ಎಂ. ಜಿ. ಕೆ. ಮೆನನ್ | |
---|---|
ಜನನ | Mambillikalathil Govind Kumar Menon ೨೮ ಆಗಸ್ಟ್ ೧೯೨೮ ಮಂಗಳೂರು, ಕರ್ನಾಟಕ, ಭಾರತ |
ಮರಣ | 22 November 2016 | (aged 88)
ರಾಷ್ಟ್ರೀಯತೆ | ಭಾರತೀಯ |
ಕಾರ್ಯಕ್ಷೇತ್ರ | ಭೌತಶಾಸ್ತ್ರ |
ಸಂಸ್ಥೆಗಳು | ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಭಾರತ ಸರ್ಕಾರ |
ಅಭ್ಯಸಿಸಿದ ವಿದ್ಯಾಪೀಠ | ಮುಂಬೈ ವಿಶ್ವವಿದ್ಯಾಲಯ ಬ್ರಿಸ್ಟಲ್ ವಿಶ್ವವಿದ್ಯಾಲಯ |
ಡಾಕ್ಟರೇಟ್ ಸಲಹೆಗಾರರು | ಸೆಸಿಲ್ ಫ್ರಾಂಕ್ ಪೊವೆಲ್ |
ಪ್ರಸಿದ್ಧಿಗೆ ಕಾರಣ | KGF ಪ್ರಯೋಗಗಳು,ಕೋಲಾರ್ ಗೋಲ್ಡ್ ಫೀಲ್ಡ್ಸ್ ನಲ್ಲಿ ಪಾರ್ಟಿಕಲ್ ಪ್ರಯೋಗಗಳು |
ಗಮನಾರ್ಹ ಪ್ರಶಸ್ತಿಗಳು | ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ (1960), ರಾಯಲ್ ಸೊಸೈಟಿಯ ಫೆಲೋ (FRS) (1970) ಅಬ್ದುಸ್ ಸಲಾಮ್ ಮೆಡಲ್ (1996) |
ಎಂ.ಜಿ. ಕೆ. ಮೆನನ್ (ಮಾಂಬಿಲ್ಲಿಕಾಳಲ್ಲಿ ಗೋವಿಂದ್ ಕುಮಾರ್ ಮೆನನ್), FRS (28 ಆಗಸ್ಟ್ 1928 - 22 ನವೆಂಬರ್ 2016), ಭಾರತದ ಭೌತಶಾಸ್ತ್ರಜ್ಞ ಮತ್ತು ನೀತಿ ತಯಾರಕರಾಗಿದ್ದರು.ಅವರು ನಾಲ್ಕು ದಶಕಗಳ ಕಾಲ ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದರು.ಅವರ ಪ್ರಮುಖ ಕೊಡುಗೆಗಳಲ್ಲಿ ಒಂದಾದ ಮುಂಬೈನ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಅನ್ನು ಪೋಷಿಸಿದರು,ಇದು ಅವರ ಮಾರ್ಗದರ್ಶಕ ಹೋಮಿ ಜೆ ಭಾಭಾ 1945 ರಲ್ಲಿ ಸ್ಥಾಪನೆಯಾಯಿತು.[೧]
ಮೂಲಭೂತ ಕಣಗಳ ಗುಣಗಳನ್ನು ಅನ್ವೇಷಿಸಲು ಅವರು ಕಾಸ್ಮಿಕ್ ಕಿರಣಗಳೊಂದಿಗೆ ಪ್ರಯೋಗಗಳನ್ನು ಕೈಗೊಂಡರು.ಆಕಾಶಬುಟ್ಟಿ ಹಾರಾಟದ ಪ್ರಯೋಗಗಳನ್ನು ಸ್ಥಾಪಿಸುವಲ್ಲಿ ಅವರು ಸಕ್ರಿಯವಾಗಿ ತೊಡಗಿದ್ದರು, ಜೊತೆಗೆ ಕೋಲಾರ್ ಗೋಲ್ಡ್ ಫೀಲ್ಡ್ಸ್ನಲ್ಲಿನ ಗಣಿಗಳಲ್ಲಿ ಕಾಸ್ಮಿಕ್ ಕಿರಣ ನ್ಯೂಟ್ರಿನೊಗಳ ಆಳವಾದ ಭೂಗರ್ಭದ ಪ್ರಯೋಗಗಳನ್ನು ಮಾಡಿದರು.[೨][೩]
ಎಂ.ಜಿ. ಕೆ. ಮೆನನ್ ಅವರು ಜೋಧ್ಪುರ ಜಸ್ವಂತ್ ಕಾಲೇಜಿನಲ್ಲಿ ಮತ್ತು ಬಾಂಬೆ ರಾಯಲ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ಶಿಕ್ಷಣ ಪಡೆದರು. ಅವರು 1953 ರಲ್ಲಿ.ತಮ್ಮ ಪಿಎಚ್ಡಿಗಾಗಿ ಬ್ರಿಸ್ಟಲ್ ವಿಶ್ವವಿದ್ಯಾಲಯಕ್ಕೆ ತೆರಳಿದರು. ನೊಬೆಲ್ ಪ್ರಶಸ್ತಿ ವಿಜೇತ ಸೆಸಿಲ್ ಎಫ್ ಪೊವೆಲ್ ಮಾರ್ಗದರ್ಶನದಲ್ಲಿ ಪ್ರಾಥಮಿಕ ಕಣ ಭೌತಶಾಸ್ತ್ರದಲ್ಲಿ ಪಿಎಚ್ಡಿ ಪಡೆದರು.[೪]
ಅವರು 1955 ರಲ್ಲಿ ಹೋಮಿ ಜೆ. ಭಾಭಾ ಕಾರಣದಿಂದಾಗಿ" ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಸೇರಿದರು, ಮತ್ತು ಈ ಸಂಘವು ಸುಮಾರು ಐದು ದಶಕಗಳ ಕಾಲ ನಡೆಯಿತು.ಭಾಭಾ ಅವರ ಅಕಾಲಿಕ ಮರಣದ ನಂತರ ಅವರು 38 ನೇ ವಯಸ್ಸಿನಲ್ಲಿ 1966 ರಲ್ಲಿ ಇನ್ಸ್ಟಿಟ್ಯೂಟ್ನ ನಿರ್ದೇಶಕರಾಗಿದ್ದರು.[೪]
ಅವರು 1968 ರಲ್ಲಿ ಪದ್ಮಭೂಷಣ ಮತ್ತು 198 ರಲ್ಲಿ ಪದ್ಮ ವಿಭೂಷಣವನ್ನು ಪಡಿದಿದ್ದಾರೆ.[೬]
{{cite web}}
: Unknown parameter |deadurl=
ignored (help)