ಎಂ.ರಂಗರಾವ್

ಕನ್ನಡ ಚಿತ್ರಸಂಗೀತದಲ್ಲಿ ಮಧುರಗೀತೆಗಳ ಪರಂಪರೆಗೆ ನಾಂದಿ ಹಾಕಿದವರು ಎಂ.ರಂಗರಾವ್.(ಜನನ : ಅಕ್ಟೋಬರ್ ೧೫,೧೯೩೨ - ಮರಣ : ೧೯೯೧)

ಹಿನ್ನೆಲೆ

[ಬದಲಾಯಿಸಿ]

ರಂಗರಾವ್ ಜನಿಸಿದ್ದು ಆಂಧ್ರ ಪ್ರದೇಶದ ಕವಲೇರು ಗ್ರಾಮದಲ್ಲಿ. ತಾಯಿ ರಂಗಮ್ಮನವರ ಪ್ರಭಾವದಿಂದ ಬಾಲ್ಯದಲ್ಲೇ ಸಂಗೀತಾಭಿರುಚಿ ಬೆಳೆದು ಬಂತು.ವೀಣೆಯನ್ನು ಕಲಿತರು.ಮೆಕ್ಯಾನಿಕಲ್ ಇಂಜಿನಿಯರಿಂಗ್‍‍ನಲ್ಲಿ ಡಿಪ್ಲೊಮಾ ಪದವಿ ಪಡೆದರು.

ಚಿತ್ರರಂಗ ಪ್ರವೇಶ

[ಬದಲಾಯಿಸಿ]

ತೆಲುಗಿನ 'ಸ್ವರ್ಗ ಸೀಮಾ ಯೋಗಿ ವೇಮನ' ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗದ ಪ್ರವೇಶ.'ತ್ಯಾಗಯ್ಯ' ಚಿತ್ರದಲ್ಲಿ ಆಕಸ್ಮಿಕವಾಗಿ ವೀಣೆ ನುಡಿಸುವ ಅವಕಾಶ ಒದಗಿ ಬಂತು.

ಸಂಗೀತ ನಿರ್ದೇಶಕನಾಗಿ

[ಬದಲಾಯಿಸಿ]

ಚಲನಚಿತ್ರ ನಿರ್ದೇಶಕ ಎಂ.ಆರ್.ವಿಠಲ್ ನಿರ್ದೇಶನದ ಕನ್ನಡ ಚಿತ್ರ ನಕ್ಕರೆ ಅದೇ ಸ್ವರ್ಗದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾದರು. ಕನ್ನಡದಲ್ಲಿ ಅತೀ ಹೆಚ್ಚು ಸುಶ್ರಾವ್ಯ ಗೀತೆಗಳನ್ನು ಕೊಟ್ಟವರಲ್ಲಿ ರಂಗರಾವ್ ಅತ್ಯಂತ ಪ್ರಮುಖರು. ಅವರ "ಒಲವೇ ಜೀವನ ಸಾಕ್ಷಾತ್ಕಾರ..." "ಬಾಳೊಂದು ಭಾವಗೀತೆ..." "ಬಣ್ಣಾ ಬಣ್ಣಾ.." "ನೂರೊಂದು ನೆನಪು ಎದೆಯಾಳದಿಂದ..." "ಈ ಬಂಧನಾ.." "ನಮ್ಮೀ ಬಾಳೇ..." "ಓ ಪ್ರಿಯತಮಾ.." "ಸದಾ ಕಣ್ಣಲಿ..." "ಕೋಗಿಲೆ ಹಾಡಿದೆ.." "ತೆರೆದಿದೆ ಮನೆ ಓ ಬಾ ಅಥಿತಿ.." "ಬೆಳ್ಳಿ ಮೂಡಿತು..." "ಅರಳಿದೆ..ಅರಳಿದೆ.." ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಅಲ್ಲದೇ ಪ್ರಸಿದ್ಧ ಚಲನಚಿತ್ರ ಹಿನ್ನಲೆ ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂ ಅವರನ್ನು ಕನ್ನಡಕ್ಕೆ ಪರಿಚಯಿಸಿದ ಕೀರ್ತಿ ಕೂಡ ಅವರಿಗೆ ಸಲ್ಲುತ್ತದೆ.

ಇವರ ಸಂಗೀತ ನಿರ್ದೇಶನದ ಕೆಲವು ಚಿತ್ರಗಳು

[ಬದಲಾಯಿಸಿ]

ಭಕ್ತಿಗೀತೆಗಳ ಹರಿಕಾರ

[ಬದಲಾಯಿಸಿ]

ತಮ್ಮ ಸಂಗೀತ ನಿರ್ದೇಶನದಿಂದ ಕನ್ನಡ ಚಿತ್ರರಂಗಕ್ಕೆ ಮಾಧುರ್ಯದ ಹೊಳೆಯನ್ನೇ ಹರಿಸಿದ ರಂಗರಾವ್, ಅನೇಕ ಭಕ್ತಿಗೀತೆಗಳ ರಾಗ ಸಂಯೋಜನೆಯಿಂದಲೂ ಜನಪ್ರಿಯರಾಗಿದ್ದಾರೆ.ಕನ್ನಡದಲ್ಲಿ ಅತೀ ಹೆಚ್ಚು ಮಾರಾಟವಾಗಿ ದಾಖಲೆಯಾಗಿರುವ ಹಾಗೂ ಅತೀ ಹೆಚ್ಚು ಜನ ಕೇಳಿರುವ, ಬಹುಶಃ ಕನ್ನಡವೆನ್ನುವ ನುಡಿ ಇರುವರೆಗೂ, ಭಾದ್ರಪದದಲ್ಲಿ ಪ್ರತಿ ವರ್ಷವೂ ಬರುವ ಗಣೇಶನ ಹಬ್ಬದಲ್ಷ್ಪ್ನಅಲ್ಲದೆ "ಮುಂಜಾನೆ ಮೂಡು"ತ್ತಿದ್ದ ಹಾಗೇ ನಮ್ಮ ನಾಲಿಗೆಯಲ್ಲಿ ನಲಿದಾಡುವ "ಶರಣು ಶರಣಯ್ಯ ಶರಣು ಬೆನಕ" "ಭಾದ್ರಪದ ಶುಕ್ಲದ ಚೌತಿಯಂದು" "ಮಲೆನಾಡಿನ ಐಸಿರಿ ಚೆಲುವಿನ ವರ ಶೃಂಗೇರಿ" "ಎದ್ದೇಳು ಮಂಜುನಾಥ, ಏಳು ಬೆಳಗಾಯಿತು" "ಇವಳೇ ವೀಣಾಪಾಣಿ", "ನಂಬಿದೆ ನಿನ್ನಾ ನಾಗಭರಣ" "ವಾರ ಬಂತಮ್ಮ" ಮುಂತಾದ ಭಕ್ತಿರಸರಾಗಗಳ ಮಾಣಿಕ್ಯವನ್ನು ನಮಗೆ ಕೊಟ್ಟವರು ಎಂ.ರಂಗರಾವ್... "ನಮನ"

ಪ್ರಶಸ್ತಿ/ಪುರಸ್ಕಾರಗಳು

[ಬದಲಾಯಿಸಿ]

೧. ಶ್ರೇಷ್ಠ ಸಂಗೀತ ನಿರ್ದೇಶನಕ್ಕೆ ರಾಜ್ಯ ಪ್ರಶಸ್ತಿ ಪಡೆದ ಚಿತ್ರಗಳು:

೨.ರಾಷ್ತ್ರ ಪ್ರಶಸ್ತಿ ಪಡೆದ ಚಿತ್ರ:

ರಂಗರಾವ್ ಸುಮಾರು ೧೧೦ ಚಿತ್ರಗಳ ೮೦೦ ಸುಮಧುರ ಗೀತೆಗಳಿಗೆ ಸಂಗೀತ ನಿರ್ದೇಶನ ಮಾಡಿ ಕನ್ನಡ ಚಿತ್ರರಂಗಕ್ಕೆ ಮರೆಯಲಾರದ ಕೊಡುಗೆ ನೀಡಿದ್ದಾರೆ.ಪಿತ್ತಕೋಶದ ಕ್ಯಾನ್ಸರ್‌ನಿಂದ ೧೯೯೧ರಲ್ಲಿ ಅಕಾಲಿಕ ಮರಣಕ್ಕೆ ತುತ್ತಾದರು.

ಪಿ.ಶ್ಯಾಮಣ್ಣ | ಪಿ.ಕಾಳಿಂಗರಾಯ | ಜಿ.ಕೆ.ವೆಂಕಟೇಶ್ | ವಿಜಯಭಾಸ್ಕರ್ | ಟಿ.ಜಿ.ಲಿಂಗಪ್ಪ | ಘಂಟಸಾಲ | ರಾಜನ್-ನಾಗೇಂದ್ರ | ಎಂ.ರಂಗರಾವ್ | ಸತ್ಯಂ | ಸಿಂಗೀತಂ ಶ್ರೀನಿವಾಸರಾವ್ | ಉಪೇಂದ್ರಕುಮಾರ್ | ಇಳಯರಾಜ ಮದನ್‌ ಮಲ್ಲು| ಅಶ್ವಥ್-ವೈದಿ | ಸಿ.ಅಶ್ವಥ್ | ಎಸ್.ಪಿ.ಬಾಲಸುಬ್ರಹ್ಮಣ್ಯಂ | ಎಲ್.ವೈದ್ಯನಾಧನ್ | ಶಂಕರ್ ಗಣೇಶ್ | ಹಂಸಲೇಖ | ವಿ. ಮನೋಹರ್ | ಎಂ. ಎಂ. ಕೀರವಾಣಿ | ಮಹೇಶ್ ಪಟೇಲ್| ರಾಜ್-ಕೋಟಿ | ಸಾಧು ಕೋಕಿಲ | ರಾಜೇಶ್ ರಾಮನಾಥ್ | ವಿ.ಹರಿಕೃಷ್ಣ | ಕೆ. ಕಲ್ಯಾಣ್ | ಎಲ್.ಎನ್.ಶಾಸ್ತ್ರಿ | ಗುರುಕಿರಣ್ | ದೇವಾ | ರವಿಚಂದ್ರನ್ | ಎಸ್.ಎ.ರಾಜಕುಮಾರ್ | ಕಾರ್ತಿಕ್ ರಾಜ | ವೆಂಕಟ್-ನಾರಾಯಣ್ | ಮಣಿ ಶರ್ಮ | ಆರ್. ಪಿ. ಪಟ್ನಾಯಕ್ | ಆಲ್ವಿನ್ | ಅರ್ಜುನ್ ಜನ್ಯ | ಎಂ.ಎನ್.ಕೃಪಾಕರ್ | ಭವತಾರಿಣಿ | ಮನೋ ಮೂರ್ತಿ | ರವಿ ದತ್ತಾತ್ರೇಯ | ಎಂ.ವೆಂಕಟರಾಜು|ಉಪಾಸನ ಮೊಹನ |ಯೋಗೀಶ್ ಕುಮಾರ್ ಸಿ