ಕನ್ನಡದ ಕಿರಣ್ ಬೇಡಿ | |
---|---|
ಚಿತ್ರ:Kannadadda-Kiran Bedi.jpg DVD Cover | |
ನಿರ್ದೇಶನ | ಓಂಪ್ರಕಾಶ್ ರಾವ್ |
ನಿರ್ಮಾಪಕ | ರಾಮು |
ಲೇಖಕ | ಓಂಪ್ರಕಾಶ್ ರಾವ್ |
ಚಿತ್ರಕಥೆ | ತುಷಾರ್ ರಂಗನಾಥ್ |
ಪಾತ್ರವರ್ಗ | ಮಾಲಾಶ್ರೀ ಶ್ರೀನಿವಾಸ ಮೂರ್ತಿ ರಂಗಾಯಣ ರಘು ಆಶಿಶ್ ವಿದ್ಯಾರ್ಥಿ ಸಯಾಜಿ ಶಿಂಧೆ |
ಸಂಗೀತ | ಹಂಸಲೇಖ |
ಛಾಯಾಗ್ರಹಣ | ಕೆ.ಎಂ.ವಿಷ್ಣುವರ್ಧನ್ |
ಸಂಕಲನ | ದೀಪು. ಆರ್.ಕುಮಾರ್ |
ಸ್ಟುಡಿಯೋ | ರಾಮು ಎಂಟರ್‌ಪ್ರೈಸಸ್ |
ಬಿಡುಗಡೆಯಾಗಿದ್ದು |
|
ಅವಧಿ | 159 ನಿಮಿಷಗಳು |
ದೇಶ | ಭಾರತ |
ಭಾಷೆ | ಕನ್ನಡ[೧] |
ಕನ್ನಡದ ಕಿರಣ್ ಬೇಡಿ 2009 ರಲ್ಲಿ ಬಿಡುಗಡೆಯಾದ ಭಾರತೀಯ ಕನ್ನಡ ಚಲನಚಿತ್ರ. ಇದು ಆಕ್ಷನ್ ನಾಟಕ ಕಥಾ ಚಿತ್ರವಾಗಿದ್ದು, ಮಾಲಾಶ್ರೀ ಪ್ರಮುಖ ಪಾತ್ರ ವಹಿಸಿದ್ದಾರೆ. ಶ್ರೀನಿವಾಸ ಮೂರ್ತಿ, ರಂಗಾಯಣ ರಘು ಮತ್ತು ಆಶಿಶ್ ವಿದ್ಯಾರ್ಥಿ ಗಳೂ ಸಹ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಈ ಚಿತ್ರವು ಮಾರ್ಚ್ 27ರಂದು ಬಿಡುಗಡೆಯಾಗಿ ಮಿಶ್ರ ವಿಮರ್ಶೆಗಳನ್ನು ಪಡೆಯಿತು. ಆದರೆ ಇದು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. ಈ ಚಿತ್ರವನ್ನು ಹಿಂದಿಯಲ್ಲಿ ಮುಂಬೈ ಕಿ ಕಿರಣ್ ಬೇಡಿ, ತೆಲುಗಿನಲ್ಲಿ ಆಂಧ್ರ ಕಿರಣ್ ಬೇಡಿ ಎಂದು, ತಮಿಳಿನಲ್ಲಿ ಕಿರಣ್ ಬೇಡಿ ಮತ್ತು ಮಲಯಾಳಂನಲ್ಲಿ ಕೇರಳ ಕಿರಣ್ ಬೇಡಿ ಎಂಬ ಹೆಸರಿನಿಂದ ಡಬ್ ಮಾಡಲಾಗಿದೆ.
ಪೊಲೀಸ್ ಕಾನ್ಸ್ಟೇಬಲ್ ವೆಂಕಟಪ್ಪ (ಶ್ರೀನಿವಾಸ ಮೂರ್ತಿ) ಬೆಲ್ಲಾರೆ ಭಾಗ್ಯಲಕ್ಷ್ಮಿಯನ್ನು (ಮಾಲಾಶ್ರೀ) ಭೇಟಿಯಾಗುತ್ತಾನೆ ಮತ್ತು ತನ್ನ ಮಗಳಾದ ಕಿರಣ್ ಬೇಡಿಯ (ಮಾಲಾಶ್ರೀ ಕಥೆ) ಕಥೆಯನ್ನು ಅವಳಿಗೆ ಹೇಳುತ್ತಾನೆ. ಕಿರಣ್ ಬೆಂಗಳೂರಿನಲ್ಲಿ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿರುತ್ತಾಳೆ. ಬೆಂಗಳೂರಿನಲ್ಲಿ ಭೂಪತಿ (ಆಶಿಶ್ ವಿದ್ಯಾರ್ಥಿ) ಮತ್ತು ಆತನ ಪಾಲುದಾರರಾದ ನಾಗ (ಕೋಟೆ ಮೊಬೈಲ್ ನಾಚಪ್ಪ) (ರಂಗಾಯಣ ರಘು ಡಿಸೋಜಾ ಮತ್ತು ಮುನಿ) ನಡುವೆ ಅಕ್ರಮ ಕೆಲಸಗಳ ಒಡನಾಟವಿರುತ್ತದೆ. ಭೂಪತಿಯ ಮಗ ವಿಕ್ಕಿ ಸಿವಿಲ್ ಸರ್ವೀಸ್ ನ ಯುವ ವಿದ್ಯಾರ್ಥಿನಿಯಾದ ಶ್ವೇತಾನನ್ನು ಕೊಲೆ ಮಾಡಿರುತ್ತಾನೆ . ಭೂಪತಿ ವಿಕ್ಕಿಯನ್ನು ತಮಿಳುನಾಡಿನ ಮಧುರೈನಲ್ಲಿರುವ ಭದ್ರಮ್ಮ (ತೆಲಂಗಾಣ ಶಕುಂತಲಾ) ಅವರ ಮನೆಯಲ್ಲಿ ಅಡಗಿಸಿಡುತ್ತಾನೆ. ಕಿರಣ್ ವಿಕ್ಕಿಯನ್ನು ಕಂಡು ಹಿಡಿದು ಅವನನ್ನು ಮತ್ತು ಭದ್ರಮ್ಮನನ್ನು ಕೊಲ್ಲುತ್ತಾಳೆ. ಕೋಪಗೊಂಡ ಭೂಪತಿ ಕಿರಣ್ ನನ್ನು ಕೊಲ್ಲುವಲ್ಲಿ ಯಶಸ್ವಿಯಾಗುತ್ತಾನೆ. ವೆಂಕಟಪ್ಪ ಈಗ ಬೆಲ್ಲಾರಿ ಯನ್ನು ಕಿರಣ್ ಬೇಡಿಯಾಗುವಂತೆ ಮತ್ತು ಭೂಪತಿ ಮತ್ತು ಅವನ ಸಹಚರರನ್ನು ಮುಗಿಸುವಂತೆ ಹೇಳುತ್ತಾನೆ . ಬೆಲ್ಲಾರಿ ಕಥೆಯನ್ನು ಕೇಳಿ ನಂತರ ಹಣ ಪಡೆದು ಅದಕ್ಕೆ ಒಪ್ಪಿಕೊಳ್ಳುತ್ತಾನೆ. ಬೆಲ್ಲಾರಿ ಭೂಪತಿಯ ಪೂರ್ಣ ಒಡನಾಟವನ್ನು ಗುರಿಯಾಗಿಸಿಕೊಂಡು ನಿಧಾನವಾಗಿ ಅವರನ್ನು ಕೆಳಗಿಳಿಸಲು ಪ್ರಾರಂಭಿಸುತ್ತಾಳೆ. ಆದರೆ ಕೆಲ ಸಮದಲ್ಲೇ ನ್ಯಾಯಾಲಯದಲ್ಲಿ ಬೆಲ್ಲಾರಿಯ ಗುರುತು ಬಹಿರಂಗವಾಗುತ್ತದೆ. ಪಶ್ಚಾತ್ತಾಪದಿಂದ, ಆಕೆ ನಾಗರಿಕ ಸೇವೆಗಳನ್ನು ಪ್ರವೇಶಿಸುತ್ತಾಳೆ ಮತ್ತು ಭೂಪತಿಯನ್ನು ಮುಗಿಸುವ ನಿಜವಾದ ಪೊಲೀಸ್ ಅಧಿಕಾರಿಯಾಗುತ್ತಾಳೆ.
[೨]ಟೈಮ್ಸ್ ಆಫ್ ಇಂಡಿಯಾ "ಮಾಲಾಶ್ರೀ ಅಭಿಮಾನಿಗಳಿಗೆ ಮತ್ತು ಆಕ್ಷನ್ ಚಲನಚಿತ್ರಗಳನ್ನು ಇಷ್ಟಪಡುವವರಿಗೆ ಇದು ಒಂದು ಔತಣವಾಗಿದೆ. ರೌಡಿಗಳೊಂದಿಗೆ ಹೋರಾಡುವುದು, ಕಾರುಗಳನ್ನು ಬೆನ್ನಟ್ಟುವುದು, ಭೂಗತ ರಾಕ್ಷಸರನ್ನು ಶೂಟ್ ಮಾಡುವುದು ಮತ್ತು ಅಪರಾಧ ಮುಕ್ತ ಸಮಾಜಕ್ಕಾಗಿ ಹೋರಾಡುವುದು ಉತ್ತಮ ಜನರಿಗೆ ಸಹಾಯ ಮಾಡುವುದು - ಈ ಎರಡು ಪಾತ್ರಗಳಲ್ಲಿ ಅವಳನ್ನು ನೋಡುವುದು ಒಂದು ಔತಣ" ಎಂದು ಹೇಳಿದೆ. [೩] ಭಾರತ್ ಸ್ಟುಡೆಂಟ್ ಈ ಚಿತ್ರಕ್ಕೆ 5 ರಲ್ಲಿ 2.5 ಸ್ಟಾರ್ಗಳನ್ನು ನೀಡಿದೆ. "ಮೊದಲಾರ್ಧವು ಪಂಚ್ ಸಂಭಾಷಣೆಗಳು ಮತ್ತು ಆಕ್ಷನ್ ದೃಶ್ಯಗಳೊಂದಿಗೆ ಸಾಗುತ್ತದೆಯಾದರೂ, ದ್ವಿತೀಯಾರ್ಧವು ಭಾವನಾತ್ಮಕವಾಗಿದ್ದರೂ ಹೆಚ್ಚಿನ ಸಂಭಾಷಣೆಗಳು ಮತ್ತು ಕೆಲವು ಉತ್ತಮ ಹಾಸ್ಯದೊಂದಿಗೆ ಕೂಡಿದೆ. ಮತ್ತು ಇದು ಸಾಮೂಹಿಕ ಗೀತೆಯೊಂದಿಗೆ ಮುಕ್ತಾಯಗೊಳ್ಳುತ್ತದೆ" ಎಂದು ಭಾರತ್ ಸ್ಟುಡೆಂಟ್ ಹೇಳಿದೆ.[೪] "ಹಂಸಲೇಖ ಬರೆದ ಮತ್ತು ಸಂಯೋಜಿಸಿದ ಹಿನ್ನೆಲೆ ಹಾಡುಗಳು ತುಂಬಾ ಅರ್ಥಪೂರ್ಣವಾಗಿವೆ ಮತ್ತು ಸಂದರ್ಭಕ್ಕೆ ತಕ್ಕಂತೆ ಏರುತ್ತವೆ. ಕೆ. ಎಂ. ವಿಷ್ಣುವರ್ಧನ್ ಅವರ ಕ್ಯಾಮೆರಾ ಕೆಲಸ ಅದ್ಭುತವಾಗಿದೆ. ಅನೇಕ ಆಕ್ಷನ್ ದೃಶ್ಯಗಳನ್ನು ಸೆರೆಹಿಡಿಯುವುದು ಸುಲಭದ ಕೆಲಸವಲ್ಲ. ಆಕ್ಷನ್ ಪ್ರೇಮಿಗಳು ಇದು ಹಬ್ಬದ ಔತಣವಾಗಿದೆ!" ಎಂದು ಸಿಫಿ ಹೆಳಿದೆ. Rediff.com ನ ಆರ್ ಜಿ ವಿಜಯಸಾರಥಿ ಈ ಚಿತ್ರಕ್ಕೆ 5 ರಲ್ಲಿ 2 ಸ್ಟಾರ್ಗಳನ್ನು ಕೊಟ್ಟು, "ಕ್ಯಾಮೆರಾ ಕೆಲಸವು ಚಿತ್ರದ ಮತ್ತೊಂದು ಹೈಲೈಟ್ ಆಗಿದೆ. ಹಂಸಲೇಖ ಹಿನ್ನೆಲೆ ಸಂಗೀತದಲ್ಲಿ ಹೊಳೆಯುತ್ತದೆಯಾದರೂ ಸಾಹಿತ್ಯವು ಸಂಗೀತದಲ್ಲಿ ಮುಳುಗುತ್ತದೆ. ಸಂಕ್ಷಿಪ್ತವಾಗಿ, ಮಾಲಾಶ್ರೀ ಅವರ ಉಸಿರುಗಟ್ಟಿಸುವ ಸಾಹಸಗಳಿಗಾಗಿ ಕಿರಣ್ ಬೇಡಿಯನ್ನು ನೋಡಿ". ಎಂದು ಹೆಳಿದೆ. [೫]