ಎಡ್ವರ್ಡ್ ಟೇಲರ್ ೧೬೪೨-೧೭೨೯ ವಸಾಹತು ಕಾಲದ ಅಮೆರಿಕದ ಪ್ರಮುಖ ಕವಿ.
ಹುಟ್ಟಿದ್ದು ಇಂಗ್ಲೆಂಡಿನ ಕಾವೆಂಟ್ರಿಯಲ್ಲಿ. ಅಂದಿನ ಧಾರ್ಮಿಕ ವ್ಯವಸ್ಥೆಯನ್ನು ಒಪ್ಪದೆ ಶಿಕ್ಷಕ ವೃತ್ತಿ ತ್ಯಜಿಸಿ ನ್ಯೂ ಇಂಗ್ಲೆಂಡಿಗೆ ವಲಸೆ ಹೋದ. 1671ರಲ್ಲಿ ಹಾರ್ವರ್ಡ್ ಕಾಲೇಜಿನಿಂದ ಪದವೀಧರನಾಗಿ ವೆಸ್ಟ್ ಫಿಲ್ಡ್‍ನ ಒಂದು ಗಡಿಹಳ್ಳಿಯಲ್ಲಿ ಪಾದ್ರಿಯಾದ. ತನ್ನ ಕಾವ್ಯಗಳನ್ನು ಯಾರೂ ಪ್ರಕಟಿಸಕೂಡದು ಎಂಬುದು ಇವನ ಇಚ್ಛೆ. ಹೀಗಾಗಿ ಅವು ಬೆಳಕು ಕಂಡಿದ್ದು 1939ರಲ್ಲಿ.
ಟೇಲರ್‍ನ ಕಾವ್ಯಗಳು ಎರಡು ಬಗೆಯವು. ಗಾಡ್ಸ್ ಡಿಟರ್ಮಿನೇಷನ್ಸ್ ಟಚಿಂಗ್ ಹಿಸ್ ಎಲೆಕ್ಟ್ ಎಂಬುದು ದೇವರ ಅನುಗ್ರಹ. ಮಹಿಮೆಗಳನ್ನು ಪಾಪ ಮತ್ತು ಪಾಪ ವಿಮೋಚನೆಗಳನ್ನು ವರ್ಣಿಸುವ ವಿಸ್ತøತ ಪದ್ಯಶ್ರೇಣಿ. ದ ಸ್ಯಾಕ್ರಮೆಂಟಲ್ ಮೆಡಿಟೇಷನ್ಸ್ ಎಂಬುದು 44ವರ್ಷ ಈತ ನಡೆಸಿದ ಚಿಂತನೆಗಳ 200ಧ್ಯಾನಗಳನ್ನು ಒಳಗೊಂಡಿದೆ. ಧಾರ್ಮಿಕ ಉತ್ಕಟತೆ, ಸರಳ ಪದಪ್ರಯೋಗ, ಛಂದೋವೈವಿಧ್ಯ, ಪ್ರತಿಮಾವಿನ್ಯಾಸದ ನಿತ್ಯನೂತನತೆ-ಇವು ಟೇಲರನ ಕಾವ್ಯದ ಲಕ್ಷಣಗಳು. ಟಿ.ಎಚ್.ಜಾನ್ಸನ್ ಸಂಪಾದಿಸಿರುವ (1939) ದಿಪೊಯಟಿಕಲ್ ವಕ್ರ್ಸ್ ಆಫ್ ಎಡ್ವರ್ಡ್ ಟೇಲರ್ ಎಂಬ ಪುಸ್ತಕದಲ್ಲಿ ಕವಿಯ ಅನೇಕ ಕೃತಿಗಳೂ ಅವನ ಸಂಕ್ಷಿಪ್ತ ಜೀವನ ಚಿತ್ರವೂ ಇವೆಯಲ್ಲದೆ ಪೂರಕವಾಗಿ ವಿಮರ್ಶಾತ್ಮಕ ಮುನ್ನುಡಿಯೂ ಟಿಪ್ಪಣಿಗಳೂ ಇವೆ.