ಎಲ್ಲಾ ಬಂಗಾಳ ಮಹಿಳಾ ಒಕ್ಕೂಟ |
---|
ಪಶ್ಚಿಮ ಬಂಗಾಳದಲ್ಲಿ ಅಸಹಾಯಕ, ಶೋಷಿತ ಮತ್ತು ಹಲವಾರು ಸಮಸ್ಯೆಗಳಿಂದ ಪೀಡಿತ ಮಹಿಳೆಯರಿಗೆ ಸಹಾಯ ಮಾಡಲು 1932ರಲ್ಲಿ ಅಖಿಲ ಬಂಗಾಳ ಮಹಿಳಾ ಒಕ್ಕೂಟ ಪ್ರಾರಂಭಿಸಲಾಯಿತು.[೧] ಇದನ್ನು ಸಮಾನ ಮನಸ್ಕ ಮಹಿಳೆಯರು ಸೇರಿ ತಮ್ಮಂತೆಯೇ ತುಳಿತಕ್ಕೊಳಗಾದ ಇತರರ ಸಹಾಯಕ್ಕಾಗಿ ಪ್ರಾರಂಭಿಸಿದರು
ಪಶ್ಚಿಮ ಬಂಗಾಳ ಮತ್ತು ಕಲ್ಕತ್ತಾ ಪ್ರದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳ ಕಳ್ಳಸಾಗಣೆ ತುಂಬಾ ಹೆಚ್ಚಾಗಿದೆ ಮತ್ತು ಈ ಎನ್ಜಿಒ ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನದಲ್ಲಿ ಉಗಮವಾಯಿತು.[೨][೩]
ಎರಡು ವಿಶ್ವ ಯುದ್ಧಗಳ ನಡುವೆ, ನಾವಿಕರು ಮತ್ತು ಸೈನಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಯಿತು. ಈ ಸಂದರ್ಭದಲ್ಲಿ ಹೆಣ್ಣು ಮಕ್ಕಳ ಕಳ್ಳಸಾಗಾಣಿಕಾ ವ್ಯವಹಾರವು ಕಲ್ಕತ್ತಾದಲ್ಲಿ ತನ್ನ ಮಾರುಕಟ್ಟೆಯನ್ನು ಕಂಡುಕೊಂಡಿತು.[೪] ಮಹಿಳೆಯರು ಮತ್ತು ಮಕ್ಕಳನ್ನು ವೇಶ್ಯಾಗೃಹಗಳಿಂದ ರಕ್ಷಿಸಲು ಪೊಲೀಸರಿಗೆ ಅನುವು ಮಾಡಿಕೊಡುವ ಸಲುವಾಗಿ ಕಲ್ಕತ್ತಾ ಅನೈತಿಕ ಸಂಚಾರ ಕಾಯ್ದೆ ಮತ್ತು ಮಕ್ಕಳ ಕಾಯ್ದೆಯನ್ನು ಅಂಗೀಕರಿಸಲಾಯಿತು.[೫] ಪ್ರಖ್ಯಾತ ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತರಾದ ಶ್ರೀ ಜೆ. ಎನ್. ಬಸು ಅವರು, ದಿ ಬೆಂಗಾಲ್ ಸಪ್ರೆಷನ್ ಆಫ್ ಇಮೋರಲ್ ಟ್ರಾಫಿಕ್ ಬಿಲ್ ಎಂಬ ಶೀರ್ಷಿಕೆಯ ಹೊಸ ಮಸೂದೆಯನ್ನು 1932ರಲ್ಲಿ ಬಂಗಾಳ ವಿಧಾನಸಭೆಯ ಮುಂದೆ ಮಂಡಿಸಿದರು.[೬] ಬಂಗಾಳದ ಮಹಿಳಾ ಪ್ರೆಸಿಡೆನ್ಸಿ ಕೌನ್ಸಿಲ್ ಮತ್ತು ಅಖಿಲ ಬಂಗಾಳ ಮಹಿಳಾ ಸಮ್ಮೇಳನವು ಬಂಗಾಳದಲ್ಲಿ ಹೆಣ್ಣಿನ ವ್ಯಾಪಾರದ ನಿಗ್ರಹಕ್ಕಾಗಿ ಸ್ವತಂತ್ರ ಸಂಸ್ಥೆಯನ್ನು ರಚಿಸಲು ನಿರ್ಧರಿಸಿದವು. ಈ ಸಂಘವು ಅಖಿಲ ಬಂಗಾಳ ಮಹಿಳಾ ಒಕ್ಕೂಟ ಹೆಸರಿನಲ್ಲಿ ಅಸ್ತಿತ್ವಕ್ಕೆ ಬಂದಿತು ಮತ್ತು 1860ರ XXI ಕಾಯಿದೆಯ ಅಡಿಯಲ್ಲಿ ನೋಂದಾಯಿಸಲ್ಪಟ್ಟಿತು. ಅಖಿಲ ಬಂಗಾಳ ಮಹಿಳಾ ಒಕ್ಕೂಟವು ಜಿನೀವಾದಲ್ಲಿರುವ ಅಂತಾರಾಷ್ಟ್ರೀಯ ನಿರ್ಮೂಲನವಾದಿ ಒಕ್ಕೂಟಕ್ಕೆ ಸಂಬಂಧಿಸಿದೆ.[೧] 1933ರ ಏಪ್ರಿಲ್ 1ರಂದು ಮೇಲೆ ತಿಳಿಸಿದ ಮಸೂದೆಯನ್ನು ಅಂಗೀಕರಿಸಲಾಯಿತು. ಇದರ ಸಂಸ್ಥಾಪಕ ಸದಸ್ಯ ರೊಮೋಲಾ ಸಿನ್ಹಾ ಅವರು ಪಶ್ಚಿಮ ಬಂಗಾಳದ ಕೇಂದ್ರ ಸಮಾಜ ಕಲ್ಯಾಣ ಮಂಡಳಿಯ ಮೊದಲ ಅಧ್ಯಕ್ಷರಾಗಿದ್ದರು.
ಸಂಸ್ಥೆಗೆ ಗಮನಾರ್ಹ ಕೊಡುಗೆ ನೀಡಿದ ಇತರ ಗಮನಾರ್ಹ ಮಹಿಳೆಯರಲ್ಲಿ ಶ್ರೀಮತಿ ಮಾನೆಕ್ ಮೋದಿ, ಶ್ರೀಮತಿ ಶೀಲಾ ದಾವರ್ ಮತ್ತು ಶ್ರೀಮತಿ ಬೇಲಾ ಸೇನ್ ಸೇರಿದ್ದಾರೆ. ರಾಜಕುಮಾರಿ ಅನ್ನಿಯ ಭೇಟಿಯು (ಜನವರಿ 2007 ರಲ್ಲಿ) ಸಂಸ್ಥೆಯ ಇತಿಹಾಸದಲ್ಲಿ ಒಂದು ಪ್ರಮುಖ ಘಟನೆಯಾಗಿದೆ.[೭] ಶ್ರೀಮತಿ ಸಿನ್ಹಾ ಅವರ ನಿಧನದ ನಂತರ ಶ್ರೀಮತಿ ದಾವರ್ ಕ್ಲಬ್ನ ಅಧ್ಯಕ್ಷರಾದರು. ಅವರು ಲವ್ಲಾಕ್ ಪ್ಲೇಸ್ನಲ್ಲಿರುವ ಬಸ್ಟೀ ವೆಲ್ಫೇರ್ ಸೊಸೈಟಿಯನ್ನು ಸಹ ಸ್ಥಾಪಿಸಿದರು. ಶ್ರೀಮತಿ ಬೇಲಾ ಸೇನ್ ಅವರು ದೀರ್ಘಕಾಲದವರೆಗೆ ನಿರ್ಮಾಣ ವಿಭಾಗದ ಅಧ್ಯಕ್ಷರಾಗಿದ್ದರು.
ಅಖಿಲ ಬಂಗಾಳ ಮಹಿಳಾ ಒಕ್ಕೂಟದ ಕಾರ್ಯದಲ್ಲಿ ಸೇವ್ ದಿ ಚಿಲ್ಡ್ರನ್ ಫಂಡ್ನಂತಹ ಹಲವಾರು ಎನ್ಜಿಒಗಳಿಂದ ಸಹಾಯ ಮಾಡುತ್ತಿವೆ.[೮]
ಈ ಎನ್.ಜಿ.ಓ ದ ಮಹತ್ವದ ಯೋಜನೆಗಳು ಕೆಳಗಿನವಾಗಿದೆ:[ಸಾಕ್ಷ್ಯಾಧಾರ ಬೇಕಾಗಿದೆ]
ವೃದ್ಧ ಮಹಿಳೆಯರಿಗೆ ವಸತಿಗಾಗಿ ಮನೆಗಳನ್ನು ನಿರ್ಮಿಸುವುದು.
.ಮಕ್ಕಳ ಕಲ್ಯಾಣ ಮನೆಗಳ ರಚನೆ (ಪ್ರಾಥಮಿಕ ಶಾಲೆಗಳು).
.ವೃತ್ತಿಪರ ತರಬೇತಿ ನೀಡುವುದೂ ಇವರ ಯೋಜನೆಯಾಗಿದೆ.
.ಪುನರ್ವಸತಿ ಕೇಂದ್ರಗಳ ಅಭಿವೃದ್ಧಿ.
.ಕಲಿಕೆಯಲ್ಲಿ ಅಸಮರ್ಥತೆ ಇರುವವರಿಗೆ ಮರುಪೂರಣ ಯೋಜನೆಯನ್ನು ಇದು ಮಾಡುತ್ತದೆ.
.ಪುನರ್ವಸತಿ ಪಡೆದ ಮಹಿಳೆಯರಿಗೆ ಉದ್ಯೋಗ ಒದಗಿಸುವ ಬೇಕರಿ ಯೋಜನೆಯನ್ನೂ ಇದು ರೂಪಿಸುತ್ತದೆ.
. ಮಕ್ಕಳು ಮತ್ತು ಮಹಿಳೆಯರ ಲೈಂಗಿಕ ವ್ಯಾಪಾರದ ಬಗ್ಗೆ ಸಂಶೋಧನೆ ಮತ್ತು ದಾಖಲಾತಿಯನ್ನು ಇದು ನಡೆಸುತ್ತದೆ.
<ref>
tag; name "about" defined multiple times with different content
{{cite book}}
: CS1 maint: unrecognized language (link)