ಕಂಬರ್ | |
---|---|
ವೃತ್ತಿ | ಕವಿ |
ರಾಷ್ಟ್ರೀಯತೆ | ಭಾರತೀಯ |
ಪ್ರಕಾರ/ಶೈಲಿ | ಕವಿತೆ |
ವಿಷಯ | ಸಾಹಿತ್ಯಕಾರ |
ಕಂಬರ್ ಅಥವಾ ಕಂಬನ್ (ಕ್ರಿಸ್ತಶಕ ೧೧೮೦-೧೨೫೦), ಓರ್ವ ತಮಿಳು ಕವಿ. ಇವರು ಕಂಬರಾಮಾಯಣ ಎಂಬ ಮಹಕಾವ್ಯವನ್ನು ಬರದಿದ್ದಾರೆ. ತಮಿಳು ಸಾಹಿತ್ಯದಲ್ಲಿ ಈ ಕಂಬರಾಮಾಯಣ ಬಹಳ ದೊಡ್ಡ ಇತಿಹಾಸವನ್ನು ಸೃಷ್ಟಿಸಿದೆ. ಇವರನ್ನು ಕವಿಚಕ್ರವರ್ತಿ ಎಂದು ಕರೆಯಲಾಗುತ್ತದೆ.[೧]
ಇವರು ೧೨ನೇ ಶತಮಾನದ , ತಮಿಳುನಾಡಿನ ತಂಜಾವೂರ್ ಎಂಬ ಜಿಲ್ಲೆಯ ವೆಲ್ಲೈನಲ್ಲೂರ್‌ನಲ್ಲಿ ಜನಿಸಿದರು. ಆ ಊರಿನಲ್ಲಿದ್ದ ಸಂಡೈಯಪ್ಪ ವಳ್ಳಲ್ ಎಂಬ ಶ್ರೀಮಂತರು ಇವರನ್ನು ಸಾಕಿ, ಪಾಲನೆ ಪೋಷಣೆ ಮಾಡಿದರು. ಇವರು ಕಂಬರ್ ಎಂಬ ಹೆಸರನ್ನು ಪಡೆಯಲು ಹಲವಾರು ಕಾರಣಗಳಿವೆ. ಇವರು ಕಾಳಿದೇವಿಯ ದೇವಸ್ಥಾನದಲ್ಲಿದ್ದ ಒಂದು ಕಂಬದ ಕೆಳಗೆ ಸಿಕ್ಕಿದವರು. ಆದುದರಿಂದ ಇವರನ್ನು ಕಂಬರ್ ಎಂದು ಕರೆಯುತ್ತಾರೆ ಎಂಬುದು ಜನರ ನಂಬಿಕೆ. ಹಾಗೆಯೇ ಕಂಚಿಯಲ್ಲಿ ಇರುವ ದೇವರನ್ನು ಕಂಬನ್ ಎಂದು ಕರೆಯುವುದರಿಂದ ಇವರನ್ನು ಅದೇ ನಾಮದಿಂದ ಕರೆಯಲಾಗುತ್ತದೆ ಎಂದು ಸ್ವಲ್ಪ ಜನರು ಹೇಳುತ್ತಾರೆ. ಹೀಗೆ ಇವರ ನಾಮಕ್ಕೆ ಹಲವಾರು ಘಟನೆಗಳು ಜನರ ನಡುವೆ ಇದೆ.[೨]
ಕಂಬರಾಮಾಯಣ ಸುಮಾರು ೭೩೩ಯ ಕಾಲದ ನಂತರ ಬರೆಯಲಾಗಿದೆ ಎಂದು ಹೇಳಲ್ಪಟ್ಟಿದೆ. ತಾನು ವಾಲ್ಮೀಕಿ ರಾಮಾಯಣವನ್ನೇ ಆಧಾರವಾಗಿಟ್ಟುಕೊಂಡು ಬರೆದದ್ದಾಗಿ ಕಂಬರು ಹೇಳಿದ್ದಾರೆ. ಆದರೂ ಕಂಬರಾಮಾಯಣಕ್ಕೂ ವಾಲ್ಮೀಕಿರಾಮಾಯಣಕ್ಕೂ ಬಹಳ ವ್ಯತ್ಯಾಸವಿದೆ. ಅದು ಬರೀ ಸಂಸ್ಕೃತ ರಾಮಾಯಣದ ಅನುವಾದವಲ್ಲ, ಅವರು ಕಥೆಯನ್ನು ಹೇಳುವುದರಲ್ಲು, ಮುಖ್ಯಪಾತ್ರಗಳ ಬಗ್ಗೆ ವಿವರಿಸುವಾಗಲೂ, ತಮ್ಮ ಶೈಲಿಯನ್ನೇ ಬಳಸಿದ್ದಾರೆ. ಸುಂದರವಾದ ಕವಿತೆಯ ಅನುಭವ ಹಾಗೂ ಅವನ ಅದ್ಭುತ ಕಲ್ಪನಾ ಶಕ್ತಿಯನ್ನು ನಾವು ಇಲ್ಲಿ ಕಾಣಬಹುದು. ಕಂಬನ್‌ರವರು ತಮ್ಮ ವರ್ಣನೆಯಲ್ಲಿ ತನ್ನ ಕಾಲದ ಘಟನೆಗಳನ್ನು, ತಾನು ಇದ್ದ ತಮಿಳುನಾಡಿನ ಸಂಸ್ಕೃತಿಯ ಸಾರವನ್ನು ನಮಗೆ ತೋರಿಸಿದ್ದಾರೆ. ಉದಾಹರಣೆ: ಅವರು ತಮ್ಮ ಕಾವ್ಯದಲ್ಲಿ ತಂದಿರುವ ಕೋಸಲನಾಡು, ಈಗಿನ ಚೋಳನಾಡೇ ಎಂದು ಹೇಳಬಹುದಾಗಿದೆ.
ಅವರ ಶೈಲಿ ಬಹಳ ವಿಭಿನ್ನವಾದದ್ದು. ಅವರು ವಾಲ್ಮೀಕಿಗಿಂತ ರಾಮಾಯಣವನ್ನು ವಿಭಿನ್ನವಾಗಿ ವಿವರಿಸಿದ್ದಾರೆ. ರಾಮನು ಮಿಥಿಲೆಯಲ್ಲಿ ಸೀತೆಯನ್ನು ಭೇಟಿಯಾಗುವುದು, ಆಗ ಅವರಿಬ್ಬರ ಮನದಲ್ಲಿ ಉಕ್ಕುವ ಭಾವನೆಗಳು ಹಾಗೂ ಶ್ರೀರಾಮನು ನೀಡಿದ ಉಂಗುರವನ್ನು ಸೀತೆ ನೋಡಿದಾಗ ಅವಳ ಮುಖದಲ್ಲಿ ಮೂಡಿಬರುವ ಆನಂದ ,ಇವೆಲ್ಲವನ್ನು ಕಂಬನು ವಾಲ್ಮೀಕಿಗಿಂತ ಬಹಳ ಸೊಗಸಾಗಿ ವಿವರಿಸಿದ್ದಾರೆ. ತನ್ನ ಪ್ರಾಣನಾಥನೊಡನೆ ಕೂಡಿಕೊಂಡಷ್ಟು ಸಂತೋಷವಾಯಿತು ಸೀತೆಗೆ ಎಂದು ವಾಲ್ಮೀಕಿ ಹೇಳಿದ್ದಾರೆ, ಆದರೆ ಕಂಬರು ಅದನ್ನು ತುಂಬ ಸೊಗಸಾಗಿ ವಿವರಿಸಿದ್ದಾರೆ.ಆದರೆ ದಶರಥನ ಅಶ್ವಮೇಧಯಾಗದ ಬಗ್ಗೆ ವಾಲ್ಮೀಕಿಯು ಬಹಳ ವಿವರವಾಗಿ ಹೇಳಿದ್ದಾನೆ, ಕಂಬನು ಅದಕ್ಕೆ ಅಷ್ಟು ಪ್ರಾಮುಖ್ಯತೆ ಕೊಟಿಲ್ಲ.
ಕಂಬನ ಸಮಕಾಲದ ಬಗ್ಗೆ ನಾವು ಚರ್ಚಿಸುವಾಗ, ಸೇಕ್ಕಿಳಾರ್ ಮತ್ತು ಒತ್ತಕೂಟ್ಟನ್ ಇವರ ಸಮಕಾಲದವರಾಗಿದ್ದರು. ರಾಮಾಯಣದ ನಂತರ ಕಂಬರು ಸಡಗೋಪರ್ ಅಂದಾದಿ ಹಾಗೂ ಮುಮ್ಮಣಿಕೋವೈ ಎಂಬ ಕಾವ್ಯಗಳನ್ನು ಸಹ ಬರೆದಿದ್ದಾರೆ. ಒಮ್ಮೆ ಸ್ದೈಯಪ್ಪ ವಳ್ಳಾಲೈನ ಮಗನು ಹಾವುಕಚ್ಚಿ ಸತ್ತುಹೋದನು. ಆಗ ಕಂಬನು ವೆಣ್ಪಾಕ್ಕಲ್ ಎಂಬ ಹಾಡನ್ನು ಹಾಡಿ ಆ ಹುಡುಗನಿಗೆ ಮತ್ತೆ ಪ್ರಾಣವನ್ನು ನೀಡಿದರು.