ಉಸ್ಮಾನಿಯಾ ವಿಶ್ವವಿದ್ಯಾಲಯ (ತೆಲುಗು- ఉస్మానియా విశ్వవిద్యాలయము, Osmania University) ಭಾರತದ ಸಾರ್ವಜನಿಕರಾಜ್ಯ ವಿಶ್ವವಿದ್ಯಾಲಯ,ಇದು ತೆಲಂಗಾಣ ರಾಜ್ಯದ ಹೈದ್ರಾಬಾದ್ನಲ್ಲಿದೆ.ಇದು ದಕ್ಷಿಣ ಭಾರತದ ಮೂರನೇ ಅತಿ ಹಳೆಯ ಮತ್ತು ಮುಂಚಿನ ಹೈದರಾಬಾದ್ ರಾಜ್ಯದ ಮೊದಲ ವಿಶ್ವವಿದ್ಯಾಲಯವಾಗಿದೆ.ಇದು ಬೋಧನಾ ಮಾಧ್ಯಮವಾಗಿ ಉರ್ದು ಭೊದಿಸಿದ ಪ್ರಥಮ ಭಾರತೀಯ ವಿಶ್ವವಿದ್ಯಾಲಯ,೧೯೪೮ರಿಂದ ಉರ್ದು ಮಾಧ್ಯಮದಿಂದ,ಇಂಗ್ಲಿಷ್ ಮಾಧ್ಯಮದಲ್ಲಿ ಭೋದನೆ ಪ್ರಾರಂಭಿಸಿತು.[೩] 2012 ರಲ್ಲಿ ಈ ವಿಶ್ವವಿದ್ಯಾಲಯವು ಮಾನವಿಕ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳು ದೇಶದ ಪ್ರಧಾನ ವಿಶ್ವವಿದ್ಯಾಲಯಗಳ ಪೈಕಿ ಆರನೇಯ ಸ್ಥಾನ ಪಡೆಯಿತು.ಉಸ್ಮಾನಿಯಾ ವಿಶ್ವವಿದ್ಯಾಲಯಕ್ಕೆ ಅದರ ಸಂಸ್ಥಾಪರಾದ ನವಾಬ್ ಮೀರ್ ಉಸ್ಮಾನ್ ಅಲಿ ಖಾನ್ ಅವರ ಹೆಸರಿಡಲಾಗಿದೆ.[೪][೫][೬]
1884ರಲ್ಲಿ ಹೈದರಾಬಾದ್ ರಾಜ್ಯದಲ್ಲಿ ಒಂದು ವಿಶ್ವವಿದ್ಯಾಲಯ ಸ್ಥಾಪಿಸಲು ಯೋಜನೆ ಆರಂಭಿಸಲಾಯಿತು.ಬ್ರಿಟಿಷ್ ಶಿಕ್ಷಣ ತಜ್ಞ,Wilfred Sewen Blunt[೭] ಯೋಜನೆಯ ಪ್ರಸ್ತಾಪವನ್ನು ತಯಾರಿಸಿ,ಹೈದರಾಬಾದ್ ನಿಜಾಮರಿಗೆ ಸಲ್ಲಿಸಿದರು.ಆಗಸ್ಟ್ 1917ರಲ್ಲಿ ಉಸ್ಮಾನಿಯಾ ವಿಶ್ವವಿದ್ಯಾಲಯದ ಸ್ಥಾಪನೆಗೆ ಅಧಿಕೃತ ಆಜ್ಞೆ ಬಿಡುಗಡೆ ಮಾಡಲಾಯಿತು.೧೯೧೮ರಲ್ಲಿ ವಿಶ್ವವಿದ್ಯಾಲಯ ಉದ್ಘಾಟನೆಯಾಯಿತು,ವಿಶ್ವವಿದ್ಯಾಲಯವು 28 ಆಗಸ್ಟ್ 1919ರಿಂದ 225 ವಿದ್ಯಾರ್ಥಿಗಳ ಆರಂಭಿಕ ದಾಖಲಾತಿ ಮಾಡಿಕೊಳ್ಳುವದರ ಜೊತೆಗೆ ಕಾರ್ಯರಂಭ ಮಾಡಿತು .ಸ್ಥಾಪನೆಯ ಮೊದಲ ದಶಕದಲ್ಲಿ ಔಷಧ ಮತ್ತು ಎಂಜಿನಿಯರಿಂಗ್ ಬೋಧನೆ ಪ್ರಾರಂಭಿಸಲಾಯಿತು.1926ರಲ್ಲಿ ಮಹಿಳೆಯರಿಗೆ ಯೂನಿವರ್ಸಿಟಿ ಕಾಲೇಜ್ ಮತ್ತು 1936ರಲ್ಲಿ ಕಲಾ ಕಾಲೇಜು ಆರಂಭಿಸಲಾಯಿತು.ಈ ವಿಶ್ವವಿದ್ಯಾಲಯವು ಸ್ಥಳೀಯ ಮತ್ತು ಉರ್ದು ಭಾಷೆಗಳಲ್ಲಿ ಶಿಕ್ಷಣ ನೀಡಿದ ಭಾರತ ಉಪಖಂಡದ ಮೊದಲ ವಿಶ್ವವಿದ್ಯಾಲಯ ಎನಿಸಿತು.ಅನುವಾದ ಬ್ಯೂರೋ ಮತ್ತು ಪ್ರಕಟಣೆ ವಿಭಾಗ ಪ್ರಾರಂಭಿಸಿ, ವಿದೇಶಿ ಮತ್ತು ಪ್ರಾದೇಶಿಕ ಭಾಷೆಗಳ ಸಾಹಿತ್ಯ,ವಿಜ್ಞಾನ ಮತ್ತು ಕಲಾಕೃತಿಗಳ ಪುಸ್ತಕಗಳನ್ನು ಸಂಗ್ರಹಿಸಿ ಅವನ್ನು ಉರ್ದು ಭಾಷೆಗೆ ಅನುವಾದಿಸಲಾಯಿತು.[೮]
ವಿಶ್ವವಿದ್ಯಾನಿಲಯಕ್ಕೆ ಒಳಪಡುವ ಕಾಲೇಜುಗಳು ಹೈದರಾಬಾದ್ ಜಿಲ್ಲೆಯಲ್ಲಿ,ವಿವಿಧ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣ ನೀಡುತ್ತಿವೆ.ಈ ವಿಶ್ವವಿದ್ಯಾಲಯಕ್ಕೆ ಒಳಪಟ್ಟ ೪೦೦ ಕಾಲೇಜುಗಳು ಉಸ್ಮಾನಿಯಾ ವಿಶ್ವವಿದ್ಯಾಲಯದ ಸಂಯೋಗದೊಂದಿಗೆ ಕಾರ್ಯನಿರ್ವಹಿಸುತ್ತವೆ.[೧೦]
ವಿಶ್ವವಿದ್ಯಾಲಯದ ಗ್ರಂಥಾಲಯ 1918 ರಲ್ಲಿ ಸ್ಥಾಪಿಸಲಾಯಿತು.ಈ ಲೈಬ್ರರಿ ಸುಮಾರು 500,000 ಪುಸ್ತಕಗಳು ಹೊಂದಿದೆ.6000ಕ್ಕೂ ಹೆಚ್ಚು ಹಸ್ತಪ್ರತಿಗಳು,ಇದರಲ್ಲಿ ಅಪರೂಪದ ಪಾಮ್ ಲೀವ್ ಹಸ್ತಪ್ರತಿಗಳು ಸೇರಿವೆ.ಇದು ಸುಮಾರು 400 ನಿಯತಕಾಲಿಕಗಳು ಮತ್ತು ಪಾಂಡಿತ್ಯಪೂರ್ಣ ಜರ್ನಲ್ಸ್ಗಳನ್ನೂ ತರಿಸಿಕೊಳ್ಳುತ್ತದೆ.ಸ್ಪರ್ಧಾತ್ಮಕ ಪರೀಕ್ಷೆಗಳ ಉಲ್ಲೇಖ ವಿಭಾಗವಿದ್ದು ಇದು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳೀಗೆ ತಯಾರಿ ನಡೆಸುವ ಅಭ್ಯರ್ಥಿಗಳ ಅಗತ್ಯಗಳನ್ನು ಪೂರೈಸುವುದಕ್ಕಾಗಿ ಗ್ರಂಥಗಳನ್ನೂ ಹೊಂದಿದೆ.[೧೨]
ಉಸ್ಮಾನಿಯಾ ವಿಶ್ವವಿದ್ಯಾಲಯ ಸಂಶೋಧನೆ ಚಟುವಟಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವ ದೇಶದ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿದೆ.2009ರಲ್ಲಿ,ವಿಶ್ವವಿದ್ಯಾಲಯ ಸಂಶೋಧನೆ ಚಟುವಟಿಕೆ ಗಟ್ಟಿಗೊಳಿಸಲು,ಯುಜಿಸಿ XI ಪ್ಲಾನ್ ಯೋಜನೆಯಡಿಯಲ್ಲಿ ಆರ್ಥಿಕ ಬೆಂಬಲ ಪಡೆದಿದೆ.ಇದು ಸೆಂಟ್ರಲ್ ಇನ್ಸ್ಟ್ರುಮೆಂಟೇಷನ್ ಲ್ಯಾಬ್,ಮಾಹಿತಿ ತಂತ್ರಜ್ಞಾನ ಮತ್ತು ಸಂವಹನಲ್ಯಾಬ್ ಸೌಲಭ್ಯಗಳನ್ನು ಹೊಂದಿದೆ.[೧೩]