ಕಂಬದಮರ | |
---|---|
![]() | |
ಕಂಬದಮರ(ವೀಪಿಂಗ್ ಅಶೋಕ) | |
Scientific classification | |
ಸಾಮ್ರಾಜ್ಯ: | plantae
|
Division: | |
ವರ್ಗ: | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | P. longifolia
|
Binomial name | |
ಪೊಲ್ಯಾಲ್ತಿಯ ಲಾಂಗಿಫೋಲಿಯ |
ಕಂಬದಮರ ಮೂಲತ: ಶ್ರೀಲಂಕಾದ ನಿವಾಸಿ.ಹೆಚ್ಚಾಗಿ ಉದ್ಯಾನವನಗಳಲ್ಲಿ ಅಲಂಕಾರಕ್ಕೆ ಬೆಳೆಸುತ್ತಾರೆ. ಇದನ್ನು ಪುತ್ರಂಜೀವಿ ಹಾಗೂಅಶೋಕ ವೃಕ್ಷಕ್ಕೆ ತಪ್ಪಾಗಿ ತಿಳಿಯುತ್ತಾರೆ.ಪ್ರಪಂಚದೆಲ್ಲೆಡೆ ಅಲಂಕಾರ ಸಸ್ಯವಾಗಿ ಬೆಳೆಸುತ್ತಾರೆ.
ಇದು ಅನೋನಾಸಿ (Anonaceae)ಕುಟುಂಬಕ್ಕೆ ಸೇರಿದ್ದು,ಪಾಲಿಯಾಲ್ತಿಯ ಲಾಂಗಿಫೋಲಿಯ (Polyalthia longifolia) ಎಂದು ಸಸ್ಯಶಾಸ್ತ್ರೀಯ ಹೆಸರಿದೆ.
ಸುಂದರವಾದ ನಿತ್ಯಹರಿದ್ವರ್ಣ ಮರ.ಒತ್ತಾದ ಹಂದರ.ಈಟಿ ತಲೆಯಾಕಾರದ ಎಲೆಗಳು ಅಲೆಅಲೆಯಾದ ಅಂಚನ್ನು ಹೊಂದಿದ್ದು,ಹೊಳಪಿನಿಂದ ಕೂಡಿದೆ.ನಕ್ಷತ್ರಾಕಾರದ ಸಣ್ಣ ನಸುಹಳದಿ ಹೂವುಗಳು ಫೆಬ್ರವರಿ-ಎಪ್ರಿಲ್ ತಿಂಗಳಲ್ಲಿ ಕಂಡುಬರುತ್ತದೆ.ಸಾಧಾರಣ ಮೃದುವಾದ ದಾರು ಇದೆ.
ದಾರುವು ಪೆಟ್ಟಿಗೆ,ಪೆನ್ಸಿಲ್ ಮುಂತಾದವುಗಳ ತಯಾರಿಕೆಯಲ್ಲಿ ಉಪಯೋಗವಾಗುತ್ತದೆ.ತೊಗಟೆಯಿಂದ ಒಳ್ಳೆಯ ನಾರು ದೊರಕುತ್ತದೆ.ಇದರ ಬೀಜಗಳು ಪಕ್ಷಿಗಳಿಗೆ ಬಹಳ ಇಷ್ಟವಾದ ಅಹಾರ.ಎಲೆಗಳು ಅಲಂಕಾರಕ್ಕಾಗಿ ಬಳಸಲ್ಪಡುತ್ತದೆ.ಈ ಮರದಿಂದ ಔಷಧ ತಯಾರಿಕೆ ಬಗ್ಗೆ ಸಂಶೋಧನೆ ನಡೆಯುತ್ತಿದೆ.