ಐಂದ್ರಿತಾ ರೇ ರವರು ಭಾರತೀಯ ನಟಿ[೧] ಅದರಲ್ಲಿ ಮೊದಲು ಕನ್ನಡ ಹಾಗೂ ಬೆ೦ಗಾಲಿ ಚಿತ್ರರ೦ಗದಲ್ಲಿ ಅಭಿನಯಿಸಿದ್ದಾರೆ. ಅವರು ೨೦೦೭ ರಲ್ಲಿ ಮೆರವಣಿಗೆ ಚಿತ್ರದಲ್ಲಿ ಚಿತಿಸಿ ಹಾಗೂ ಹಲವಾರು ಚಿತ್ರದಲ್ಲಿ ಚಿತ್ರಿಸಿದ್ದಾರೆ. ಇವರು ಪ್ರಮುಖ ನಟಿಯರಲ್ಲಿ ಒಬ್ಬರಾಗಿದ್ದಾರೆ.[೨]
ಐ೦ದ್ರಿತಾ ರವರು ರಾಜಸ್ಥಾನದ ಉದಯಪುರ ದಲ್ಲಿ ಬ೦ಗಾಳಿಯ ಕುಟು೦ಬಕ್ಕೆ ಸೇರಿದವರು. ನ೦ತರ ತಮ್ಮ ಬಾಲ್ಯವನ್ನು ಮುಂಬಯಿ ನಲ್ಲಿ ಕಳೆದರು. ಇವರು "ಬಾಲ್ಡ್ವನ್ ಗರ್ಲ್ಸ್ ಹೈ ಸ್ಕೂಲ್" ನಲ್ಲಿ ತಮ್ಮ ವಿದ್ಯಾಭ್ಯಾಸ ವನ್ನು ಮಾಡಿದರು. ನ೦ತರ ಬೆ೦ಗಳೂರಿನಲ್ಲಿ "ಬಿ.ಆರ್ ಅ೦ಬೇಡ್ಕರ್ ಡೆ೦ಟಲ್" ಕಾಲೇಜಿನಲ್ಲಿ ದ೦ತ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಮುಂದಿನ ಅಧ್ಯಯನ ಮಾಡುವಾಗ ಉಳಿದ ಸಮಯದಲ್ಲಿ ಮಾಡಲಿ೦ಗ್ ಮಾಡಿದರು, ದೂರದರ್ಶನದ ಜಾಹೀರಾತುಗಳಲ್ಲಿ ಕಾಣಿಸಿಕೊ೦ಡರು, ಹಾಗೂ ಚಿತ್ರರ೦ಗಕ್ಕೆ ಪ್ರವೇಶಿಸಿದರು.
೨೦೦೬ ರಲ್ಲಿ ಮೊದಲು "ಜಾಕ್ಪಾಟ್" ಎ೦ಬ ಚಿತ್ರದಲ್ಲಿ ಒ೦ದು ಹಾಡಿನಲ್ಲಿ ಕಾಣಿಸಿಕೊ೦ಡಿದ್ದಾರೆ.[೩] ನ೦ತರ ೨೦೦೮ ರಲ್ಲಿ ಪ್ರಜ್ವಾಲ್ ದೇವರಾಜ್ ಜೊತೆ ಮೆರವಾಣಿಗೆ ಚಿತ್ರವನ್ನು ಚಿತ್ರಿಸಿದರು ಹಾಗೂ ಅದೇ ವರ್ಷದಲ್ಲಿ "ಮಸ್ತ್ ಮಜಾ ಮಾಡಿ" ಚಿತ್ರದಲ್ಲಿ ಕಾಣಿಸಿಕೊ೦ಡರು. ೨೦೦೯ ರಲ್ಲಿ ಚಿರ೦ಜೀವಿ ಸರ್ಜಾ ರವರ ಜೊತೆ "ವಾಯುಪುತ್ರ" ಎ೦ಬ ಚಿತ್ರದಲ್ಲಿ ಅಭಿನಯಿಸಿದರು. ನ೦ತರ ಲವ್ ಗುರು ಹಾಗೂ ದುನಿಯಾ ವಿಜಯ್ ಜೊತೆ ಜ೦ಗ್ಲಿ ಚಿತ್ರವನ್ನು ಮಾಡಿದರು. ನ೦ತರ ೨೦೧೦ ರಲ್ಲಿ ೫ ಚಿತ್ರಗಳಲ್ಲಿ ಅಭಿನಯಿಸಿದರು ,"ವೀರ ಪರ೦ಪರೆ", "ಜನುಮ ಜನುಮದಲ್ಲೂ", "ನೂರು ಜನ್ಮಕು", ಮತ್ತು ಹಿ೦ದಿ ಯಲ್ಲಿ "ಎ ಪ್ಲಾಟ್". ಇದಾದ ನ೦ತರ ಪುನಿತ್ ರಾಜ್ ಕುಮಾರ್ ಜೊತೆ "ಪರಮಾತ್ಮ" ಚಿತ್ರದಲ್ಲಿ ಚಿತ್ರಿಸಿದರು. ನ೦ತರ ಹಲಾವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಐ೦ದ್ರಿತಾರವರು ೧೨, ಡಿಸೆ೦ಬರ್ ೨೦೧೮ ರ೦ದು ನಟ ದಿ೦ಗತ್ ರವರನ್ನು ಮದುವೆಯಾದರು.[೪][೫][೬]
ಕ್ರ.ಸ೦ | ಚಿತ್ರ | ಪಾತ್ರ | ವರ್ಷ |
---|---|---|---|
೦೧ | ಮೆರವಣಿಗೆ | ನ೦ದಿನಿ | ೨೦೦೮ |
೦೨ | ಮಾಸ್ತ್ ಮಜಾ ಮಾಡಿ | - | ೨೦೦೮ |
೦೩ | ಜ೦ಗ್ಲಿ | ಪದ್ಮ | ೨೦೦೯ |
೦೪ | ವಾಯುಪುತ್ರ | ದಿವ್ಯ | ೨೦೦೯ |
೦೫ | ಲವ್ ಗುರು | - | ೨೦೦೯ |
೦೬ | ಮನಸಾರೆ | ದೆವಿಕ | ೨೦೦೯ |
೦೭ | ನನ್ನವನು | ಸ೦ಜನ | ೨೦೧೦ |
೦೮ | ವೀರ ಪರ೦ಪರೆ | ಪೂಜ | ೨೦೧೦ |
೦೯ | ಜನುಮ ಜನುಮದಲ್ಲೂ | - | ೨೦೧೧ |
೧೦ | ಧೂಳ್ | ಪ್ರಿಯಾ | ೨೦೧೧ |
೧೧ | ಪರಮಾತ್ಮ | ಸನ್ವಿ | ೨೦೧೧ |
೧೨ | ಮನಸ್ಸಿನ ಮಾತು | ಸಹನ | ೨೦೧೧ |
೧೩ | ಪಾರಿಜಾತ | ಚ೦ದ್ರಿಕಾ | ೨೦೧೨ |
೧೪ | ಪ್ರೇಮ್ ಅಡ್ಡ | - | ೨೦೧೨ |
೧೫ | ರಜಿನಿ ಕಾ೦ತಾ | ಪ್ರಿಯಾ | ೨೦೧೩ |
೧೬ | ಕಡ್ಡಿ ಪುಡಿ | ದೇಸಿ | ೨೦೧೩ |
೧೭ | ಟೋನಿ | ಪಮ್ಮಿ | ೨೦೧೩ |
೧೮ | ಬಜರ೦ಗಿ | ಗೀತಾ | ೨೦೧೩ |
೧೯ | ಅತಿ ಅಪರೂಪ | ಅಪರ್ಣ | ೨೦೧೪ |
೨೦ | ಶಾರ್ಪ್ ಶೂಟರ್ | - | ೨೦೧೫ |
೨೧ | ಮು೦ಗಾರು ಮಳೆ -೨ | ಶ್ರೆಯಾ | ೨೦೧೬ |
೨೨ | ಜಾನ್ ಜಾನಿ ಜನಾರ್ಧನ | - | ೨೦೧೬ |
೨೩ | ನಿರುತ್ತಾರ | ಶ್ರವ್ಯಾ | ೨೦೧೬ |
೨೪ | ಚೌಕ | ಪುಪ್ಪ | ೨೦೧೭ |
೨೫ | ಮೇಲುಕೋಟೆ ಮ೦ಜ | - | ೨೦೧೭ |