ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಲ್ಲಿ (IISc)'ಫಿಸಿಕಲ್ ಎಂಜಿನಿಯರಿಂಗ್'ನಲ್ಲಿ 'ಎಂ.ಟೆಕ್ ಶಿಕ್ಷಣ' ದ ಬಳಿಕ ಶಿವಕುಮಾರ್ ೧೯೭೬ ರಲ್ಲಿ ಇಸ್ರೊಗೆ ಸೇರಿದರು. ಲಕ್ಷಗಟ್ಟಲೆ ಕಿಲೋ ಮೀಟರ್ ದೂರವಿರುವ ಉಪಗ್ರಹಗಳ ಚಲನವಲನವನ್ನು ವೀಕ್ಷಿಸುವ ಹಾಗೂ ಅದರಿಂದ ಬರುವ ಸಂವಹನ ಸಂದೇಶಗಳನ್ನು ಸೆರೆಹಿಡಿಯುವ ೩೨ ಮೀಟರ್ 'ಡಿಷ್ ಆಂಟೆನಾದ ಅಭಿವೃದ್ಧಿ'ಯಲ್ಲಿ ಶಿವಕುಮಾರ್ ಸಹಭಾಗಿಯಾಗಿದ್ದಾರೆ.
ಭಾರತದ ಮತ್ತೊಂದು ಮಹತ್ವಾಕಾಂಕ್ಷೆಯ ಯೋಜನೆಯಾದ ಚಂದ್ರಯಾನ-೧[೧] ಕ್ಕೆ ಬೇಕಾದ 'ಟೆಲಿಮೆಟ್ರಿ'ಯನ್ನು ರೂಪಿಸಿದ ವಿಜ್ಞಾನಿಗಳ ತಂಡದಲ್ಲಿ ಶಿವಕುಮಾರ್ ಪಾತ್ರ ಬಹಳ ವಿಶೇಷವಾಗಿದೆ.[೨]