ಉಲೂಚಿ ಅಥವಾ ಉಲೂಪಿ ಮಹಾಭಾರತ ಕಾವ್ಯದಲ್ಲಿ ಕೌರವರ ಮಗಳು ಹಾಗು ಅರ್ಜುನನ ಎರಡನೆಯ ಹೆಂಡತಿ. ವಿಷ್ಣು ಪುರಾಣದಲ್ಲಿ ಮತ್ತು ಭಾಗವತ ಪುರಾಣದಲ್ಲಿಯೂ ಇವರ ಬಗ್ಗೆ ಹೇಳಲಾಗಿದೆ. ಇವರು ಮಣಿಪುರದ ನಾಗಕನ್ಯೆ . ಅರ್ಜುನನು ತೀರ್ಥಯಾತ್ರೆಗೆ ಹೋದಾಗ ಉಲೂಪಿ , ಚಿತ್ರಾಂಗದೆ ಮತ್ತು ಸುಭದ್ರೆಯರನ್ನು ಮದುವೆಯಾಗುತ್ತಾನೆ. ಅವನು ಮಣಿಪುರಕ್ಕೆ ಹೋದಾಗ ಉಲೂಪಿಯು ಅವನನ್ನು ಎಚ್ಚರತಪ್ಪಿಸಿ ಅಪಹರಿಸಿಕೊಂಡು ಪಾತಾಳಲೋಕಕ್ಕೆ ತೆಗೆದುಕೊಂಡು ಹೋಗಿ ತನ್ನನ್ನು ಮದುವೆಯಾಗುವ ಹಾಗೆ ಮಾಡುತ್ತಾಳೆ. ಅವಳಿಗೆ ಒಬ್ಬ ಮಗನೂ ಹುಟ್ಟುತ್ತಾನೆ. ಅವನ ಹೆಸರು ಇರಾವನ. ನಂತರ ಅರ್ಜುನನನ್ನು ಚಿತ್ರಾಂಗದೆಗೆ ಒಪ್ಪಿಸುತ್ತಾಳೆ. ಅವಳು ಅರ್ಜುನ ಮತ್ತು ಚಿತ್ರಾಂಗದೆಯರ ಮಗ ಬಭ್ರುವಾಹನನನ್ನು ಬೆಳೆಸುವಲ್ಲಿ ಪ್ರಮುಖಪಾತ್ರವನ್ನು ವಹಿಸುತ್ತಾಳೆ. ಬಭ್ರುವಾಹನನು ಅರ್ಜುನನನ್ನು ಯುದ್ಧದಲ್ಲಿ ಕೊಂದಾಗ ಅರ್ಜುನನನ್ನು ಮತ್ತೆ ಬದುಕಿಸುತ್ತಾಳೆ.