ಎಲೊಡಿ ಗೆಡಿನ್

ಎಲೊಡಿ ಗೆಡಿನ್ ೧೯೬೭ ರಲ್ಲಿ ಜನಿಸಿದ ಓರ್ವ ಜೀವವೈದ್ಖಕೀಯ (ಬಯೋಮೆಡಿಕಲ್)ಸಂಶೋಧಕಿ. ಆಕೆ ವಂಶವಾಹಿ ಶ್ರೀಣೀಕರಣದ ತಂತ್ರಗಳನ್ನು ಬಳಸಿ ಮನುಷ್ಯನನ್ನು ಖಾಯಿಲೆಗೆ ದೂಡುವ ಸೂಕ್ಷ್ಮ ಜೀವಿಗಳ ಕುರಿತಾಗಿ ಅಧ್ಯಯನ ನಡೆಸುತ್ತಿದ್ದಾರೆ. ಇದು ಮೇಲ್ನೋಟಕ್ಕೆ ಕಾಣಿಸುವಷ್ಟು ಸುಲಭದ ಕೆಲಸವಲ್ಲ. ವಂಶವಾಹಿಗಳನ್ನು ಗುರುತಿಸುವುದು, ಅದರಲ್ಲಿ ವಿವಿಧ ರಾಸಾಯನಿಕಧಾತುಗಳನ್ನು ತಿಳಿಯುವುದು, ಅವುಗಳ ಕಾರ್ಯವೈಖರಿ, ವರ್ತನೆಯನ್ನು ಅಭ್ಯಸಿಸುವುದು ಇಲ್ಲಿ ಪ್ರಮುಖವಾಗುತ್ತದೆ.ಆಳವಾದ ಸಂಶೋಧನೆ ಹಾಗೂ ವಿವಿಧ ವಿಜ್ಞಾನಿಗಳಿಂದ ಮಾಹಿತಿ ಕ್ರೋಢೀಕರಣದ ಮೂಲಕ ಗೆಡಿನ್ ಅನೀಕ ಸೂಕ್ಷ್ಮ ವೈರಾಣುಗಳ ಚರ್ಯೆ ಹಾಗೂ ಅವುಗಳ ವೈರುಧ್ಯಗಳನ್ನು ಸಮರ್ಥವಾಗಿ ದಾಖಲು ಮಾಡಿದ್ದಾರೆ. ಇದರಿಂದಾಗಿ ಈ ವೈರಾಣುಗಳು ಉಂಟು ಮಾಡುವ ರೋಗದ ವಿರುದ್ಧ ಔಷಧಿಗಳನ್ನು ಕಂಡುಹಿಡಿಯುವ ಕೆಲಸ ಸುಲಭವಾಗಿದೆ. ಮಾಲಿಕ್ಯುಲರ್ ಜೆನೆಟಿಕ್ಸ್ ಎನ್ನುವ ಜೀವವೈದ್ಯಕೀಯ ಶಾಸ್ತ್ರದ ಅಧ್ಯಯನ ಶಿಸ್ತು ಎಷ್ಟು ಪರಿಣಾಮಕಾರಿ ಹಾಗೂ ಜೀವಪರ ಎನ್ನುವುದನ್ನು ಗೆಡಿನ್ ನಿರೂಪಿಸಿದ್ದಾರೆ. ತಮ್ಮ ವೃತ್ತಿಜೀವನವನ್ನು ೨೦೦೦ದಲ್ಲಿ ಆರಂಭಿಸಿದರು.ಇನ್ಸ್ಟಿಟ್ಯೂಟ್ ಫಾರ್ ಜಿನೋಮಿಕ್ ರಿಸರ್ಚ್ ನಲ್ಲಿ ಆರು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ.[]

ಉಲ್ಲೇಖಗಳು

[ಬದಲಾಯಿಸಿ]
  1. "Department of Infectious Diseases and Microbiology biography". University of Pittsburgh. Archived from the original on 2013-04-11. Retrieved 2017-07-04.


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]