ಎಂ ವೆಂಕಟೇಶ್ ಕುಮಾರ್

ಎಂ ವೆಂಕಟೇಶ್ ಕುಮಾರ್ ಇವರು ಗ್ವಾಲಿಯರ್ ಘರಾಣೆಯ ಸುಪ್ರಸಿದ್ಧ ಹಿಂದುಸ್ತಾನಿ ಶೈಲಿಯ ಗಾಯಕರು.

ಇವರು ಬಳ್ಳಾರಿ ಹತ್ತಿರದ ಲಕ್ಷ್ಮಿಪುರ ಎಂಬ ಹಳ್ಳಿಯಲ್ಲಿ ಹುಟ್ಟಿದರು.

ಶಿಕ್ಷಣ

[ಬದಲಾಯಿಸಿ]

ಜಾನಪದ ಕಲಾವಿದರಾಗಿದ್ದ ಇವರ ತಂದೆ ಇವರ ಪ್ರಥಮ ಗುರು, ಇವರ ಗಾಯನದ ಮೇಲೆ ಇವರ ತಂದೆಯ ಶೈಲಿಯ ಛಾಪಿದೆ ಎಂದು ಹೇಳುತ್ತಾರೆ. ಇವರ ಪ್ರತಿಭೆಯನ್ನು ಗುರುತಿಸಿದ ಗದಗದ ವಿರೇಶ್ವರ ಪುಣ್ಯಾಶ್ರಮದ ಪಂಡಿತ ಪುಟ್ಟರಾಜ ಗವಾಯಿಗಳು ಇವರಿಗೆ ಗ್ವಾಲಿಯರ್ ಘರಾಣೆಯ ಎಲ್ಲ ಹೊಳವುಗಳನ್ನು ತಿಳಿಸಿ, ಅರೆಸಿ ಕುಡಿಸಿದರು.

ವೃತ್ತಿಜೀವನ

[ಬದಲಾಯಿಸಿ]

ಧಾರವಾಡ ನಿವಾಸಿಯಾಗಿರುವ ಇವರು ಕರ್ನಾಟಕ ವಿಶ್ವವಿದ್ಯಾಲಯದ ಸಂಗೀತ ವಿದ್ಯಾಲಯದ ಪ್ರಾಧ್ಯಾಪಕರು ಮತ್ತು ಆಕಾಶವಾಣಿಯ ಏ ಶ್ರೇಣಿಯ ಕಲಾವಿದರು. ಇವರ ಗಾಯನದಲ್ಲಿ ಧಾರವಾಡದ ಮಣ್ಣಿನ ಸೊಗಡು ಮತ್ತು ಕೆಲವು ಸಾರಿ ರಾಜಗುರುರವರ ಗಾಯನದ ಛಾಪು ಕಾಣುತ್ತವೆ. ಧಾರವಾಡದ ಅದ್ವಿತೀಯ ಹಿಂದುಸ್ತಾನಿ ಗಾಯಕರ ಸಾಲಿನ ಇತ್ತೀಚಿನ ಗಾಯಕರಲ್ಲಿ ಇವರು ಮಂಚೂಣಿಯಲ್ಲಿದಾರೆಂದರೆ ಅತಿಶಯೋಕ್ತಿಯಾಗಲಾರದು. ಇವರು ದೇಶದ ಪ್ರತಿಷ್ಟಿತ ಸಂಗೀತ ಸಭೆಗಳಲ್ಲಿ ತಮ್ಮ ಗಾಯನ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಪ್ರಶಸ್ತಿ ಗೌರವ

[ಬದಲಾಯಿಸಿ]
  1. ಸ್ವರಶ್ರೀ,
  2. ಸಂಗೀತ ಸುಧಾಕರ,
  3. ಸಂಗೀತ ರತ್ನ,
  4. ರಾಜ್ಯೋತ್ಸವ ಪ್ರಶಸ್ತ್ರಿ (1999),
  5. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ (2007),
  6. ವತ್ಸಲಾ ಭೀಮಸೇನ ಜೋಶಿ ಪ್ರಶಸ್ತಿ (2008).
  7. ಕೃಷ್ಣಾ ಹಾನಗಲ್‌ ಪ್ರಶಸ್ತಿ (2009),
  8. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (2012),
  9. ಸ್ವರ ಲಯ ಸಾಮ್ರಾಟ (2014).
  10. ಪದ್ಮಶ್ರೀ ಪುರಸ್ಕಾರ (2016).

ಬಾಹ್ಯ ಸಂಪರ್ಕ

[ಬದಲಾಯಿಸಿ]