ಎಲಿಜಬೆತ್ ಸ್ಪೆಲ್ಕೆ | |
---|---|
![]() | |
ಜನನ | May 28, 1949 |
ಕಾರ್ಯಕ್ಷೇತ್ರ | ಅಭಿವೃದ್ಧಿ ಮನೋವಿಜ್ಞಾನ, ಅರಿವಿನ ಬೆಳವಣಿಗೆ |
ಸಂಸ್ಥೆಗಳು | ಹಾರ್ವರ್ಡ್ ವಿಶ್ವವಿದ್ಯಾಲಯ |
ವಿದ್ಯಾಭ್ಯಾಸ | ಕಾರ್ನೆಲ್ ವಿಶ್ವವಿದ್ಯಾಲಯ, ಯೇಲ್ ವಿಶ್ವವಿದ್ಯಾಲಯ, ರಾಡ್‌ಕ್ಲಿಫ್ ಕಾಲೇಜ್ |
ಜಾಲತಾಣ http://harvardlds.org/our-labs/spelke-labspelke-lab-members/elizabeth-spelke/ |
ಎಲಿಜಬೆತ್ ಶಿಲಿನ್ ಸ್ಪೆಲ್ಕೆ ಎಫ್‌ಬಿಎ ರವರು (ಜನನ ಮೇ ೨೮, ೧೯೪೯) ಹಾರ್ವರ್ಡ್ ವಿಶ್ವವಿದ್ಯಾನಿಲಯದ ಸೈಕಾಲಜಿ ವಿಭಾಗದಲ್ಲಿ ಅಮೇರಿಕನ್ ಅರಿವಿನ ಮನಶ್ಶಾಸ್ತ್ರಜ್ಞೆಯಾಗಿದ್ದಾರೆ. ಇವರು ಅಭಿವೃದ್ಧಿ ಅಧ್ಯಯನಗಳ ಪ್ರಯೋಗಾಲಯದ ನಿರ್ದೇಶಕರಾಗಿದ್ದರು.
೧೯೮೦ ರ ದಶಕದಿಂದ, ಅವರು ಅರಿವಿನ ಸಾಮರ್ಥ್ಯಗಳ ಪರೀಕ್ಷೆಯ ಪ್ರಯೋಗವನ್ನು ಶಿಶುಗಳು ಮತ್ತು ಚಿಕ್ಕ ಮಕ್ಕಳ ಮೇಲೆ ನಡೆಸಿದರು. ಮಾನವರು ಸಹಜವಾದ ಮಾನಸಿಕ ಸಾಮರ್ಥ್ಯಗಳ ದೊಡ್ಡ ಶ್ರೇಣಿಯನ್ನು ಹೊಂದಿದ್ದಾರೆ ಎಂದು ಅವರು ಸೂಚಿಸಿದ್ದಾರೆ. [೧] ಇತ್ತೀಚಿನ ವರ್ಷಗಳಲ್ಲಿ, ಅವರು ಪುರುಷರು ಮತ್ತು ಮಹಿಳೆಯರ ನಡುವಿನ ಅರಿವಿನ ವ್ಯತ್ಯಾಸಗಳ ಚರ್ಚೆಗೆ ಪ್ರಮುಖ ಕೊಡುಗೆಗಳನ್ನು ನೀಡಿದ್ದಾರೆ. [೨] ಗಂಡು ಮತ್ತು ಹೆಣ್ಣುಗಳ ಬೌದ್ಧಿಕ ಸಾಮರ್ಥ್ಯಗಳಲ್ಲಿ ಗಮನಾರ್ಹ ಅಸಮಾನತೆಯ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂಬ ನಿಲುವನ್ನು ಅವರು ಸಮರ್ಥಿಸುತ್ತಾರೆ. [೩]
ಸ್ಪೆಲ್ಕೆರವರು ತಮ್ಮ ಪದವಿಪೂರ್ವ ಶಿಕ್ಷಣವನ್ನು ರಾಡ್‌ಕ್ಲಿಫ್ ಕಾಲೇಜಿನಲ್ಲಿ ಮಕ್ಕಳ ಮನಶ್ಶಾಸ್ತ್ರಜ್ಞರಾದ ಜೆರೋಮ್ ಕಗನ್ ಅವರೊಂದಿಗೆ ಮಾಡಿದರು. ಅವರ ಪ್ರಬಂಧವು ಶಿಶುಗಳಲ್ಲಿನ ಬಾಂಧವ್ಯ ಮತ್ತು ಭಾವನಾತ್ಮಕ ಪ್ರತಿಕ್ರಿಯೆಗಳ ಕುರಿತು ಅಧ್ಯಯನವನ್ನು ಒಳಗೊಂಡಿದೆ. ಶಿಶುಗಳು ನಿಜವಾಗಿಯೂ ಏನನ್ನು ಅರ್ಥಮಾಡಿಕೊಂಡಿವೆ ಎಂಬ ಕಲ್ಪನೆಯನ್ನು ಅವರು ಹೊಂದಿರಬೇಕು ಎಂದು ಅವರು ಅರಿತುಕೊಂಡರು ಮತ್ತು ಮಕ್ಕಳ ಮನೋವಿಜ್ಞಾನದ ಅರಿವಿನ ಅಂಶದಲ್ಲಿ ತಮ್ಮ ಜೀವಮಾನದ ಆಸಕ್ತಿಯನ್ನು ಪ್ರಾರಂಭಿಸಿದರು.
ಅವರು ತಮ್ಮ ಪಿಎಚ್‌ಡಿಯನ್ನು ಕಾರ್ನೆಲ್‌ನಲ್ಲಿ ಬೆಳವಣಿಗೆಯ ಮನಶ್ಶಾಸ್ತ್ರಜ್ಞ ಎಲೀನರ್ ಗಿಬ್ಸನ್ ರವರೊಂದಿಗೆ ಮಾಡಿದರು. ಅವರೊಂದಿಗೆ ಅವರು ಚಿಕ್ಕ ಮಕ್ಕಳ ಮೇಲೆ ಪ್ರಯೋಗಗಳನ್ನು ಹೇಗೆ ವಿನ್ಯಾಸಗೊಳಿಸಬೇಕೆಂದು ಕಲಿತರು.
ಅವರ ಮೊದಲ ಶೈಕ್ಷಣಿಕ ಪೋಸ್ಟ್ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಮಾಡಿದರು. ಅಲ್ಲಿ ಅವರು ಒಂಬತ್ತು ವರ್ಷಗಳ ಕಾಲ ಕೆಲಸ ಮಾಡಿದರು. ನಂತರ ಅವರು ಮೊದಲು ಕಾರ್ನೆಲ್‌ಗೆ ಹೋದರು ಮತ್ತು ನಂತರ ಎಂ ಐ ಟಿಯ ಮೆದುಳು ಮತ್ತು ಅರಿವಿನ ವಿಜ್ಞಾನ ವಿಭಾಗಕ್ಕೆ ತೆರಳಿದರು. ಅವರು ೨೦೦೧ ರಿಂದ ಹಾರ್ವರ್ಡ್‌ನಲ್ಲಿ ಪ್ರಾಧ್ಯಾಪಕರಾಗಿದ್ದಾರೆ.[೪]
ಸ್ಪೆಲ್ಕೆ ೧೯೯೭ ರಲ್ಲಿ ಅಮೇರಿಕನ್ ಅಕಾಡೆಮಿ ಆಫ್ ಆರ್ಟ್ಸ್ ಅಂಡ್ ಸೈನ್ಸಸ್‌ನ ಫೆಲೋ ಆಗಿ ಆಯ್ಕೆಯಾದರು.[೫] ಅವರು ೨೦೦೯ ರ ಜೀನ್ ನಿಕೋಡ್ ಪ್ರಶಸ್ತಿಗೆ ಭಾಜನರಾಗಿದ್ದರು ಮತ್ತು ಫ್ರೆಂಚ್ ನ್ಯಾಷನಲ್ ಸೆಂಟರ್ ಫಾರ್ ಸೈಂಟಿಫಿಕ್ ರಿಸರ್ಚ್ ಆಯೋಜಿಸಿದ್ದ ಪ್ಯಾರಿಸ್‌ನಲ್ಲಿ ಉಪನ್ಯಾಸಗಳ ಸರಣಿಯನ್ನು ನೀಡಿದರು. ಅವರು ೨೦೧೫ರಲ್ಲಿ ಬ್ರಿಟಿಷ್ ಅಕಾಡೆಮಿಯ ಸಂಬಂಧಿತ ಫೆಲೋ ಆಗಿ ಆಯ್ಕೆಯಾದರು.[೬] ೨೦೧೬ರಲ್ಲಿ ಸ್ಪೆಲ್ಕೆ ಅರಿವಿನ ವಿಜ್ಞಾನಕ್ಕಾಗಿ ಸಿ.ಎಲ್.ಡಿ ಕಾರ್ವಾಲೋ-ಹೆನೆಕೆನ್ ಪ್ರಶಸ್ತಿಯನ್ನು ಗೆದ್ದರು. [೭]ಇವರಿಗೆ ಫ್ರಾನ್ಸ್, ನೆದರ್ಲ್ಯಾಂಡ್ಸ್, ಸ್ವೀಡನ್ ಮತ್ತು ಉರುಗ್ವೆಯಲ್ಲಿ ಸ್ಪೆಲ್ಕೆಗೆ ಗೌರವಾನ್ವಿತ ಕಾಸಾ ಪದವಿಯನ್ನು ಹಲವಾರು ಬಾರಿ ನೀಡಿ ಗೌರವಿಸಲಾಯಿತು. [೮] [೯]
ಲ್ಯಾಬೊರೇಟರಿ ಆಫ್ ಡೆವಲಪ್‌ಮೆಂಟಲ್ ಸ್ಟಡೀಸ್‌ನಲ್ಲಿ ನಡೆಸಿದ ಪ್ರಯೋಗಗಳು ರಾಬರ್ಟ್ ಫ್ಯಾಂಟ್ಜ್ ಅಭಿವೃದ್ಧಿಪಡಿಸಿದ ಆದ್ಯತೆಯ ನೋಟವನ್ನು ಬಳಸಿಕೊಂಡು ಶಿಶುಗಳ ಅರಿವಿನ ಸಾಮರ್ಥ್ಯಗಳನ್ನು ನಿರ್ಣಯಿಸಲು ಪ್ರಯತ್ನಿಸುತ್ತವೆ. ಇದು ವಿಭಿನ್ನ ಚಿತ್ರಗಳನ್ನು ಶಿಶುಗಳಿಗೆ ತೋರಿಸಿ ಅವರ ಗಮನವು ಅದರ ಮೇಲೆ ಕೇಂದ್ರೀಕರಿಸುವ ಸಮಯದ ಆಧಾರದ ಮೇಲೆ ಅವರಿಗೆ ಯಾವುದು ಹೆಚ್ಚು ಆಕರ್ಷಕವಾಗಿದೆ ಎಂಬುದನ್ನು ನಿರ್ಣಯಿಸುತ್ತದೆ.
ಉದಾಹರಣೆಗೆ, ಸಂಶೋಧಕರು ಮಗುವಿಗೆ ನಿರ್ದಿಷ್ಟ ಸಂಖ್ಯೆಯ ವಸ್ತುಗಳನ್ನು ಹೊಂದಿರುವ ಚಿತ್ರವನ್ನು ಪದೇ ಪದೇ ತೋರಿಸಬಹುದು. ಮಗುವನ್ನು ಅಭ್ಯಾಸ ಮಾಡಿದ ನಂತರ, ಅವರು ಹೆಚ್ಚು ಅಥವಾ ಕಡಿಮೆ ವಸ್ತುಗಳೊಂದಿಗೆ ಎರಡನೇ ಚಿತ್ರವನ್ನು ಪ್ರಸ್ತುತಪಡಿಸುತ್ತಾರೆ. ಮಗುವು ಹೊಸ ಚಿತ್ರವನ್ನು ಹೆಚ್ಚು ಸಮಯದವರೆಗೆ ನೋಡಿದರೆ, ಮಗು ವಿಭಿನ್ನ ಅಂಶಗಳ್ಳನ್ನು ಪ್ರತ್ಯೇಕಿಸಬಹುದು ಎಂದು ಸಂಶೋಧಕರು ಊಹಿಸಬಹುದು.
ಇದೇ ರೀತಿಯ ಪ್ರಯೋಗಗಳ ಒಂದು ಶ್ರೇಣಿಯ ಮೂಲಕ, ಶಿಶುಗಳು ಹೆಚ್ಚು ಅತ್ಯಾಧುನಿಕ, ಸಹಜ ಮಾನಸಿಕ ಕೌಶಲ್ಯಗಳನ್ನು ಹೊಂದಿದ್ದಾರೆ ಎಂದು ಸೂಚಿಸಲು ಸ್ಪೆಲ್ಕೆ ತನ್ನ ಪುರಾವೆಗಳನ್ನು ಅರ್ಥೈಸಿದರು. ವಿಲಿಯಂ ಜೇಮ್ಸ್ ಹುಟ್ಟುಹಾಕಿದ ಊಹೆಗೆ ಇದು ಪರ್ಯಾಯವನ್ನು ಒದಗಿಸುತ್ತದೆ. ಶಿಶುಗಳು ಯಾವುದೇ ವಿಶಿಷ್ಟವಾದ ಅರಿವಿನ ಸಾಮರ್ಥ್ಯಗಳನ್ನು ಹೊಂದಿರುವುದಿಲ್ಲ ಆದರೆ ಶಿಕ್ಷಣ ಮತ್ತು ಅನುಭವದ ಮೂಲಕ ಅವುಗಳನ್ನು ಪಡೆದುಕೊಳ್ಳುತ್ತವೆ ಎಂದು ಇವರ ಅಧ್ಯಯನ ಹೇಳುತ್ತದೆ.
೨೦೦೫ ರಲ್ಲಿ, ಆಗಿನ ಹಾರ್ವರ್ಡ್ ಅಧ್ಯಕ್ಷರಾದ ಲಾರೆನ್ಸ್ ಸಮ್ಮರ್ಸ್, ಉನ್ನತ ಮಟ್ಟದ ವಿಜ್ಞಾನ ಮತ್ತು ಎಂಜಿನಿಯರಿಂಗ್ ಹುದ್ದೆಗಳಲ್ಲಿ ಮಹಿಳೆಯರಿಗಿಂತ ಪುರುಷರ ಪ್ರಾಬಲ್ಯವನ್ನು ಊಹಿಸಿದರು. ಪುರುಷ ಮತ್ತು ಸ್ತ್ರೀ ಜನಸಂಖ್ಯೆಯ ನಡುವಿನ ಸಹಜ ಸಾಮರ್ಥ್ಯಗಳ ವ್ಯತ್ಯಾಸದಲ್ಲಿನ ಅಂಕಿಅಂಶಗಳ ವ್ಯತ್ಯಾಸವು ಒಂದು ಪಾತ್ರವನ್ನು ವಹಿಸುತ್ತದೆ ಎಂದು ಅವರು ಊಹಿಸಿದ್ದಾರೆ (ಪುರುಷ ವ್ಯತ್ಯಾಸವು ಹೆಚ್ಚಿನದಾಗಿರುತ್ತದೆ, ಇದರ ಪರಿಣಾಮ ಹೆಚ್ಚು ವಿಪರೀತವಾಗಿರುತ್ತದೆ). ಅವರ ಮಾತು ತಕ್ಷಣವೇ ಬಿಸಿ ಬಿಸಿ ಚರ್ಚೆಗೆ ಕಾರಣವಾಯಿತು. ಸ್ಪೆಲ್ಕೆ ಸಮ್ಮರ್ಸ್‌ನ ಪ್ರಬಲ ವಿಮರ್ಶಕರಲ್ಲಿ ಒಬ್ಬರಾಗಿದ್ದರು, ಮತ್ತು ಏಪ್ರಿಲ್ ೨೦೦೫ ರಲ್ಲಿ, ಅವರು ಈ ವಿಷಯದ ಬಗ್ಗೆ ಮುಕ್ತ ಚರ್ಚೆಯಲ್ಲಿ ಸ್ಟೀವನ್ ಪಿಂಕರ್ ಅವರನ್ನು ಎದುರಿಸಿದರು. [೨] ೫ ತಿಂಗಳಿಂದ ೭ ವರ್ಷ ವಯಸ್ಸಿನ ಗಂಡು ಮತ್ತು ಹೆಣ್ಣು ಮಕ್ಕಳ ಮಾನಸಿಕ ಸಾಮರ್ಥ್ಯಗಳ ನಡುವೆ ತನ್ನದೇ ಆದ ಪ್ರಯೋಗಗಳು ಯಾವುದೇ ವ್ಯತ್ಯಾಸವನ್ನು ಬಹಿರಂಗಪಡಿಸುವುದಿಲ್ಲ ಎಂದು ಅವರು ಘೋಷಿಸಿದರು. [೧೦]