ಕಣ್ಣಗಿ : ಪ್ರ.ಶ. ಸು. 5ನೆಯ ಶತಮಾನದಲ್ಲಿ ಇದ್ದಿರಬಹುದಾದ ಇಳಂಗೋ_ಅಡಿಗಳ್ ಬರೆದ ಶಿಲಪ್ಪದಿಗಾರಂ ಎಂಬ ತಮಿಳು ಕಾವ್ಯದ ನಾಯಕಿ. ಪತ್ತಿನಿದೇವಿ ಎಂಬ ಹೆಸರಿನಿಂದ ಶ್ರೇಷ್ಠ ಪತಿವ್ರತೆಯೆಂದು ದಕ್ಷಿಣ ಭಾರತದಲ್ಲೂ ಸಿಂಹಳದಲ್ಲೂ ಪೂಜಿತಳಾಗಿದ್ದ ಓರ್ವ ದೈವೀಕ ಸ್ತ್ರೀ.
ಕೋವಲನ್ ನು ಮಾಧವಿ ಎಂಬ ವೇಶ್ಯೆಯಿಂದ ಆಕರ್ಷಿತನಾಗಿ ಅವಳ ಸಹವಾಸದಲ್ಲಿ ತನ್ನ ಸಂಪತ್ತನ್ನೆಲ್ಲ ಕಳೆದುಕೊಂಡ. ಕೊನೆಗೆ ಆಕೆಯಿಂದ ತಿರಸ್ಕೃತನಾದ ಪತಿಯನ್ನು ಕಣ್ಣಗಿ ಮನ್ನಿಸಿ, ಹೊಸಬಾಳ್ವೆ ನಡೆಸುವ ವಿಚಾರದಿಂದ ಅವನೊಡನೆ ಪಾಂಡ್ಯ ರಾಜಧಾನಿ ಮಧುರೆಗೆ ಬಂದಳು. ಅಲ್ಲಿ ಆತ ಕಳ್ಳತನದ ಅಪವಾದಕ್ಕೆ ಗುರಿಯಾಗಿ ಮರಣ ದಂಡನೆಗೆ ಗುರಿಯಾಗಲು ಪತಿವಿಯೋಗದಿಂದ ಶೋಕತಪ್ತಳಾಗಿ ಪಾಂಡ್ಯರಾಜನನ್ನೂ ಮಧುರೆಯನ್ನೂ ಶಪಿಸಿದಳು. ಮಧುರೆ ಸುಟ್ಟುಹೋಯಿತು. ಮುಂದೆ ಕಣ್ಣಗಿ ಪಶ್ಚಿಮ ಘಟ್ಟಗಳಿಗೆ ತೆರಳಿದಳೆಂದೂ ಅಲ್ಲಿ ದಿವ್ಯ ವಿಮಾನವನ್ನೇರಿ ಸ್ವರ್ಗದಲ್ಲಿದ್ದ ತನ್ನ ಪತಿಯನ್ನು ಸೇರಿದಳೆಂದೂ ಕಥೆ ಇದೆ. ಕಣ್ಣಗಿಯ ವಿಚಾರ ಕೇಳಿದ ಚೇರದೊರೆ ಶೆಂಗುತ್ತುವನ್ ಅವಳ ಸ್ಮಾರಕವಾಗಿ ದೇವಾಲಯ ಒಂದನ್ನು ಕಟ್ಟಿಸಿದ. ಇತರ ರಾಜರು ಅವನ ಉದಾಹರಣೆ ಅನುಸರಿಸಿದರು.
![]() |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |