ಕದ್ರಿ
Kadri, | |
---|---|
ಪಟ್ಟಣ | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ದಕ್ಷಿಣ ಕನ್ನಡ |
ಭಾಷೆಗಳು | |
• ಅಧಿಕೃತ | ಕನ್ನಡ |
Time zone | UTC+5:30 (IST) |
ಪಿನ್ ಕೋಡ್ | 575004 |
ಕದ್ರಿ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ , ಮಂಗಳೂರು ನಗರ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ಬರುವ ಊರು. ಕದ್ರಿಯಲ್ಲಿ ಪ್ರಸಿದ್ಧ ಕದ್ರಿ ಮಂಜುನಾಥ ದೇವಸ್ಥಾನವಿದೆ. [೧] ಕಂಬಳ ಎಂದು ಕರೆಯಲ್ಪಡುವ ವಾರ್ಷಿಕ ಎಮ್ಮೆ ಓಟಕ್ಕೂ ಕದ್ರಿ ಹೆಸರುವಾಸಿಯಾಗಿದೆ. ಬಾಳೆಬೈಲ್ ಮತ್ತು ದೇರೆಬೈಲ್ ಕದ್ರಿಯ ಹತ್ತಿರದ ಪ್ರದೇಶಗಳಾಗಿವೆ. ಕದ್ರಿ- ಬಿಜೈ ಬೆಲ್ಟ್ ಅನ್ನು ಮಂಗಳೂರಿನ ಮಂಗಳೂರಿನ ಮ್ಯಾನ್ಹ್ಯಾಟನ್ ಎಂದು ಪರಿಗಣಿಸಲಾಗಿದೆ. ಈ ಪ್ರದೇಶವು ಈಗಾಗಲೇ ಅನೇಕ ಎತ್ತರದ ಕಟ್ಟಡಗಳನ್ನು ಹೊಂದಿದೆ, ಮತ್ತು ಇನ್ನೂ ಅನೇಕ ನಿರ್ಮಾಣ ಹಂತದಲ್ಲಿವೆ. ಮಂಗಳೂರಿನ ಅತಿ ಎತ್ತರದ ಮತ್ತು ಕರ್ನಾಟಕದ ಎರಡನೇ ಅತಿ ಎತ್ತರದ ಕಟ್ಟಡವಾದ ಪ್ಲಾನೆಟ್ ಎಸ್ಕೆಎಸ್ ೪೦ ಅಂತಸ್ತಿನ ಎತ್ತರದ ಕಟ್ಟಡ ಕದ್ರಿಯಲ್ಲಿದೆ. ನಿರ್ಮಾಣ ಹಂತದಲ್ಲಿರುವ ದಕ್ಷಿಣ ಭಾರತದ ಅತಿ ಎತ್ತರದ ಕಟ್ಟಡಗಳಲ್ಲಿ ಒಂದಾದ ಭಂಡಾರಿ ವರ್ಟಿಕಾ ಎಂಬ ೫೬ ಅಂತಸ್ತಿನ ಗಗನಚುಂಬಿ ಕಟ್ಟಡವೂ ಇಲ್ಲಿದೆ.[೨]
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |