ಮದ್ರಾಸ್ ಕದಿರವೇಲು ಸರೋಜ | |
---|---|
ಜನನ | ಮದ್ರಾಸ್ ಕದಿರವೇಲು ಸರೋಜ ೭ ಎಪ್ರಿಲ್ ೧೯೩೧ |
ಮರಣ | 13 June 2022 | (aged 91)
ಇತರೆ ಹೆಸರು | ಪುಲಿಯೂರು ಸರೋಜ |
ವೃತ್ತಿ | ನೃತ್ಯಗಾರ್ತಿ |
ಸಂಗಾತಿ | ಮೋಹನ ಕೋಕರ್ |
ಮಕ್ಕಳು | ೪ |
ಪ್ರಶಸ್ತಿಗಳು | ಪದ್ಮಶ್ರೀ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಕಲೈಮಾಮಣಿ ಪ್ರಶಸ್ತಿ ಜೀವಮಾನದ ಸಾಧನೆ ಪ್ರಶಸ್ತಿ ಇ. ಕೃಷ್ಣ ಅಯ್ಯರ್ ಪ್ರಶಸ್ತಿ ನಾಟ್ಯ ಕಲಾನಿಧಿ ಠಾಗೋರ್ ಅಕಾಡೆಮಿ ರತ್ನ |
ಪುಲಿಯೂರ್ ಸರೋಜಾ ಎಂದು ಕರೆಯಲ್ಪಡುವ ಮದ್ರಾಸ್ ಕದಿರವೇಲು ಸರೋಜಾ ಅವರು ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿಯಾಗಿದ್ದು, ಭರತನಾಟ್ಯದ ಶಾಸ್ತ್ರೀಯ ನೃತ್ಯ ಪ್ರಕಾರದಲ್ಲಿ ಪರಿಣತಿ ಹೊಂದಿದ ನೃತ್ಯ ಶಿಕ್ಷಕಿಯಾಗಿದ್ದಾರೆ. ಕಲೆ ಮತ್ತು ಸಂಸ್ಕೃತಿ ಕ್ಷೇತ್ರಕ್ಕೆ ಅವರ ಸೇವೆಗಳಿಗಾಗಿ ಭಾರತ ಸರ್ಕಾರವು ೨೦೧೧ ರಲ್ಲಿ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತು. [೧]
ಎಂ.ಕೆ. ಸರೋಜಾ ಅವರು ೭ ಏಪ್ರಿಲ್ ೧೯೩೧ ರಂದು ಭಾರತದ ತಮಿಳುನಾಡಿನ ಚೆನ್ನೈನಲ್ಲಿ (ಹಿಂದಿನ ಮದ್ರಾಸ್) ಜನಿಸಿದರು. ಅವರು ಐದು ವರ್ಷ ವಯಸ್ಸಿನವರಾಗಿದ್ದಾಗ, ಅವರ ಸಹೋದರಿಯೊಂದಿಗೆ ಪ್ರಸಿದ್ಧ ಶಾಸ್ತ್ರೀಯ ನೃತ್ಯ ಶಿಕ್ಷಕರಾದ ಮುತ್ತುಕುಮಾರನ್ ಪಿಳ್ಳೈ ಅವರಿಂದ ಶಾಸ್ತ್ರೀಯ ನೃತ್ಯವನ್ನು ಕಲಿಯಲು ಪ್ರಾರಂಭಿಸಿದರು. ರುಕ್ಮಿಣಿ ದೇವಿ ಅರುಂಡೇಲ್ ಅವರ ಕಲಾಕ್ಷೇತ್ರದ ಮೊದಲ ನೃತ್ಯ ಶಿಕ್ಷಕಿಯಾಗಿ, ಪ್ರಸಿದ್ಧ ಶಾಸ್ತ್ರೀಯ ನೃತ್ಯಗಾರರಾದ ಮೃಣಾಲಿನಿ ಸಾರಾಭಾಯಿ ಮತ್ತು ಕಮಲಾ ಲಕ್ಷ್ಮಣ್ ರಂತಹ ಅನೇಕರಿಗೆ ಕಲಿಸಿದರು. ಅವರ ಗುರುಗಳು ಬೆಂಗಳೂರಿನಲ್ಲಿರುವ ಬೆಂಗಳೂರು ಸ್ಟುಡಿಯೋಗೆ ಸೇರಲು ಬೆಂಗಳೂರಿಗೆ ಹೋದಾಗ ಸರೋಜಾ ಅವರೂ ಅವರ ಗುರುಗಳನ್ನು ಹಿಂಬಾಲಿಸಿದರು. [೨]
ಸರೋಜಾ ೧೯೪೦ ರಲ್ಲಿ ನೃತ್ಯಕ್ಕೆ ಪಾದಾರ್ಪಣೆ ಮಾಡಿದರು ಮತ್ತು ಶೀಘ್ರದಲ್ಲೇ ಪ್ರಸಿದ್ಧ ನೃತ್ಯಗಾರ್ತಿಯಾದರು. ೧೯೪೬ ರಲ್ಲಿ, ಅವರು ಚೆನ್ನೈನಲ್ಲಿ ಜೆಮಿನಿ ಸ್ಟುಡಿಯೋಸ್ ಅವರಿಗೆ ಚಲನಚಿತ್ರ ಒಪ್ಪಂದವನ್ನು ನೀಡಿತು, ಅದನ್ನು ಅವರು ನಿರಾಕರಿಸಿದರು. ಮೂರು ವರ್ಷಗಳ ನಂತರ, ಡಿಸೆಂಬರ್ ೧೯೪೯ ರಲ್ಲಿ, ಅವರು ಮೋಹನ್ ಖೋಕರ್ ರವರನ್ನು ವಿವಾಹವಾದರು. ಅವರು ಹೆಸರಾಂತ ಕಲಾ ಇತಿಹಾಸಕಾರ, ನೃತ್ಯ ವಿದ್ವಾಂಸ [೩] [೪] ಮತ್ತು ಕಲಾಕ್ಷೇತ್ರದಲ್ಲಿ ಸರೋಜಾ ಅವರ ಸಹ-ವಿದ್ಯಾರ್ಥಿಯಾಗಿದ್ದರು. ತಮ್ಮ ಪತಿ ಬರೋಡಾದ ಮಹಾರಾಜ ಸಯಾಜಿರಾವ್ ವಿಶ್ವವಿದ್ಯಾಲಯದ ನೃತ್ಯ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡಾಗ ಅವರೂ ಪತಿಯನ್ನು ಅನುಸರಿಸಿದರು.[೫] ಬರೋಡಾದಲ್ಲಿ, ಸರೋಜಾ ಕಥಕ್ ಗುರುಗಳಾದ ಸುಂದರ್‌ಲಾಲ್ ಮತ್ತು ಕುಂದನ್‌ಲಾಲ್ ಗಂಗನಿ ಅವರಿಂದ ಕಥಕ್ ಕಲಿತರು.
೧೯೬೧ ರಲ್ಲಿ, ಮೋಹನ್ ಖೋಕರ್ ಅವರು ಸಂಗೀತ ನಾಟಕ ಅಕಾಡೆಮಿಯಲ್ಲಿ ನೃತ್ಯಕ್ಕಾಗಿ ವಿಶೇಷ ಅಧಿಕಾರಿಯಾಗಿ ನೇಮಕಗೊಂಡರು ಮತ್ತು ದಂಪತಿಗಳು ನವದೆಹಲಿಗೆ ತೆರಳಿದರು. ಅಲ್ಲಿ, ಅವರು ಬೋಧನೆಯನ್ನು ಪುನರಾರಂಭಿಸಿದರು ಮತ್ತು ನೃತ್ಯ ಪ್ರದರ್ಶನಗಳನ್ನು ಮುಂದುವರೆಸಿದರು ಮತ್ತು ಭೇಟಿ ನೀಡಿದ ಸೌದಿ ಅರೇಬಿಯಾದ ಆಡಳಿತಗಾರರ ಮುಂದೆ ರಾಷ್ಟ್ರಪತಿ ಭವನದಲ್ಲಿ ಪ್ರದರ್ಶನ ನೀಡುವ ಅವಕಾಶವನ್ನು ಪಡೆದರು. ೧೯೭೦ ರಿಂದ, ಅವರು ಪ್ಯಾರಿಸ್‌ನಲ್ಲಿರುವ ಸೆಂಟರ್ ಮಂಟಪಕ್ಕೆ ಭೇಟಿ ನೀಡಲು ಪ್ರಾರಂಭಿಸಿದರು, ಅಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವುದನ್ನು ಅವರು ೨೦೦೦ ರವರೆಗೆ ಮುಂದುವರೆಸಿದರು. [೫]
ಎಂ.ಕೆ. ಸರೋಜಾ ಸಕ್ರಿಯ ೪೦ ವರ್ಷಗಳ ಕಾಲ ಸಕ್ರಿಯರಾಗಿದ್ದರು. ೨೦೦೦ ರಲ್ಲಿ, ಅವರ ಪತಿಯ ಮರಣದ ನಂತರ ವೃತ್ತಿಪರ ನೃತ್ಯದಿಂದ ನಿವೃತ್ತರಾದರು. [೫] ಅವರಿಗೆ ನಾಲ್ಕು ಗಂಡು ಮಕ್ಕಳಿದ್ದಾರೆ, ಅವರಲ್ಲಿ ಮೂರನೇ ಮಗ ಆಶಿಶ್ ಮೋಹನ್ ಖೋಕರ್ ಪ್ರಸಿದ್ಧ ಕಲಾ ಇತಿಹಾಸಕಾರ ಹಾಗೂ, ಲೇಖಕ ಮತ್ತು ನೃತ್ಯ ವಿಮರ್ಶಕ. [೬] ಪ್ರಸ್ತುತ ಅವರು ಚೆನ್ನೈನಲ್ಲಿ ವಾಸಿಸುತ್ತಿದ್ದಾರೆ. [೫]
ಎಂಕೆ ಸರೋಜಾ ಅವರ ಪರಂಪರೆಯು ಅವರು ಭರತನಾಟ್ಯಕ್ಕೆ ತಂದ ಪರಿಶುದ್ಧತೆಯಿಂದ ಉಳಿದಿದೆ. ಅವರು ನರ್ಗೀಸ್ ಕಟ್ಪಿಟಿಯಾ, ಪ್ರತಿಭಾ ಪಂಡಿತ್, ಸುಧಾ ಪಟೇಲ್, ಲಕ್ಷ್ಮಿ ವಲ್ರಾಣಿ, ಇಂದ್ರಾಣಿ ರೆಹಮಾನ್, ಯಾಮಿನಿ ಕೃಷ್ಣಮೂರ್ತಿ, ರೋಮಾನಾ ಆಗ್ನೆಲ್, [೭] ಅವರಂತಹ ಹಲವಾರು ವಿದ್ಯಾರ್ಥಿಗಳ ಮೂಲಕ ಖ್ಯಾತಿಯನ್ನು ಪಡೆದಿದ್ದಾರೆ. ಶೋಬನಾ ರಾಧಾಕೃಷ್ಣ, ರಸಿಕಾ ಖನ್ನಾ, ಅರುಪ್ ಘೋಷ್, ಲೂಸಿಯಾ ಮಲೋನಿ, ಮಿಲೆನಾ ಸಾಲ್ವಿನಿ ಮತ್ತು ವಿದ್ಯಾ ಇವರಲ್ಲಿ ಕೊನೆಯ ಇಬ್ಬರು ನರ್ತಕರು ಪ್ಯಾರಿಸ್‌ನ ಸೆಂಟರ್ ಮಂಟಪದಲ್ಲಿ ಇನ್ನೂ ಕಲಿಸುತ್ತಿದ್ದಾರೆ.
ಎಂ.ಕೆ.ಸರೋಜಾ ಅವರನ್ನು ಆಧರಿಸಿ ಎರಡು ಸಾಕ್ಷ್ಯಚಿತ್ರಗಳನ್ನು ಮಾಡಲಾಗಿದೆ , ಒಂದು ರೋಮ್ ವಿಶ್ವವಿದ್ಯಾನಿಲಯದ ರಂಗಭೂಮಿ ವಿಭಾಗದಿಂದ ಮತ್ತು ಇನ್ನೊಂದು ಕ್ಲೌಡ್ ಲಾಮೊರೈಸ್ ಅವರಿಂದ.[೫]