸುಬ್ಬರಾವ್ ರಘುರಾಮ್ ರಾಜನ್ |
ಉತ್ತರಾಧಿಕಾರಿ | ವೈರಲ್ ಆಚಾರ್ಯ |
ವೈಯಕ್ತಿಕ ಮಾಹಿತಿ | |
ಜನನ | ಉರ್ಜಿತ್ ರವೀಂದ್ರ ಪಟೇಲ್ ೨೮ ಅಕ್ಟೋಬರ್ ೧೯೬೩ ನೈರೋಬಿ, ಬ್ರಿಟಿಷ್ ಕೀನ್ಯಾ |
ರಾಷ್ಟ್ರೀಯತೆ | ಕೀನ್ಯಾ
ಭಾರತೀಯ |
ಉದ್ಯೋಗ | ಅರ್ಥಶಾಸ್ತ್ರಜ್ಞ |
ಸಹಿ | ![]() |
ಉರ್ಜಿತ್ ಪಟೇಲ್ (ಜನನ ೨೮ ಅಕ್ಟೋಬರ್ ೧೯೬೩) ಕೀನ್ಯಾ ಮೂಲದ ಭಾರತೀಯ ಅರ್ಥಶಾಸ್ತ್ರಜ್ಞರಾಗಿದ್ದರು. ಅವರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ೨೪ನೇ ಗವರ್ನರ್ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಡೆಪ್ಯೂಟಿ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದಾರೆ. ಇವರು ೧೦ ಡಿಸೆಂಬರ್ ೨೦೧೮ ರಂದು ತಮ್ಮ ಹುದ್ದೆಯಿಂದ ರಾಜೀನಾಮೆ ನೀಡಿದರು. ಇವರು ರಾಜೀನಾಮೆಗೆ ಪ್ರೇರಕ ಅಂಶವಾಗಿ ವೈಯಕ್ತಿಕ ಕಾರಣಗಳನ್ನು ತಿಳಿಸಿದ ಮೊದಲ ಆರ್‌ಬಿಐ ಗವರ್ನರ್ ಆಗಿದ್ದರು.
ಇವರು ಉರ್ಜಿತ್ ಪ್ರಸ್ತುತ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ ಅಂಡ್ ಪಾಲಿಸಿಯ ಅಧ್ಯಕ್ಷರಾಗಿ, ಬ್ರಿಟಾನಿಯಾ ಇಂಡಸ್ಟ್ರೀಸ್‌ನ ಹೆಚ್ಚುವರಿ ನಿರ್ದೇಶಕರಾಗಿ ಮತ್ತು ಜಾನ್ ಕಾಕೆರಿಲ್ ಇಂಡಿಯಾದ ಸ್ವತಂತ್ರ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಉರ್ಜಿತ್ ಪಟೇಲ್ ನೈರೋಬಿಯಲ್ಲಿ ೨೮ ಅಕ್ಟೋಬರ್ ೧೯೬೩ ರಂದು ಮಂಜುಳಾ ಮತ್ತು ರವೀಂದ್ರ ಪಟೇಲ್ ದಂಪತಿಗೆ ಜನಿಸಿದರು.[೧][೨] ಅವರ ತಂದೆ ನೈರೋಬಿಯಲ್ಲಿ ರೆಕ್ಸೋ ಪ್ರಾಡಕ್ಟ್ಸ್ ಲಿಮಿಟೆಡ್ ಎಂಬ ರಾಸಾಯನಿಕ ಕಾರ್ಖಾನೆಯನ್ನು ನಡೆಸುತ್ತಿದ್ದರು.
ಇವರು ನೈರೋಬಿಯದ ಜಮ್ಹುರಿ ಹೈಸ್ಕೂಲ್‌ನಲ್ಲಿ ಅಧ್ಯಯನ ಮಾಡಿದರು ಮತ್ತು ಅದಕ್ಕೂ ಮೊದಲು ಗುಜರಾತಿ ಸಮುದಾಯದ ವೀಸಾ ಓಶ್ವಾಲ್ ಪ್ರಾಥಮಿಕ ಶಾಲೆಯಲ್ಲಿ ಅಧ್ಯಯನ ಮಾಡಿದರು. ಅವರು ೧೯೮೪ ರಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿಗಾಗಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಅಧ್ಯಯನ ಮಾಡಿದರು. ೧೯೮೬ ರಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಪದವಿ ಪಡೆದರು. ೧೯೯೦ ರಲ್ಲಿ ಯೇಲ್ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಎಂ.ಫಿಲ್ ಪದವಿಯನ್ನು ಪಡೆದರು.
ಪಿಎಚ್‌ಡಿ ಪಡೆದ ನಂತರ, ಪಟೇಲ್ ೧೯೯೦ ರಲ್ಲಿ ಇಂಟರ್ನ್ಯಾಷನಲ್ ಮಾನಿಟರಿ ಫಂಡ್‍ಗೆ ಸೇರಿದರು, ಅಲ್ಲಿ ಅವರು೧೯೯೫ ರವರೆಗೆ ಯುಎಸ್, ಭಾರತ, ಬಹಾಮಾಸ್ ಮತ್ತು ಮ್ಯಾನ್ಮಾರ್ ಡೆಸ್ಕ್‌ಗಳಲ್ಲಿ ಕೆಲಸ ಮಾಡಿದರು. ನಂತರ ಅವರು ಐಎಮ್‍ಎಫ್ ನಿಂದ ಭಾರತೀಯ ರಿಸರ್ವ್ ಬ್ಯಾಂಕ್‌ನ ನಿಯೋಜನೆಗೆ ಹೋದರು. ಅಲ್ಲಿ ಅವರು ಸಾಲ ಮಾರುಕಟ್ಟೆ, ಬ್ಯಾಂಕಿಂಗ್ ವಲಯದ ಸುಧಾರಣೆಗಳು, ಪಿಂಚಣಿ ನಿಧಿ ಸುಧಾರಣೆಗಳು ಮತ್ತು ನೈಜ ವಿನಿಮಯ ದರದ ಗುರಿಯ ಅಭಿವೃದ್ಧಿಯಲ್ಲಿ ಸಲಹಾ ಪಾತ್ರವನ್ನು ವಹಿಸಿದರು.
೨೦೦೦ ಮತ್ತು ೨೦೦೪ ರ ನಡುವೆ, ಪಟೇಲ್ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಟ್ಟದಲ್ಲಿ ಹಲವಾರು ಉನ್ನತ ಸಮಿತಿಗಳೊಂದಿಗೆ ಕೆಲಸ ಮಾಡಿದರು:
ಕೀನ್ಯಾದಲ್ಲಿ ಗುಜರಾತಿ ಕುಟುಂಬದಲ್ಲಿ ಜನಿಸಿದ ಪಟೇಲ್, ಆರ್.ಬಿ.ಐ ಗೆ ಸೇರುವ ಮೊದಲು ೨೦೧೩ ರಲ್ಲಿ ಸ್ವಾಭಾವಿಕ ಭಾರತೀಯ ನಾಗರಿಕರಾದರು.[೩][೪][೫] ೧೧ ಜನವರಿ ೨೦೧೩ ರಂದು, ಪಟೇಲ್ ಅವರನ್ನು ಮೂರು ವರ್ಷಗಳ ಅವಧಿಗೆ ಆರ್.ಬಿ.ಐನ ಉಪ ಗವರ್ನರ್ ಆಗಿ ನೇಮಿಸಲಾಯಿತು.
೨೦ ಆಗಸ್ಟ್ ೨೦೧೬ ರಂದು, ಅವರನ್ನು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ನೇಮಿಸಲಾಯಿತು. ಅವರ ಅಧಿಕಾರಾವಧಿಯಲ್ಲಿ, ಭಾರತ ಸರ್ಕಾರವು ೯ ನವೆಂಬರ್ ೨೦೧೬ ರಿಂದ ಭ್ರಷ್ಟಾಚಾರ, ಕಪ್ಪುಹಣ, ನಕಲಿ ಕರೆನ್ಸಿ ಮತ್ತು ಭಯೋತ್ಪಾದನೆಯನ್ನು ತಡೆಗಟ್ಟುವ ಉದ್ದೇಶದಿಂದ ಮಹಾತ್ಮಾ ಗಾಂಧಿ ಸರಣಿಯ ₹೫೦೦ ಮತ್ತು ₹೧೦೦೦ ನೋಟುಗಳನ್ನು ರದ್ದುಗೊಳಿಸಿತು.[೬]