![]() | ಈ ಲೇಖನವನ್ನು ಪರಿಷ್ಕರಣೆಗೆ ಹಾಕಲಾಗಿದೆ. ಲೇಖನವನ್ನು ವಿಕಿ ಲೇಖನಗಳಂತೆ ಶುದ್ಧೀಕರಿಸಿದ ನಂತರ ಈ ಸಂದೇಶವನ್ನು ತೆಗೆದುಹಾಕಿ. ಈ ಲೇಖನವನ್ನು ಈ ಕಾರಣಗಳಿಂದಾಗಿ ನಕಲು ಸಂಪಾದನೆಗೆ ಒಳಪಡಿಸಬೇಕಿದೆ "ಕೃತಿಚೌರ್ಯದ ಸಂಶಯವಿದೆ, ಬ್ಲಾಗ್ ರೀತಿಯ ಮಾಹಿತಿ, ಉಲ್ಲೇಖಗಳಿಲ್ಲ". (ಮೇ ೮, ೨೦೧೫) |
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ (ಮೇ ೮, ೨೦೧೫) ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಹೊಸೂರು ನರಸಿಂಹಯ್ಯ | |
---|---|
![]() | |
ಸ್ಥಳೀಯ ಹೆಸರು | ಡಾ. ಎಚ್. ನರಸಿಂಹಯ್ಯ |
ಜನನ | ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹೊಸೂರು, ಕರ್ನಾಟಕ, ಭಾರತ | ೬ ಜೂನ್ ೧೯೨೦
ಮರಣ | 31 January 2005 ಬೆಂಗಳೂರು | (aged 84)
ವಾಸಸ್ಥಳ | ಬೆಂಗಳೂರು |
ಪೌರತ್ವ | ಭಾರತೀಯ |
ರಾಷ್ಟ್ರೀಯತೆ | ಭಾರತೀಯ |
ಕಾರ್ಯಕ್ಷೇತ್ರ | ಭೌತಶಾಸ್ತ್ರ |
ಸಂಸ್ಥೆಗಳು | ನ್ಯಾಶನಲ್ ಕಾಲೇಜು ಬೆಂಗಳೂರು ವಿಶ್ವವಿದ್ಯಾಲಯ |
ಅಭ್ಯಸಿಸಿದ ವಿದ್ಯಾಪೀಠ | ಬೆಂಗಳೂರು ಸೆಂಟ್ರಲ್ ಕಾಲೇಜು (ಬಿಎಸ್ಸಿ, ಎಂಎಸ್ಸಿ) ಒಹಾಯೊ ರಾಜ್ಯ ವಿಶ್ವವಿದ್ಯಾಲಯ (ಪಿಹೆಚ್‍ಡಿ) |
ಪ್ರಸಿದ್ಧಿಗೆ ಕಾರಣ | ವೈಚಾರಿಕತೆ, ವೈಜ್ಞಾನಿಕ ಮನೋವೃತ್ತಿ, ಆಡಳಿತ |
ಪ್ರಭಾವಗಳು | ಮಹಾತ್ಮ ಗಾಂಧಿ |
ಗಮನಾರ್ಹ ಪ್ರಶಸ್ತಿಗಳು | ಪದ್ಮಭೂಷಣ (1985) |
ಗಾಂಧೀವಾದಿ, ವಿಚಾರವಾದಿ ಡಾ. ಎಚ್. ನರಸಿಂಹಯ್ಯ[೧][೨] (ಜೂನ್ ೬, ೧೯೨೦ - ಜನವರಿ ೩೧, ೨೦೦೫) ಅವರು ಬೆಂಗಳೂರಿನ ಹೆಸರಾಂತ ಭೌತಶಾಸ್ತ್ರಜ್ಞರೂ, ಶಿಕ್ಷಣತಜ್ಞರೂ ಆಗಿದ್ದರು. ಇವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಮುಂದೆ ಅಮೇರಿಕ ದೇಶದಲ್ಲಿನ ಓಹಿಯೋ ವಿಶ್ವವಿದ್ಯಾಲಯದಲ್ಲಿ ಪರಮಾಣು ಭೌತಶಾಸ್ತ್ರದಲ್ಲಿ ಪಿಎಚ್.ಡಿ. ಪದವಿಯನ್ನು ಪಡೆದರು. ನ್ಯಾಷನಲ್ ಕಾಲೇಜು, ಬೆಂಗಳೂರಿನಲ್ಲಿ ಭೌತಶಾಸ್ತ್ರದ ಅಧ್ಯಾಪಕರಾಗಿ ಸೇರಿಕೊಂಡ ಇವರು, ತದನಂತರ ಕಾಲೇಜಿನ ಪ್ರಾಂಶುಪಾಲರಾದರು. ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳೂ ಆಗಿದ್ದರು.
ಅಧ್ಯಾಪಕ, ಆಡಳಿತಗಾರ, ಸ್ನೇಹಮಯ ಮಾನವತಾವಾದಿ, ವಿಚಾರವಾದಿ ಹೆಚ್.ಎನ್. ಸರಳ ಜೀವನ ನಡೆಸುತ್ತಿದ್ದರು. ಅವರು ರಾಷ್ಟ್ರೀಯತಾವಾದಿಯಾಗಿದ್ದರು ಮತ್ತು ಖಾದಿ ಬಟ್ಟೆಯನ್ನೇ ಧರಿಸುತ್ತಿದ್ದರು. ಮೇಲ್ಮಟ್ಟದ ಹಾಸ್ಯ ಪ್ರಜ್ಞೆ ಅವರದು ಎಂದು ಹೆಚ್.ಎನ್. ಅವರ ನಿಕಟವರ್ತಿಗಳ ಅಭಿಪ್ರಾಯ.
ವಿಜ್ಞಾನದಲ್ಲಿ, ವೈಜ್ಞಾನಿಕ ಮನೋಭಾವದಲ್ಲಿ ಅವರಿಗೆ ಅಚಲವಾದ ನಂಬಿಕೆ. ಮೂಢನಂಬಿಕೆ, ಮೌಢ್ಯದ ವಿರುದ್ಧ ಸತತ ಹೋರಾಟ. ಅವರು 1962ರಲ್ಲಿ ಬೆಂಗಳೂರು ವಿಜ್ಞಾನ ವೇದಿಕೆ (Bangalore Science forum) ಎಂಬ ವಿಜ್ಞಾನ ವೇದಿಕೆಯನ್ನು ಸ್ಥಾಪಿಸಿ ಅದರ ಅಧ್ಯಕ್ಷರಾದರು. ಸಂಗೀತ, ನಾಟಕ, ನೃತ್ಯ ಮುಂತಾದ ಲಲಿತ ಕಲೆಗಳಿಗೆ ಮೊದಲಿನಿಂದಲೂ ಪ್ರೋತ್ಸಾಹ ನೀಡಿದ್ದರು.
ಶ್ರೀ ಸತ್ಯಬಾಬಾ ಅವರು ತಮ್ಮ ಪವಾಡಗಳಿಗೆ ಪ್ರಸಿದ್ಧರಾಗಿದ್ದರು. ಎಚ್. ನರಸಿಂಹಯ್ಯನವರು ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದಾಗ 1976ರಲ್ಲಿ ‘ಪವಾಡ ಮತ್ತು ಪರೀಕ್ಷಿಸಿ ನೋಡಬಹುದಾದ ಮೂಢನಂಬಿಕೆಗಳ ತನಿಖಾ ಸಮಿತಿʼ (Committee to Investigate Miracles and Verifiable Superstitions) ಯನ್ನು ನೇಮಿಸಿ ಅದಕ್ಕಾಗಿ 25,000 ರೂಪಾಯಿಗಳನ್ನು ಮಂಜೂರು ಮಾಡಿದರು. ಎಚ್. ನರಸಿಂಹಯ್ಯನವರು ಅಧ್ಯಕ್ಷರಾಗಿದ್ದ ಸಮಿತಿಯಲ್ಲಿ ಪ್ರಖ್ಯಾತ ವಿಜ್ಞಾನಿಗಳು, ಸಮಾಜ ಸೇವಕರು, ಮನೋವೈದ್ಯರೂ ಸೇರಿದಂತೆ ಹನ್ನೊಂದು ಮಂದಿ ಸದಸ್ಯರಿದ್ದರು. ಸಮಿತಿಯ ಕಡೆಯಿಂದ ಸಾಯಿಬಾಬಾ ಅವರಿಗೆ ಶೂನ್ಯದಿಂದ ವಸ್ತುಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ವಿಜ್ಞಾನದ ವ್ಯವಸ್ಥಿತ ವಿಧಾನಗಳಿಂದ ಪರೀಕ್ಷೆ ನಡೆಸಲು ಅವಕಾಶ ನೀಡಬೇಕೆಂದು ಕೋರಿ ಮೂರು ಪತ್ರಗಳು ರವಾನೆಯಾದವು. ಆದರೆ ಸಾಯಿಬಾಬಾ ಅವರ ಕಡೆಯಿಂದ ಉತ್ತರ ಬರಲಿಲ್ಲ. ಸಾಯಿಬಾಬಾ ಅವರಿಂದ ಏನೂ ಪ್ರತಿಕ್ರಿಯೆ ಬರದ ಕಾರಣ ಪತ್ರಗಳನ್ನು ಪತ್ರಿಕೆಗಳ ಪ್ರಕಟಣೆಗಾಗಿ ಬಿಡುಗಡೆ ಮಾಡಲಾಯಿತು. ಪರಿಣಾಮವಾಗಿ ಈ ವಿಷಯ ರಾಷ್ಟ್ರಮಟ್ಟದಲ್ಲಿ ಚರ್ಚೆಗೊಳಗಾಯಿತು.
ಅವರ ವಿಶಿಷ್ಟ ಸೇವೆಗಾಗಿ
ಪ್ರಶಸ್ತಿಗಳು ದೊರೆಕಿವೆ.
ಡಾ. ಹೆಚ್.ನರಸಿಂಹಯ್ಯನವರು ೨೦೦೫ ಜನವರಿ ೩೧ರಂದು ನಿಧನರಾದರು