ಎಂ ಎಸ್ ತೇಜ್‌ಕುಮಾರ್

ಎಂ ಎಸ್ ತೇಜ್‌ಕುಮಾರ್
Countryಭಾರತ
Born (1981-01-01) ೧ ಜನವರಿ ೧೯೮೧ (ವಯಸ್ಸು ೪೩)
ಮೈಸೂರು, ಭಾರತ
Titleಗ್ರ್ಯಾಂಡ್ ಮಾಸ್ಟರ್ (೨೦೧೭)[]
Peak rating೨೫೦೦ (ಅಕ್ಟೋಬರ್ ೨೦೧೭)

ಎಂ ಎಸ್ ತೇಜ್‌ಕುಮಾರ್ ಒಬ್ಬ ಭಾರತೀಯ ಚೆಸ್ ಗ್ರ್ಯಾಂಡ್ ಮಾಸ್ಟರ್. ಇವರು ಮೈಸೂರಿನ ಮೂಲ‌ ಚೆಸ್ ಆಟಗಾರನಾಗಿ ತಮ್ಮ ಪಯಣವನ್ನು ಸಾಗಿಸಿದರು. ಅಂತಿಮವಾಗಿ ತಮ್ಮ ಗುರಿಯನ್ನು ಅರಿತುಕೊಂಡು, ಭಾರತದ ೫೦ ನೇ ಗ್ರ್ಯಾಂಡ್ ಮಾಸ್ಟರ್ ಮತ್ತು ಕರ್ನಾಟಕದ ಮೊದಲ ಗ್ರ್ಯಾಂಡ್ ಮಾಸ್ಟರ್‌ ಆದರು.


ಎಂ ಎಸ್ ತೇಜ್‌ಕುಮಾರ್ ಅವರು ಕರ್ನಾಟಕದ ಮೊದಲ ಚೆಸ್ ಗ್ರ್ಯಾಂಡ್ ಮಾಸ್ಟರ್.
ಎಂ ಎಸ್ ತೇಜ್‌ಕುಮಾರ್


ಬಾಲ್ಯ:

[ಬದಲಾಯಿಸಿ]

ಇವರು ೧೧ ನೇ ವಯಸ್ಸಿನಲ್ಲಿ ಚೆಸ್ ಆಡಲು ಪ್ರಾರಂಭಿಸಿದರು. ಇವರು ಮೈಸೂರು ಜಿಲ್ಲೆಯ ಒಂದು ಮಧ್ಯಮ ವರ್ಗದ ಕುಟುಂಬದಿಂದ ಬಂದು, ಕೆ.ಎಸ್.ಆರ್.ಟಿ.ಸಿ ನಿವೃತ್ತ ಅಧಿಕಾರಿಯಾಗಿದ್ದ ಅವರ ತಂದೆ ಶಿವರಾಮೆಗೌಡ ಇವರ ಮೊದಲ ತರಬೇತುದಾರರು ಆಗಿದ್ದರು. [][]

ತೇಜ್‌ಕುಮಾರ್, ಎಂ.ಕಾಂ ಮುಗಿಸಿದ ನಂತರ ಅವರಿಗೆ ಕೆಲಸ ಸಿಗಲಿಲ್ಲ, ಹಾಗಾಗಿ ಅವರು ಕ್ರೀಡಾ ಕೂಟಾದಲ್ಲಿ ರೈಲ್ವೆಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದರು ಮತ್ತು ಸೆಂಟ್ರಲ್ ರೈಲ್ವೆಯಿಂದ ಆಫರ್ ಸಿಕ್ಕಿತು. ಆದರೆ, ಅವರು ಅಲ್ಲಿಗೆ ಹೋಗಲು ಇಷ್ಟಪಡದ ಕಾರಣ ಅವರು ಸೇರಲು ನಿರ್ಧರಿಸಲಿಲ್ಲ. ಬದಲಾಗಿ, ಅವರು ಸಾತ್ವಿಕ್ ಎಂಬ ಹುಡುಗನಿಗೆ ಕೋಚಿಂಗ್ ನೀಡಲು ಆಯ್ಕೆ ಮಾಡಿ ಕೊಂಡರು.  ಬೆಂಗಳೂರಿಗೆ ಹೋಗಿ ೭-೮ ತಿಂಗಳು ಅವರ ಮನೆಯಲ್ಲಿಯೇ ಇದ್ದು, ಚೆಸ್ ಅಭ್ಯಾಸ ಮಾಡಲು ಪ್ರಾರಂಭಿಸಿದರು. ಅವರು ಉತ್ತಮ ಪುಸ್ತಕಗಳ ಸಂಗ್ರಹವನ್ನು ಹೊಂದಿದ್ದು, ಬಿಡುವಿನ ಸಮಯದಲ್ಲಿ  ಚೆಸ್ ಆಡುತ್ತಾ, ಓದುತ್ತಿದ್ದರು. ದಿ ರೋಡ್ ಟು ಚೆಸ್ ಇಂಪ್ರೂವ್ಮೆಂಟ್ ಪುಸ್ತಕವನ್ನು ಓದುವುದು ಪ್ರಾರಂಭಿಸಿ ಸ್ಥಾನಿಕ ಚೆಸ್‌ನಲ್ಲಿ ತನ್ನ ಶಕ್ತಿಯನ್ನು ತಿಳಿದುಕೊಂಡರು.

ಚೆಸ್ ವೃತ್ತಿ:

[ಬದಲಾಯಿಸಿ]

೨೦೦೦ ರ ದಶಕದ ಆರಂಭದಲ್ಲಿ ಭಾರತದ ಅನೇಕ ರೇಟಿಂಗ್ ಪಂದ್ಯಾವಳಿಗಳಲ್ಲಿ ಬಾಗವಹಿಸಿ, ೨೨೫೦ ರ  ರೇಟಿಂಗ್ ಆಸುಪಾಸಿನಲ್ಲಿದ್ದರು ಮತ್ತು ಯಾವಾಗಲೂ ಪಂದ್ಯಾವಳಿಯ ಅಗ್ರ ಶ್ರೇಯಾಂಕಗಳಲ್ಲಿ ಒಬ್ಬರಾಗಿದ್ದರು. ಎಲ್ಲೋ ೨೦೦೭-೦೮ ರಲ್ಲಿ ತೇಜ್‌ಕುಮಾರ್ ಸ್ಥಾನಿಕ ದೈತ್ಯರಾದರು. ಅವರು ಒಂದರ ನಂತರ ಒಂದು ಪಂದ್ಯಾವಳಿಯನ್ನು ಗೆಲ್ಲಲು ಪ್ರಾರಂಭಿಸಿದರು ಮತ್ತು ಅವರು ೩ ಜಿಎಂ ದಂಡಗಳನ್ನು ಗಳಿಸಿದರು. ಇವರು ೩೬ನೇ ವರ್ಷ ವಯಸ್ಸಿನಲ್ಲಿ ಜಿಎಂ ಆಗುತ್ತಾರೆ.[]

೨೦೧೩ ರಲ್ಲಿ ರಷ್ಯಾದಲ್ಲಿ  ನಡೆದ ನ್ಯಾಷನಲ್ ಪ್ರೀಮಿಯರ್‌ನಲ್ಲಿ ತೇಜ್‌ಕುಮಾರ್ ಒಬ್ಬರಾಗಿದ್ದರು. ಸಶಿಕಿರನ್, ಅಡಿಬಾನ್, ಲಲಿತ್ ಮತ್ತು ಇತರರೊಂದಿಗೆ ಈ ಕ್ಷೇತ್ರವು ಪ್ರಬಲವಾಗಿತ್ತು, ಆದರೆ ತೇಜ್ ತನ್ನ ತಂಪನ್ನು ಉಳಿಸಿಕೊಂಡು, ೨೬೦೦+ ಪ್ರದರ್ಶನವನ್ನು ನೀಡಿ ನಾಲ್ಕನೇ ಸ್ಥಾನ ಗಳಿಸಿದರು.[]

ಜೂನ್ ೨೦೧೮ ರಲ್ಲಿ, ತೇಜಕುಮಾರ್ ಅವರು ಕರ್ನಾಟಕ ರಾಜ್ಯ ಮಟ್ಟದ ಓಪನ್ ರ್ಯಾಪಿಡ್ ಚೆಸ್ ಪಂದ್ಯಾವಳಿಯನ್ನು ೯/೯ ಪರಿಪೂರ್ಣ ಸ್ಕೋರ್‌ನೊಂದಿಗೆ ಗೆದ್ದರು.[]

ತೇಜ್‌ಕುಮಾರ್ ಅವರ ಸಾಧನೆಗಳಲ್ಲಿ ೨೦೧೩ರ ಭಾರತೀಯ ರಾಷ್ಟ್ರೀಯ ಬಿ ಚಾಂಪಿಯನ್‌ಶಿಪ್ ಮತ್ತು ೨೦೦೩ರಲ್ಲಿ ರಾಷ್ಟ್ರೀಯ ಯು-೨೫ ಚಾಂಪಿಯನ್‌ಶಿಪ್ ಗೆದ್ದುಕೊಂಡಿದ್ದಾರೆ. ಭಾರತದ ಹೊರಗೆ, ಅವರು ೨೦೧೬ ರಲ್ಲಿ ಲಿಫ್ರೆ ಓಪನ್ ಮತ್ತು ೨೦೧೭ ರಲ್ಲಿ ಗುಯಿಂಗಂಪ್ ಓಪನ್‌ನಂತಹ ಪಂದ್ಯಾವಳಿಗಳನ್ನು ಗೆದ್ದಿದ್ದಾರೆ.[]

ಎಂ ಎಸ್ ತೇಜ್‌ಕುಮಾರ್ ಅವರು ಕರ್ನಾಟಕದ ಮೊದಲ ಚೆಸ್ ಗ್ರ್ಯಾಂಡ್ಮಾಸ್ಟರ್.
ಎಂ.ಎಸ್.ತೇಜ್‌ಕುಮಾರ್

ಮಂಡ್ಯದಲ್ಲಿ ತೇಜ್‌ಕುಮಾರ್ ತಮ್ಮ ಶಾಲೆಯನ್ನು ಪ್ರಾರಂಭಿಸಿ, ವಾರದಲ್ಲಿ ಮೂರು ಬಾರಿ ತರಗತಿಗಳನ್ನು ನಡೆಸುತ್ತಾರೆ ಮತ್ತು ಸಂಪಾದಿಸಿದ ಹಣದಲ್ಲಿ ತಮ್ಮ ಪಂದ್ಯಾವಳಿಗೆ ಉಪಯೋಗಿಸುತ್ತಿದ್ದರು. ಅವರು ಭಾರತದ ೫೦ ನೇ ಜಿಎಂ ಮತ್ತು ಕರ್ನಾಟಕದ ಮೊದಲನೆಯವರಾದರು.[][] ತೇಜ್ ಕುಮಾರ್ ಅವರಿಗೆ ವಿಶ್ವನಾಥ್ ಆನಂದ್ ಅವರು ಸ್ಫೂರ್ತಿಯಾಗಿದ್ದರು. ತೇಜ್‌ಕುಮಾರ್ ಗ್ರ್ಯಾಂಡ್ ಮಾಸ್ಟರ್ ಆದ ಕೂಡಲೇ ರಾಜ್ಯ ಸರ್ಕಾರ ಅವರಿಗೆ ೧೦ ಲಕ್ಷ ರೂ ನೀಡಿದರು. ಅವರು ಕರ್ನಾಟಕದ ಮೊದಲ ಗ್ರ್ಯಾಂಡ್ ಮಾಸ್ಟರ್ ಆಗಿರುವುದರಿಂದ ಅವರು ಸರ್ಕಾರದಿಂದ ಒಂದು ರೀತಿಯ ಬೆಂಬಲವನ್ನು ನಿರೀಕ್ಷಿಸಿದ್ದರು, ಆದರೆ ಸರ್ಕಾರ ೧೦ ಲಕ್ಷ ರೂಪಾಯಿಗಳನ್ನು ನಗದು ಬಹುಮಾನವಾಗಿ ಘೋಷಿಸಿದ್ದು ಅವರಿಗೆ ತಲುಪಲಿಲ್ಲ.

ಚೆಸ್ ಚಾಂಪಿಯನ್ ಶಿಪ್‌ಗಳು:

[ಬದಲಾಯಿಸಿ]

೨೦೧೭, ಗೋವಾದಲ್ಲಿ ನಡೆದ ಫೋಮೆಂಟೊ ಅಖಿಲ ಭಾರತ ಫಿದೇ ರೇಟಿಂಗ್ ಚೆಸ್ ಪಂದ್ಯಾವಳಿಯಲ್ಲಿ ಗೋವಾದ ಸಂಜೀಬ್ ಮತ್ತು ಮಹಾರಾಷ್ಟ್ರದ ಅಥಾಲಿ ವಿರುದ್ಧ ಜಯಗಳಿಸುವ ಮೂಲಕ, ತೇಜಕುಮಾರ್ ಕರ್ನಾಟಕದ ಮೊದಲ ಗ್ರ್ಯಾಂಡ್ ಮಾಸ್ಟರ್, ಮೊದಲ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪಂದ್ಯಾವಳಿಯ ಮೊದಲು ಜಿಎಂ ಪ್ರಶಸ್ತಿಗೆ ಬೇಕಾದ ೨೫೦೦ ಅಂಕಗಳನ್ನು ತಲುಪಲು ೧.೭೦ ಎಲೋ ಪಾಯಿಂಟ್‌ಗಳ ಅಗತ್ಯವಿರುವ  ಪ್ರಚಾರಕ, ತಮ್ಮ ಪ್ರದರ್ಶನದೊಂದಿಗೆ ಕರ್ನಾಟಕದ  ಚೆಸ್‌ನಲ್ಲಿ ವಿಶೇಷ ದಿನವನ್ನು ಚಿತ್ರಕಥೆ ಮಾಡಿದರು. 

೨೦೧೩ ರಲ್ಲಿ, ಅವರಿಗೆ ಸಾಮಿ ಟೆಕ್ನಾಲಜೀಸ್ ಬೆಂಬಲ ನೀಡಿ ಅವರ ವಿಮಾನ ಶುಲ್ಕವನ್ನು ಯುವ ಸಬಲೀಕರಣ ಮತ್ತು ಸೇವೆಗಳ ಇಲಾಖೆಯಿಂದ ಧನಸಹಾಯ ಮಾಡಲಾಯಿತು.

ಪ್ರಶಸ್ತಿಗಳು:

[ಬದಲಾಯಿಸಿ]

ಸೌತ್ ವೆಸ್ಟರ್ನ್ ರೈಲ್ವೆಯ (ಮೈಸೂರು) ಉದ್ಯೋಗಿ, ತೇಜ್‌ಕುಮಾರ್ ವಿಶ್ವ ರೈಲ್ವೆ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದು ಭಾರತೀಯ ರೈಲ್ವೆ ತಂಡದ ಭಾಗವಾಗಿದ್ದರು. ರಾಷ್ಟ್ರೀಯ-ಬಿ ಕಿರೀಟವನ್ನು ಗೆದ್ದ ಏಕೈಕ ಕರ್ನಾಟಕ ಆಟಗಾರ ಎಂದು ಹೆಸರು ಪಡೆದರು.

ಸೆಪ್ಟೆಂಬರ್ ೬, ೨೦೧೭ ರಂದು ಎಂಎಸ್ ತೇಜ್‌ಕುಮಾರ್ ಭಾರತದ ೫೦ ನೇ ಸ್ಥಾನವನ್ನು ಪಡೆದುಕೊಂಡರು ಮತ್ತು ಎಂ.ಎಸ್. ತೇಜ್‌ಕುಮಾರ್‌ ಕರ್ನಾಟಕದ ಮೊದಲ ಗ್ರ್ಯಾಂಡ್ ಮಾಸ್ಟರ್ ಪದವಿಯನ್ನು ಪಡೆದರು.

ಉಲ್ಲೇಖಗಳು:

[ಬದಲಾಯಿಸಿ]
  1. "FIDE Title Application (GM)" (PDF).
  2. ೨.೦ ೨.೧ Shah, Sagar (May 30, 2018). "The story of how M.S. Thejkumar became a GM at the age of 36 years without a chess coach".
  3. https://www.deccanherald.com/content/631901/thej-karnatakas-first-gm.html
  4. https://chessbase.in/news/M_S_Thejkumar_shares_his_journey_to_the_top
  5. "Karnataka State Open Rapid Chess Tourney: GM Thejkumar Wins Title". June 25, 2018.
  6. "GM M.S.Thejkumar".
  7. "Felicitation To Grand Master Thej Kumar". September 9, 2017.
  8. https://www.thehindu.com/sport/other-sports/thejkumar-becomes-grandmaster/article19631492.ece