ಕಮಲ್ಜೀತ್ ಸಂಧು

ಕಮಲ್ಜೀತ್ ಸಂಧು ಒಬ್ಬ ಖ್ಯಾತ ಅಥ್ಲೆಟಿಕ್ಸ್ ವರ್ಲ್ಡ್ ಚಾಂಪಿಯನ್ಷಿಪ್ಸ್ ಆಟಗಾರ್ತಿ. ಸಂಧು ಮೂಲತ: ಭಾರತ ದೇಶದ ಪಂಜಾಬ್ ಮೂಲದವರು. ತಮ್ಮ ಓಟದ ಆಟದ ಮೂಲಕವೇ ಭಾರತವನ್ನು ಪ್ರತಿಬಿಂಬಿಸಿ,ಭಾರತ ಕೀರ್ತಿ ಪತಾಕೆಯನ್ನು ಆರಿಸಿದವರು. ಇವರು ೧೯೭೦ರಲ್ಲಿ ಅಥ್ಲೆಟಿಕ್ಸ್ ಪ್ರವೇಶಿಸಿ ೧೯೭೩ ರಲ್ಲಿ ಅಥ್ಲೆಟಿಕ್ಸ್ ಇಂದ ನಿವೃತ್ತರಾದರು. ೧೯೮೨ ರಲ್ಲಿ ಅವರು ಭಾರತೀಯ ಮಹಿಳಾ ಸ್ಪ್ರಿಂಟ್ ತಂಡದ ತರಬೇತುದಾರರಾಗಿ ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸಿದರು. ಇಷ್ಟೇ ಅಲ್ಲದೇ ಇವರು ಬ್ಯಾಸ್ಕೆಟ್‌ಬಾಲ್‌ ಮತ್ತು ಇಂಟರ್ ವಾರ್ಸಿಟಿ ಹಾಕಿ ಆಟಗಾರ್ತಿಯಾಗಿದ್ದರು.

ವೈಯಕ್ತಿಕ ಮಾಹಿತಿ

[ಬದಲಾಯಿಸಿ]
ಪೂರ್ಣ ಹೆಸರು ಕಮಲ್ಜೀತ್ ಕೌರ್ ಸಂಧು
ಲಿಂಗ ಸ್ತ್ರೀ
ಎತ್ತರ ೫-೬(೧೬೮ ಸೆಂ)
ತೂಕ ೬೦ ಕೆ.ಜೆ
ಜನನ ೨೦ ಆಗಸ್ಟ್ ೧೯೪೮
ದೇಶ ಭಾರತ
ಕ್ರೀಡೆ ಅಥ್ಲೆಟಿಕ್ಸ್

೨೦ ಆಗಸ್ಟ್ ೧೯೪೮ ರಂದು ಪಂಜಾಬ್ ರಾಜ್ಯದಲ್ಲಿ ಜನಿಸಿದರು.


ಸಾಧನೆ

[ಬದಲಾಯಿಸಿ]
  • ೧೯೭೦ ರ ಬ್ಯಾಂಕಾಕ್ ಏಷ್ಯನ್ ಕ್ರೀಡಾಕೂಟದಲ್ಲಿ ೪೦೦ ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮಾಜಿ ಮಹಿಳಾ ಆಟಗಾರ್ತಿ.
  • ಎಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. []
  • ೧೯೭೨ ರಲ್ಲಿ ಮ್ಯೂನಿಕ್ ಒಲಂಪಿಕ್ಸ್ ನಲ್ಲಿ ಮಹಿಳೆಯರ ೪೦೦ ಮೀಟರ್ ನಲ್ಲಿ ಭಾಗವಹಿಸಿದ್ದರು.[]
  • ಇಟಲಿಯ ಟುರಿನ್ ನಲ್ಲಿ ೪೦೦ ಮೀಟರ್ ಓಟದಲ್ಲಿ ನಡೆದ ವಿಶ್ವವಿದ್ಯಾಲಯದ ಕ್ರೀಡಾಕೂಟದಲ್ಲಿ ಪೈನಲ್ ಗೆ ತಲುಪಿದ ಮಹಿಳೆಯರಲ್ಲಿ ಒಬ್ಬರು.
ಕ್ರೀಡಾಕೂಟ ವರ್ಷ ಆಟ ಸಾಧನೆ
೧)ಬ್ಯಾಂಕಾಕ್ ಏಷ್ಯನ್ ಕ್ರೀಡಾಕೂಟ ೧೯೭೦ ೪೦೦ಮೀ ಚಿನ್ನದಪದಕ
೨)ಮ್ಯೂನಿಕ್ ಒಲಂಪಿಕ್ ೧೯೭೨ ೪೦೦ಮೀ ಭಾಗಿ

ಪ್ರಶಸ್ತಿ

[ಬದಲಾಯಿಸಿ]

೧೯೭೧ ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. []

ಉಲ್ಲೇಖಗಳು

[ಬದಲಾಯಿಸಿ]
  1. http://heritagetimes.in/kamaljit-sandhu/
  2. https://mumbaimirror.indiatimes.com/photos/news/womens-day-special-from-mother-teresa-to-kamaljit-sandhu-women-who-have-made-india-proud/kamaljit-sandhu/mumbaiphotos/57534685.cms
  3. https://www.indianetzone.com/51/1971_padma_shri_awards.htm