ಒಪ್ಪಂದ 2022 ರ ಕನ್ನಡ ರೋಮ್ಯಾಂಟಿಕ್-ಕ್ರೈಮ್ - ಆಕ್ಷನ್ ಚಲನಚಿತ್ರವಾಗಿದ್ದು, ಎಸ್.ಎಸ್. ಸಮೀರ್ ಬರೆದು ನಿರ್ದೇಶಿಸಿದ್ದಾರೆ, ಇದು ಅವರ ಮೊದಲ ಚಿತ್ರವಾಗಿದೆ. ಇದು ಅರ್ಜುನ್ ಸರ್ಜಾ ಮತ್ತು ರಾಧಿಕಾ ಕುಮಾರಸ್ವಾಮಿ[೧][೨] ಜೊತೆಗೆ ಜೆ.ಡಿ. ಚಕ್ರವರ್ತಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಪೋಷಕ ಪಾತ್ರದಲ್ಲಿ ಸೋನಿ ಚರಿಸ್ತಾ ಮತ್ತು ಬಾಲಿವುಡ್ ನಟ ಫೈಸಲ್ ಖಾನ್ ಅವರು ಕನ್ನಡಕ್ಕೆ ಕಾಲಿಡುತ್ತಿದ್ದಾರೆ. ಚಿತ್ರಕ್ಕೆ ಸಂಗೀತಸಂಯೋಜನೆಯನ್ನು ಸುಭಾಷ್ ಆನಂದ್ ಮತ್ತು ಛಾಯಾಗ್ರಹಣವನ್ನು ಅಮ್ಮ ರಾಜಶೇಖರ್ ಮತ್ತು ಸಂಕಲನವನ್ನು ಪ್ರಭು ಮಾಡಿದ್ದಾರೆ.[೩] ಈ ಚಿತ್ರವನ್ನು ತಮಿಳಿನಲ್ಲಿ ಇರುವರ್ ಒಪ್ಪಂತಂ ಮತ್ತು ತೆಲುಗಿನಲ್ಲಿ ಇದ್ದರು ಎಂದು ಡಬ್ ಮಾಡಿ ಬಿಡುಗಡೆ ಮಾಡಲಾಗಿದೆ. [೪]
ಈ ಚಿತ್ರವನ್ನು ಮೇ 2017 ರಲ್ಲಿ ಕಾಂಟ್ರ್ಯಾಕ್ಟ್ ಶೀರ್ಷಿಕೆಯಡಿಯಲ್ಲಿ ಘೋಷಿಸಲಾಯಿತು. ಚಿತ್ರೀಕರಣವು ಸೆಪ್ಟೆಂಬರ್ 2017 ರ ಸುಮಾರಿಗೆ ಪ್ರಾರಂಭವಾಯಿತು. [೬] ಮಾರ್ಚ್ 2018 [೭] ಹೊತ್ತಿಗೆ ಸಾಂಕ್ರಾಮಿಕ ರೋಗದ ಮೊದಲು ಚಲನಚಿತ್ರವನ್ನು ಮುಗಿಸಲಾಯಿತು. ಈ ಚಿತ್ರದಲ್ಲಿ ಮೊದಲು ಅರ್ಜುನ್ ಸರ್ಜಾ ನಾಯಕನಾಗಿ ನಟಿಸಿದ್ದರು. [೮][೯] ನಂತರ ರಾಧಿಕಾ ಕುಮಾರಸ್ವಾಮಿ ಅವರನ್ನು ನಾಯಕಿ ಪಾತ್ರಕ್ಕೆ ಆಯ್ಕೆ ಮಾಡಲಾಯಿತು. [೧೦] ನಂತರ ಈ ಚಿತ್ರದ ಮತ್ತೊಂದು ಪ್ರಮುಖ ಪಾತ್ರವನ್ನು ನಿರ್ವಹಿಸಲು JD ಚಕ್ರವರ್ತಿಯನ್ನು ತೆಗೆದುಕೊಂಡರು. ಬೆಂಗಳೂರು, ಮೈಸೂರು, ಹೈದರಾಬಾದ್ ಮತ್ತು ಬ್ಯಾಂಕಾಕ್ನಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. ಚಿತ್ರದ 1ನೇ ಟ್ರೈಲರ್ ಅನ್ನು 9ನೇ ಏಪ್ರಿಲ್ 2021 ರಂದು ಬಿಡುಗಡೆ ಮಾಡಲಾಯಿತು ಮತ್ತು ಎರಡನೇ ಟ್ರೈಲರ್ ಅನ್ನು 15ನೇ ಅಕ್ಟೋಬರ್ 2021 ರಂದು ಬಿಡುಗಡೆ ಮಾಡಲಾಯಿತು [೧೧][೧೨] ಚಲನಚಿತ್ರದ ಬಿಡುಗಡೆಯು ಹಲವಾರು ಬಾರಿ ವಿಳಂಬವಾಯಿತು [೧೩] ಕೊನೆಗೆ ಚಲನಚಿತ್ರವು 11 ಫೆಬ್ರವರಿ 2022 ರಂದು ಬಿಡುಗಡೆಯಾಯಿತು. [೧೪][೧೫] ಚಿತ್ರದ ಶೀರ್ಷಿಕೆಯಲ್ಲಿ ಕಾಂಟ್ರ್ಯಾಕ್ಟ್ ದಿಂದ ಒಪ್ಪಂದ ಎಂದು ಬದಲಾವಣೆ ಮಾಡಲಾಗಿದೆ. [೧೬]