![]() | ||||||||||||||||||||||||||||||||||||||||||||||||||||||||||||||||||
ವಯಕ್ತಿಕ ಮಾಹಿತಿ | ||||||||||||||||||||||||||||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ಪೂರ್ಣ ಹೆಸರು | ಕರುಣ್ ಕಲಾಧರನ್ ನಾಯರ್ | |||||||||||||||||||||||||||||||||||||||||||||||||||||||||||||||||
ಹುಟ್ಟು | ಜೋಧಪುರ, ರಾಜಸ್ಥಾನ, ಭಾರತ | ೬ ಡಿಸೆಂಬರ್ ೧೯೯೧|||||||||||||||||||||||||||||||||||||||||||||||||||||||||||||||||
ಬ್ಯಾಟಿಂಗ್ | ಬಲಗೈ | |||||||||||||||||||||||||||||||||||||||||||||||||||||||||||||||||
ಬೌಲಿಂಗ್ | ಬಲಗೈ ಆಫ್ ಬ್ರೇಕ್ | |||||||||||||||||||||||||||||||||||||||||||||||||||||||||||||||||
ಪಾತ್ರ | ಬ್ಯಾಟ್ಸ್ಮನ್ | |||||||||||||||||||||||||||||||||||||||||||||||||||||||||||||||||
ಅಂತಾರಾಷ್ಟ್ರೀಯ ಮಾಹಿತಿ | ||||||||||||||||||||||||||||||||||||||||||||||||||||||||||||||||||
ರಾಷ್ಟೀಯ ತಂಡ | ||||||||||||||||||||||||||||||||||||||||||||||||||||||||||||||||||
ಟೆಸ್ಟ್ ಚೊಚ್ಚಲ (ಕ್ಯಾಪ್ ೨೮೭) | ೨೬ ನವೆಂಬರ್ ೨೦೧೬ v ಇಂಗ್ಲೆಂಡ್ | |||||||||||||||||||||||||||||||||||||||||||||||||||||||||||||||||
ಕೊನೆಯ ಟೆಸ್ಟ್ | ೨೫ ಮಾರ್ಚ್ ೨೦೧೭ v ಆಸ್ಟ್ರೇಲಿಯಾ | |||||||||||||||||||||||||||||||||||||||||||||||||||||||||||||||||
ಅಂ. ಏಕದಿನ ಚೊಚ್ಚಲ (ಕ್ಯಾಪ್ ೨೧೨) | ೧೧ ಜೂನ್ ೨೦೧೬ v ಜಿಂಬಾಬ್ವೆ | |||||||||||||||||||||||||||||||||||||||||||||||||||||||||||||||||
ಕೊನೆಯ ಅಂ. ಏಕದಿನ | ೧೩ ಜೂನ್ ೨೦೧೬ v ಜಿಂಬಾಬ್ವೆ | |||||||||||||||||||||||||||||||||||||||||||||||||||||||||||||||||
ಅಂ. ಏಕದಿನ ಅಂಗಿ ನಂ. | ೬೯ | |||||||||||||||||||||||||||||||||||||||||||||||||||||||||||||||||
ದೇಶೀಯ ತಂಡದ ಮಾಹಿತಿ | ||||||||||||||||||||||||||||||||||||||||||||||||||||||||||||||||||
ವರ್ಷಗಳು | ತಂಡ | |||||||||||||||||||||||||||||||||||||||||||||||||||||||||||||||||
೨೦೧೨-ಇಂದಿನವರೆಗೆ | ಕರ್ನಾಟಕ | |||||||||||||||||||||||||||||||||||||||||||||||||||||||||||||||||
೨೦೧೨-೧೩ | ರಾಯಲ್ ಚಾಲೆಂಜರ್ಸ್ ಬೆಂಗಳೂರು (squad no. ೬೯) | |||||||||||||||||||||||||||||||||||||||||||||||||||||||||||||||||
೨೦೧೪-೧೫ | ರಾಜಸ್ಥಾನ ರಾಯಲ್ಸ್ (squad no. ೬೯) | |||||||||||||||||||||||||||||||||||||||||||||||||||||||||||||||||
೨೦೧೬-೧೭ | ಡೆಲ್ಲಿ ಡೇರ್ ಡೇವಿಲ್ಸ್ (squad no. ೬೯) | |||||||||||||||||||||||||||||||||||||||||||||||||||||||||||||||||
೨೦೧೮-ಇಂದಿನವರೆಗೆ | ಕಿಂಗ್ಸ್ ಇಲೆವೆನ್ ಪಂಜಾಬ್ (squad no. ೬೯) | |||||||||||||||||||||||||||||||||||||||||||||||||||||||||||||||||
ವೃತ್ತಿ ಅಂಕಿಅಂಶಗಳು | ||||||||||||||||||||||||||||||||||||||||||||||||||||||||||||||||||
| ||||||||||||||||||||||||||||||||||||||||||||||||||||||||||||||||||
ಮೂಲ: ESPNCricinfo, ೧ ಜೂನ್ ೨೦೧೭ |
ಕರುಣ್ ಕಲಾಧರಣ ನಾಯರ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಬಲಗೈ ಮದ್ಯ ಕ್ರಮಾಂಕದ ಬ್ಯಾಟ್ಸಮಾನ್ ಹಾಗು ಬಲಗೈ ಆಫ್ ಸ್ಪಿನ್ ಬೌಲರ್. ರಣಜಿ ಟ್ರೋಫೀಯಲ್ಲಿ ಕರ್ನಾಟಕ ತಂಡಕ್ಕೆ ಆಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕಿಂಗ್ಸ್ ೧೧ ಪಂಜಾಬ್ ತಂಡದ ಪರ ಆಡುತ್ತಾರೆ.[೧]
ಕರುಣ್ ನಾಯರ್ರವರು ಡಿಸೆಂಬರ್ ೦೬, ೧೯೯೧ ರಂದು ರಾಜಸ್ಥಾನದ ಜೋಧಪುರ್ ನಗರದಲ್ಲಿ ಕಲಾಧರ್ ಹಾಗು ಪ್ರೇಮಾ ನಾಯರ್ ದಂಪತಿಗೆ ಜನಿಸಿದರು. ಇವರ ತಂದೆ ಕಲಾಧರ್ ಒರ್ವ ತಾಂತ್ರಿಕ ಇಂಜಿನಿಯರ್ ಹಾಗು ತಾಯಿ ಪ್ರೇಮಾ ನಾಯರ್ ಒರ್ವ ಶಿಕ್ಷಕಿ.೨೦೧೩-೧೪ರ ರಣಜಿ ಕ್ರಿಕೆಟ್ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ಪಾದಾರ್ಪಣೆ ಮಾಡಿದರು. ೨೦೧೪-೧೫ರ ರಣಜಿ ಟ್ರೋಫೀ ಫೈನಲ್ ಪಂದ್ಯದಲ್ಲಿ ೩೨೮ ರನ್ ಕಲೆಹಾಕಿ ಕರ್ನಾಟಕದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಈ ಮೂಲಕ ತ್ರಿಶತಕ ಬಾರಿಸಿದ ಎರಡನೇ ಕನ್ನಡಿಗ ಹಾಗೂ ೧೯೪೬-೪೭ರಿಂದ ಫೈನಲ್‍ನಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪೈನಲ್‍ನಲ್ಲಿ ಓರ್ವ ಆಟಗಾರ ಗಳಿಸಿದ ಅತೀ ಹೆಚ್ಚು ರನ್ ಎಂಬ ದಾಖಲೆಯನ್ನು ಬರದಿದ್ದಾರೆ.[೨][೩][೪]
ಏಪ್ರಿಲ್ ೦೪, ೨೦೧೩ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ೦೨ನೇ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಾದಾರ್ಪಣೆ ಮಾಡಿದರು.[೫]
ಜೂನ್ ೧೧, ೨೦೧೬ರಲ್ಲಿ ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಮೊದಲನೇ ಏಕದಿನ ಪಂದ್ಯದ ಮೂಲಕ ಕರುಣ್‌ರವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ನಂತರ ನವಂಬರ್ ೨೬, ೨೦೧೬ರಲ್ಲಿ ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಟೆಸ್ಟ್ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪನೆ ಮಾಡಿದರು.[೬][೭]ಡಿಸೆಂಬರ್ ೧೬, ೨೦೧೬ರಲ್ಲಿ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಐದನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ತ್ರಿಶತಕ ಬಾರಿಸಿವ ಮೂಲಕ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.[೮][೯][೧೦][೧೧][೧೨]