ಗುಲ್ಬರ್ಗಾ ವಿಭಾಗವು (ಕಲಬುರಗಿ ವಿಭಾಗ) ಕಲಬುರಗಿ ಎಂದರೆ ಕಲ್ಲು - ಹೊಂದಿರುವ ನಾಡು ಎಂದರ್ಥ.ಇದರಿಂದ ಈ ಜಿಲ್ಲೆಯನ್ನು ಕಲಬುರಗಿ ಎಂದು ಕರೆಯಲಾಯಿತು . ಇದು ಕರ್ನಾಟಕದ ಎರಡನೇ ದೊಡ್ಡ ರಾಜ್ಯ.ಕರ್ನಾಟಕ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ಒಂದಾಗಿದೆ. ಈ ವಿಭಾಗವು ಬಳ್ಳಾರಿ, ಬೀದರ್, ಗುಲ್ಬರ್ಗಾ, ಕೊಪ್ಪಳ, ಯಾದ್ಗಿರ್ ಮತ್ತು ರಾಯಚೂರು ಜಿಲ್ಲೆಗಳನ್ನು ಒಳಗೊಂಡಿದೆ. ಕಲಬುರಗಿಯಲ್ಲಿ ಕರ್ನಾಟಕ ರಾಜ್ಯ ಪೊಲೀಸ್ಗು ತರಬೇತಿ ಕೇಂದ್ರವಿದೆ. ಕಲಬುರಗಿವು ಒಂದು ಉತ್ತರ ಕರ್ನಾಟಕದಲ್ಲಿ ಬರುವ ಜಿಲ್ಲೆ.ಇದು ಕಲ್ಯಾಣ ಕರ್ನಾಟಕದಲ್ಲಿ ಬರುವ ಜಿಲ್ಲೆಯಲ್ಲಿ ಒಂದು .ಇಲ್ಲಿ ಅತ್ಯಂತ ಹೆಚ್ಚು ತೊಗರಿಯನ್ನು ಬೆಳೆಯಲಾಗುತ್ತದೆ.ಗುಲ್ಬರ್ಗಾ ನಗರವು ವಿಭಾಗದ ಆಡಳಿತ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ.[೧][೨][೩]
ಕಲಬುರಗಿ ನಗರದ ಹಿಂದಿನ ಹೆಸರು ಗುಲ್ಬರ್ಗಾ. ಕಲಬುರಗಿಯ ಚರಿತ್ರೆಯನ್ನು ರಾಷ್ಟ್ರಕೂಟ ಅರಸರ ಕಾಲದವರೆಗೆ ಗುರುತಿಸಬಹುದು. ನಂತರ ಚಾಲುಕ್ಯ ಸಾಮ್ರಾಜ್ಯದ ಕೆಳಗೆ ೨೦೦ ವರ್ಷಗಳವರೆಗೆ ಕಲಬುರಗಿ ಇದ್ದಿತು. ಚಾಲುಕ್ಯರ ನಂತರ ಹನ್ನೆರಡನೆ ಶತಮಾನದವರೆಗೆ ಕಲಬುರಗಿ ಕಳಚೂರಿ ಅರಸರ ನಿಯಂತ್ರಣದಲ್ಲಿತ್ತು. ಭಾರತೀಯ ನ್ಯಾಯಶಾಸ್ತ್ರದ ಪಿತಾಮಹ ಎಂದು ಹೆಸರಾದ ವಿಜ್ಞಾನೇಶ್ವರರ ಸಂಶೋಧನಾ ಕೇಂದ್ರ ಮರ್ತೂರಿನಲ್ಲಿ ಇದೆ.[೪] ಹನ್ನೆರಡನೆಯ ಶತಮಾನದ ಕೊನೆಗೆ ದೇವಗಿರಿಯ ಯಾದವರು ಮತ್ತು ದ್ವಾರಸಮುದ್ರದ ಹೊಯ್ಸಳರು ಚಾಲುಕ್ಯ ಮತ್ತು ಕಳಚೂರಿಗಳನ್ನು ಸೋಲಿಸಿದರು. ಇದೇ ಸಮಯದಲ್ಲಿ ವಾರಂಗಲ್ ನ ಕಾಕತೀಯ ಅರಸರು ಪ್ರಾಮುಖ್ಯತೆಗೆ ಬಂದು ಕಲಬುರಗಿ ಅವರ ನಿಯಂತ್ರಣಕ್ಕೆ ಸಾಗಿತು. ಕ್ರಿ.ಶ. ೧೩೨೧ ರಲ್ಲಿ ಕಾಕತೀಯ ಅರಸರು ಸೋಲಿಸಲ್ಪಟ್ಟು ಕಲಬುರಗಿ ದೆಹಲಿಯ ಸುಲ್ತಾನರ ಕೈ ಸೇರಿತು. ೧೩೪೭ ರಲ್ಲಿ ದೆಹಲಿಯ ಸಾಮಂತರು ದಂಗೆಯೆದ್ದು, ಅಲ್ಲಾಹುಧ್ದೀನ ಹಸನ್ ಗಂಗು ಬಹುಮನ್ ಶಾ ೧೯೪೭ ರಲ್ಲಿ, ಬಹಮನಿ ಸಾಮ್ರಾಜ್ಯವನ್ನು ಸ್ಥಾಪಿಸಿ ಕಲಬುರಗಿಯನ್ನು ರಾಜಧಾನಿಯನ್ನಾಗಿ ಮಾಡಿದನು. ಬಹಮನಿ ಸುಲ್ತಾನರ ನಿಯಂತ್ರಣ ಕಡಿಮೆಯಾದಾಗ ಐದು ಬೇರೆ ಬೇರೆ ಬಹಮನಿ ಸಾಮ್ರಾಜ್ಯಗಳು ಸ್ಥಾಪಿತವಾಗಿ ಕಲಬುರಗಿ ಜಿಲ್ಲೆ ಭಾಗಶಃ ಬೀದರ್ ಮತ್ತು ಭಾಗಶಃ ಬಿಜಾಪುರ ಸಾಮ್ರಾಜ್ಯಗಳ ಭಾಗವಾಯಿತು. ೧೭ ನೇ ಶತಮಾನದಲ್ಲಿ ಔರಂಗಜೇಬ್ ಮತ್ತೆ ಈ ಪ್ರದೇಶವನ್ನು ಗೆದ್ದು ಕಲಬುರಗಿ ಮತ್ತೊಮ್ಮೆ ಮುಘಲ್ ಸಾಮ್ರಾಜ್ಯದ ಭಾಗವಾಯಿತು. ೧೮ ನೇ ಶತಮಾನದ ಆದಿಯಲ್ಲಿ ಮುಘಲ್ ಸಾಮ್ರಾಜ್ಯದ ಪ್ರಭಾವ ಕಡಿಮೆಯಾಗಿ ಅಸಫ್ ಜಾ ಎಂಬ ಔರಂಗಜೇಬನ ಸೇನಾಧಿಕಾರಿ ಹೈದರಾಬಾದ್ ಸಂಸ್ಥಾನವನ್ನು ಸ್ಥಾಪಿಸಿದನು. ಕಲಬುರಗಿ ಹೈದರಾಬಾದ ಸಂಸ್ಥಾನವನ್ನು ಸೇರಿತು. ೧೯೪೭ರಲ್ಲಿ ಭಾರತ ಸ್ವಾತಂತ್ರ್ಯ ಪಡೆದರೆ, ಬೀದರ್, ಕಲಬುರಗಿ ಮತ್ತು ರಾಯಚೂರಿನ ಜನರ ತೀವ್ರ ಹೋರಾಟದ ಫಲವಾಗಿ ೧೯೪೮ ರ ಸಪ್ಟೆಂಬರ್ ನಲ್ಲಿ ಹೈದರಾಬಾದ ಸಂಸ್ಥಾನವು ಭಾರತ ಗಣರಾಜ್ಯವನ್ನು ಸೇರಿತು. ೧೯೫೬ರಲ್ಲಿ ರಾಜ್ಯಗಳ ಭಾಷಾವಾರು ವಿಂಗಡಣೆಯಲ್ಲಿ ಕಲಬುರಗಿ ಜಿಲ್ಲೆಯ ಎರಡು ತಾಲೂಕುಗಳ ಹೊರತು ಉಳಿದವು ಮೈಸೂರು ರಾಜ್ಯಕ್ಕೆ ಸೇರಿದವು. ೧೯೭೬ ರಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಪುನರ್ನಾಮಕರಣ ಮಾಡಲಾಯಿತು.ಸ್ವಾತಂತ್ರ್ಯ ಹೋರಾಟದಲ್ಲೂ ಕೂಡ ಈ ಭಾಗದ ಅನೇಕ ಜನರು ಹೋರಾಟ ಮಾಡಿದ್ದಾರೆ. ಅವರಲ್ಲಿ ವೆಂಕಟಪ್ಪನಾಯಕ ಸುರಪುರ(ಬ್ರಿಟೀಶರ ಮತ್ತು ನಿಜಾಮನ ವಿರುದ್ಧ),ರಮಾನ೦ದ ತೀರ್ಥ, ಸರ್ದಾರ್ ಶರಣಗೌಡ್ ಇನಾಂದಾರ, ಚನ್ನಬಸಪ್ಪ ಕುಳಗೆರಿ, ದೇವಿಂದ್ರಪ್ಪ ಮಾಸ್ತರ್ -ಸಿಂದಗಿ( ಬಿ) (ನಿಜಾಮನ ವಿರುದ್ಧ) ಕರಬಸಪ್ಪ ಶ್ರೀಗನ್ - ಹರಸೂರ/ಶ್ರೀ ಸರಡಗಿ] (ನಿಜಾಮನ ವಿರುದ್ಧ),ಮುಂತಾದವರು ಹೋರಾಟ ಮಾಡಿ ಹೈದರಾಬಾದ ನಿಜಾಮರ ವಿರುದ್ದ ಹಾಗೂ ಬ್ರೀಟಿಷರ ವಿರುದ್ಧ ಜಯ ಸಾಧಿಸಿದ್ದಾರೆ. ಕಾರಣ ಈ ಭಾಗ ಬಹು ದಿನಗಳ ಕಾಲ ನಿಜಾಮನ ಆಡಳಿತಕ್ಕೆ ಒಳಪಟ್ಟಿತ್ತು. ಹ್ಯೆದರಾಬಾದ್ ಕರ್ನಾಟಕದಲ್ಲಿ ಜರುಗಿದ ವಿಮೋಚನಾ ಇತಿಹಾಸವನ್ನು ಮೊದಲ ಬಾರಿಗೆ ಸಂಶೋಧನೆ ಮಾಡಿ ಡಾ. ಬಿ. ಸಿ. ಮಹಾಬಲೇಶ್ವರಪ್ಪ ಅವರು ಮಹದುಪಕಾರ ಮಾಡಿದ್ದಾರೆ. ಅನಂತರ ಇಲ್ಲಿ ಪ್ರತಿ ವರ್ಷ ಸಪ್ಟೆಂಬರ್ ೧೭ ರಂದು ವಿಮೋಚನಾ ದಿನವನ್ನು ಆಚರಿಸಲಾಗುತ್ತದೆ
ಈ ಲೇಖನ ಕರ್ನಾಟಕದ ಪ್ರದೇಶವೊಂದಕ್ಕೆ ಸಂಬಂಧಿಸಿದ ಒಂದು ಚುಟುಕು. ನೀವು ಇದನ್ನು ವಿಸ್ತರಿಸುವುದರ ಮೂಲಕ ವಿಕಿಪೀಡಿಯಾಗೆ ಸಹಾಯ ಮಾಡಬಹುದು. |