ಮಲ್ಲಿಗೆಯನ್ನು ಹೂವುಗಳ ರಾಣಿ ಎಂದು ಪರಿಗಣಿಸಲಾಗುತ್ತದೆ ಮತ್ತು ಇದು ಮನಸ್ಸಿಗೆ ಸಂತೃಪ್ತಿಗೊಳಿಸುವ ಮತ್ತು ಉಲ್ಲಾಸವನ್ನುಂಟುಮಾಡುವ ಸೊಗಸಾದ ಪರಿಮಳವನ್ನು ಹೊಂದಿರುತ್ತದೆಯಾದ್ದರಿಂದ ಇದನ್ನು ಬೆಲ್ಲೆ ಆಫ್ ಇಂಡಿಯಾ ಅಥವಾ ಸುಗಂಧದ ರಾಣಿ ಎಂದು ಕರೆಯಲಾಗುತ್ತದೆ. ಭಾರತದ ವಿವಿಧ ಭಾಗಗಳಲ್ಲಿ ಇದನ್ನು ಮೊಗ್ರಾ, ಮೋಟಿಯಾ, ಚಮೇಲಿ, ಮಲ್ಲಿ ಪುವ್ವು, ಜಾಟಿ, ಮುಲ್ಲಾ, ಜಾಸ್ಮಿನ್, ಜೂಹಿ, ಮೊಗ್ರಾ ಅಥವಾ ತೋಪಿನ ಬೆಳದಿಂಗಳು ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ. ಮಲ್ಲಿಗೆಯಲ್ಲಿ ೩೦೦ ವಿಧಗಳಿವೆ ಎಂದು ಇತ್ತೀಚಿಗೆ ವರದಿಯಾಗಿದೆ. ಈ ಮಲ್ಲಿಗೆಯು ಏಷ್ಯಾದ ಗಡಿಯನ್ನು ದಾಟಿ ಗ್ರೀಸ್,ಟರ್ಕಿ, ಸ್ಪೇನ್ ನಂತರ ಫ್ರಾನ್ಸ್ ಮತ್ತು ಇಟಲಿಯ ಮೂಲಕ ಪಶ್ಚಿಮ ಯುರೋಪ್ ಅನ್ನು ತಲುಪಿದೆ. ಹಾಗೆಯೇ ಅದು ೧೭ ನೇ ಶತಮಾನದ ಉತ್ತರಾರ್ಧದಲ್ಲಿ ಇಂಗ್ಲೆಂಡ್ ತಲುಪಿತು ಎಂದು ಹೇಳಲಾಗುತ್ತದೆ. (೧೮ ನೇ ಶತಮಾನದ ವೇಳೆಗೆ, ಮಲ್ಲಿಗೆ ಪರಿಮಳಯುಕ್ತ ಕೈಗವಸುಗಳು ಬ್ರಿಟನ್‌ನಲ್ಲಿ ಜನಪ್ರಿಯವಾಗಿದ್ದವು).
ಕರ್ನಾಟಕದಲ್ಲಿ ಹಲವಾರು ಜಾತಿಯ ಮಲ್ಲಿಗೆಯನ್ನು ಬೆಳೆಯಲಾಗುತ್ತದೆ. ಕರ್ನಾಟಕದಲ್ಲಿ ಸ್ಥಳೀಯವಾಗಿ ಸಿಗುವ ಮಲ್ಲಿಗೆ ಹೂವುಗಳಲ್ಲಿ ಆಲಿಯೇಸೀ ಕುಟುಂಬದ ಮೈಸೂರು ಮಲ್ಲಿಗೆ (ಸಸ್ಯಶಾಸ್ತ್ರೀಯ ಹೆಸರು : ಜಾಸ್ಮಿನಮ್ ಟ್ರೈಫಾಲಿಯೇಟಂ ಎಲ್ ) ಹೆಚ್ಚು ಪ್ರಖ್ಯಾತಿ ಪಡೆದಿದೆ. ಕರ್ನಾಟಕದಲ್ಲಿ ಒಟ್ಟು ಮೂರು ವಿಧಗಳು ಹೆಚ್ಚು ಜನಪ್ರಿಯವಾಗಿವೆ. ಇತರ ಎರಡು ಪ್ರಭೇದಗಳೆಂದರೆ ಹಡಗಲಿ ಮಲ್ಲಿಗೆ (ಜಾಸ್ಮಿನಮ್ ಅಜೋರಿಕಮ್ ವಾಹ್ಲ್) ಮತ್ತು ಉಡುಪಿ ಮಲ್ಲಿಗೆ (ಜಾಸ್ಮಿನಮ್ ಸಾಂಬಾಕ್). [೧] ತಮ್ಮ ಪರಿಮಳಕ್ಕಾಗಿ ವಿಶ್ವಾದ್ಯಂತ ಪ್ರಸಿದ್ಧವಾಗಿರುವ ಈ ಎಲ್ಲಾ ಮೂರು ಹೂವಿನ ಪ್ರಭೇದಗಳಿಗೆ ಪೇಟೆಂಟ್ ಮಾಡಲಾಗಿದೆ ಮತ್ತು ಬೌದ್ಧಿಕ ಆಸ್ತಿ ಹಕ್ಕಿನ ಅಡಿಯಲ್ಲಿ ನೋಂದಾಯಿಸಲಾಗಿದೆ. [೨]
ಮೈಸೂರು ಮಲ್ಲಿಗೆ | |
---|---|
ಮೈಸೂರು ಮಲ್ಲಿಗೆ (Jasminum trifoloiatum) | |
ಬದಲಿ ಹೆಸರುಗಳು | ಮೈಸೂರು ಮಲ್ಲಿಗೆ |
ಶೈಲಿ | Jasminum grandiflorum |
ಪ್ರದೇಶ | ಮೈಸೂರು ಜಿಲ್ಲೆ |
ದೇಶ | ಭಾರತ |
ನೊಂದಾಯಿಸಿದ್ದು | ೨೦೦೫ |
ಅಧಿಕೃತ ಜಾಲತಾಣ | http://ipindia.nic.in |
ಇದು ಅತ್ಯಂತ ಪ್ರಸಿದ್ಧವಾದ ಮಲ್ಲಿಗೆಯ ವಿಧವಾಗಿದೆ, ಇದು ಹೆಚ್ಚಾಗಿ ಕರ್ನಾಟಕ ರಾಜ್ಯದ ಮೈಸೂರು ನಗರದ ಸುತ್ತಮುತ್ತ ಮತ್ತು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಬೆಳೆಯುವುದರಿಂದ ಇದು ಮೈಸೂರು ಮಲ್ಲಿಗೆ ಹೆಸರನ್ನು ಪಡೆದುಕೊಂಡಿದೆ. ಅರಮನೆ ನಗರಿ ಎಂಬ ಹಿರಿಮೆಯ ಮೈಸೂರು ನಗರದೊಂದಿಗೆ ಮಲ್ಲಿಗೆಯ ಒಡನಾಟವನ್ನು ಮೈಸೂರು ಸಾಮ್ರಾಜ್ಯದ ಒಡೆಯರ್ ಪೋಷಿಸಿದರು. ಅದರ ಪರಿಮಳವು ಅಕ್ಟೋಬರ್‌ನಲ್ಲಿ ಮೈಸೂರಿನಲ್ಲಿ ಪ್ರತಿವರ್ಷ ನಡೆಯುವ ಪ್ರಸಿದ್ಧ ದಸರಾ ಉತ್ಸವದಷ್ಟು ಪ್ರಬಲವಾಗಿದೆ.[೩] ಮಲ್ಲಿಗೆಯು ಬಯಲು ಪ್ರದೇಶಗಳಲ್ಲಿ, ಪ್ರತ್ಯೇಕವಾದ ಕೃಷಿಭೂಮಿಯಲ್ಲಿ, ಮನೆಗಳ ಮುಂಭಾಗದಲ್ಲಿ ಅಥವಾ ಹಿತ್ತಲಿನಲ್ಲಿ ಹೇರಳವಾಗಿ ಬೆಳೆಯುತ್ತದೆ.
ಮೈಸೂರು ನಗರ ಮತ್ತು ಸುತ್ತಮುತ್ತ ಹೆಚ್ಚಾಗಿ ಬೆಳೆಯುವ ಮೈಸೂರು ಮಲ್ಲಿಗೆ ಸಣ್ಣ ರೈತರಿಗೆ ಸಾಧ್ಯವಾದ ಬೆಳೆಯಾಗಿದೆ. ಸ್ಥಳೀಯ ಮಾರುಕಟ್ಟೆಯಲ್ಲದೆ, ಕೇರಳ ಮತ್ತು ತಮಿಳುನಾಡಿನ ಕೆಲವು ಭಾಗಗಳಲ್ಲಿ ಈ ಹೂವಿಗೆ ಬೇಡಿಕೆಯಿದೆ.
ಸಸ್ಯವು ಸ್ಕ್ಯಾಂಡೆಂಟ್(ಬಳ್ಳಿ) ಆಗಿದೆ, 2 to 3 m (6.6 to 9.8 ft) ಎತ್ತರದಲ್ಲಿ, ಕವಲೊಡೆದ ದುಂಡು, ಅಥವಾ ಸ್ವಲ್ಪ ಸಂಕುಚಿತ ಕೆಲವೊಮ್ಮೆ ಟೊಳ್ಳಾದ, ವಿರಳವಾದ ಮೃದು ಹೊರ ಪದರ, ಪರ್ಯಾಯ ರೀತಿಯ ಎಲೆಗಳು, 1–2 cm (0.39–0.79 in) ಉದ್ದ, ತೊಟ್ಟು ಸುಮಾರು 1 cm (0.39 in) ಉದ್ದ ಮತ್ತು ಇದು ಮಧ್ಯದಲ್ಲಿ ಸಣ್ಣ ಕೊಳವೆಯನ್ನು ಹೊಂದಿದೆ.
ಈ ಪ್ರದೇಶದಲ್ಲಿ (ಮೈಸೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳು) ಚಾಲ್ತಿಯಲ್ಲಿರುವ, ತುಲನಾತ್ಮಕವಾಗಿ ಹೆಚ್ಚಿನ pH ಹೊಂದಿರುವ ಜೇಡಿ ಮತ್ತು ಮರಳುಗಳಿಂದ ಕೂಡಿರುವ ಫಲವತ್ತಾದ ಮಣ್ಣು ( ಲೋಮ್ ಮಣ್ಣು ) ಹೊಂದಿರುವ ಈ ನೆಲ ಮಲ್ಲಿಗೆ ಬೆಳೆ ಬೆಳೆಯಲು ಅನುಕೂಲಕರವಾದ ನೆಲವಾಗಿದೆ. ಕಡಿಮೆ ಆರ್ದ್ರತೆಯೊಂದಿಗೆ ಶುಷ್ಕ ಮತ್ತು ಬೆಚ್ಚಗಿನ ಹವಾಮಾನವು ಈ ಬೆಳೆಗೆ ಒಳ್ಳೆಯದು. ಹೂಬಿಡುವಿಕೆಯು ಮಾರ್ಚ್-ಏಪ್ರಿಲ್ನಲ್ಲಿ ಪ್ರಾರಂಭವಾಗುತ್ತದೆ ಮತ್ತು ಜೂನ್-ಜುಲೈ, ಏಪ್ರಿಲ್-ಮೇ ವರೆಗೆ ಇರುತ್ತದೆ
ಈ ಹೂವುಗಳಲ್ಲಿ ಸಾರತೈಲದ ಅಂಶವು ೦.೨೪ ರಿಂದ ೦.೪೨ ರಷ್ಟು ಇರುತ್ತದೆ.
ಇಂಡೋಲ್, ಜಾಸ್ಮೋನ್, ಬೆಂಜೈಲ್ ಅಸಿಟೇಟ್, ಬೆಂಜೈಲ್ ಬೆಂಜೊಯೇಟ್, ಮೀಥೈಲ್ ಆಂಥ್ರಾನಿಲೇಟ್, ಲಿನೂಲ್ ಮತ್ತು ಜೆರಾನಿಯೋಲ್ ಪ್ರಮುಖ ಆರೊಮ್ಯಾಟಿಕ್ ಘಟಕಗಳಾಗಿವೆ. ಇದರ ಆಧುನಿಕ-ದಿನದ ಅನ್ವಯಗಳು ಸುಗಂಧ ದ್ರವ್ಯಗಳು, ಸೌಂದರ್ಯವರ್ಧಕಗಳು, ಧೂಪದ್ರವ್ಯ, ಅರೋಮಾ ಥೆರಪಿ ಮತ್ತು ಆಯುರ್ವೇದದಲ್ಲಿವೆ. ಶುಷ್ಕ ಮತ್ತು ಸೂಕ್ಷ್ಮ ಚರ್ಮವನ್ನು ತಿಳಿಗೊಳಿಸಲು ಇದನ್ನು ಬಾಹ್ಯವಾಗಿ ಬಳಸಲಾಗುತ್ತದೆ. [೪]
ಹಡಗಲಿ ಮಲ್ಲಿಗೆಯು ಪ್ರಬಲ ಪರಿಮಳ ಮತ್ತು ಹೆಚ್ಚು ದಿನ ಬಾಡದೇ ಇರುವುದಕ್ಕೆ ಹೆಸರುವಾಸಿಯಾಗಿದೆ. ಸ್ಥಳೀಯವಾಗಿ "ವಾಸನೆ ಮಲ್ಲಿಗೆ" (ಸುವಾಸನೆಯ ಮಲ್ಲಿಗೆ) ಎಂದು ಕರೆಯುತ್ತಾರೆ, ಇದನ್ನು ಮುಖ್ಯವಾಗಿ ಹೂವಿನ ಹಡಗಲಿ (ಹೂಗಳ ಹಡಗಲಿ) ವಿಶೇಷವಾಗಿ ತಿಪ್ಪಾಪುರ, ತಿಮ್ಲಾಪುರ, ಹೊನ್ನೂರು ಗ್ರಾಮಗಳಲ್ಲಿ ಬೆಳೆಯುತ್ತಾರೆ.
ಸಸ್ಯವು ಸಣ್ಣ ಪೊದೆಸಸ್ಯವಾಗಿದ್ದು, ಕಡಿಮೆ ಸ್ಕ್ಯಾಂಡೆಂಟ್ ಸ್ವಭಾವವನ್ನು ಹೊಂದಿದೆ. ಎಲೆಗಳು ಸರಳವಾಗಿರುತ್ತವೆ, ದಪ್ಪವಾಗಿರುತ್ತವೆ, ಅಂಚುಗಳು ತಲೆಕೆಳಗಾಗಿ ಮಡಚಲ್ಪಟ್ಟಿರುತ್ತವೆ, ಸ್ವಲ್ಪ ಮೃದುವಾಗಿರುತ್ತದೆ. ಹೂವುಗಳು ಕವಲುಗಳಲ್ಲಿ ಹುಟ್ಟುತ್ತವೆ. 1 cm (0.39 in) ಸುತ್ತ ಉದ್ದವಾದ ಕೊರೊಲ್ಲಾ ಟ್ಯೂಬ್ ಹೊಂದಿರುವ ಹೂವು ಉದ್ದವಾಗಿರುತ್ತದೆ. ೭ ದಳಗಳನ್ನು ಹೊಂದಿದ್ದು ಶುಭ್ರ ಬಿಳಿ ಬಣ್ಣದೊಂದಿಗೆ ಹರಡಿಕೊಂಡಂತಿರುತ್ತದೆ.
ಈ ಪ್ರದೇಶದಲ್ಲಿ ಚಾಲ್ತಿಯಲ್ಲಿರುವ ಮರಳು ಮಿಶ್ರಿತ ಕೆಂಪು ಮಣ್ಣು ಹಡಗಲಿ ಮಲ್ಲಿಗೆ ಕೃಷಿಗೆ ಸೂಕ್ತವಾಗಿದೆ. ಒಣ ಹವಾಮಾನ ಮತ್ತು ಉತ್ತಮ ನೀರು ಪೂರೈಕೆಯು ಈ ಬೆಳೆಯನ್ನು ಬೆಳೆಯಲು ಅನುಕೂಲಕರ ವಾತಾವರಣವನ್ನು ಸೇರಿಸುತ್ತದೆ. ಇವನ್ನು ಮಾನ್ಸೂನ್ ಪ್ರಾರಂಭವಾದ ಜುಲೈ-ಆಗಸ್ಟ್ ತಿಂಗಳುಗಳಲ್ಲಿ ಕತ್ತರಿಸಿದ ಭಾಗಗಳ ಮೂಲಕ ನೇರವಾಗಿ ನೆಡಲಾಗುತ್ತದೆ. ಹೂಬಿಡುವ ಅವಧಿಯು ಆರು ತಿಂಗಳವರೆಗೆ ಇರುತ್ತದೆ.
ಹೂವುಗಳು ಹೆಚ್ಚು ಸುವಾಸನೆ ಮತ್ತು ಉತ್ತಮ ಸಾರ ತೈಲ ಅಂಶ (೦.೨೪ ರಿಂದ ೦.೪೨%) ಹೊಂದಿವೆ. ಆದ್ದರಿಂದ ಈ ಹೂವುಗಳನ್ನು ಸಾರಭೂತ ತೈಲವನ್ನು ಹೊರತೆಗೆಯಲು ಬಳಸಲಾಗುತ್ತದೆ.
ಉಡುಪಿ ಮಲ್ಲಿಗೆ | |
---|---|
![]() ಉಡುಪಿ ಮಲ್ಲಿಗೆ (Jasminum grandiflorum) | |
ಬದಲಿ ಹೆಸರುಗಳು | ಉಡುಪಿ ಮಲ್ಲಿಗೆ |
ಶೈಲಿ | Jasminum sambac |
ಪ್ರದೇಶ | ಉಡುಪಿ ಜಿಲ್ಲೆ |
ದೇಶ | ಭಾರತ |
ನೊಂದಾಯಿಸಿದ್ದು | ೨೦೦೫ |
ಅಧಿಕೃತ ಜಾಲತಾಣ | http://ipindia.nic.in |
ಭಟ್ಕಳ ಅಥವಾ ಉಡುಪಿ ಮಲ್ಲಿಗೆಯ ಕೃಷಿಯು ತುಲನಾತ್ಮಕವಾಗಿ ಇತ್ತೀಚಿನ ಮೂಲವಾಗಿದೆ. ಸುಮಾರು ೧೦೦ ವರ್ಷಗಳ ಹಿಂದೆ ಉಡುಪಿ ಜಿಲ್ಲೆಯ ಭಟ್ಕಳ ಮತ್ತು ನಂತರ ಶಂಕರಪುರದಲ್ಲಿ ಈ ತಳಿಯ ಮಲ್ಲಿಗೆಯ ಬೇಸಾಯ ಪ್ರಾರಂಭವಾಯಿತು.
ಇದು ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ವ್ಯಾಪಕವಾಗಿ ಕಂಡುಬರುತ್ತದೆ ಮತ್ತು ಎಲ್ಲಾ ಮೂರು ಪ್ರಭೇದಗಳಲ್ಲಿ ಹೆಚ್ಚು ಆರ್ಥಿಕವಾಗಿ ಲಾಭದಾಯಕವಾಗಿದೆ. ಕರಾವಳಿ ಪ್ರದೇಶವಲ್ಲದೆ ಮುಂಬಯಿ ಮುಂತಾದ ಕಡೆ ಹೂವಿಗೆ ಹೆಚ್ಚಿನ ಬೇಡಿಕೆಯಿದೆ.
ಮಲ್ಲಿಗೆ ಆಂಡ್ರಾಯ್ಡ್ ಅಪ್ಲಿಕೇಶನ್ ಟ್ಯಾಕ್ಯಾಂಟ್ ತಂಡವು ಅಭಿವೃದ್ಧಿಪಡಿಸಿದ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ, ಇದು ಉಡುಪಿಯ ಶಂಕರಪುರದ ಮಲ್ಲಿಗೆ ಹೂ ಬೆಳೆಗಾರರ ಸಂಘವು ನಿರ್ಧರಿಸುವ ದೈನಂದಿನ ಬೆಲೆಗಳನ್ನು ತೋರಿಸುತ್ತದೆ ಮತ್ತು ಈ ಅಪ್ಲಿಕೇಶನ್ ಅದರ ಕೃಷಿ, ಅದರ ಬಲವರ್ಧನೆ, ವಿವಿಧ ಉಪಯೋಗಗಳು, ರೋಗಗಳು, ತಡೆಗಟ್ಟುವಿಕೆ, ಪರಿಹಾರಗಳು, ರಸಗೊಬ್ಬರ ಬಳಕೆ, ಕೀಟ ನಿರ್ವಹಣೆ, ಪೋಷಣೆ, ನಿರ್ವಹಣೆ, ಕೊಯ್ಲು ಮತ್ತು ಕೆಲವು ಆಸಕ್ತಿದಾಯಕ ಸಂಗತಿಗಳ ಕುರಿತು ಮಾಹಿತಿಯನ್ನು ತೋರಿಸುತ್ತದೆ.
ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಲಿಂಕ್
ಸಸ್ಯವು ಸಣ್ಣ ಮತ್ತು ಪೊದೆಯಾಗಿದ್ದು, ಹಳದಿ ಬಣ್ಣದ ಛಾಯೆಯೊಂದಿಗೆ ತಿಳಿ ಹಸಿರು ಎಲೆಗಳನ್ನು ಹೊಂದಿದೆ, 5-7x2.5-3.5 ಸೆಂ.ಮೀ. ಬೆಳೆಯುತ್ತದೆ. ಹೂವುಗಳು ಅಕ್ಷಗಳಲ್ಲಿ ಮತ್ತು ತುದಿಯಲ್ಲಿಯೂ ಸಹ ಹುಟ್ಟುತ್ತವೆ, ದಳಗಳು ೬-೮.
ಈ ಪ್ರದೇಶದ ಲ್ಯಾಟರೈಟ್ ಮಣ್ಣಿನ (ಜಂಬುಮಣ್ಣು; ಕೆಲವು ಬಗೆಯ ಶಿಲೆಗಳ ಸವೆತದಿಂದ ಉಂಟಾಗುವ, ಮುಖ್ಯವಾಗಿ ಕಬ್ಬಿಣದ ಆಕ್ಸೈಡ್ ಮತ್ತು ಅಲ್ಯೂಮಿನಿಯಂ ಹೈಡ್ರಾಕ್ಸೈಡುಗಳಿಂದ ಕೂಡಿದ, ಕಡಿಮೆ ಸಿಲಿಕ ಉಳ್ಳ, ಭಿದುರವಾದ ಮತ್ತು ಗಾಳಿಯಲ್ಲಿ ಗಟ್ಟಿಯಾಗುವ, ಉಷ್ಣವಲಯ ಪ್ರದೇಶಗಳಲ್ಲಿ ರಸ್ತೆಗಳನ್ನು ಮಾಡಲು ಬಳಸುವ, ಒಂದು ಬಗೆಯ ಕೆಂಪು ಯಾ ಹಳದಿ ಜೇಡಿ ಮಣ್ಣು) ಸ್ಥಿತಿ, ಹೆಚ್ಚಿನ ಆರ್ದ್ರತೆ ಮತ್ತು ಭಾರೀ ಮಳೆ (2,500–3,000 mm or 98–118 in) ಈ ಬೆಳೆಯನ್ನು ಬೆಳೆಯಲು ಅನುಕೂಲಕರವಾದ ವಾತಾವರಣವನ್ನು ಕಲ್ಪಿಸಿಕೊಡುತ್ತದೆ. ಪ್ರಸರಣವು ಮುಖ್ಯವಾಗಿ ಕತ್ತರಿಸಿದ ಭಾಗಗಳ ಮೂಲಕ ನಡೆಯುತ್ತದೆ, ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ನಾಟಿ ಮಾಡಲಾಗುತ್ತದೆ.
ಈ ಹೂವುಗಳನ್ನು ವಿಶೇಷವಾಗಿ ಮದುವೆಗಳು ಮತ್ತಿತರ ಮಂಗಳಕರ ಸಂದರ್ಭಗಳಲ್ಲಿ ಮತ್ತು ದೇವಾಲಯಗಳ ದೇವತೆಗಳ ಪೂಜೆಗಾಗಿ ಹೂಮಾಲೆಗಳನ್ನು ತಯಾರಿಸಲು ಬಳಸಲಾಗುತ್ತದೆ. ಇದನ್ನು ವೈಯುಕ್ತಿಕ ಖುಷಿಗಾಗಿ, ಉದುರು ಹೂವುಗಳಿಗಾಗಿ ಮನೆಗಳ ಕೈದೋಟಗಳಲ್ಲಿ ಬೆಳೆಸುತ್ತಾರೆ. ಈ ಹೂವುಗಳನ್ನು ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಮಹಿಳೆಯರು ತಮ್ಮ ಕೂದಲಿನಲ್ಲಿ ಧರಿಸುತ್ತಾರೆ. ಅವುಗಳನ್ನು ರಫ್ತು ಮಾಡಲಾಗುವುದರಿಂದ ರೈತರಿಗೆ ಹೆಚ್ಚಿನ ಲಾಭದಾಯಕವಾಗಿವೆ. ಇದರ ಔಷಧೀಯ ಉಪಯೋಗಗಳು : ಖಿನ್ನತೆ-ನಿರೋಧಕ, ಆಂಟಿ ಸೆಪ್ಟಿಕ್, ಆಂಟಿ ಸ್ಪಾಸ್ಮೊಡಿಕ್, ಕಾಮೋತ್ತೇಜಕ, ನಿದ್ರಾಜನಕ [೫]
ಓಲಿಯಾಸೀ ಕುಟುಂಬದ ಕೆಲವು ಮಲ್ಲಿಗೆ ಸಸ್ಯಗಳ ಗುಂಪನ್ನು ಅವುಗಳ ಪರಿಮಳಯುಕ್ತ ಹೂವುಗಳು ಮತ್ತು ಸಾರ ತೈಲ ಉತ್ಪಾದನೆಗಾಗಿ ವಾಣಿಜ್ಯಿಕವಾಗಿ ಬೆಳೆಯಲಾಗುತ್ತದೆ. ಮಲ್ಲಿಗೆ ಎಣ್ಣೆಯು ಪ್ರತಿಯೊಂದು ಹೂವಿನ ಪರಿಮಳದೊಂದಿಗೆ ಬೆರೆಯುತ್ತದೆ ಎಂದು ಹೇಳಲಾಗುತ್ತದೆ ಮತ್ತು ಆದ್ದರಿಂದ ಪ್ರಪಂಚದಾದ್ಯಂತ ಪ್ರಮುಖ ಸುಗಂಧ ದ್ರವ್ಯವಾಗಿ ವ್ಯಾಪಕವಾಗಿ ಬಳಸಲಾಗುತ್ತದೆ.
ಸುಗಂಧ ಉದ್ಯಮದಲ್ಲಿ ಜಾಸ್ಮಿನಮ್ ಗ್ರಾಂಡಿಫ್ಲೋರಮ್ ಮತ್ತು ಜಾಸ್ಮಿನಮ್ ಸಾಂಬಾಕ್ ಪ್ರಭೇದಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ.[೬]
ಮಲ್ಲಿಗೆಯು ಹೂಗಾರಿಕೆ ಅಥವಾ ಪುಷ್ಪ ಕೃಷಿಯ ಭಾಗವಾಗಿದೆ, ಇದು ಹೂವಿನ ಉದ್ಯಮವನ್ನು ಒಳಗೊಂಡಿರುವ ತೋಟಗಳಿಗೆ ಮತ್ತು ಹೂಗಾರಿಕೆಗಾಗಿ; ಹೂಬಿಡುವ ಮತ್ತು ಅಲಂಕಾರಿಕ ಸಸ್ಯಗಳ ಕೃಷಿಗೆ ಸಂಬಂಧಿಸಿದ ತೋಟಗಾರಿಕೆಯ ಒಂದು ವಿಭಾಗವಾಗಿದೆ. ಈ ಹೂವುಗಳು ಮುಖ್ಯವಾಗಿ ರಫ್ತಿಗಾಗಿವೆ ಮತ್ತು ಈ ವ್ಯಾಪಾರವು ಪ್ರಪಂಚದಲ್ಲಿ ವರ್ಷಕ್ಕೆ ಸುಮಾರು ೬-೧೦ ಪ್ರತಿಶತದಷ್ಟು ಬೆಳೆಯುತ್ತಿದೆ. ಈ ಹೂವುಗಳಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಪಾಲು ಇನ್ನೂ ನಗಣ್ಯ. ಆದಾಗ್ಯೂ, ಕರ್ನಾಟಕವು ೧೮ನೇ ಶತಮಾನದಿಂದಲೂ ಪುಷ್ಪ ಕೃಷಿಗೆ ಜನಪ್ರಿಯವಾಗಿದೆ ಮತ್ತು ಈಗ ಪುಷ್ಪ ಕೃಷಿಯಲ್ಲಿ ಅಗ್ರಸ್ಥಾನದಲ್ಲಿದೆ, ಇದು ಭಾರತದ ಒಟ್ಟು ಹೂವಿನ ಉತ್ಪಾದನೆಯಲ್ಲಿ ೭೫% ರಷ್ಟಿದೆ. ಆಧುನಿಕ ಉದುರು ಹೂವುಗಳ ಅಡಿಯಲ್ಲಿ ರಾಜ್ಯವು ಅತಿ ಹೆಚ್ಚು ಪ್ರದೇಶವನ್ನು ಹೊಂದಿದೆ ಮತ್ತು ಹೂವುಗಳನ್ನು ಬೆಳೆಯುವ ಮತ್ತು ರಫ್ತು ಮಾಡುವ ೪೦ ಘಟಕಗಳನ್ನು ಹೊಂದಿದೆ. ದೇಶದ ಮೊದಲ ಮತ್ತು ಏಕೈಕ ಹೂವಿನ ಹರಾಜು ಕೇಂದ್ರ ಕರ್ನಾಟಕದಲ್ಲಿದೆ. ೨೦೦೩-೦೪ರ ಅಂಕಿಅಂಶಗಳ ಪ್ರಕಾರ, ಒಟ್ಟು ೧೮,೧೮೨ ಹೆಕ್ಟೇರ್ (೪೫,೦೦೦ ಎಕರೆ) ಯ ವಾಣಿಜ್ಯ ಹೂವಿನ ಬೆಳೆಗಳ ಪ್ರದೇಶದಲ್ಲಿ, ಮಲ್ಲಿಗೆಯ ಒಟ್ಟು ಮೂರು ಪ್ರಭೇದಗಳು ೩,೪೫೧ ಹೆಕ್ಟೇರ್ (ಸುಮಾರು ೧೯%) ನಲ್ಲಿ ಬೆಳೆಸಲ್ಪಡುತ್ತವೆ. ಮತ್ತು ಹೂವುಗಳ ಸರಾಸರಿ ಇಳುವರಿ ೬ ಟನ್/ಹೆಕ್ಟೇರ್ ಮತ್ತು ಒಟ್ಟು ೨೦,೨೪೪ ಟನ್ ಉತ್ಪಾದನೆಯೊಂದಿಗೆ ವರದಿಯಾಗಿದೆ.
ನೆದರ್‌ಲ್ಯಾಂಡ್ಸ್‌ನ ಹೂವಿನ ಜಿಲ್ಲೆಯಾಗಿರುವ ಆಲ್ಸ್‌ಮೀರ್‌ನಲ್ಲಿ ಪ್ರತಿ ವರ್ಷ ಪುಷ್ಪ ಕೃಷಿ ಮೇಳವನ್ನು ಆಯೋಜಿಸಲಾಗುತ್ತದೆ (ಜಗತ್ತಿನ ಎಲ್ಲಾ ಭಾಗಗಳಿಂದ ಹೂ ಬೆಳೆಗಾರರು ತಾವು ಬೆಳೆದ ಹೂಗಳೊಂದಿಗೆ ಭಾಗವಹಿಸುತ್ತಾರೆ). ಕರ್ನಾಟಕ ಸರ್ಕಾರವು ಉಡುಪಿ ಮಲ್ಲಿಗೆ, ಹಡಗಲಿ ಮಲ್ಲಿಗೆ ಮತ್ತು ಮೈಸೂರು ಮಲ್ಲಿಗೆ ಹೂವಿನ ಬೆಳೆಗಾರರ ತಂಡವನ್ನು ನೆದರ್‌ಲ್ಯಾಂಡ್‌ಗೆ ಅಂತರಾಷ್ಟ್ರೀಯ ಪುಷ್ಪ ಸಾಕಾಣಿಕೆ ಸಭೆಯಲ್ಲಿ ಭಾಗವಹಿಸಲು ನಿಯೋಜಿಸಲಿದೆ ಎಂದು ವರದಿಯಾಗಿದೆ. ಜಾತ್ರೆಯಲ್ಲಿ ಮಹಿಳೆಯರು (ಪ್ರತಿ ಪ್ರದೇಶದಿಂದ ಮೂವರು) ಹೂಗಳನ್ನು ಮಾಲೆಯಾಗಿ ಕಟ್ಟಿ ವಿದೇಶಿ ಪ್ರವಾಸಿಗರ ಗಮನ ಸೆಳೆಯುವ ವೇದಿಕೆ ನಿರ್ಮಿಸುವುದು ಇಲಾಖೆಯ ತಂತ್ರವಾಗಿದೆ. ಮಲ್ಲಿಗೆ ಹೂಗಳನ್ನು ಕುಶಲವಾಗಿ ಮಾಲೆ ಕಟ್ಟುವುದು ಮಹಿಳಾ ಬೆಳೆಗಾರರಿಗೆ ಕರಗತವಾಗಿರುವ ಕಲೆ. [೭] [೮]
ಕರ್ನಾಟಕ ರಾಜ್ಯವು, ನಿರ್ದಿಷ್ಟವಾಗಿ ಮಲ್ಲಿಗೆ ಹೂವುಗಳ - "ಮೈಸೂರು ಮಲ್ಲಿಗೆ", "ಉಡುಪಿ ಮಲ್ಲಿಗೆ" ಮತ್ತು "ಹಡಗಲಿ ಮಲ್ಲಿಗೆ"- ವಿಶೇಷ ಗುಣಗಳ ಆಧಾರದ ಮೇಲೆ ಭೌಗೋಳಿಕ ಸೂಚ್ಯಂಕ (GI) ರಕ್ಷಣೆಯನ್ನು ಪಡೆದುಕೊಂಡಿದೆ. ಈ ಕಾಯಿದೆ ಅಡಿಯಲ್ಲಿ ಪರಿಗಣಿಸಲಾದ ಮಾನದಂಡಗಳು ಈ ಕೆಳಗಿನವುಗಳಾಗಿವೆ.
ಮೈಸೂರು ಮಲ್ಲಿಗೆ ಎಂಬ ಹೆಸರಿನ ಮಲ್ಲಿಗೆ ಹೂವನ್ನು ಕಳೆದ ಶತಮಾನದಲ್ಲಿ ಕರ್ನಾಟಕದ ಕವಿಗಳು, ಕಾದಂಬರಿಕಾರರು ಮತ್ತು ರಂಗಭೂಮಿ ಕಲಾವಿದರು ಹಾಡಿಹೊಗಳಿದ್ದಾರೆ. ಮಲ್ಲಿಗೆ ಕವಿ (ಕವಿ) ಎಂದು ಕರೆಯಲ್ಪಡುವ ದಿವಂಗತ ಕೆ.ಎಸ್.ನರಸಿಂಹಸ್ವಾಮಿ "ಮೈಸೂರು ಮಲ್ಲಿಗೆ" ಎಂಬ ಹೆಸರನ್ನು ಚಿರಸ್ಥಾಯಿಗೊಳಿಸಿದರು. ಅವರ ಕವನ ಸಂಕಲನ ಮೈಸೂರು ಮಲ್ಲಿಗೆ (೧೯೪೨) ಕನ್ನಡ ಭಾಷೆಯ ಅತ್ಯುತ್ತಮ ಸಾಹಿತ್ಯ ಕೃತಿಗಳಲ್ಲಿ ಒಂದಾಗಿದೆ ಮತ್ತು ೨೭ ಮರುಮುದ್ರಣಗಳನ್ನು ಕಂಡಿದೆ.
ಈ ಕವನ ಸಂಕಲನವು ಟಿ.ಎಸ್.ನಾಗಾಭರಣ ಅವರು ರಚಿಸಿದ ಚಲನಚಿತ್ರ ಮತ್ತು ಕಲಾಗಂಗೋತ್ರಿಯವರ ಸಂಗೀತ ನಾಟಕ "ಮೈಸೂರು ಮಲ್ಲಿಗೆ"ಗೆ ಸ್ಫೂರ್ತಿ ನೀಡಿದೆ. ಶ್ರೇಷ್ಠ ಗಾಯಕರಾದ ಪಿ. ಕಾಳಿಂಗರಾವ್, ಮೈಸೂರು ಅನಂತಸ್ವಾಮಿ ಮತ್ತು ಸಿ. ಅಶ್ವಥ್ ಅವರು ನರಸಿಂಹಸ್ವಾಮಿಯವರ ಈ ಕವನಗಳನ್ನು ಚಲನಚಿತ್ರಗಳಲ್ಲಿ ಮತ್ತು ರಂಗಭೂಮಿಯಲ್ಲಿ ಜನಪ್ರಿಯಗೊಳಿಸಿದ್ದಾರೆ.