ಏವಿಯೇಷನ್, ಸ್ಪೇಸ್ ಮತ್ತು ರಕ್ಷಣಾ ಸಂಸ್ಥೆಗಳ ಅಗತ್ಯತೆಗಳ ಗುಣಮಟ್ಟ ನಿರ್ವಹಣೆ ವ್ಯವಸ್ಥೆ | |
First published | 1998[೧] |
---|---|
Latest version | Revision D 2016 |
Organization | ಆಟೋಮೋಟಿವ್ ಎಂಜಿನಿಯರ್ಸ್ ಸೊಸೈಟಿ |
Base standards | ISO 9001 |
Domain | ಏರೋಸ್ಪೇಸ್ ಇಂಡಸ್ಟ್ರಿ |
Website | standards |
ಎಎಸ್೯೧೦೦ ವ್ಯಾಪಕವಾಗಿ ಅಳವಡಿಸಿಕೊಳ್ಳಲಾದ ವೈಮಾನಿಕ ಉದ್ಯಮದ ಪ್ರಮಾಣೀಕೃತ ಗುಣಮಟ್ಟ ನಿರ್ವಹಣೆ ವ್ಯವಸ್ಥೆ. ಇದು ಅಕ್ಟೋಬರ್ ೧೯೯೯ ರಲ್ಲಿ ಆಟೋಮೋಟಿವ್ ಎಂಜಿನಿಯರ್ಸ್ ಸೊಸೈಟಿ ಮತ್ತು ಯುರೋಪಿಯನ್ ಅಸೋಸಿಯೇಷನ್ ಏರೋಸ್ಪೇಸ್ ಇಂಡಸ್ಟ್ರೀಸ್[೨] ಸೇರಿ ಬಿಡುಗಡೆ ಮಾಡಿದವು. ಎಎಸ್೯೧೦೦ ಹಿಂದಿನ ಸ್ಟ್ಯಾಂಡ್ನರ್ಡ್ ಎಎಸ್೯೦೦೦ ಬದಲಾಯಿಸಿ, ಐಎಸ್ಒ೯೦೦೦ ಪ್ರಸ್ತುತ ಆವೃತ್ತಿಯ ಜೊತೆಗೆ ಸಂಪೂರ್ಣ ಸಂಯೋಜನೆಗೊಳ್ಳುವದರ ಜೊತೆಗೆ ಗುಣಮಟ್ಟ ಮತ್ತು ಸುರಕ್ಷತೆ ಸಂಬಂಧಿಸಿದ ಕೆಲವು ಅಗತ್ಯ ಷರತ್ತುಗಳನ್ನು ಸೇರಿಸಲಾಯಿತು. ಪ್ರಪಂಚದ ಪ್ರಮುಖ ವೈಮಾನಿಕ ತಯಾರಕ ಮತ್ತು ಪೂರೈಕೆದಾರ ಕಂಪನಿಗಳ ಜೊತೆ ವ್ಯವಹಾರ ಮಾಡಲು ಎಎಸ್೯೧೦೦ ನೋಂದಣಿ ಮತ್ತು ಅಗತ್ಯ ಅನುಸರಣೆ ಮಾಡಬೇಕಾಗುತ್ತದೆ.[೩][೪].ಎಎಸ್೯೧೦೦ ಡಿ(೨೦೧೬) ಇತ್ತೀಚಿನ ಆವೃತ್ತಿ ಆಗಿದೆ.
ಎಎಸ್೯೧೦೦ ಗುಣಮಟ್ಟ ನಿರ್ವಹಣೆ ವ್ಯವಸ್ಥೆ ಬೆಳವಣಿಗೆಗೆ ಮೊದಲು,ಅಮೇರಿಕಾ ಮಿಲಿಟರಿ, ಪೂರೈಕೆದಾರ ಗುಣಮಟ್ಟ ಮತ್ತು ತಪಾಸಣಾ ಕಾರ್ಯಕ್ರಮಗಳಿಗಾಗಿ ಎರಡು ನಿರ್ದಿಷ್ಟ ವಿವರಣೆಯನ್ನು ಅನುಸರಿಸುತಿತ್ತು.
ಕೆಲವು ವರ್ಷಗಳ ಕಾಲ,ಈ ೨ ನಿರ್ದಿಷ್ಟ ವಿವರಣೆಗಳು ಅಂತರಿಕ್ಷ ಉದ್ಯಮದ ಮೂಲ ತತ್ತ್ವಗಳಾಗಿ ಪರಿಗಣಿಸಲಾಗಿತ್ತು.ಅಮೇರಿಕಾ ಸರ್ಕಾರ, ಐಎಸ್ಒ 9000 ಅಂಗೀಕರಿಸಿದ ನಂತರ ಆ ಎರಡು ವಿವರಣೆಗಳನ್ನು ಹಿಂತೆಗೆದುಕೊಂಡಿತು.ದೊಡ್ಡ ಏರೋಸ್ಪೇಸ್ ಕಂಪನಿಗಳು, ಅವರ ಪೂರೈಕೆದಾರರು ಐಎಸ್ಒ 9000 ಆಧರಿಸಿ ಗುಣಮಟ್ಟದ ಕಾರ್ಯಕ್ರಮಗಳ ಅಭಿವೃದ್ಧಿ ಆರಂಭಿಸಿದರು.[೭]
ಐಎಸ್ಒ೯೦೦೦(೧೯೯೪), ವೈಮಾನಿಕ ಉದ್ಯಮದ ಗ್ರಾಹಕರ ಆವಶ್ಯಕತೆಗಳನ್ನು ಗಮನಕ್ಕೆ ತೆಗೆದುಕೊಳ್ಳದಿರುವದನ್ನು ಗಮನಿಸಿದ ಅಂತರಿಕ್ಷಯಾನ ಪೂರೈಕೆದಾರ ಕಂಪನಿಗಳಾದ ನಾಸಾ,FAA,ಮತ್ತು ವಾಣಿಜ್ಯ, ಏರೋಸ್ಪೇಸ್ ಕಂಪನಿಗಳಾದ ಬೋಯಿಂಗ್,ಲಾಕ್ಹೀಡ್ ಮಾರ್ಟಿನ್,ಗ್ರುಮನ್,ಜಿಇ ಏರ್ಕ್ರಾಫ್ಟ್ ಎಂಜಿನ್ಸ್ ಮತ್ತು ಪ್ರಾಟ್ & ವಿಟ್ ಐಎಸ್ಒ 9000 ಆಧರಿಸಿ, ಅಂತರಿಕ್ಷ ಉದ್ಯಮ ನಿರ್ದಿಷ್ಟ ಗುಣಮಟ್ಟ ನಿರ್ವಹಣಾ ಮಾನದಂಡ ಎಎಸ್೯೦೦೦ ಮಾನಕ ಅಭಿವೃದ್ಧಿಪಡಿಸಿದವು.[೭]
ಐಎಸ್ಒ೯೦೦೧:೧೯೯೪ (ಇ)ಗೆ ೫೫ ವೈಮಾನಿಕ ಉದ್ಯಮದ ನಿರ್ದಿಷ್ಟ ವಿಸ್ತರಣೆ ಮತ್ತು ಅವಶ್ಯಕತೆಗಳನ್ನು ಸೇರಿಸಿ ಎಎಸ್೯೧೦೦ ಪ್ರಕಟಿಸಲಾಯಿತು.[೮]
೨೦೦೦ ಇಸವಿಯ ಐಎಸ್ಒ9001 ಪರಿಷ್ಕರಣೆ ಸಮಯದಲ್ಲಿ ಎಎಸ್ ಸಂಸ್ಥೆ, ಐಎಸ್ಒ ಸಂಸ್ಥೆಯ ಜೊತೆ ನಿಕಟವಾಗಿ ಕೆಲಸ ಮಾಡಿತು. ಐಎಸ್ಒ 9001:2000 ಪರಿಷ್ಕರಣೆ ಪ್ರಮುಖ ಸಾಂಸ್ಥಿಕ ಮತ್ತು ತಾತ್ವಿಕ ಬದಲಾವಣೆಗಳನ್ನು ಅಳವಡಿಸಿಕೊಂಡಿತು.ಅದೇ ವರ್ಷ ಎಎಸ್9000 ಕೂಡ ಪರಿಸ್ಕರೆಣೆಗೆ ಒಳಗಾಗಿಎಎಸ್೯೧೦೦ ಆಗಿ ಬಿಡುಗಡೆಯಾಯಿತು.[೯]
ಎಎಸ್೯೧೦೦ ಪರಿಷ್ಕರಣೆ ೨೦೦೪ ರಲ್ಲಿ ಬಿಡುಗಡೆಯಾಯಿತು ಮತ್ತು ರಿವಿಶನ್ ಎ ನಲ್ಲಿನ ಪರಿಚ್ಛೇದ ೨ನ್ನು ತೆಗೆದು ಹಾಕಲಾಯಿತು.
ಎಎಸ್೯೧೦೦ ಸಿ ಪರಿಷ್ಕರಣೆ ಹೆಚ್ಚಾಗಿ ಸರಿಯಾದ ಸಮಯದಲ್ಲಿ ತಲುಪಿಸುವಿಕೆ ಮತ್ತು ಗ್ರಾಹಕ ಅಗತ್ಯಗಳಿಗೆ ಒತ್ತು ಕೊಡಲಾಯಿತು.ಎಎಸ್೯೧೦೦ ಸಿ ಪರಿಷ್ಕರಣೆ ಉತ್ಪನ್ನ ಸರಿಯಾದ ಸಮಯದಲ್ಲಿ ತಲುಪಿಸುವಿಕೆ, ಗ್ರಾಹಕರ ಅಗತ್ಯ ಮತ್ತು ನಾನ್ ಕಂಫಾರ್ಮನ್ಸ್ ಉತ್ಪನ್ನ ವಿತರಣೆ ಪ್ರಶ್ನಿಸಲಾಯಿತು.ಅಪಾಯ ನಿರ್ವಹಣೆ ಇದರಲ್ಲಿ ಸೇರಿಸಲಾಯಿತು.ಎಎಸ್೯೧೦೦ಸಿ ನಲ್ಲಿ ಹೊಸ ತಪಾಸಣೆ ಮಾನಕ ಎಎಸ್೯೧೦೧ ಡಿ ಬಗ್ಗೆ ವ್ಯಾಖ್ಯಾನಿಸಲಾಗಿದೆ.[೧೦][೧೧][೧೨]
ಈ ಮಾನದಂಡ ಪರಿಷ್ಕರಣೆಯು ಹೊಸ ಕಲಮು ಸಂರಚನೆ ಮತ್ತು ಐಎಸ್ಒ೯೦೦೧:೨೦೧೫ ವಿಷಯ ಒಟ್ಟುಸೇರಿಸಿ ಜೊತೆಗೆ ಉದ್ಯಮದ ಅವಶ್ಯಕತೆ,ವ್ಯಾಖ್ಯಾನ,ಮತ್ತು ಟಿಪ್ಪಣಿಗಳನ್ನು,ಐಎಸ್ಒ೯೦೦೧:೨೦೧೫ ಮತ್ತು ಮಧ್ಯಸ್ಥಗಾರರ ಪ್ರತಿಯೆಗಳನ್ನೂ ಗಮನದಲ್ಲಿಟ್ಟುಕೊಂಡು ಪರಿಷ್ಕರಿಸಿ ಬಿಡುಗಡೆಮಾಡಲಾಗಿದೆ.[೧೩][೧೪]
'ಎಎಸ್ ತಾನೇ ಸಂಸ್ಥೆಗಳನ್ನು ಪ್ರಮಾಣೀಕರಿಸುವುದಿಲ್ಲ.ಎಎಸ್೯೧೦೦ ಪಾಲನೆ ಪ್ರಮಾಣೀಕರಣಕ್ಕಾಗಿ ಅರ್ಜಿ ಸಲ್ಲಿಸುವ ಸಂಸ್ಥೆಗಳನ್ನು ಲೆಕ್ಕಪರಿಶೋಧನೆ ಮಾಡುವ ಪ್ರಮಾಣೀಕರಣ ಸಂಸ್ಥೆಗಳಿಗೆ ಅಧಿಕಾರವನ್ನು ಕೊಡಲು ಅನೇಕ ದೇಶಗಳು ಅಕ್ರೆಡಿಟೇಷನ್ ಸಂಸ್ಥೆಗಳನ್ನು ಹುಟ್ಟುಹಾಕಿದೆ. ಅಕ್ರೆಡಿಟೇಷನ್ ಸಂಸ್ಥೆಗಳು ಮತ್ತು ಪ್ರಮಾಣೀಕರಣ ಸಂಸ್ಥೆಗಳೆರಡೂ ತಮ್ಮ ಸೇವೆಗಳಿಗೆ ಶುಲ್ಕವನ್ನು ವಿಧಿಸುತ್ತದೆ. ಅಕ್ರೆಡಿಟೆಡ್ ಪ್ರಮಾಣೀಕರಣ ಸಂಸ್ಥೆಗಳಲ್ಲೊಂದಾದ ಸಂಸ್ಥೆಯು ಹೊರಡಿಸಿದ ಪ್ರಮಾಣಪತ್ರಗಳನ್ನೇ ವಿಶ್ವದಾದ್ಯಂತ ಅಂಗೀಕರಿಸಲಾಗಿದೆ ಎಂಬುದನ್ನು ಖಾತ್ರಿ ಮಾಡಿಕೊಳ್ಳುವುದಕ್ಕೋಸ್ಕರ ವಿವಿಧ ಅಕ್ರೆಡಿಟೇಷನ್ ಸಂಸ್ಥೆಗಳು ತಮ್ಮತಮ್ಮಲ್ಲೇ ಒಪ್ಪಂದ ಮಾಡಿಕೊಂಡಿರುತ್ತವೆ. ಅರ್ಜಿ ಹಾಕಿದ ಸಂಸ್ಥೆಯನ್ನು ಅದರ ಸೈಟ್‌ಗಳು, ಕಾರ್ಯಗಳು, ಉತ್ಪನ್ನಗಳು, ಸೇವೆಗಳು ಮತ್ತು ಕಾರ್ಯವಿಧಾನಗಳ ಸ್ಯಾಂಪಲ್‌ಗಳ ಆಧಾರದ ಮೇಲೆ ಮೌಲ್ಯೀಕರಿಸಲಾಗುತ್ತದೆ; ಆಡಳಿತ ಮಂಡಳಿಗೆ ಒಂದು ’ತೊಂದರೆಗಳ ಪಟ್ಟಿ’ ("ಕ್ರಮಗಳ ಕೋರಿಕೆ" ಅಥವಾ "ಪಾಲನೆ ಮಾಡದ ಪಟ್ಟಿ")ಯನ್ನು ಕೊಡಲಾಗುತ್ತದೆ. ಈ ಪಟ್ಟಿಯಲ್ಲಿ ಪ್ರಮುಖ ತೊಂದರೆಗಳೇನೂ ಇಲ್ಲದಿದ್ದರೆ, ಅಥವಾ ಆಡಳಿತ ಮಂಡಳಿಯಿಂದ ಎಷ್ಟು ತೊಂದರೆಗಳನ್ನು ನಿವಾರಿಸಲಾಗುತ್ತದೆ ಎಂಬುದರ ಬಗ್ಗೆ ಸಾಮಾಧಾನಕರವಾದ ಸುಧಾರಣಾ ಯೋಜನೆಯನ್ನು ಪಡೆದ ಮೇಲೆ, ಪ್ರಮಾಣೀಕರಣ ಸಂಸ್ಥೆಯು ತಾನು ಭೇಟಿ ನೀಡೀದ ಪ್ರತಿಯೊಂದು ಭೂಗೋಳಿಕ ನಿವೇಶನಕ್ಕೂ ಒಂದೊಂದು ಎಎಸ್೯೧೦೦ ಪ್ರಮಾಣ ಪತ್ರವನ್ನು ಕೊಡುತ್ತದೆ.ಎಎಸ್೯೧೦೦ ಪ್ರಮಾಣಪತ್ರವು ಒಮ್ಮೆ ಪಡೆದ ಮೇಲೆ ಯಾವತ್ತಿಗೂ ನಡೆಯುತ್ತದೆ ಎನ್ನುವಂತಿಲ್ಲ, ಪ್ರಮಾಣೀಕರಣ ಸಂಸ್ಥೆಗಳು ಶಿಫಾರಸು ಮಾಡಿದ ನಿಯಮಿತ ಅಂತರದಲ್ಲಿ ಪ್ರಮಾಣಪತ್ರವನ್ನು ನವೀಕರಿಸಿಕೊಳ್ಳಬೇಕು, ಸಾಮಾನ್ಯವಾಗಿ ಸುಮಾರು ಮೂರು ವರ್ಷಗಳಿಗೊಮ್ಮೆ.
ಸಮರ್ಪಕವಾದ ಗುಣಮಟ್ಟ ನಿರ್ವಹಣೆ ವ್ಯಾಪಾರವನ್ನು ಸುಧಾರಿಸುತ್ತದೆ ಎಂಬುದು ವ್ಯಾಪಕವಾಗಿ ಅಂಗೀಕೃತವಾಗಿದ್ದು, ಇದು ಹೂಡಿಕೆ, ಮಾರುಕಟ್ಟ ಷೇರು, ಮಾರಾಟ ಬೆಳವಣಗೆ, ಮಾರಾಟದ ಎಲ್ಲೆಗಳು, ಸ್ಪರ್ಧಾತ್ಮಕ ಪ್ರಯೋಜನ ಮತ್ತು ವ್ಯಾಜ್ಯಗಳನ್ನು ತಪ್ಪಿಸುವಲ್ಲಿ ಧನಾತ್ಮಕವಾದ ಪರಿಣಾಮವನ್ನು ಹೊಂದಿದೆ.